Natural Remedies For Chapped Lips: ತುಟಿಗಳು ಮುಖದ ಸೌಂದರ್ಯವನ್ನು ಹೆಚ್ಚಿಸುತ್ತವೆ. ನಗುವಿನ ವಿಶೇಷ ಆಕರ್ಷಣೆ ಎಂದರೆ ಗುಲಾಬಿ ಬಣ್ಣದ ತುಟಿಗಳು. ಆದರೆ, ಚಳಿಗಾಲದಲ್ಲಿ ತುಟಿಗಳು ತೇವಾಂಶವನ್ನು ಕಳೆದುಕೊಳ್ಳುತ್ತವೆ. ಶುಷ್ಕ ಹಾಗೂ ನಿರ್ಜೀವವಾಗಿ ಕಾಣುತ್ತವೆ. ಈ ಕ್ರಮದಲ್ಲಿ ಅನೇಕ ಜನರು ವಿವಿಧ ಉತ್ಪನ್ನಗಳನ್ನು ಬಳಸುತ್ತಾರೆ. ಈ ಸಮಯದಲ್ಲಿ ತುಟಿಗಳಿಗೆ ರಾಸಾಯನಿಕಗಳನ್ನು ಬಳಿಸಿದರೆ ಕಪ್ಪಾಗಿಸುತ್ತದೆ ಎಂದು ಕೆಲವರು ಚಿಂತಿಸುತ್ತಾರೆ. ಇದರಿಂದಾಗಿ ಕೆಲವು ನೈಸರ್ಗಿಕ ಟಿಪ್ಸ್ ಅನುಸರಿಸುವ ಮೂಲಕ ನಿಮ್ಮ ತುಟಿಗಳನ್ನು ಮೃದು ಹಾಗೂ ತಾಜಾವಾಗಿರಿಸಿಕೊಳ್ಳಲು ಸಾಧ್ಯವಾಗುತ್ತದೆ ಎನ್ನುತ್ತಾರೆ ತಜ್ಞರು. ಈ ಸಲಹೆಗಳು ಯಾವುವು ಎಂಬುದನ್ನು ನೋಡೋಣ.
ಹೆಚ್ಚು ನೀರು ಕುಡಿಯಿರಿ: ಹೆಚ್ಚು ಜನರು ಚಳಿಗಾಲದಲ್ಲಿ ಕಡಿಮೆ ನೀರು ಕುಡಿಯುತ್ತಾರೆ. ಇದು ಮುಖ್ಯವಾಗಿ ಒಣ ತುಟಿಗಳಿಗೆ ಕಾರಣವಾಗುತ್ತದೆ. ಋತುವನ್ನು ಲೆಕ್ಕಿಸದೆ, ದಿನದಲ್ಲಿ ಪ್ರತಿದಿನ ಸಾಕಷ್ಟು ನೀರು ಕುಡಿಯಿರಿ. ಇದರ ಪರಿಣಾಮವಾಗಿ ದೇಹವು ಹೈಡ್ರೇಟ್ ಆಗಿಡಲು ಸಾಧ್ಯವಾಗುತ್ತದೆ. ಜೊತೆಗೆ ತುಟಿಗಳು ಸಹ ಒಣಗುವುದಿಲ್ಲ ಎಂದು ತಜ್ಞರು ತಿಳಿಸುತ್ತಾರೆ.
ಜೇನು ತುಪ್ಪ: ಜೇನು ತುಪ್ಪದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಸಮೃದ್ಧವಾಗಿವೆ. ಅಲ್ಲದೆ ಇದು ನೈಸರ್ಗಿಕ ಹೈಡ್ರೇಟಿಂಗ್ ಏಜೆಂಟ್ ಆಗಿಯು ಕೆಲಸ ಮಾಡುತ್ತದೆ. ತುಟಿಗಳು ಒಣಗಿದಾಗ, ಸ್ವಲ್ಪ ಜೇನುತುಪ್ಪವನ್ನು ನೇರವಾಗಿ ತುಟಿಗಳಿಗೆ ಹಚ್ಚಿ ಹಾಗೂ ಸ್ವಲ್ಪ ಸಮಯದ ನಂತರ ತೊಳೆದುಕೊಳ್ಳಿ. ತುಟಿಗಳು ಮೃದು ಹಾಗೂ ಆರೋಗ್ಯಕರವೂ ಆಗಿರುತ್ತದೆ.
ತೆಂಗಿನ ಎಣ್ಣೆ: ತೆಂಗಿನ ಎಣ್ಣೆಯು ಉರಿಯೂತದ ಗುಣಲಕ್ಷಣ ಹಾಗೂ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಒಣ ತುಟಿಗಳ ಸಮಸ್ಯೆಗಳನ್ನು ಕಡಿಮೆ ಮಾಡಲು ತೆಂಗಿನ ಎಣ್ಣೆಯು ತುಂಬಾ ಸಹಕಾರಿಯಾಗಿದೆ. ರಾತ್ರಿ ಮಲಗುವ ಮುನ್ನ ಹಾಗೂ ಚಳಿಗಾಲದಲ್ಲಿ ದಿನಕ್ಕೆ ಹಲವಾರು ಬಾರಿ ತೆಂಗಿನ ಎಣ್ಣೆಯನ್ನು ತುಟಿಗಳಿಗೆ ಹಚ್ಚುವುದು ತುಂಬಾ ಪ್ರಯೋಜನಕಾರಿ ಎಂದು ತಜ್ಞರು ಹೇಳುತ್ತಾರೆ.
ತುಪ್ಪ/ ಬೆಣ್ಣೆ: ತುಪ್ಪ ಅಥವಾ ಬೆಣ್ಣೆ ಯಾವುದಾದರು ಒಂದು, ಚರ್ಮದ ಆರೋಗ್ಯಕ್ಕೂ ತುಂಬಾ ಉಪಯುಕ್ತವಾಗಿದೆ. ನೀವು ಒಣ ತುಟಿಗಳಿಂದ ಬಳಲುತ್ತಿದ್ದರೆ, ರಾತ್ರಿ ಮಲಗುವ ಮುನ್ನ ತುಟಿಗಳಿಗೆ ತುಪ್ಪ ಇಲ್ಲವೇ ಬೆಣ್ಣೆಯನ್ನು ಹಚ್ಚಿಕೊಳ್ಳಿ. ಇವು ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತವೆ ಹಾಗೂ ತುಟಿಗಳನ್ನು ಮೃದುವಾಗಿರಿಸುವುದರಿಂದ ಉತ್ತಮ ಬಣ್ಣ ಪಡೆಯಲು ಸಹಾಯ ಮಾಡುತ್ತದೆ ಎಂದು ತಜ್ಞರು ವಿವರಿಸುತ್ತಾರೆ.
ಬೇವಿನ ಎಣ್ಣೆ: ಒಣ ತುಟಿಗಳು ಹಾಗೂ ಒಡೆದ ತುಟಿಗಳ ಸಮಸ್ಯೆಯನ್ನು ಕಡಿಮೆ ಮಾಡುವಲ್ಲಿ ಬೇವಿನ ಎಣ್ಣೆಯು ಚೆನ್ನಾಗಿ ಕೆಲಸ ಮಾಡುತ್ತದೆ. ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ ಗುಣಗಳು ತುಟಿಗಳನ್ನು ಒಣಗದಂತೆ ತಡೆಯುತ್ತವೆ. ಚಳಿಗಾಲದಲ್ಲಿ ತುಟಿಗಳಿಗೆ ಬೇವಿನ ಎಣ್ಣೆಯನ್ನು ಬಳಸುವುದು ತುಂಬಾ ಒಳ್ಳೆಯದು.
ರೋಸ್ ವಾಟರ್: ಇದು ತುಟಿಗಳನ್ನು ತೇವಗೊಳಿಸಲು ಹಾಗೂ ಮೃದುಗೊಳಿಸಲು ಕೂಡ ಸಹಾಯ ಮಾಡುತ್ತದೆ. ಇದಕ್ಕಾಗಿ ಹತ್ತಿ ಉಂಡೆಯಿಂದ ತುಟಿಗಳ ಮೇಲೆ ಸ್ವಲ್ಪ ರೋಸ್ ವಾಟರ್ ಹಚ್ಚಬೇಕು. ಇದರಿಂದ ತುಟಿಗಳು ಹೈಡ್ರೇಟ್ ಆಗುವುದು ಮಾತ್ರವಲ್ಲದೆ ಅವುಗಳ ಸೌಂದರ್ಯವೂ ಇಮ್ಮಡಿಗೊಳ್ಳುತ್ತದೆ. ಜೊತೆಗೆ ಫ್ರೆಶ್ ಆಗಿ ಕಾಣುತ್ತವೆ ಎಂದು ತಜ್ಞರು ಸಲಹೆ ನೀಡುತ್ತಾರೆ.
ಎಳ್ಳಿನ ಎಣ್ಣೆ: ಚಳಿಗಾಲದಲ್ಲಿ ಒಣ, ಒಡೆದ ತುಟಿಗಳ ಸಮಸ್ಯೆಯನ್ನು ಕಡಿಮೆ ಮಾಡಲು ಎಳ್ಳೆಣ್ಣೆ ತುಂಬಾ ಸಹಾಯ ಮಾಡುತ್ತದೆ. ಇದಕ್ಕಾಗಿ ನಿತ್ಯವೂ ಈ ಎಣ್ಣೆಯನ್ನು ತುಟಿಗಳಿಗೆ ಹಚ್ಚುವುದರಿಂದ ಒಳ್ಳೆಯ ಫಲಿತಾಂಶ ಲಭಿಸುತ್ತದೆ.
ಬಾದಾಮಿ ಎಣ್ಣೆ: ಬಾದಾಮಿ ಎಣ್ಣೆಯಲ್ಲಿರುವ ವಿಟಮಿನ್- ಇ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ತುಟಿಗಳನ್ನು ಆರೋಗ್ಯವಾಗಿಡಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದು ಶೀತ ವಾತಾವರಣದಿಂದಲೂ ನಮ್ಮನ್ನು ರಕ್ಷಿಸುತ್ತದೆ. ರಾತ್ರಿ ಮಲಗುವ ಮುನ್ನ ಬಾದಾಮಿ ಎಣ್ಣೆಯನ್ನು ಅಗತ್ಯವಿರುವ ಕಡೆ ಹಚ್ಚಿಕೊಂಡರೆ ಒಳ್ಳೆಯ ಫಲಿತಾಂಶ ಪಡೆಯಬಹುದು ಎಂದು ತಜ್ಞರು ಹೇಳುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ ವೀಕ್ಷಿಸಿ: https://www.nhs.uk/conditions/sore-or-dry-lips/
ಓದುಗರಿಗೆ ಮುಖ್ಯ ಸೂಚನೆ: ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ವೈಯಕ್ತಿಕ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.