ETV Bharat / health

ಎಷ್ಟೇ ತಿಂದರೂ ತೂಕ ಏರದು; ಇಡ್ಲಿಯಿಂದ ಎಷ್ಟೆಲ್ಲಾ ಆರೋಗ್ಯ ಲಾಭಗಳಿವೆ ಗೊತ್ತಾ? - Idli health benefits

author img

By ETV Bharat Karnataka Team

Published : Mar 31, 2024, 3:39 PM IST

Updated : Apr 2, 2024, 3:50 PM IST

Idli health benefits: ಕಿರಿಯರಿಂದ ಹಿಡಿದು ಹಿರಿಯರವರೆಗೆ, ಆರೋಗ್ಯವಂತರಿಂದ ರೋಗಿಗಳವರೆಗೆ ಎಲ್ಲರೂ ತಿನ್ನಬಹುದಾದ ಮತ್ತು ಆರೋಗ್ಯಕ್ಕೆ ಯಾವುದೇ ರೀತಿ ಹಾನಿಯಾಗದೆ ಇರುವ ಆಹಾರ ಎಂದ್ರೆ ಅದು ಇಡ್ಲಿ. ಮಾರ್ಚ್ 30 ರಂದು ವಿಶ್ವ ಇಡ್ಲಿ ದಿನದ ಸಂದರ್ಭದಲ್ಲಿ ನಿಮಗಾಗಿ ವಿವಿಧ ಇಡ್ಲಿ ಪಾಕವಿಧಾನಗಳು, ಅವುಗಳ ಪ್ರಯೋಜನಗಳ ಬಗ್ಗೆ ತಿಳಿಯೋಣ..

WORLD IDLI DAY 2024  IDLI RECIPES IN KANNADA
ಇಡ್ಲಿ ತಿಂದರೆ ಎಷ್ಟೆಲ್ಲಾ ಆರೋಗ್ಯ ಲಾಭಗಳಿವೆ ಗೊತ್ತಾ

ಹಲ್ಲಿಲ್ಲದ ಚಿಕ್ಕ ಮಕ್ಕಳಿಂದ ಹಿಡಿದು ಹಲ್ಲು ಉದುರಿದ ವಯೋವೃದ್ಧರವರೆಗೆ ಎಲ್ಲರೂ ಇಷ್ಟಪಟ್ಟು ಸಲೀಸಾಗಿ ತಿನ್ನುವ ಏಕೈಕ ಆಹಾರವೆಂದರೆ ಇಡ್ಲಿ. ಇದು ಕೇವಲ ರುಚಿಕರವಾದ ಆಹಾರ ಮಾತ್ರವಲ್ಲ, ಆದರೆ ಇದನ್ನು ತಿನ್ನುವುದರಿಂದ ಬೊಜ್ಜಿನಿಂದ ಹಿಡಿದು ತೂಕ ಇಳಿಸುವವರೆಗೆ ಅನೇಕ ಆರೋಗ್ಯಕರ ಪ್ರಯೋಜನಗಳಿವೆ.

ಇಡ್ಲಿಯ ಇನ್ನೊಂದು ವಿಶೇಷ ಗುಣವೆಂದರೆ ಅದು ಜೀರ್ಣವಾಗಲು ತುಂಬಾ ಸುಲಭ. ಹಾಗಾಗಿ ಗರ್ಭಿಣಿಯರು ಮತ್ತು ಶಸ್ತ್ರಚಿಕಿತ್ಸೆಗೆ ಒಳಗಾದವರು ಇಡ್ಲಿ ತಿನ್ನುವುದು ಒಳ್ಳೆಯದು ಎಂದು ವೈದ್ಯರು ಸಲಹೆ ನೀಡುತ್ತಾರೆ. ಇಂತಹ ಇಡ್ಲಿಯನ್ನು ಎಷ್ಟು ರೀತಿಯಲ್ಲಿ ತಿನ್ನಬಹುದು? ಅವುಗಳನ್ನು ತಿನ್ನುವ ಇತರ ಪ್ರಯೋಜನಗಳೇನು ಎಂಬುದರ ಮಾಹಿತಿ ಇಲ್ಲಿದೆ.

ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದು: ಇಡ್ಲಿ ತಿಂದರೆ ಹೊಟ್ಟೆ ತುಂಬುತ್ತದೆ. ಇದರಲ್ಲಿರುವ ಫೈಬರ್ ಅಂಶವು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಪರಿಣಾಮವಾಗಿ, ಜೀರ್ಣಾಂಗ ವ್ಯವಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ಸ್ನಾಯುಗಳ ಬೆಳವಣಿಗೆ: ಇಡ್ಲಿಯು ಹುದುಗಿಸಿದ ಆಹಾರ ಆಗಿರುವುದರಿಂದ ಇದು ಸ್ನಾಯುಗಳ ಬೆಳವಣಿಗೆಗೆ ಅಗತ್ಯವಾದ ಪ್ರೋಟೀನ್‌ಗಳು ಹೆಚ್ಚಾಗಿರುತ್ತವೆ.

ಹೃದಯಕ್ಕೆ ಒಳ್ಳೆಯದು: ಇಡ್ಲಿ ತಯಾರಿಕೆಯಲ್ಲಿ ಎಣ್ಣೆ ಮತ್ತು ತುಪ್ಪದಂತಹ ಕೊಬ್ಬನ್ನು ಹೆಚ್ಚಿಸುವ ಪದಾರ್ಥಗಳಿಲ್ಲ. ಯಾವುದೇ ಮಸಾಲೆಗಳಿಲ್ಲ. ಹಾಗಾಗಿ ಇವು ಆರೋಗ್ಯಕ್ಕೆ ಯಾವುದೇ ಹಾನಿ ಮಾಡುವುದಿಲ್ಲ. ಅಲ್ಲದೆ ಇದರಲ್ಲಿರುವ ನೈಸರ್ಗಿಕ ಕೊಬ್ಬು ಹೃದಯದ ಆರೋಗ್ಯವನ್ನು ಮತ್ತಷ್ಟು ಸುಧಾರಿಸುತ್ತದೆ.

ತೂಕ ಕಡಿಮೆ ಮಾಡಲು ಇಡ್ಲಿ ಸೂಕ್ತ: ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ಖಂಡಿತವಾಗಿಯೂ ತಮ್ಮ ಆಹಾರದಲ್ಲಿ ಇಡ್ಲಿಯು ಪ್ರಮುಖವಾಗಿದೆ. ಇದರಲ್ಲಿ ಕ್ಯಾಲೋರಿಯೂ ಕಡಿಮೆ. ಎಷ್ಟು ತಿಂದರೂ ತೂಕ ಹೆಚ್ಚಾಗುವುದಿಲ್ಲ.

ಕರುಳಿಗೆ ಒಳ್ಳೆಯದು: ಹುದುಗಿಸಿದ ಆಹಾರಗಳು ಪ್ರೋಬಯಾಟಿಕ್‌ಗಳನ್ನು ಹೊಂದಿರುತ್ತವೆ. ಇವುಗಳನ್ನು ತಿನ್ನುವುದರಿಂದ ದೇಹಕ್ಕೆ ಬೇಕಾದ ವಿಟಮಿನ್ ಮತ್ತು ಮಿನರಲ್ಸ್ ಸಿಗುತ್ತವೆ. ಅವು ದೇಹಕ್ಕೆ ಹಾನಿಕಾರಕವಾದ ಕಾರ್ಬೋಹೈಡ್ರೇಟ್‌ಗಳು, ಕೊಬ್ಬು ಮತ್ತು ಪ್ರೋಟೀನ್‌ಗಳನ್ನು ನಾಶಪಡಿಸುತ್ತವೆ ಮತ್ತು ಕರುಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.

ಓದಿ: ವಿಶ್ವ ಇಡ್ಲಿ ದಿನ: 12 ತಿಂಗಳಲ್ಲಿ 7.3 ಲಕ್ಷ ರೂಪಾಯಿ ಮೌಲ್ಯದ ಇಡ್ಲಿ ಆರ್ಡರ್ ಮಾಡಿದ ಸ್ವಿಗ್ಗಿ ಗ್ರಾಹಕ - world idli day 2024

Last Updated : Apr 2, 2024, 3:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.