ETV Bharat / health

ಹೊಸ ಸಾಂಕ್ರಾಮಿಕತೆಗೆ ಕಾರಣವಾಗಲಿದೆ ಸೈಬೀರಿಯಾದಲ್ಲಿ ಘನೀಕೃತವಾಗಿರುವ ಝೊಂಬಿವೈರಸ್​ - ಹೊಸ ಸಾಂಕ್ರಾಮಿಕತೆಗೆ ಕಾರ

ಸೈಬೀರಿಯಾದಲ್ಲಿ ಹೆಪ್ಪುಗಟ್ಟಿರುವ ಅನೇಕ ವೈರಸ್​ಗಳು ಮನುಕುಲಕ್ಕೆ ಅಪಾಯವನ್ನು ತಂದೊಡ್ಡಬಹುದು. ಇದರ ತೆರೆದುಕೊಳ್ಳುವಿಕೆಗೆ ಜಾಗತಿಕ ತಾಪಮಾನ ಕಾರಣವಾಗಲಿದೆ.

Zombie viruses trapped in permafrost in Siberia may trigger new pandemic

author img

By ETV Bharat Karnataka Team

Published : Jan 23, 2024, 1:46 PM IST

Updated : Jan 23, 2024, 3:21 PM IST

ಲಂಡನ್​: ಹೆಚ್ಚುತ್ತಿರುವ ಭೂಮಿ ತಾಪಮಾನ, ನೌಕಾಯಾನ, ಗಣಿಗಾರಿಕೆ ಕೂಡ ಹೆಚ್ಚುತ್ತಿದೆ. ಇದರಿಂದ ಸೈಬೀರಿಯಾದ ಹಿಮಹಾಸಿನಿಂದ ಆವೃತ್ತವಾಗಿರುವ ಪ್ರಾಚೀನಾ ಝೊಂಬಿ ವೈರಸ್​​ ಬಿಡುಗಡೆಯಾಗಬಹುದು. ಇದು ಹೊಸ ಸಾಂಕ್ರಾಮಿಕತೆ ಆರಂಭವಾಗಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

10 ಸಾವಿರ ವರ್ಷಗಳಿಂದ ಸೈಬೀರಿಯಾದಲ್ಲಿ ಹಿಮದ ಹೊದಿಕೆಯಲ್ಲಿ ಹೆಪ್ಪುಗಟ್ಟಿರುವ ವೈರಸ್​​​ ಮೆಥುಸೆಲಾ ಸೂಕ್ಷ್ಮಜೀವಿಗಳು ಎಂದು ಪರಿಚಿತವಾಗಿದೆ. ಇದು ಮನುಕುಲಕ್ಕೆ ಹೆಚ್ಚಿನ ಅಪಾಯ ತರಬಹುದು ಮತ್ತು ರೋಗದ ಹರಡುವಿಕೆಗೆ ಕಾರಣವಾಗಬಹುದು. ಭೂಮಿಯಲ್ಲಿ 2023 ಅತ್ಯಂತ ಶಾಖದ ವರ್ಷವಾಗಿ ದಾಖಲಾಗಿದೆ. ಈ ಹವಾಮಾನ ಹಿಂದೆಂದಿಗಿಂತಲೂ ಈಗ ಝೊಂಬಿ ವೈರಸ್ ಬಿಡುಗಡೆಗೆ ಕಾರಣವಾಗಬಹುದು ಎಂದು ದಕ್ಷಿಣ ಫ್ರಾನ್ಸ್​​ನ ಐಕ್ಸಿ ಮರ್ಸೈಲೆ ಯುನಿವರ್ಸಿಟಿ ಸಂಶೋಧಕರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ದಕ್ಷಿಣ ಪ್ರದೇಶದಿಂದ ಸಾಂಕ್ರಾಮಿಕದ ಬೆದರಿಕೆಯಿದ್ದು ಇದು ರೋಗದ ಉಲ್ಬಣತೆಗೆ ಕಾರಣವಾಗಲಿದೆ. ಇದು ಉತ್ತರಕ್ಕೆ ಹರಡಲಿದೆ ಎಂದು ವಿಶ್ಲೇಷಿಸಲಾಗಿದೆ ಎಂದು ಜೆನೆಸಿಸ್ಟ್​ ಜೀನ್​ ಮಿಷೆಲ್​ ಗ್ಲಾವೆರಿಯಾ ತಿಳಿಸಿದ್ದಾರೆ. ಇದಕ್ಕೆ ವಿರುದ್ಧವಾಗಿ ಉತ್ತರದಲ್ಲಿ ಇದು ಉಗಮವಾಗಿ ಬಳಿಕ ದಕ್ಷಿಣಕ್ಕೆ ಪ್ರಯಾಣಿಸಬಹುದು. ಈ ನಿಟ್ಟಿನಲ್ಲಿ ಕೊಂಚ ಹೆಚ್ಚಿನ ಎಚ್ಚರಿಕೆ ನೀಡಬೇಕಿದೆ. ಮಾನವರಿಗೆ ಸೋಂಕು ತಗುಲಿಸುವ ಸಾಮರ್ಥ್ಯವನ್ನು ಹೊಂದಿರುವ ಅನೇಕ ವೈರಸ್​ಗಳಿದ್ದು, ಹೊಸ ರೋಗಕ್ಕೆ ಇವು ಕಾರಣವಾಗಬಹುದು.

ಇದಕ್ಕೆ ಸಹಮತ ವ್ಯಕ್ತಪಡಿಸಿರುವ ರೊಟ್ಟೆರ್ಡಮ್​ನ ಎರ್ಸ್ಮಸ್​​ ಮೆಡಿಕಲ್​ ಸೆಂಟರ್​​ನ ವೈರಾಲಾಜಿಸ್ಟ್​​ ಮರಿಯನ್​ ಕೂಪ್​ಮನ್ಸ್​​​, ಹಿಮಹಾಸಿನಲ್ಲಿ ಮಲಗಿರುವ ವೈರಸ್​ಗಳು ಯಾವುದು ಎಂಬುದು ನಮಗೆ ತಿಳಿದಿಲ್ಲ. ಆದರೆ, ನಿಜವಾಗಿಯೂ ಅಪಾಯವಿದೆ. ಪೊಲಿಯೋದಂತಹ ಪ್ರಾಚೀನ ರೀತಿಯ ರೋಗವೂ ಹರಡುವ ಅಪಾಯವೂ ಇದೆ ಎಂದಿದ್ದಾರೆ. ಈ ರೀತಿ ಆಗಬಹುದು ಎಂದು ನಾವು ಅಂದಾಜಿಸುತ್ತಿದ್ದೇವೆ ಎಂದಿದ್ದಾರೆ.

ಈ ಹಿಮಹಾಸು ಉತ್ತರ ಗೋಳಾರ್ಧದ ಐದನೇ ಭಾಗವನ್ನು ಆವರಿಸುತ್ತದೆ. ಇಲ್ಲಿ ದೀರ್ಘಾವಧಿಯಿಂದ ತಾಪಮಾನವು ಶೂನ್ಯವಿದೆ. ಅನೇಕ ಪದರಗಳು ಸಾವಿರಾರು ವರ್ಷಗಳಿಂದ ಹೆಪ್ಪುಗಟ್ಟಿದೆ ಎಂಬುದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.

ಈ ಹಿಮಹಾಸುಗಳು ಕತ್ತಲು ಮತ್ತು ಆಮ್ಲಜನಕ, ಚಳಿಯಿಂದಾಗಿ ಜೈವಿಕ ಅಂಶಗಳನ್ನು ಪರಿಪೂರ್ಣವಾಗಿ ಸಂರಕ್ಷಿಸಿದೆ. ಇವು ಏಕ ಕೋಶದ ಸೂಕ್ಷ್ಮಜೀವಿಗಳಾಗಿದ್ದು, 2014ರಲ್ಲಿ ಸೈಬೀರಿಯಾದಲ್ಲಿ ಗ್ಲವೆರಿಯಾ ನೇತೃತ್ವದ ತಂಡವೂ ಇದನ್ನು ಗಮನಿಸಿದೆ. ಈ ವೈರಸ್​ನ ಒಂದು ಮಾದರಿಯು 48,500 ವರ್ಷದಷ್ಟು ಹಳೆಯದಾಗಿದೆ.

ಇದರ ಅಪಾಯವು ಜಾಗತಿಕ ತಾಪಮಾನ ಪರಿಣಾಮವಾಗಿ ಬರಬಹುದು. ಸೈಬೀರಿಯಾದಲ್ಲಿ ನೌಕಾಯಾನ, ಟ್ರಾಫಿಕ್​ ಮತ್ತು ಉದ್ಯಮದ ಅಭಿವೃದ್ಧಿ, ದೊಡ್ಡ ದೊಡ್ಡ ಗಣಿಗಾರಿಕೆ ಕಾರ್ಯಾಚರಣೆಗಳು ಹಿಮಹಾಸುಗಳ ಮೇಲೆ ದೊಡ್ಡ ಕಂದಕವನ್ನು ಮೂಡಿಸುತ್ತಿದೆ. ಈ ಕಾರ್ಯಾಚರಣೆಗಳು ಅಗಾಧ ಸಂಖ್ಯೆಯಲ್ಲಿರುವ ರೋಗಕಾರಗಳ ಹೊರ ಹೊಮ್ಮುವಿಕೆಗೆ ಕಾರಣವಾಗಬಹುದು ಎಂದಿದ್ದಾರೆ.

ವರ್ಲ್ಡ್​​ ವೈಡ್​ ಫಂಡ್​ ಫಾರ್​ ನೇಚರ್​​ ವರದಿ ಮಾಡಿದಂತೆ ಆರ್ಕ್ಟಿಕ್​ ಸರಾಸರಿ ತಾಪಮಾನವು ಮೂರು ಪಟ್ಟು ಹೆಚ್ಚಾಗಿದೆ. ಈ ಪ್ರದೇಶವು ಸರಾಸರಿ ತಾಪಮಾನ ಬದಲಾವಣೆಯ ಅಧಿಕ ದರವನ್ನು ಹೊಂದಿದೆ. ಕಳೆದ ವರ್ಷ ರಷ್ಯಾ, ಜರ್ಮನಿ ಮತ್ತು ಫ್ರಾನ್ಸ್​​ ವಿಜ್ಞಾನಿಗಳು ಆರು ಪ್ರಾಚೀನ ರೋಗಗಳು ಈ ಹಿಮಹಾಸಿನಲ್ಲಿ ಬಂಧಿಯಾಗಿವೆ. ಇದು ಜಗತ್ತಿಗೆ ದೊಡ್ಡ ವಿಪತ್ತು ತರುವ ಸಾಮರ್ಥ್ಯವನ್ನು ಹೊಂದಿದೆ ಎಂದಿದ್ದರು. (ಐಎಎನ್​ಎಸ್​)

ಇದನ್ನೂ ಓದಿ: ಹವಾಮಾನ ಬದಲಾವಣೆಯು ಅತಿಸಾರ ಕಾಯಿಲೆ ಹರಡುವಿಕೆಯ ಅಪಾಯ ಹೆಚ್ಚಿಸಬಹುದು: ಅಧ್ಯಯನ

Last Updated : Jan 23, 2024, 3:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.