ಗಾಜಾ, ಪ್ಯಾಲೆಸ್ಟೈನ್: ಉತ್ತರ ಗಾಜಾದ ಜಬಾಲಿಯಾದಲ್ಲಿ ಸ್ಥಳಾಂತರಗೊಂಡ ಕುಟುಂಬಗಳಿಗೆ ಆಶ್ರಯ ನೀಡುತ್ತಿರುವ ಆಸ್ಪತ್ರೆ ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 16 ಪ್ಯಾಲೆಸ್ತೀನ್ ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.
ನಾಗರಿಕರು ಆಶ್ರಯ ಪಡೆದಿದ್ದ ಯೆಮೆನ್ ಅಲ್-ಸಯೀದ್ ಆಸ್ಪತ್ರೆಯ ಅಂಗಳಕ್ಕೆ ಇಸ್ರೇಲ್ ರಾಕೆಟ್ಗಳು ಅಪ್ಪಳಿಸಿವೆ. ಇದರಿಂದ ಅಪಾರ ಸಾವು ನೋವು ಸಂಭವಿಸಿದೆ. ಇಸ್ರೇಲಿ ವಿಶೇಷ ಪಡೆಗಳು ಬುಧವಾರ ತಡರಾತ್ರಿ ವೆಸ್ಟ್ ಬ್ಯಾಂಕ್‌ನ ನಬ್ಲುಸ್‌ನಲ್ಲಿ ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ಕು ಪ್ಯಾಲೆಸ್ತೀನ್ ಯುವಕರು ಸಾವನ್ನಪ್ಪಿದ್ದಾರೆ.
ಲೆಬನಾನ್ನ ಹೆಜ್ಬುಲ್ಲಾ ನೆಲೆಗಳ ಮೇಲೆ ಮುಗಿಬಿದ್ದ ಇಸ್ರೇಲ್: ಮತ್ತೊಂದು ಕಡೆ, ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಶತ್ರು ಪಡೆಗಳ ಮೂಲಸೌಕರ್ಯಗಳನ್ನು ನಾಶಪಡಿಸಲಾಗಿದೆ. ಅನೇಕ ಭಯೋತ್ಪಾದಕರನ್ನು ಹೊಡೆದು ಹಾಕಿರುವ ಇಸ್ರೇಲ್ ಸೇನೆ, ಉಗ್ರರ ಭೂಗತ ಮೂಲಸೌಕರ್ಯಗಳನ್ನು ತಟಸ್ಥಗೊಳಿಸಿದೆ.
ಅನೇಕ ಸುರಂಗಗಳನ್ನು ನಾಶಪಡಿಸಲಾಗಿದೆ ಮತ್ತು 100 ಕ್ಕೂ ಹೆಚ್ಚು ಶಸ್ತ್ರಾಸ್ತ್ರ ಸಂಗ್ರಹಗಳನ್ನು ಪತ್ತೆ ಮಾಡಿ ನಾಶಪಡಿಸಲಾಗಿದೆ ಎಂದು ಐಡಿಎಫ್ ಹೇಳಿಕೊಂಡಿದೆ. ಗೋಲಾನಿ ಪದಾತಿ ದಳ, ಎಟ್ಜಿಯೋನಿ ಪದಾತಿ ದಳ, 188 ನೇ ಶಸ್ತ್ರಸಜ್ಜಿತ ದಳ, ಮತ್ತು 282 ನೇ ಫಿರಂಗಿ ದಳಗಳನ್ನು ಒಳಗೊಂಡಂತೆ IDF ನ 36 ನೇ "ಗಾಯಾಶ್" ವಿಭಾಗದ ಪಡೆಗಳ ಸಹಕಾರದೊಂದಿಗೆ ಹೋರಾಡುತ್ತಿವೆ. ಗೋಲಾನಿ ಬ್ರಿಗೇಡ್‌ನ ಪಡೆಗಳು ಮರೂನ್ ಎಲ್ ರಾಸ್ ಪ್ರದೇಶದ ಹೆಜ್ಬುಲ್ಲಾ ಕಮಾಂಡರ್ ನಿರ್ಮೂಲನೆ ಮಾಡಿದೆ ಮತ್ತು ಶತ್ರುಗಳ ರಾಕೆಟ್ ಉಡಾವಣೆ ಮತ್ತು ದಾಳಿಯ ಸಾಮರ್ಥ್ಯಗಳನ್ನು ಹಾನಿಗೊಳಿಸಿದೆ.
188 ನೇ ಶಸ್ತ್ರಸಜ್ಜಿತ ಬ್ರಿಗೇಡ್‌ನ ಪಡೆಗಳು ಯಾರೌನ್ ಪ್ರದೇಶದಲ್ಲಿನ ಭಯೋತ್ಪಾದಕರ ಪ್ರಧಾನ ಕಚೇರಿಯನ್ನು ಕೂಡಾ ದ್ವಂಸಗೊಳಿಸಿವೆ, ಇದು ಇಸ್ರೇಲ್ ವಿರುದ್ಧ ಹಿಜ್ಬುಲ್ಲಾ ಭಯೋತ್ಪಾದಕ ಕಾರ್ಯಾಚರಣೆಗಳ ಕೇಂದ್ರ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿತ್ತು.
ಎಟ್ಜಿಯೋನಿ ಬ್ರಿಗೇಡ್‌ನ ಪಡೆಗಳು ಡಜನ್‌ಗಟ್ಟಲೆ ಭೂಗತ ಮೂಲಸೌಕರ್ಯಗಳನ್ನು ನಾಶಪಡಿಸುವಲ್ಲಿ ಯಶಸ್ವಿಯಾಗಿವೆ.
ಇದನ್ನು ಓದಿ: ಇಸ್ರೇಲ್-ಹಮಾಸ್ ಯುದ್ಧಕ್ಕೆ ಒಂದು ವರ್ಷ: 42 ಸಾವಿರ ಮಂದಿ ಸಾವು