ಉತ್ತಮ ಆಹಾರ ಮತ್ತು ಜೀವನಶೈಲಿ ಒಟ್ಟಾರೆ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ. ಹಾಗಾಗಿ ಈ ಸೆಲೆಬ್ರಿಟಿಗಳು ತಮಗೆ ಸಿಕ್ಕ ಸಮಯದಲ್ಲಿ ಆರೋಗ್ಯದ ಕಡೆ ಗಮನ ಹರಿಸಿ ಪೌಷ್ಟಿಕತೆಗೆ ಆದ್ಯತೆ ನೀಡುತ್ತಿದ್ದಾರೆ. ಮತ್ತೆ ಅವರು ಅನುಸರಿಸುವ ನಿಯಮಗಳೇನು ಎಂಬುದನ್ನು ‘ವಿಶ್ವ ಆರೋಗ್ಯ ದಿನ’ದ ಸಂದರ್ಭದಲ್ಲಿ ತಿಳಿಯೋಣ..
ಮೀನು ಊಟ ಬೇಕೇ ಬೇಕು: ನಾನು ನನ್ನ ಎಲ್ಲಾ ನೆಚ್ಚಿನ ಆಹಾರಗಳನ್ನು ತಿನ್ನುತ್ತೇನೆ ಮತ್ತು ಆ ಎಲ್ಲಾ ಕ್ಯಾಲೊರಿಗಳನ್ನು ಬರ್ನ್ ಮಾಡಲು ವ್ಯಾಯಾಮ ಮಾಡುತ್ತೇನೆ. ಒಮ್ಮೆ ನಾಲ್ಕು ಗಂಟೆಗೆ ಎದ್ದು ಹದಿನಾಲ್ಕು ಕಿಲೋಮೀಟರ್ ಓಡುತ್ತಿದ್ದೆ. ಒಮ್ಮೆ ರಸ್ತೆ ಅಪಘಾತದಿಂದಾಗಿ ನಾನು ಓಡುವುದನ್ನು ನಿಲ್ಲಿಸಿ ಜಿಮ್‌ನಲ್ಲಿ ವೇಟ್ ಲಿಫ್ಟಿಂಗ್ ಮತ್ತು ಕ್ರಂಚಸ್ ಮಾಡಲು ಪ್ರಾರಂಭಿಸಿದೆ. ವ್ಯಾಯಾಮದ ನಂತರ, ಓಟ್ಸ್ ಮತ್ತು ಹಣ್ಣುಗಳನ್ನು ಮಾತ್ರ ಸೇವಿಸುತ್ತೇನೆ. ಊಟಕ್ಕೆ ಮಾಂಸಾಹಾರ ಇಲ್ಲದಿದ್ರೆ ಹೊಟ್ಟೆ ಒಳಗೆ ಹೋಗೋದೇ ಇಲ್ಲ. ಮಧ್ಯಾಹ್ನ ಮೀನು ಊಟ ಇರಲೇಬೇಕು. ಎಲ್ಲಿಗೆ ಹೋದರೂ ಮೀನಿನ ಖಾದ್ಯಗಳನ್ನು ಅದರಲ್ಲೂ ಬಾಣಸಿಗರೊಂದಿಗೆ ಅಡುಗೆ ಮಾಡುವುದು ಅಭ್ಯಾಸ. ರಾತ್ರಿಯಲ್ಲಿ ತುಂಬಾ ಕಡಿಮೆ ತಿನ್ನುತ್ತೇನೆ. ಪ್ರತಿದಿನ ಚಿಕನ್ ಗ್ರೇವಿ ಅಥವಾ ತೆಂಗಿನಕಾಯಿ ಚಟ್ನಿಯೊಂದಿಗೆ ದೋಸೆಯನ್ನು ತಿನ್ನುತ್ತೇನೆ. ಕೆಲವೊಮ್ಮೆ ಸೂಪ್ ಮತ್ತು ಕಾಫಿ ಸಾಕು. ಆದಷ್ಟು ಬೇಗ ಮಲಗುತ್ತೇನೆ ಎಂಬುದು ನಟ ಕಮಲ್ ಹಾಸನ್ ಅವರ ಮಾತಾಗಿದೆ.
ಸೋಮವಾರ ಉಪವಾಸ: ಮುಂಜಾನೆ ಮೂರಕ್ಕೆ ಏಳುವ ಅಭ್ಯಾಸ ಹಲವು ವರ್ಷಗಳಿಂದಲೂ ಇದೆ. ಆಹಾರದ ವಿಚಾರದಲ್ಲಿ ನಾನು ಸಸ್ಯಾಹಾರಿ, ಅನ್ನದ ಬದಲು ಸೊಪ್ಪುಗಳನ್ನು ಬೇಯಿಸಿ ತಿನ್ನುತ್ತೇನೆ. ಎಣ್ಣೆ ಪದಾರ್ಥಗಳ ಮೊರೆ ಹೋಗುವುದಿಲ್ಲ. ಪ್ರತಿ ಸೋಮವಾರ ಉಪವಾಸ ಮಾಡಿ ಸಂಜೆ ಸಬ್ಬಕ್ಕಿ ಕಿಚಡಿ ತಿನ್ನುತ್ತೇನೆ. ಆಹಾರವು ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ ಮತ್ತು ವ್ಯಾಯಾಮವು ದೇಹದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಆ ವಿಷಯಗಳನ್ನು ನಿರ್ಲಕ್ಷಿಸುವುದಿಲ್ಲ. ಅದಕ್ಕೇ ಬಾಲ್ಯದಿಂದಲೂ ನನಗೆ ಇಷ್ಟವಾದ ಐಸ್ ಕ್ರೀಂ ಕೂಡ ತಿನ್ನುವುದಿಲ್ಲ ಎನ್ನುತ್ತಾರೆ ನಮ್ಮ ದೇಶದ ಮುಖ್ಯ ನ್ಯಾಯಮೂರ್ತಿ ಧನಂಜಯ ಯಶವಂತ್ ಚಂದ್ರಚೂಡ್ (ಡಿ.ವೈ.ಚಂದ್ರಚೂಡ್) ಅವರು.
ಸಮಯಕ್ಕೆ ಒತ್ತು ನೀಡುತ್ತೇನೆ: ನಿದ್ರೆ ಮತ್ತು ಆಹಾರಕ್ಕಾಗಿ ಕಟ್ಟುನಿಟ್ಟಾದ ಸಮಯವನ್ನು ಅನುಸರಿಸುತ್ತೇನೆ. ಪ್ರತಿ ಎರಡು ಗಂಟೆಗಳಿಗೊಮ್ಮೆ ಏನನ್ನಾದರೂ ಆಹಾರ ತೆಗೆದುಕೊಳ್ಳುತ್ತೇನೆ. ಒಣ ಹಣ್ಣುಗಳು ಮತ್ತು ಕಾಳುಗಳು ಆಹಾರದಲ್ಲಿ ಇರುತ್ತವೆ. ಬೆಳಗ್ಗೆ ವ್ಯಾಯಾಮದ ನಂತರ ಮೊಟ್ಟೆ ಮತ್ತು ತರಕಾರಿ ಜ್ಯೂಸ್ ಕುಡಿಯುತ್ತೇನೆ. ಮಧ್ಯಾಹ್ನ, ರಾಗಿ ರೊಟ್ಟಿ ಮತ್ತು ಒಂದು ಕಪ್ ಕಂದು ಅನ್ನವನ್ನು ಮಾಂಸಾಹಾರಿ ಕರಿಯೊಂದಿಗೆ ತಿನ್ನುತ್ತೇನೆ. ರಾತ್ರಿಯಲ್ಲಿ ಬೇಯಿಸಿದ ಚಿಕನ್ ಅಥವಾ ತರಕಾರಿ ಸಲಾಡ್ ಅನ್ನು ಸೇವಿಸುತ್ತೇನೆ. ಪಂದ್ಯಗಳು ಇಲ್ಲದಿದ್ದಾಗ ಹತ್ತು ಗಂಟೆಗೆ ಮಲಗಿ ಬೆಳಗ್ಗೆ ಐದಕ್ಕೆ ಎದ್ದು ವ್ಯಾಯಾಮ ಮಾಡುತ್ತೇನೆ. ದೈಹಿಕವಾಗಿ ಎಷ್ಟೇ ಕಾಳಜಿ ವಹಿಸಿದರೂ ಮಾನಸಿಕ ಸಂತೋಷವೂ ಆರೋಗ್ಯಕ್ಕೆ ಒಳ್ಳೆಯದು ಅಂತಾರೆ ನಮ್ಮ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ.
ಓದಿ: ವಿಶ್ವ ಆರೋಗ್ಯ ದಿನ 2024: ‘ನನ್ನ ಆರೋಗ್ಯ, ನನ್ನ ಹಕ್ಕು’ - My Health My Right