ಹವಾಯಿ, ಅಮೆರಿಕ: ಪತ್ನಿ ಹಾಗೂ ಮೂವರು ಅಪ್ರಾಪ್ತ ಮಕ್ಕಳನ್ನು ಕೊಂದು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಅಮೆರಿಕದ ಹವಾಯಿ ರಾಜ್ಯದ ಅತಿದೊಡ್ಡ ನಗರ ಮತ್ತು ರಾಜಧಾನಿ ಹೊನೊಲುಲುವಿನಲ್ಲಿ ಬೆಳಕಿಗೆ ಬಂದಿದೆ. ಹೊನೊಲುಲು ಪೊಲೀಸರು ಭಾನುವಾರ ಈ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಪೊಲೀಸ್ ಅಧಿಕಾರಿಗಳು ಮನೆಯಲ್ಲಿ ಮಹಿಳೆ ಮತ್ತು 10, 12 ಮತ್ತು 17 ವರ್ಷದ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಲೆಫ್ಟಿನೆಂಟ್ ದಿನಾ ಥೋಮ್ಸ್ ಹೇಳಿದ್ದಾರೆ. ಅವರು ಚಾಕು ದಾಳಿಯಿಂದ ಸಾವನ್ನಪ್ಪಿದ್ದಾರೆ ಮತ್ತು ಮಹಿಳೆಯ ಪತಿ ಕೂಡ ಶವವಾಗಿ ಪತ್ತೆಯಾಗಿದ್ದಾರೆ ಎಂದು ಹೇಳಿದರು.
ಪತಿ ತನ್ನ ಪತ್ನಿ ಮತ್ತು ಮಕ್ಕಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಥೋಮ್ಸ್ ಹೇಳಿದ್ದಾರೆ. ವ್ಯಕ್ತಿ ತನ್ನನ್ನು ತಾನೇ ಇರಿದುಕೊಂಡಿದ್ದಾನೆಯೇ ಎಂದು ಕೇಳಿದಾಗ, ತನ್ನ ಪತಿಯ ಸಾವಿಗೆ ಕಾರಣವನ್ನು ತನಿಖೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಮೃತರ ಹೆಸರುಗಳು ಇನ್ನು ತಿಳಿದು ಬಂದಿಲ್ಲ. ಈ ಹಿಂದೆ ಇವರ ಮೇಲೆ ಕೌಟುಂಬಿಕ ಹಿಂಸಾಚಾರದ ಯಾವುದೇ ದೂರುಗಳು ಇರಲಿಲ್ಲ. ಈ ಕೊಲೆಗಳ ಹಿಂದಿನ ಉದ್ದೇಶವೇನು ತಿಳಿದು ಬರಬೇಕಾಗಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಥೋಮ್ಸ್ ಹೇಳಿದರು. ಪೊಲೀಸರ ಪ್ರಕಾರ, ಭಾನುವಾರ ಬೆಳಗ್ಗೆ ಕುಟುಂಬ ಸದಸ್ಯರ ನಡುವೆ ಜಗಳ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಘಟನೆ ಕುರಿತು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಓದಿ: ಇಂದು ಬಿಜೆಪಿ ಅಭ್ಯರ್ಥಿಗಳ ಹೆಸರು ಫೈನಲ್, ಇಂದೇ ರಾಜ್ಯದ ಮೊದಲ ಪಟ್ಟಿ ಬಿಡುಗಡೆ: ಯಡಿಯೂರಪ್ಪ