ETV Bharat / health

40ರ ನಂತರ ಮಹಿಳೆಯರಲ್ಲಿ ಈ ಸಮಸ್ಯೆಯೇ?: ನಿತ್ಯವೂ ಈ ಆಹಾರಗಳನ್ನು ಸೇವಿಸಿ, ಸುಲಭವಾಗಿ ತೂಕ ಕಳೆದುಕೊಳ್ಳಿ - FOODS TO LOSE MENOPAUSE BELLY - FOODS TO LOSE MENOPAUSE BELLY

40ರ ವಯಸ್ಸಿನಲ್ಲಿ ಅಂದರೆ, ಮೆನೋಪಾಸ್​ ಆರಂಭಿಕ ಹಂತದಲ್ಲೇ ಇದರ ತಡೆಗಟ್ಟುವಿಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

women should add the food to diet TO REDUCE MENOPAUSE BELLY fat
ಸಾಂದರ್ಭಿಕ ಚಿತ್ರ (ಈಟಿವಿ ಭಾರತ್​​)
author img

By ETV Bharat Karnataka Team

Published : Jul 16, 2024, 4:56 PM IST

ಹೈದರಾಬಾದ್​: ಮೆನೋಪಾಸ್​ ಅಂದರೆ ಮುಟ್ಟು ನಿಲ್ಲುವ ಅವಧಿಯಲ್ಲಿ ಅನೇಕ ಮಹಿಳೆಯರು ನೈಸರ್ಗಿಕವಾಗಿ ತೂಕ ಹೆಚ್ಚಳಗೊಳ್ಳುತ್ತಾರೆ. ಈ ಸಮಯದಲ್ಲಿ ದೇಹ ಹಾರ್ಮೋನ್​ ಪರಿಣಾಮಕ್ಕೆ ಒಳಗಾಗುವುದರಿಂದ ಅನೇಕ ಬದಲಾವಣೆಗಳು ಆಗುತ್ತದೆ. ತಜ್ಞರ ಪ್ರಕಾರ ಈ ಸಂದರ್ಭದಲ್ಲಿ ಹೊಟ್ಟೆಯ ಕೊಬ್ಬು ಹೆಚ್ಚುತ್ತದೆ. ಈ ಕಿಬ್ಬೊಟ್ಟೆ ಮತ್ತೊಂದು ಸಮಸ್ಯೆಗೆ ಕಾರಣವೂ ಆಗಬಹುದು. ಈ ಹಿನ್ನೆಲೆ 40ರ ವಯಸ್ಸಿನಲ್ಲಿ ಅಂದರೆ, ಮೆನೋಪಾಸ್​ ಆರಂಭಿಕ ಹಂತದಲ್ಲೇ ಇದರ ತಡೆಗಟ್ಟುವಿಕೆಗೆ ಅಗತ್ಯ ಕ್ರಮ ನಡೆಸಬಹುದು. ಹಾಗೆಂದ ಮಾತ್ರಕ್ಕೆ ಹೆಚ್ಚು ಕಷ್ಟ ಪಡಬೇಕಿಲ್ಲ. ನಿಮ್ಮ ದೈನಂದಿನ ಡಯಟ್​ನಲ್ಲಿ ಕೆಲವು ಪದಾರ್ಥಗಳನ್ನು ಸೇರಿಸುವುದು ಮರೆಯಬೇಡಿ.

ಅಗಸೆ ಬೀಜ: ಅಗಸೆ ಬೀಜ ಆರೋಗ್ಯಕ್ಕೆ ಮಾತ್ರವಲ್ಲ, ತೂಕ ಇಳಿಸುವಲ್ಲಿ ಕೂಡ ಪರಿಣಾಮಕಾರಿಯಾಗಿದೆ. ಇದರಲ್ಲಿನ ಮೊನೊಸ್ಯಾಚುರೇಟೆಡ್​ ಕೊಬ್ಬು ತೂಕ ಇಳಿಸುವಲ್ಲಿ ಪ್ರಮುಖವಾಗಿದೆ. ಇದು ದೇಹದಲ್ಲಿನ ಅಧಿಕ ನೀರನ್ನು ತಡೆಗಟ್ಟಿ, ಈಸ್ಟ್ರೋಜನ್​ ಮಟ್ಟವನ್ನು ನಿಯಂತ್ರಿಸುತ್ತದೆ.

ಸಬ್ಜಾ ಬೀಜಗಳು: ಫೈಬರ್​ ಸಮೃದ್ಧವಾಗಿರುವ ಇದು ಹೊಟ್ಟೆಯ ಉಬ್ಬರ, ಜೀರ್ಣ ಸಮಸ್ಯೆಯನ್ನು ನಿವಾರಿಸುತ್ತದೆ. ಇದಕ್ಕಿಂತ ಹೆಚ್ಚಾಗಿ, ತಜ್ಞರು ಹೇಳುವಂತೆ ಇದು ಹೊಟ್ಟೆ ಸುತ್ತ ಸಂಗ್ರಹವಾಗುವ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ.

ಆಪಲ್​ ಸಿಡರ್​ ವಿನೆಗರ್​: ಆಪಲ್​ ಸಿಡರ್​ ವಿನೆಗರ್​​ನಲ್ಲಿ ಕಡಿಮೆ ಕ್ಯಾಲೋರಿ ಇದ್ದು, ಕೆಟ್ಟ ಕೊಬ್ಬು ಕರಗುವಲ್ಲಿ ಪರಿಣಾಮಕಾರಿಯಾಗಿದೆ. ಪ್ರತಿನಿತ್ಯ ಕುಡಿಯುವ ನೀರಿಗೆ ಎರಡು ಚಮಚ ಇದನ್ನು ಸೇರಿಸುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದಾಗಿದೆ.

2006ರಲ್ಲಿ ಜರ್ನಲ್​ ಆಫ್​ ಫಂಕ್ಷನಲ್​ ಫುಡ್​​ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಆರು ವಾರಗಳ ಕಾಲ ನೀರಿಗೆ ಆಪಲ್​ ಸಿಂಡರ್​ ವಿನೆಗರ್​ ಬೆರಸಿ ಕುಡಿಯುವುದರಿಂದ ತೂಕ ಮತ್ತು ಎಲ್​ಡಿಎಲ್​ ಕೊಲೆಸ್ಟ್ರಾಲ್​ ಮಟ್ಟ ಕಡಿಮೆಯಾಗಿದೆ. ಇದು ಕೊಬ್ಬನ್ನು ಕರಗಿಸುವಲ್ಲಿ ಸಹಾಯಕಾರಿಯಾಗಿದೆ ಎಂದು ಅಧ್ಯಯನದಲ್ಲಿ ಭಾಗಿಯಾದ ಯುನೈಟೆಡ್​ ಸ್ಟೇಟ್ಸ್​​ ಡಿಪಾರ್ಟ್​ಮೆಂಟ್​ ಆಫ್​ ಆಗ್ರಿಕಲ್ಚರ್​​ನ ಪ್ರಮುಖ ನ್ಯೂಟ್ರಿಷಿಯನಿಸ್ಟ್​​​ ಡಾ ಜೊಸುಹ್​​ ಬೆಗ್ಲೆರ್​ ತಿಳಿಸಿದ್ದಾರೆ.

ಚಕ್ಕೆ: ಒತ್ತಡದ ಹಾರ್ಮೋನ್​ ಆಗಿರುವ ಕಾರ್ಟಿಸೋಲ್​ನಿಂದ ಹೊಟ್ಟೆಯ ಕೊಬ್ಬು ಸಂಗ್ರಹವಾಗುತ್ತದೆ. ಇದಕ್ಕೆ ಚಕ್ಕೆ ಉತ್ತಮವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಇದು ಈ ಹಾರ್ಮೋನ್​ ಮಟ್ಟ ಕಡಿಮೆ ಮಾಡುತ್ತದೆ.

ಹಸಿರು ತರಕಾರಿಗಳು: ಇದರಲ್ಲಿ ಮೆಗ್ನಿಶಿಯಂ ಅಂಶ ಸಮೃದ್ಧವಾಗಿದ್ದು, ಇವು ಕೂಡ ಒತ್ತಡ, ಆತಂಕದಂತಹ ಮಾನಸಿಕ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಇದು ಪರೋಕ್ಷವಾಗಿ ದೇಹದಲ್ಲಿ ಸಂಗ್ರಹವಾಗುವ ಕೊಬ್ಬನ್ನು ಕಡಿಮೆ ಮಾಡುತ್ತದೆ.

ಬೇಳೆ - ಕಾಳು: ಇವು ಕೂಡ ಫೋಲಿಕ್​ ಆಸಿಡ್​, ಮೆಗ್ನಿಶಿಯಂ, ಪೊಟಾಶಿಯಂ, ವಿಟಮಿನ್​ ಬಿ, ಫೈಬರ್​, ಪ್ರೊಟೀನ್​ ಇದೆ. ಇವು ಹೊಟ್ಟೆಯ ಕೊಬ್ಬು ಕರಗಲು ಸಹಾಯ ಮಾಡುತ್ತದೆ.

ಸಮುದ್ರಾಹರ: ಮೆನೋಪಾಸ್​ ಸಮಯದಲ್ಲಿ ಅಡ್ಡ ಪರಿಣಾಮದಿಂದ ಮಾನಸಿಕ ಸಮಸ್ಯೆಗಳು ಮಹಿಳೆಯರಲ್ಲಿ ಕಾಣುತ್ತದೆ. ಇದರಿಂದ ಹೊರಬರಬೇಕು ಎಂದರೆ ಒಮೆಗಾ- 3 ಫ್ಯಾಟಿ ಆಸಿಡ್​ ಸಮೃದ್ಧವಾಗಿರುವ ಸಮುದ್ರಾಹಾರ ಮತ್ತು ವಾಲ್ನಟ್​ ಸೇವನೆ ಮಾಡುವುದು ಅವಶ್ಯ.

ಇದರ ಜೊತೆಗೆ ವಾಕಿಂಗ್​, ರನ್ನಿಂಗ್​, ಭಾರ ಎತ್ತುವಿಕೆ, ಈಜು, ಸೈಕ್ಲಿಂಗ್​ ಮುಂತಾದವುಗಳು ಕೂಡ ಸಹಾಯಕವಾಗಿದೆ.

ಪ್ರಮುಖ ಸೂಚನೆ: ನಿಮಗೆ ಒದಗಿಸಲಾದ ಎಲ್ಲ ಆರೋಗ್ಯ ಮಾಹಿತಿ, ವೈದ್ಯಕೀಯ ಸಲಹೆಗಳು ನಿಮ್ಮ ಮಾಹಿತಿಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ಕಣ್ಣು ದೃಷ್ಟಿ ಕ್ಷೀಣಿಸುತ್ತಿದೆಯಾ?, ಚಿಂತೆ ಮಾಡಬೇಡಿ: ಮನೆಯಲ್ಲಿಯೇ ಇದೆ ದಿವ್ಯೌಷದ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.