ಕ್ವೆಟ್ಟಾ: ಬಲೂಚಿಸ್ತಾನದಲ್ಲಿ ಕಾಣೆಯಾಗಿರುವ ಐವರು ಬಲೂಚ್ ಜನರ ಕುಟುಂಬಗಳು ನಡೆಸುತ್ತಿರುವ ಪ್ರತಿಭಟನೆ ಮೂರನೇ ದಿನವೂ ಮುಂದುವರಿದಿದ್ದು, ಕಾಣೆಯಾದವರನ್ನು ಸುರಕ್ಷಿತವಾಗಿ ಮರಳಿಸುವಂತೆ ಪಾಕಿಸ್ತಾನ ಸರ್ಕಾರಕ್ಕೆ ಸಾಮಾಜಿಕ ಕಾರ್ಯಕರ್ತೆ ಮಹರಂಗ್ ಬಲೂಚ್ ಆಗ್ರಹಿಸಿದ್ದಾರೆ. ದೇಶದ ಭಯೋತ್ಪಾದನಾ ನಿಗ್ರಹ ಇಲಾಖೆ (ಸಿಟಿಡಿ) ಬಲೂಚ್ ಜನರನ್ನು ನಿರಂತರವಾಗಿ ಅಪಹರಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಬಗ್ಗೆ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಮಹರಂಗ್ ಬಲೂಚ್, "ಪ್ರತಿದಿನವೂ ಭದ್ರತಾ ಪಡೆಗಳು ನಮ್ಮ ಮನೆಗಳಿಗೆ ನುಗ್ಗುತ್ತವೆ. ನಮ್ಮ ಮುಗ್ಧ ಜನರನ್ನು ಹೊಡೆದು ಅಪಹರಿಸಿಕೊಂಡು ಹೋಗುತ್ತಾರೆ. ಕಾಣೆಯಾದ ಐವರ ಕುಟುಂಬಗಳ ಪ್ರತಿಭಟನೆ ಮೂರನೇ ದಿನವೂ ಮುಂದುವರೆದಿದೆ. ಸಿಟಿಡಿಯು ಬಲವಂತವಾಗಿ ಕಣ್ಮರೆ ಮಾಡಿಸಿದ ನಮ್ಮ ಜನರನ್ನು ಸುರಕ್ಷಿತವಾಗಿ ಮರಳಿಸುವಂತೆ ಆಗ್ರಹಿಸಿ ಗ್ರೆಶಾಗ್ನ ಸಿಪಿಇಸಿ ರಸ್ತೆಯನ್ನು ಬಂದ್ ಮಾಡಿ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ." ಎಂದು ಬರೆದಿದ್ದಾರೆ.
Saira Baloch, urging the Baloch Raj to join the Baloch Raji Muchi at Gwadar. She is an example of suffering from collective punishment that the families of disappeared persons go through.#BalochNationalGathering #بلوچ_راجی_مچی https://t.co/JOYeov1frF
— Mahrang Baloch (@MahrangBaloch_) July 21, 2024
ಏತನ್ಮಧ್ಯೆ ಅಪಹೃತ ವ್ಯಕ್ತಿಗಳ ಪೈಕಿ ಓರ್ವನ ಸಹೋದರಿಯಾದ ಸೈರಾ ಬಲೂಚ್ ಅವರ ವೀಡಿಯೊ ಒಂದನ್ನು ಬಲೂಚ್ ಯಕ್ಜೆಹ್ತಿ ಸಮಿತಿಯು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.
"ಸಹೋದರಿ ಸೈರಾ ಬಲೂಚ್ ಕಳೆದ ಆರು ವರ್ಷಗಳಿಂದ ಬಲವಂತವಾಗಿ ಕಣ್ಮರೆಯಾದ ತನ್ನ ಸಹೋದರರಿಗಾಗಿ ರಸ್ತೆಯಲ್ಲಿ ಪ್ರತಿಭಟಿಸುತ್ತಿದ್ದಾರೆ. ಕಣ್ಮರೆಯಾದ ವ್ಯಕ್ತಿಗಳ ಕುಟುಂಬಗಳು ಅನುಭವಿಸುವ ಸಾಮೂಹಿಕ ಶಿಕ್ಷೆ ಹೇಗಿರುತ್ತದೆ ಎಂಬುದಕ್ಕೆ ಆಕೆ ಒಂದು ಉದಾಹರಣೆಯಾಗಿದ್ದಾಳೆ. ಏಕತೆ ಮತ್ತು ಪ್ರತಿರೋಧದೊಂದಿಗೆ, ನಾವು ಬಲವಂತದ ಕಣ್ಮರೆ ಮತ್ತು ನಮ್ಮ ತಾಯಂದಿರು ಮತ್ತು ಸಹೋದರಿಯರ ಸಾಮೂಹಿಕ ಶಿಕ್ಷೆಯ ಚಕ್ರವನ್ನು ಕೊನೆಗೊಳಿಸಬಹುದು ಮತ್ತು ನಮ್ಮ ಪೀಳಿಗೆಗೆ ಸಮೃದ್ಧ ಭವಿಷ್ಯವನ್ನು ಭದ್ರಪಡಿಸಬಹುದು." ಎಂದು ಪೋಸ್ಟ್ನಲ್ಲಿ ಬರೆಯಲಾಗಿದೆ.
ಜುಲೈ 21ರಂದು, ಪಾಕಿಸ್ತಾನದ ಬಲೂಚಿಸ್ತಾನದ ತುರ್ಬತ್ ಜಿಲ್ಲೆಯಲ್ಲಿ ಬಲವಂತವಾಗಿ ಕಣ್ಮರೆಯಾದ ಬಲೂಚ್ ವ್ಯಕ್ತಿಗಳ ಕುಟುಂಬಗಳು ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿವೆ. ಈಗ ಏಳನೇ ದಿನಕ್ಕೆ ಕಾಲಿಟ್ಟಿರುವ ಪ್ರತಿಭಟನೆ, ಅಪಹರಣಕ್ಕೊಳಗಾದವರ ಕುಟುಂಬ ಸದಸ್ಯರ ದುಃಸ್ಥಿತಿಯನ್ನು ಎತ್ತಿ ತೋರಿಸುವ ಮತ್ತು ಅವರನ್ನು ಸುರಕ್ಷಿತವಾಗಿ ಹಿಂದಿರುಗಿಸುವಂತೆ ಒತ್ತಾಯಿಸುವ ಗುರಿಯನ್ನು ಹೊಂದಿದೆ.
"ಜುಲೈ 18ರಂದು ಈ ಕುಟುಂಬಗಳು ಉಪವಾಸ ಸತ್ಯಾಗ್ರಹ ಆರಂಭಿಸಿವೆ. ಕೆಚ್ ಜಿಲ್ಲೆಯ ವಿವಿಧ ಪ್ರದೇಶಗಳ ಈ ಕುಟುಂಬಗಳು ತುರ್ಬತ್ನ ಡಿಸಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸುತ್ತಿವೆ." ಎಂದು ಬಿವೈಸಿ ಹೇಳಿದೆ. ಜನರು ಬಲವಂತವಾಗಿ ಕಣ್ಮರೆಯಾಗುತ್ತಿರುವುದನ್ನು ಪ್ರತಿಭಟಿಸಲು ಬಿವೈಸಿ ಜುಲೈ 28 ರಂದು ಗ್ವಾದರ್ನಲ್ಲಿ ರಾಷ್ಟ್ರ ಮಟ್ಟದ ಸಮಾವೇಶವನ್ನು ಆಯೋಜಿಸಿದೆ.