ETV Bharat / international

ಬಿಲಿಯನೇರ್​ ಹಿಂದೂಜಾ ಕುಟುಂಬಕ್ಕೆ ಶಾಕ್​ ನೀಡಿದ ಕೋರ್ಟ್​: ನಾಲ್ವರಿಗೆ ಜೈಲು ಶಿಕ್ಷೆ - Hinduja Case Switzerland

Hinduja Servants Case : ಬ್ರಿಟನ್​​​​​ನ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತೀಯ ಮೂಲದ ಹಿಂದೂಜಾ ಕುಟುಂಬಕ್ಕೆ ನ್ಯಾಯಾಲಯ ಶಾಕ್ ನೀಡಿದೆ. ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿನ ವಿಲ್ಲಾದಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ಕಾರ್ಮಿಕ ಶೋಷಣೆ ಮಾಡಿದ ಪ್ರಕರಣದಲ್ಲಿ ನ್ಯಾಯಾಲಯವು ಕುಟುಂಬದ ನಾಲ್ವರಿಗೆ ಜೈಲು ಶಿಕ್ಷೆ ವಿಧಿಸಿದೆ.

Hinduja Servants Case  domestic workers  billionaire family  Switzerland court
ಬಿಲಿಯನೇರ್​ ಹಿಂದೂಜಾ ಕುಟುಂಬಕ್ಕೆ ಶಾಕ್​ ನೀಡಿದ ಕೋರ್ಟ್ (Getty Images, ANI)
author img

By ETV Bharat Karnataka Team

Published : Jun 22, 2024, 12:46 PM IST

ಜಿನೀವಾ (ಸ್ವಿಟ್ಜರ್ಲೆಂಡ್‌): ಇಲ್ಲಿನ ನ್ಯಾಯಾಲಯವು ಭಾರತೀಯ ಮೂಲದ ಶ್ರೀಮಂತ ಹಿಂದೂಜಾ ಗುಂಪಿನ ನಾಲ್ವರು ಕುಟುಂಬ ಸದಸ್ಯರಿಗೆ ಜೈಲು ಶಿಕ್ಷೆ ವಿಧಿಸಿದೆ. ಕಡಿಮೆ ವೇತನ ಮತ್ತು ಗೃಹ ಕಾರ್ಮಿಕರ ಕಿರುಕುಳದ ಆರೋಪದ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿದೆ.

Hinduja Servants Case: ಪ್ರಕಾಶ್ ಹಿಂದೂಜಾ, ಅವರ ಪತ್ನಿ ಕಮಲಾ, ಪುತ್ರ ಅಜಯ್ ಮತ್ತು ಸೊಸೆ ನಮ್ರತಾ ಅವರಿಗೆ ನಾಲ್ಕರಿಂದ ನಾಲ್ಕೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅದೇ ರೀತಿ ಕುಟುಂಬ ವ್ಯವಹಾರ ನಿರ್ವಾಹಕ ನಜೀಬ್ ಜಿಯಾಜಿಗೆ ನ್ಯಾಯಾಲಯ 18 ತಿಂಗಳ ಅಮಾನತು ಶಿಕ್ಷೆ ವಿಧಿಸಿದೆ. ಈ ಪ್ರಕರಣದಲ್ಲಿ ಮಾನವ ಕಳ್ಳಸಾಗಣೆಯ ಗಂಭೀರ ಆರೋಪಗಳನ್ನು ಜಿನೀವಾ ನ್ಯಾಯಾಲಯ ವಜಾಗೊಳಿಸಿದೆ.

ಕೆಲಸಗಾರರಗಿಂತ ಸಾಕು ನಾಯಿಯೇ ಹೆಚ್ಚು: ಪ್ರಕಾಶ್ ಹಿಂದೂಜಾ ಅವರ ಕುಟುಂಬವು ಅನಕ್ಷರಸ್ಥ ಭಾರತೀಯರನ್ನು ಕರೆತಂದು ಜಿನೀವಾದಲ್ಲಿರುವ ತಮ್ಮ ಐಷಾರಾಮಿ ವಿಲ್ಲಾದಲ್ಲಿ ಸೇವಕರನ್ನಾಗಿ ನೇಮಿಸಿಕೊಂಡಿದೆ ಮತ್ತು ಅವರ ಪಾಸ್‌ಪೋರ್ಟ್‌ಗಳನ್ನು ಕಿತ್ತುಕೊಂಡಿದೆ ಎಂದು ಪ್ರಾಸಿಕ್ಯೂಷನ್ ಆರೋಪಿಸಿದೆ.

ವೇತನವನ್ನು ಸ್ವಿಸ್ ಕರೆನ್ಸಿಯ ಬದಲು ರೂಪಾಯಿಗಳಲ್ಲಿ ನೀಡಲಾಗುತ್ತಿದೆ ಮತ್ತು ಅದನ್ನು ಸಹ ಸೇವಕರ ಕೈಗೆ ನೀಡುವ ಬದಲು ಭಾರತದಲ್ಲಿನ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ ಎಂದು ಅದು ಹೇಳಿದೆ. ಕೆಲಸಗಾರರು ದಿನಕ್ಕೆ 15-18 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುತ್ತಿದ್ದರು, ಸಾಕಷ್ಟು ವಿಶ್ರಾಂತಿ ಸಮಯವನ್ನು ನೀಡುತ್ತಿರಲಿಲ್ಲ ಮತ್ತು ವಿಲ್ಲಾದಿಂದ ಹೊರಬರಲು ಅನುಮತಿಸುತ್ತಿರಲಿಲ್ಲ ಎಂಬ ಆರೋಪ ಅವರ ಮೇಲಿತ್ತು.

18 ಗಂಟೆಗಳ ಕೆಲಸಕ್ಕಾಗಿ, ಹಿಂದೂಜಾ ಕುಟುಂಬ 6.19 ಪೌಂಡ್‌ಗಳಿಗಿಂತ (652 ರೂಪಾಯಿ) ಕಡಿಮೆ ವೇತನವನ್ನು ನೀಡುತ್ತಿದ್ದರು. ಆದರೆ ಮನೆಯಲ್ಲಿ ಸಾಕು ನಾಯಿಗಾಗಿ ಅವರು ವರ್ಷಕ್ಕೆ 7615 ಪೌಂಡ್‌ಗಳನ್ನು (ಸುಮಾರು 8 ಲಕ್ಷಗಳು) ಖರ್ಚು ಮಾಡುತ್ತಾರೆ. ಸ್ವಿಸ್ ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಾಸಿಕ್ಯೂಷನ್ ಕುಟುಂಬದ ನಾಲ್ವರ ವಿರುದ್ಧ ಕ್ರಮ ಜರುಗಿಸಲು ಕೋರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜಿನೀವಾ ನ್ಯಾಯಾಲಯ ಆರೋಪಿಗಳಿಗೆ ತೀರ್ಪು ನೀಡಿತು.

2007 ರಲ್ಲಿಯೂ ಶಿಕ್ಷೆ: ಆದರೆ ತೀರ್ಪಿನ ವೇಳೆ ನಾಲ್ವರು ನ್ಯಾಯಾಲಯದಲ್ಲಿ ಇರಲಿಲ್ಲ. ಅವರ ಮ್ಯಾನೇಜರ್​ ಉಪಸ್ಥಿತರಿದ್ದರು. ಈ ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಪ್ರಕಾಶ್ ಹಿಂದೂಜಾ ಪರ ವಕೀಲರು ತಿಳಿಸಿದ್ದಾರೆ. ಎರಡು ದಶಕಗಳ ಹಿಂದೆ, ಹಿಂದೂಜಾ ಕುಟುಂಬವು ಸ್ವಿಸ್ ಪೌರತ್ವವನ್ನು ಪಡೆದುಕೊಂಡಿತ್ತು. 2007ರಲ್ಲಿ ಕೂಡ ಇದೇ ರೀತಿಯ ಅಪರಾಧಗಳಲ್ಲಿ ಪ್ರಕಾಶ್ ಹಿಂದುಜಾ ತಪ್ಪಿತಸ್ಥರೆಂದು ನ್ಯಾಯಾಲಯ ತೀರ್ಪು ನೀಡಿತ್ತು. ಕುಟುಂಬವು ತೆರಿಗೆ ಸಂಬಂಧಿತ ಪ್ರಕರಣವನ್ನೂ ಎದುರಿಸುತ್ತಿದೆ.

ಓದಿ: ದರ್ಶನ್ ಸೇರಿ ನಾಲ್ವರ ಪೊಲೀಸ್ ಕಸ್ಟಡಿ ಇಂದು ಅಂತ್ಯ: ನ್ಯಾಯಾಂಗ ಬಂಧನ ಸಾಧ್ಯತೆ - Darshan Police custody

ETV Bharat Logo

Copyright © 2024 Ushodaya Enterprises Pvt. Ltd., All Rights Reserved.