ETV Bharat / health

ಹೃದಯಾಘಾತದಿಂದ ಚೇತರಿಕೆ ಕಂಡ ಮಹಿಳೆಯರಲ್ಲಿ ಹೆಚ್ಚು ಆತಂಕ, ಖಿನ್ನತೆ - depression post cardiac arrest

ಮಹಿಳೆಯರ ಹೃದಯಘಾತಕ್ಕೆ ಒಳಗಾದ ಬಳಿಕ ಹೆಚ್ಚುಕಾಲ ಜೀವಿಸಿದರೂ, ಅವರು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ.

Women who survive cardiac arrest are experience anxiety and depression
ಸಾಂದರ್ಭಿಕ ಚಿತ್ರ (ಐಎಎನ್​ಎಸ್​)
author img

By IANS

Published : Jul 9, 2024, 4:19 PM IST

ನವದೆಹಲಿ: ಪುರುಷರಿಗೆ ಹೋಲಿಕೆ ಮಾಡಿದಾಗ ಹೃದಯಾಘಾತದಿಂದ ಚೇತರಿಕೆ ಕಂಡ ಮಹಿಳೆಯರಲ್ಲಿ ಖಿನ್ನತೆ ಮತ್ತು ಆತಂಕದ ಅಪಾಯದ ದರ ಹೆಚ್ಚಿದೆ ಎಂದು ಹೊಸ ಅಧ್ಯಯನ ತಿಳಿಸಿದೆ.

ನೆದರ್​​ಲ್ಯಾಂಡ್​ನ ಆಮಸ್ಟರ್​​ಡ್ಯಾಮ್​​ ಯುನಿವರ್ಸಿಟಿ ಮೆಡಿಕಲ್​ ಸೆಂಟರ್​ ಸಂಶೋಧಕರ ಗುಂಪು ಈ ಕುರಿತು ಅಧ್ಯಯನ ಮಾಡಿದೆ. ಈ ಸಂಬಂಧ ಐದು ವರ್ಷಗಳ ಕಾಲ 1,250 ಜನರ ಸಾಮಾಜಿಕ ಆರ್ಥಿಕ ದತ್ತಾಂಶವನ್ನು ಆಯ್ಕೆ ಮಾಡಿ ಅಧ್ಯಯನ ನಡೆಸಿದೆ. ಇನ್ನು ಅಧ್ಯಯನದಲ್ಲಿ ಭಾಗಿಯಾದವರ ಸರಾಸರಿ ವಯಸ್ಸು 53 ಆಗಿದೆ. ಇವರೆಲ್ಲಾ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿ ಬಳಿಕ ಚೇತರಿಕೆ ಕಂಡವರಾಗಿದ್ದಾರೆ.

ಹೃದಯಾಘಾತದ ಬಳಿಕ ಅವರ ಐದು ವರ್ಷಗಳ ಬಳಿಕ ಅವರಲ್ಲಿನ ಈ ಪರಿಸ್ಥಿತಿಗೆ ಕಾರಣವಾಗುವ ಬೇರೆ ಅಂಶವನ್ನು ಕೂಡ ಗಮನಿಸಲಾಗಿದೆ. ಈ ಅಧ್ಯಯನವನ್ನು 'ಜರ್ನಲ್​ ಸರ್ಕ್ಯೂಲರ್​​: ಕಾರ್ಡಿಯೊವಸ್ಕ್ಯೂಲರ್​ ಕ್ವಾಲಿಟಿ ಅಂಡ್​ ಔಟ್​ಕಂ'ನಲ್ಲಿ ಪ್ರಕಟಿಸಲಾಗಿದೆ.

ಹೃದಯಾಘಾತದಿಂದ ಚೇತರಿಕೆಯಾದ ಮೊದಲ ವರ್ಷದಲ್ಲಿ ಮಹಿಳೆಯರು ಖಿನ್ನತೆ ವಿರುದ್ಧ ಔಷಧ ಪಡೆಯುತ್ತಿರುವುದು ಕಂಡು ಬಂದಿದೆ. ಇದು ಪುರುಷರಲ್ಲಿ ಕಂಡಿಲ್ಲ. ಈ ಔಷಧಗಳನ್ನು ಅವರು ಐದು ವರ್ಷಗಳ ಕಾಲ ಮುಂದುವರೆಸಿರುವುದು ಕಾಣ ಬಹುದಾಗಿದೆ ಎಂದು ಅಧ್ಯಯನದ ಲೇಖಕ ರೊಬಿನ್​ ಸ್ಮಿತ್ಸ್​ ತಿಳಿಸಿದ್ದಾರೆ.

ಈ ಸಂಬಂಧ ಸಾಕಷ್ಟು ಸಂಶೋಧನೆ ನಡೆಯಬೇಕಿದೆ. ಈ ರೀತಿಯ ಖಿನ್ನತೆ ಪರಿಸ್ಥಿತಿ ಮಹಿಳೆಯರಲ್ಲಿ ಮಾತ್ರ ಕಾಡುತ್ತಿದೆ ಎಂಬುದನ್ನು ಅಧ್ಯಯನದಲ್ಲಿ ನಿರ್ಧಿಷ್ಟವಾಗಿ ತೋರಿಸಿದೆ ಎಂದಿದ್ದಾರೆ.

ಆತಂಕ ಮತ್ತು ಖಿನ್ನತೆ ಹೊರತಾಗಿ ಮಹಿಳೆಯರಲ್ಲಿ ಉದ್ಯೋಗದ ಟ್ರೆಂಡ್​ ಕೂಡ ಬದಲಾಗಿರುವುದು ಕಂಡಿದೆ. ಅದರಲ್ಲೂ 50 ವರ್ಷ ವಯೋಮಾನದ ಬಳಿಕ ಅವರು ಉದ್ಯೋಗ ತೊರೆಯುವ ಲಕ್ಷಣ ಕಂಡಿದೆ. ಹೃದಯಾಘಾತವೂ ಕುಟುಂಬದಲ್ಲಿ ಅತಿ ಹೆಚ್ಚು ಗಳಿಕೆ ಹೊಂದಿರುವ ಮನೆಯ ಸದಸ್ಯರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಇದು ಅವರು ಮತ್ತೆ ಉದ್ಯೋಗ ಮಾರುಕಟ್ಟೆಗೆ ತೆರಳಲು ಕಷ್ಟವಾಗುತ್ತದೆ ಎಂಬುದು ಕಂಡು ಬಂದಿದೆ.

ಈ ಹಿಂದಿನ ಅಧ್ಯಯನದಲ್ಲಿ ಹೃದಯಾಘಾತದಿಂದ ಬದುಕುಳಿದವರ ದರವನ್ನು ಗಮಿಸಿದಾಗ ಪುರುಷರಿಗಿಂತ ಮಹಿಳೆಯರು ಹೆಚ್ಚು ಕಾಲ ಬದುಕುತ್ತಾರೆ ಎಂದು ಕಂಡು ಬಂದಿದೆ.

ಹೃದಯಘಾತದ ಪರಿಣಾಮ ಲಿಂಗದ ಆಧಾರದ ಮೇಲೆ ಭಿನ್ನವಾಗಿರುವುದು ಕಂಡಿದೆ. ಮಹಿಳೆಯರ ಹೃದಯಘಾತಕ್ಕೆ ಒಳಗಾದ ಬಳಿಕ ಹೆಚ್ಚುಕಾಲ ಜೀವಿಸಿದರೂ, ಅವರು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: ಫೋನ್ ಚಟದಿಂದ ಬಳಲುತ್ತಿದ್ದೀರಾ?: ಈ ಸರಳ ಸಲಹೆಗಳನ್ನು ಪಾಲಿಸಿ ಸಮಸ್ಯೆಯಿಂದ ಹೊರಬನ್ನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.