Health Benefits of Coconut: ಸೆಪ್ಟೆಂಬರ್ 2ರಂದು ವಿಶ್ವ ತೆಂಗಿನಕಾಯಿ ದಿನ (World Coconut Day 2024) ಆಚರಿಸಲಾಗುತ್ತದೆ. ತೆಂಗಿನಕಾಯಿಯಿಂದ ಆರೋಗ್ಯಕ್ಕೆ ದೊರೆಯುವ ವಿವಿಧ ಪ್ರಯೋಜನಗಳು ಎಲ್ಲರಿಗೂ ತಿಳಿಸಲು ಪ್ರತಿವರ್ಷವೂ ಈ ದಿನವನ್ನು ಆಚರಿಸುತ್ತದೆ. ತೆಂಗಿನ ಮರದ ವೈವಿಧ್ಯಮಯ ಬಳಕೆಗಳಿಂದಾಗಿ ಇದನ್ನು 'ಕೃಲ್ಪವೃಕ್ಷ' ಎಂದು ಕರೆಯಲಾಗುತ್ತದೆ.
ಹಸಿ ತೆಂಗಿನಕಾಯಿಯನ್ನು ನೀವು ನಿತ್ಯ ಸೇವಿಸಿದರೆ ಸಾಕಷ್ಟು ಆರೋಗ್ಯಕರ ಉಪಯೋಗಗಳು ಲಭಿಸುತ್ತವೆ. ತೆಂಗಿನ ಎಣ್ಣೆಯ ಬಳಕೆಯಿಂದ ದೇಹದಲ್ಲಿ ಹಲವು ಸಮಸ್ಯೆಗಳು ದೂರವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ತೆಂಗಿನಕಾಯಿ ಮತ್ತು ತೆಂಗಿನ ಎಣ್ಣೆಯಿಂದ ಯಾವೆಲ್ಲಾ ಉಪಯೋಗಳು ದೊರೆಯುತ್ತವೆ ಎಂಬುದನ್ನು ತಿಳಿಯೋಣ.
ತೆಂಗಿನಕಾಯಿಯಿಂದ ದೊರೆಯುವ ಹಲವು ಪ್ರಯೋಜನಗಳೇನು?:
ಕೊಬ್ಬು ಕರಗಿಸುತ್ತೆ ತೆಂಗಿನ ಎಣ್ಣೆ: ಆಧುನಿಕ ಸಮಾಜದಲ್ಲಿ ಸಪುರ ಆಗಿ ಕಾಣಲು ಪ್ರತಿಯೊಬ್ಬರೂ ಇಷ್ಟುಪಡುತ್ತಾರೆ. ನೀವು ನಿಯಮಿತವಾಗಿ ತೆಂಗಿನಕಾಯಿಯ ಕೊಬ್ಬರಿ ಅಥವಾ ಕೊಬ್ಬರಿ ಎಣ್ಣೆಯನ್ನು ಬಳಕೆ ಮಾಡುತ್ತಾ ಹೋದರೆ ದೇಹದ ತೂಕ ಕಡಿಮೆಯಾಗಿಸಲು ಸಹಾಯವಾಗುತ್ತದೆ.
ತ್ವಚೆಯ ಸೌಂದರ್ಯ ಕಾಪಾಡುತ್ತೆ: ನಿಮ್ಮ ಚರ್ಮದ ಸೌಂದರ್ಯವನ್ನು ಕಾಪಾಡಲು ತೆಂಗಿನ ಎಣ್ಣೆಯು ಪ್ರಮುಖವಾದ ಪಾತ್ರವಹಿಸುತ್ತದೆ. ಇದು ನೈಸರ್ಗಿಕವಾಗಿ ಚರ್ಮವನ್ನು ಮೃದುಗೊಳಿಸುವಿಕೆ ಮತ್ತು ಮಾಯಿಶ್ಚರೈಸರ್ ಮಾಡಲು ಪೂರಕವಾಗಿದೆ. ಇದು ಚರ್ಮದಲ್ಲಿರುವ ಬಿರುಕು, ಪಫಿನೆಸ್, ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ಕಣ್ಣುಗಳ ಕೆಳಗೆ ಕಪ್ಪು ಸರ್ಕಲ್ಗಳನ್ನು ಮತ್ತು ಚರ್ಮದ ಟೋನ್ ಮತ್ತು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುತ್ತದೆ. ತೆಂಗಿನ ಎಣ್ಣೆ ತ್ವಚೆಯನ್ನು ಸಂರಕ್ಷಣೆ ಮಾಡುತ್ತದೆ. ಜೊತೆಗೆ ಸೋಂಕುಗಳು ಮತ್ತು ಸನ್ ಬರ್ನ್ ಅನ್ನು ಶಮನಗೊಳಿಸುತ್ತದೆ.
ಎಳೆನೀರಿನ ಲಾಭ: ತೆಂಗಿನ ಹಾಲು ಅಥವಾ ಎಳೆ ನೀರು ನಿಯಮಿತವಾಗಿ ಸೇವನೆ ಮಾಡುವುದರಿಂದ ದೇಹದಲ್ಲಿ ಉಷ್ಣಾಂಶದಲ್ಲಿ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಕೊಬ್ಬಿನಾಂಶ ಕಡಿಮೆ ಮಾಡಲು ಮತ್ತು ದೇಹದಲ್ಲಿನ ರಕ್ತ ಶುದ್ಧೀಕರಿಸಲು ಎಳೆ ನೀರು ಪೂರಕವಾಗಿದೆ. ಎಳನೀರಿನಲ್ಲಿ ಕಡಿಮೆ ಕ್ಯಾಲೋರಿ ಮತ್ತು ಪೋಷಕಾಂಶಗಳು ಸಮೃದ್ಧವಾಗಿ ಇವೆ.
ಮೂಳೆ ನೋವಿಗೆ ತೆಂಗಿನ ಎಣ್ಣೆ: ಮೂಳೆಗಳಿಗೆ ತೆಂಗಿನ ಎಣ್ಣೆಯನ್ನು ಹಚ್ಚುವ ಸ್ಪಲ್ವ ಮಸಾಜ್ ಮಾಡಿದರೆ ಸಾಕು ನೋವು ಕಡಿಮೆಯಾಗುತ್ತದೆ. ಜೊತೆಗೆ ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಮತ್ತು ಮೂಳೆಗಳ ಸುತ್ತಲಿನ ಅಂಗಾಂಶಗಳು ಮತ್ತು ಸ್ನಾಯುಗಳನ್ನು ಗಟ್ಟಿಗೊಳಿಸುತ್ತದೆ. ಮೂಳೆಯ ಕ್ಷೀಣತೆಯನ್ನು ತಡೆಯುತ್ತದೆ.
ಲಿಪ್ ಬಾಮ್ ಆಗಿ ಬಳಬಹುದು: ತೆಂಗಿನ ಎಣ್ಣೆಯನ್ನು ಬಳಸಲು ಪ್ರಾರಂಭಿಸಿದರೆ, ನಿಮ್ಮಲ್ಲಿರುವ ದೇಹದ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ತೊಂದರೆಗಳು ಮಾಯವಾಗುತ್ತವೆ. ಒಡೆದ ತುಟಿಗಳಿಗೆ ಸ್ವಲ್ಪ ತೆಂಗಿನ ಎಣ್ಣೆಯನ್ನು ಹಚ್ಚಿ ಬಿಟ್ಟರೆ ಸಾಕು ಮೊದಲಿನಂತೆ ಆಗುತ್ತವೆ.
ಕೂದಲನ್ನು ಸುಂದರಗೊಳಿಸುತ್ತೆ: ಕೂದಲಿಗೆ ತೆಂಗಿನೆಣ್ಣೆ ಹಚ್ಚುವುದರಿಂದ ಸುಂದರವಾಗಿ ಕಾಣಿಸುವುದರ ಜೊತೆಗೆ ಕೂದಲು ಸ್ಪ್ಲಿಟ್ ಆಗುವುದನ್ನು ತಡೆಯುತ್ತದೆ. ಮತ್ತು ತಲೆಹೊಟ್ಟು ನಿವಾರಣೆಗೆ ಸಾಧ್ಯವಾಗುತ್ತದೆ. ತೆಂಗಿನ ಎಣ್ಣೆಯನ್ನು ಬಳಸುವುದರಿಂದ ತೆಂಗಿನಕಾಯಿಯಲ್ಲಿರುವ ವಿಟಮಿನ್-ಕೆ ಮತ್ತು ಕಬ್ಬಿಣದ ಅಂಶದಿಂದಾಗಿ ಕೂದಲು ಹೊಳೆಯುವುದು ಮತ್ತು ರೇಷ್ಮೆಯಂತೆ ಕಾಣಿಸುತ್ತದೆ.
ಜೀರ್ಣಕ್ರಿಯೆಗೆ ಸಹಾಯ: ತೆಂಗಿನಕಾಯಿ ಜೀರ್ಣಕ್ರಿಯೆ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಇತರ ರೋಗಲಕ್ಷಣಗಳು ಮತ್ತು ಕರುಳಿನ ಅಸ್ವಸ್ಥತೆಗಳು ಇದ್ದರೆ ಅದನ್ನು ಪರಿಹರಿಸುತ್ತದೆ. ತೆಂಗಿನಕಾಯಿ ಸೇವನೆಯಿಂದ ಫೈಬರ್, ಪೋಷಕಾಂಶಗಳು ಮತ್ತು ಖನಿಜಗಳ ಲಭಿಸುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಿಸುತ್ತೆ: ಹಸಿ ಕೊಬ್ಬರಿ ಸೇವನೆಯಿಂದ ರೋಗನಿರೋಧಕ ಹೆಚ್ಚಾಗುತ್ತದೆ. ಏಕೆಂದರೆ, ಇದು ಆ್ಯಂಟಿವೈರಲ್, ಆ್ಯಂಟಿಫಂಗಲ್, ಆ್ಯಂಟಿಬ್ಯಾಕ್ಟೀರಿಯಲ್ ಮತ್ತು ಆ್ಯಂಟಿಪರಾಸಿಟಿಕ್ ಗುಣಗಳನ್ನು ಹೊಂದಿದೆ. ತೆಂಗಿನ ಎಣ್ಣೆಯನ್ನು ನಿಯಮಿತ ಸೇವನೆಯಿಂದ ದೇಹದ ಅನಾರೋಗ್ಯಕ್ಕೆ ಕಾರಣವಾಗುವ ವೈರಸ್‌ಗಳು ಮತ್ತು ಬ್ಯಾಕ್ಟೀರಿಯಾ ಎರಡಕ್ಕೂ ಪ್ರತಿರೋಧವಾಗಿ ಕೆಲಸ ಮಾಡುತ್ತದೆ.
ಬಾಯಿಯ ದುರ್ವಾಸನೆಗೆ ಪರಿಹಾರ: ಕೊಬ್ಬರಿ ಮತ್ತು ಎಳೆನೀರಿನ ಸೇವನೆಯಿಂದ ಬಾಯಿಯ ದುರ್ವಾಸನೆಗೆ ಪರಿಹಾರ ಲಭಿಸುತ್ತದೆ. ತೆಂಗಿನ ಹಾಲನ್ನು ಮೌತ್ ವಾಶ್ ಆಗಿ ಬಳಸುವುದರಿಂದ ಬ್ಯಾಕ್ಟೀರಿಯಾ, ಉಸಿರಾಟದ ವೇಳೆ ಬರುವ ಕೆಟ್ಟವಾಸನೆಯನ್ನು ಕಡಿಮೆ ಮಾಡುತ್ತದೆ. ಹಸಿ, ಒಣ ಕೊಬ್ಬರಿಯಲ್ಲಿ ಜೀವಸತ್ವಗಳು ಸಮೃದ್ಧವಾಗಿವೆ.
ಮೂಳೆ, ಹಲ್ಲುಗಳ ಆರೋಗ್ಯಕ್ಕೆ ಸಹಾಯ: ಕೊಬ್ಬರಿಯನ್ನು ನಿಯಮಿತವಾಗಿ ತಿನ್ನುವುದರಿಂದ ಮೂಳೆಗಳ ಮತ್ತು ಹಲ್ಲುಗಳ ಆರೋಗ್ಯಕ್ಕೆ ಪೂರಕವಾಗಿದೆ. ಮೂಳೆ ಬೆಳವಣಿಗೆಗೆ ಸಹಾಯ ಮಾಡುವ ಕ್ಯಾಲ್ಸಿಯಂ ಒದಗಿಸುತ್ತದೆ. ಆಸ್ಟಿಯೊಪೊರೋಸಿಸ್ ಅನ್ನು ಸಹ ತಡೆಯುತ್ತದೆ.
ಮೇಕಪ್ ರಿಮೂವರ್: ನೀವು ಮೇಕಪ್ ರಿಮೂವ್ ಮಾಡಲು ಒಂದು ಚಮಚ ತೆಂಗಿನ ಎಣ್ಣೆಯನ್ನು ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಮಸಾಜ್ ಮಾಡಿ. ನಂತರ ಬೆಚ್ಚಗಿನ ನೀರಿನಿಂದ ನಿಧಾನವಾಗಿ ತೊಳೆಯಿರಿ. ಇದಾಬಳಿಕ ನಿಮ್ಮ ಮೇಕಪ್ ಹೋದ ನಂತರ ಮತ್ತೊಮ್ಮೆ ಬೆಚ್ಚಗಿನ ನೀರಿನಿಂದ ತೊಳೆಯಿರಿ.
ತೂಕ ಇಳಿಸಲು ಉತ್ತೇಜಿಸುತ್ತೆ: ತೆಂಗಿನಕಾಯಿ ತೂಕ ಇಳಿಸಲು ಸಹಾಯ ಮಾಡುತ್ತದೆ. ತೆಂಗಿನಕಾಯಿಯ ಕೊಬ್ಬರಿ ಬಳಸಿ ತಯಾರಿಸಿದ ಆಹಾರ ಸೇವನೆ ಮಾಡುವುದರಿಂದ ದಿನವಿಡೀ ಹಸಿವು ಮತ್ತು ಅತಿಯಾಗಿ ತಿನ್ನುವುದನ್ನು ಕಡಿಮೆ ಮಾಡುತ್ತದೆ.
ಮಲಬದ್ಧತೆ ಸಮಸ್ಯೆ ನಿವಾರಣೆ ಮಾಡುತ್ತೆ: ಕೊಬ್ಬರಿ ಸೇವನೆಯಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. ತೆಂಗಿನಕಾಯಿಯಲ್ಲಿ ಫೈಬರ್‌ನಲ್ಲಿ ಸಮೃದ್ಧವಾಗಿದೆ. ಇದು ನೈಸರ್ಗಿಕವಾಗಿ ಕರುಳನ್ನು ಉತ್ತೇಜಿಸುವ ಒಂದು ರೀತಿಯ ಫೈಬರ್ ಆಗಿದೆ. ಇದರಿಂದ ಮಲಬದ್ಧತೆ ತೊಂದರೆಯಾಗುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.
ಮಧುಮೇಹ ನಿಯಂತ್ರಿಸುತ್ತೆ: ತೆಂಗಿನಕಾಯಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ದೈನಂದಿನ ಆಹಾರದ ಪಟ್ಟಿಯಲ್ಲಿ ಕೊಬ್ಬರಿಯನ್ನು ಸೇರಿಸಿದರೆ, ಸಕ್ಕರೆ ಕಾಯಿಲೆ ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ನೀವು ಈ ವೆಬ್ಸೈಟ್ಗೆ ಸಂಪರ್ಕಿಸಬಹುದು:
ಓದುಗರಿಗೆ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.