ETV Bharat / international

ನೈಟ್ರೋಜನ್ ಬಳಸಿ ಅಪರಾಧಿಗೆ ಮರಣದಂಡನೆ ಶಿಕ್ಷೆ; ಅಮೆರಿಕದ ನಡೆಗೆ ಯುರೋಪಿಯನ್ ಒಕ್ಕೂಟ, ವಿಶ್ವಸಂಸ್ಥೆ ಖಂಡನೆ - ಯುರೋಪಿಯನ್ ಒಕ್ಕೂಟ

ಅಮೆರಿಕದಲ್ಲಿ ಕೊಲೆ ಆರೋಪಿಗೆ ನೈಟ್ರೋಜನ್ ಅನಿಲದಿಂದ ಮರಣದಂಡನೆ ವಿಧಿಸಲಾಗಿದೆ. ಈ ರೀತಿ ಅಮೆರಿಕದಲ್ಲಿ ವ್ಯಕ್ತಿಯೊಬ್ಬನಿಗೆ ಮರಣದಂಡನೆ ವಿಧಿಸಿರುವುದು ಇದೇ ಮೊದಲು. ಇದರಿಂದಾಗಿ ಮರಣದಂಡನೆ ಕುರಿತ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

death penalty debate  nitrogen gas  ನೈಟ್ರೋಜನ್ ಬಳಸಿ ಮರಣದಂಡನೆ  ಖಂಡನೆ ವ್ಯಕ್ತಪಡಿಸಿದ ಯುರೋಪಿಯನ್ ಒಕ್ಕೂಟ
ಅಪರಾಧಿಗೆ ನೈಟ್ರೋಜನ್ ಬಳಸಿ ಮರಣದಂಡನೆ ವಿಧಸಿದ ಅಮೆರಿಕ, ಖಂಡನೆ ವ್ಯಕ್ತಪಡಿಸಿದ ಯುರೋಪಿಯನ್ ಒಕ್ಕೂಟ, ವಿಶ್ವಸಂಸ್ಥೆ
author img

By PTI

Published : Jan 27, 2024, 12:03 PM IST

ಅಟ್ಮೋರ್(ಅಮೆರಿಕ): ನೈಟ್ರೋಜನ್ ಅನಿಲವನ್ನು ಬಳಸಿ ಕೈದಿಯನ್ನು ಮೊದಲ ಬಾರಿಗೆ ಗಲ್ಲಿಗೇರಿಸಲಾಗಿದೆ. ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಕಂಡುಬಂದ ಕೆನ್ನೆತ್ ಯುಜೀನ್ ಸ್ಮಿತ್ (58) ಮೇಲೆ ಅಮೆರಿಕದ ಅಲಬಾಮಾದಲ್ಲಿ ಇದನ್ನು ಬಳಸಲಾಗಿದೆ. ಇದರೊಂದಿಗೆ, 1982 ರಲ್ಲಿ ವಿಷದ ಚುಚ್ಚುಮದ್ದನ್ನು ಪರಿಚಯಿಸಿದ ನಂತರ ಅಮೆರಿಕದಲ್ಲಿ ಮೊದಲ ಬಾರಿಗೆ ಮತ್ತೊಂದು ಹೊಸ ಮರಣದಂಡನೆ ವಿಧಾನವನ್ನು ಬಳಸಲಾಗಿದೆ. ಈ ಕ್ರಮವನ್ನು ಯುರೋಪಿಯನ್ ಒಕ್ಕೂಟ (ಇಯು) ಮತ್ತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಖಂಡಿಸಿದೆ. ಆದರೆ ಮಾನವೀಯ ರೀತಿಯಲ್ಲಿ ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ ಎಂದು ಅಮೆರಿಕದ ಅಧಿಕಾರಿಗಳು ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ಶುಕ್ರವಾರ ಸ್ಥಳೀಯ ಕಾಲಮಾನ ಸುಮಾರು ಬೆಳಗ್ಗೆ 7:00 ಗಂಟೆಗೆ ಅಟ್ಮೋರ್‌ನಲ್ಲಿರುವ ಹಾಲ್ಮನ್ ಕರೆಕ್ಷನಲ್ ಫೆಸಿಲಿಟಿಯಲ್ಲಿ ಅಧಿಕಾರಿಗಳು ಅಪರಾಧಿ ಸ್ಮಿತ್‌ನನ್ನು ಮರಣದಂಡನೆ ಕೋಣೆಗೆ ಕರೆತಂದರು. ಸ್ಮಿತ್ ಅವರ ಸಂಬಂಧಿಕರು, ಅವರ ಆಧ್ಯಾತ್ಮಿಕ ಸಲಹೆಗಾರರು ಮತ್ತು ವಕೀಲರು ಅವರ ಕುಟುಂಬದ ಸದಸ್ಯರೊಂದಿಗೆ ಪ್ರಕ್ರಿಯೆಯನ್ನು ನೇರವಾಗಿ ವೀಕ್ಷಿಸಲು ಬಂದರು. ಐವರು ಮಾಧ್ಯಮ ಪ್ರತಿನಿಧಿಗಳನ್ನೂ ಕರೆಸಲಾಗಿತ್ತು. ಪ್ರತ್ಯಕ್ಷದರ್ಶಿಗಳ ಪ್ರಕಾರ..

  • ಸ್ಮಿತ್​ನನ್ನು ಆರಂಭದಲ್ಲಿ ಪ್ರತ್ಯೇಕ ಹಾಸಿಗೆಯ ಮೇಲೆ ಇರಿಸಲಾಗಿತ್ತು. ಕಾಲು ಮತ್ತು ಕೈಗಳನ್ನು ಕಟ್ಟಲಾಗಿತ್ತು.
  • ಬೆ. 7:53 ಕ್ಕೆ, ಮರಣದಂಡನೆ ಪ್ರಕ್ರಿಯೆ ಪ್ರಾರಂಭವಾಯಿತು. ಇದಕ್ಕೂ ಮುನ್ನ ಮಾತನಾಡಿದ ಸ್ಮಿತ್, “ಅಲಬಾಮಾ ಇಂದು ಮಾನವೀಯತೆ ಒಂದು ಹೆಜ್ಜೆ ಹಿಂದೆ ಸರಿದಂತೆ ವರ್ತಿಸಿದೆ. ನಾನು ಪ್ರೀತಿ, ಶಾಂತಿ ಮತ್ತು ಬೆಳಕಿನಿಂದ ಹೊರಡುತ್ತೇನೆ. ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ಐ ಲವ್ ಯು ಆಲ್'' ಎಂದು ಕಾಮೆಂಟ್ ಮಾಡಿದ್ದರು.
  • ನಂತರ ಅಧಿಕಾರಿಗಳು ಸ್ಮಿತ್‌ಗೆ ಮಾಸ್ಕ್ ಹಾಕಿದರು. ಅವರು ಅದರಿಂದ ಸಾರಜನಕ ಅನಿಲವನ್ನು ಕಳುಹಿಸಲು ಪ್ರಾರಂಭಿಸಿದರು. ಆ ವೇಳೆ ಅಲ್ಲಿದ್ದ ಕುಟುಂಬ ಸದಸ್ಯರನ್ನು ನೋಡಿ ಅವರು ಮುಗುಳ್ನಕ್ಕರು. ಕೈ ಬೀಸುತ್ತಾ ‘ಐ ಲವ್ ಯೂ’ ಚಿಹ್ನೆಯನ್ನು ತೋರಿಸಿದರು.
  • ಕ್ರಮೇಣ ಸ್ಮಿತ್ ಆಮ್ಲಜನಕದಿಂದ ವಂಚಿತರಾದರು. ನೈಟ್ರೋಜನ್ ಕಾರ್ಯ ಪ್ರಾರಂಭವಾದ ನಂತರ ಅವರು ಸ್ವಲ್ಪ ಸಮಯದವರೆಗೆ ಪ್ರಜ್ಞಾಹೀನರಾಗಿ ಕಾಣಿಸಿಕೊಂಡರು. ಮೂರ್ಛೆ ಬಂದವರಂತೆ ಎರಡು ನಿಮಿಷ ಕೈಕಾಲು ಸರಿಸಿದರು. ನಂತರ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಕ್ರಮೇಣ ದೇಹದಲ್ಲಿ ಚಲನವಲನ ಕಡಿಮೆಯಾಯಿತು.
  • ಸುಮಾರು 15 ನಿಮಿಷಗಳ ಕಾಲ ಮುಖವಾಡಕ್ಕೆ ಸಾರಜನಕ ಅನಿಲವನ್ನು ಪಂಪ್ ಮಾಡಲಾಯಿತು. 22 ನಿಮಿಷಗಳ ನಂತರ ಸ್ಮಿತ್ ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು.

ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ಈ ರೀತಿ ಮರಣದಂಡನೆ ವಿಧಿಸಲಾಗಿದೆ. ಇದಕ್ಕೂ ಮುನ್ನ ಮರಣದಂಡನೆಗೆ ಗುರಿಯಾದ ಅಪರಾಧಿಗಳಿಗೆ ವಿಷದ ಚುಚ್ಚುಮದ್ದನ್ನು ನೀಡಲಾಗುತ್ತಿತ್ತು. ಈ ವಿಧಾನವನ್ನು 1982 ರಲ್ಲಿ ಅಳವಡಿಸಲಾಯಿತು. ಅಂದಿನಿಂದ ಈ ವಿಧಾನವನ್ನು ಬಳಸಲಾಗುತ್ತಿದೆ. ಅಂದಹಾಗೆ, ಅಮೆರಿಕದಲ್ಲಿ ವಿದ್ಯುದಾಘಾತದಿಂದ ಮತ್ತು ಗುಂಡಿನ ಮೂಲಕ ಮರಣದಂಡನೆಗೆ ಅವಕಾಶವಿದೆ.

73 ದೇಶಗಳಲ್ಲಿ ಶೂಟ್​ ಮಾಡುವ ಮೂಲಕ ಮರಣದಂಡನೆ: ಅಮೆರಿಕದಲ್ಲಿ ಮಾತ್ರವಲ್ಲ, ಪಂಚದ ಹಲವು ದೇಶಗಳಲ್ಲಿ ಮರಣದಂಡನೆಗೆ ಬೇರೆ ಬೇರೆ ಅವಕಾಶವಿದೆ. ಅದನ್ನು ಕಾರ್ಯಗತಗೊಳಿಸಲು ಖಂಡಿತವಾಗಿಯೂ ವಿಭಿನ್ನ ಮಾರ್ಗಗಳಿವೆ. ಅನೇಕ ದೇಶಗಳು ಒಂದೇ ವಿಧಾನವನ್ನು ಬಳಸುತ್ತವೆ. ಆದರೆ ಅನೇಕ ದೇಶಗಳಲ್ಲಿ ಮರಣದಂಡನೆಯನ್ನು ಒಂದಕ್ಕಿಂತ ಹೆಚ್ಚು ವಿಧಾನಗಳಿಂದ ನೀಡಬಹುದು. ಪ್ರಪಂಚದಾದ್ಯಂತ 58 ದೇಶಗಳಲ್ಲಿ ಇಂದಿಗೂ ಅಪರಾಧಿಗಳನ್ನು ಮರಣದಂಡನೆ ವೇಳೆ ಗಲ್ಲಿಗೇರಿಸಲಾಗುತ್ತಿದೆ. ಆದರೂ ಸಾಮಾನ್ಯವಾಗಿ ಬಳಸುವ ವಿಧಾನವು ಶೂಟಿಂಗ್ ಆಗಿದೆ. ಶೂಟ್​ ಮಾಡುವ ಮೂಲಕ ಮರಣದಂಡನೆ ಶಿಕ್ಷೆ ವಿಶ್ವದ 73 ದೇಶಗಳಲ್ಲಿ ಜಾರಿಯಲ್ಲಿದೆ.

ಓದಿ: ಇದೇ ಮೊದಲು! ಕೊಲೆ ಅಪರಾಧಿಗೆ ನೈಟ್ರೋಜನ್ ಹೈಪೋಕ್ಸಿಯಾ ಮೂಲಕ ಮರಣದಂಡನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.