ನ್ಯೂಯಾರ್ಕ್: ಅಮೆರಿಕದ ಪ್ರಮುಖ ನಗರ ನ್ಯೂಯಾರ್ಕ್ ಹಾಗೂ ಫಿಲಿಡೆಲ್ಫಿಯಾದಲ್ಲಿ ಶುಕ್ರವಾರ ರಾತ್ರಿ 4.8 ಪ್ರಾಥಮಿಕ ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಅಮೆರಿಕ ಬಯೋಲಾಜಿಕಲ್ ಸರ್ವೇ ಹೇಳಿದೆ. ಆದರೆ ಯಾವುದೇ ಸಾವು- ನೋವು, ಹಾನಿಯಾಗಿರುವ ಆಗಿರುವ ಬಗ್ಗೆ ವರದಿಯಾಗಿಲ್ಲ.
ನ್ಯೂಜೆರ್ಸಿಯ ವೈಟ್ಹೌಸ್ ನಿಲ್ದಾಣದ ಬಳಿ ಅಂದರೆ ನ್ಯೂಯಾರ್ಕ್ ನಗರದ ಪಶ್ಚಿಮಕ್ಕೆ 45 ಮೈಲಿಗಳು ಹಾಗೂ ಫಿಲಿಡೆಲ್ಫಿಯಾದಿಂದ ಉತ್ತರಕ್ಕೆ 50 ಮೈಲುಗಳಷ್ಟು ದೂರದಲ್ಲಿ ಭೂಕಂಪನವಾಗಿದೆ. ಈಶಾನ್ಯ ಅಮೆರಿಕದಾದ್ಯಂತ ಗಗನಚುಂಬಿ ಕಟ್ಟಡಗಳು ಹಾಗೂ ಉಪನಗರಗಳು ಭೂಕಂಪನಕ್ಕೆ ಅಲುಗಾಡಿದ್ದು, ಜನರನ್ನು ಬೆಚ್ಚಿಬೀಳಿಸಿದೆ. ಬ್ರೂಕ್ಲಿನ್ನಲ್ಲಿನ ಕಟ್ಟಡಗಳು ಅಲುಗಾಡಿವೆ ಎಂದು ವರದಿಯಾಗಿದೆ.
ನ್ಯಾಯಾರ್ಕ್ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ, ಗಾಜಾದ ಪರಿಸ್ಥಿತಿಯ ಕುರಿತು ಭದ್ರತಾ ಮಂಡಳಿಯ ಸಭೆ ನಡೆಯುತ್ತಿತ್ತು. ಈ ವೇಳೆ ಭೂಕಂಪನವಾದ ಕಾರಣ, ಕೆಲಹೊತ್ತು ತಾತ್ಕಾಲಿಕಾಗಿ ಸಭೆಗೆ ವಿರಾಮ ನೀಡಲಾಯಿತು.
ಬಾಲ್ಟಿಮೋರ್ನಿಂದ ಬೋಸ್ಟನ್ ಹಾಗೂ ಅದರಾಚೆಗಿನ ಜನರು ನೆಲ ಅಲುಗಾಡುತ್ತಿದ್ದ ಬಗ್ಗೆ ಅನುಭವ ಹಂಚಿಕೊಂಡಿರುವುದು ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಗಂಭೀರ ಹಾನಿಯ ಬಗ್ಗೆ ತಕ್ಷಣದ ವರದಿಗಳಿಲ್ಲದಿದ್ದರೂ, ಅಧಿಕಾರಿಗಳು ಸೇತುವೆಗಳು ಹಾಗೂ ಕೆಲವು ಪ್ರಮುಖ ಕಟ್ಟಡಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಇದೇ ವೇಳೆ, ಕೆಲವು ವಿಮಾನಗಳನ್ನು ವಿಳಂಬಗೊಳಿಸಿರುವುದಲ್ಲದೆ, ಬೇರೆ ನಿಲ್ದಾಣಗಳಿಗೆ ತಿರುಗಿಸಲಾಯಿತು. ಆಮ್ಟ್ರಾಕ್ ಈಶಾನ್ಯ ಕಾರಿಡಾರ್ನಾದ್ಯಂತ ರೈಲುಗಳನ್ನೂ ತಡೆ ಹಿಡಿಯಲಾಯಿತು.
ಸಾಮಾಜಿಕ ಮಾಧ್ಯಮ ಬಳಕೆದಾರರು ಫಿಲಿಡೆಲ್ಫಿಯಾದಿಂದ ನ್ಯಾಯಾರ್ಕ್ವರೆಗೆ ಹಾಗೂ ಲಾಂಗ್ ಐಲ್ಯಾಂಡ್ನ ಪೂರ್ವಕ್ಕೆ ಭೂಕಂಪನದ ಅನುಭವ ಆಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಯುಎಸ್ ಬಯೋಲಾಜಿಕಲ್ ಸರ್ವೇ ಏಜೆನ್ಸಿ, 4.8ತೀವ್ರತೆಯ ಭೂಕಂಪನ ಹಾನಿಯನ್ನು ಉಂಟುಮಾಡುವಷ್ಟು ದೊಡ್ಡದಲ್ಲ. ಶುಕ್ರವಾರದ ಭೂಕಂಪನದಿಂದಾಗಿ ನಗರದಲ್ಲಿ ಕೆಲಕಾಲ ವಾಹನ ಸಂಚಾರ, ಜನಜೀವನ ವ್ಯತ್ಯಯವಾಗಿತ್ತು ಎಂದು ಹೇಳಿದೆ.
ಇದನ್ನೂ ಓದಿ: ವಿಡಿಯೋ: ಮಂಡ್ಯದ ಹಲವೆಡೆ ನಿಗೂಢ ಶಬ್ದಕ್ಕೆ ಬೆಚ್ಚಿಬಿದ್ದ ಜನ; ನಡುಗಿದ ಭೂಮಿ
ಇನ್ನು ಭಾರತದ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಶುಕ್ರವಾರ ಲಘು ತೀವ್ರತೆಯ ಎರಡು ಭೂಕಂಪಗಳು ಸಂಭವಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಂಪನದಿಂದ ಯಾವುದೇ ಹಾನಿಯಾದ ಬಗ್ಗೆ ತಕ್ಷಣದ ವರದಿಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಎರಡು ಭೂಕಂಪನಗಳ ಕೇಂದ್ರಬಿಂದು ಕಿಶ್ತ್ವಾರ್‌ನಲ್ಲಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನ್ಯಾಷನಲ್ ಸೆಂಟರ್ ಆಫ್ ಸೆಸ್ಮಾಲಜಿ ಎನ್‌ಸಿಎಸ್ ಪ್ರಕಾರ, ಕಿಶ್ತ್ವಾರ್‌ನಲ್ಲಿ ರಾತ್ರಿ 11:01 ಕ್ಕೆ 3.2 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಆಳವು ಭೂಮಿಯ ಮೇಲ್ಮೈಯಿಂದ 10 ಕಿಲೋಮೀಟರ್ ಕೆಳಗೆ ಅಂದರೆ 33.34 ಡಿಗ್ರಿ ಅಕ್ಷಾಂಶ ಮತ್ತು 76.62 ಡಿಗ್ರಿ ರೇಖಾಂಶದಲ್ಲಿದೆ ಎಂದು ಎನ್‌ಸಿಎಸ್ ಸ್ಪಷ್ಟಪಡಿಸಿದೆ.