ETV Bharat / health

ಗರ್ಭಕಂಠ ಕ್ಯಾನ್ಸರ್​​ ತಡೆಗೆ ಎಷ್ಟು ವರ್ಷದವರೆಗೆ ಎಚ್​ಪಿವಿ ಲಸಿಕೆ ಪಡೆಯಬಹುದು?

ಎಚ್​ಪಿವಿ ಲಸಿಕೆಯನ್ನು 9 ರಿಂದ 14 ವರ್ಷದ ಮಕ್ಕಳಿಗೆ ನೀಡಿದಲ್ಲಿ ಅದು ಪರಿಣಾಮಕಾರಿಯಾಗಿರುತ್ತದೆ. ಆದರೂ ಕೂಡ ಈ ಲಸಿಕೆಯನ್ನೂ 45 ವರ್ಷದವರೆಗೆ ಮಹಿಳೆಯರು ಪಡೆಯಬಹುದಾಗಿದೆ.

women may still benefit from protection against certain HPV strains

author img

By ETV Bharat Karnataka Team

Published : Mar 18, 2024, 4:14 PM IST

ನವದೆಹಲಿ: ಗರ್ಭಕಂಠ ಕ್ಯಾನ್ಸರ್​ನ ಮೊದಲ ಮುನ್ನೆಚ್ಚರಿಕೆ ಎಂದರೆ ಅದು ಎಚ್​ಪಿವಿ ಲಸಿಕೆ ಆಗಿದೆ. 9 ರಿಂದ 14 ವರ್ಷದೊಳಗೆ ಈ ಲಸಿಕೆಯನ್ನು ನೀಡುವುದರಿಂದ ಈ ಅಪಾಯವನ್ನು ತಡೆಯಬಹುದಾಗಿದೆ. ಒಂದು ವೇಳೆ ಈ ಅವಧಿಯಲ್ಲಿ ಲಸಿಕೆ ತಪ್ಪಿಸಿದಲ್ಲಿ ಯಾವ ವಯಸ್ಸಿನಲ್ಲಿ ಲಸಿಕೆ ಪಡೆಯಬಹುದು. ಹೇಗೆ ಈ ಗರ್ಭಕಂಠ ಕ್ಯಾನ್ಸರ್​ನಿಂದ ರಕ್ಷಣೆ ಪಡೆಯಬಹುದು ಎಂಬ ಕುರಿತು ವೈದ್ಯರು ಸಲಹೆ ನೀಡಿದ್ದಾರೆ.

ಹ್ಯೂಮನ್​ ಪ್ಯೂಪಿಲೋವೈರಸ್​ (ಎಚ್​ಪಿವಿ) ಗರ್ಭಕಂಠಕ್ಕೆ ಕಾರಣವಾಗುವ ಸಾಮಾನ್ಯ ಮತ್ತು ಹೆಚ್ಚಿನ ಅಪಾಯಕ್ಕೆ ಕಾರಣವಾಗುವ ಸೋಂಕು ಆಗಿದೆ. ಭಾರತದಲ್ಲಿ 5 ರಲ್ಲಿ 1 ಅಂದರೆ ಶೇ 21ರಷ್ಟು ಮಂದಿ ಈ ಗರ್ಭಕಂಠದ ಕ್ಯಾನ್ಸರ್​ ಅಪಾಯ ಹೊಂದಿದ್ದಾರೆ ಎಂದು ದಿ ಲ್ಯಾನ್ಸೆಟ್​ ಗ್ಲೋಬಲ್​ ಹೆಲ್ತ್​​ ವರದಿ ತಿಳಿಸಿದತು. ಜಾಗತಿಕವಾಗಿ ಈ ಗರ್ಭಕಂಠದ ಕ್ಯಾನ್ಸರ್​ನಿಂದಾಗಿ ನಾಲ್ಕರಲ್ಲಿ ಒಬ್ಬರು ಅಥವಾ ಶೇ 23ರಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ.

ಎಚ್​ಪಿವಿ ಲಸಿಕೆಯನ್ನು 9 ರಿಂದ 14 ವರ್ಷದ ಮಕ್ಕಳಿಗೆ ನೀಡಿದಲ್ಲಿ ಅದು ಪರಿಣಾಮಕಾರಿಯಾಗಿರುತ್ತದೆ. ಆದರೂ ಈ ಲಸಿಕೆಯನ್ನೂ ಮಹಿಳೆಯರಿಗೆ 45ವರ್ಷದವರೆಗೆ ಶಿಫಾರಸು ಮಾಡಲಾಗುವುದು ಎಂದು ತಜ್ಞರು ತಿಳಿಸಿದ್ದಾರೆ.

ಹೆಣ್ಣು ಮಕ್ಕಳು 9 ರಿಂದ 26 ವರ್ಷದೊಳಗೆ ಈ ಗರ್ಭಕಂಠದ ಲಸಿಕೆ ಪಡೆಯುವುದು ಹೆಚ್ಚು ನಿರ್ಣಾಯಕವಾಗಿದೆ. ಈ ಲಸಿಕೆ ಎಚ್​ಪಿವಿ ಸೋಂಕಿನ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ. ಆದಾಗ್ಯೂ, ಈ ಲಸಿಕೆ ಪಡೆಯದವರು 26 ಮತ್ತು 45 ವರ್ಷದೊಳಗೆ ಇದರ ಪ್ರಯೋಜನ ಪಡೆಯಬಹುದು ಎಂದು ಗುರುಗ್ರಾಮದ ಕ್ಲೌಡ್​ನೈನ್​ ಸ್ತ್ರೀರೋಗ ತಜ್ಞೆ ಡಾ ಚೇತ್ನಾ ಜೈನ್​ ತಿಳಿಸಿದ್ದಾರೆ.

ಇಂದು ಯುವ ಜನತೆ ಹಲವು ಪಾರ್ಟನರ್​ಗಳ ಜೊತೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗುತ್ತಿದ್ದು, ಲಸಿಕೆ ಪಡೆಯುವ ಪ್ರಾಮುಖ್ಯತೆ ಹೆಚ್ಚಿಸಿದೆ. ಶಿಫಾರಸು ಮಾಡಿದ ವಯಸ್ಸು ಮೀರಿದ ಬಳಿಕವೂ ಯುವತಿಯರು ಮತ್ತು ಮಹಿಳೆಯರು ಈ ಎಚ್​ಪಿವಿ ಲಸಿಕೆಯ ಪ್ರಯೋಜನ ಪಡೆಯಬಹುದು. ಸೋಂಕಿನ ವಿರುದ್ಧ ಪರಿಣಾಮಕಾರಿತ್ವತೆ ಕೊಂಚ ಕಡಿಮೆಯಾಗಬಹುದು ಎಂದಿದ್ದಾರೆ.

ಲಸಿಕೆಗೆ ನಿಗದಿಸಿರುವ ವಯಸ್ಸು ಮೀರಿದರೂ ಕೂಡ ಮಹಿಳೆಯರು ತಮ್ಮ 45 ವರ್ಷದವರೆಗೆ ಈ ಲಸಿಕೆಯ ಪ್ರಯೋಜನ ಪಡೆಯಬಹುದಾಗಿದೆ ಎಂದು ದೆಹಲಿಯ ಮಧುಕರ್​ ರೈನ್ಬೌ ಮಕ್ಕಳ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ ರಿಂಕು ಸೇನ್​ ಗುಪ್ತಾ ಧಾರ್​​ ತಿಳಿಸಿದ್ದಾರೆ.

ಲಸಿಕೆಯ ಹೊರತಾಗಿ ಗರ್ಭಕಂಠ ಕ್ಯಾನ್ಸರ್​ ಅನ್ನು ಆರಂಭದಲ್ಲಿ ಪತ್ತೆ ಮಾಡಿ ತಡೆಯುವುದು ಕೂಡ ಪ್ರಮುಖವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಗರ್ಭಕಂಠದ ಕ್ಯಾನ್ಸರ್​ ಲಕ್ಷಣ ರಹಿತವಾಗಿದ್ದು, ಇದಕ್ಕೆ ಸೂಕ್ತ ಚಿಕಿತ್ಸೆ ನೀಡದೇ ಹೋದಲ್ಲಿ ವರ್ಷಗಳ ಬಳಿಕ ಇದು ಕ್ಯಾನ್ಸರ್​​ಗೆ ಕಾರಣವಾಗುತ್ತದೆ ಎಂದಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಗರ್ಭಕಂಠ ಕ್ಯಾನ್ಸರ್​​ಗೆ ತುತ್ತಾದ ಮಿಸ್​ ವರ್ಲ್ಡ್​​ ಅಭ್ಯರ್ಥಿ.. ಮಹಿಳೆಯರನ್ನು ಕಾಡುವ ಈ ಕ್ಯಾನ್ಸರ್​ ಬಗ್ಗೆ ಅರಿವು ಅಗತ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.