ETV Bharat / health

ಆರೋಗ್ಯಕ್ಕೆ ಅದ್ಭುತ ಪ್ರಯೋಜನ: ಸದಾ ಯಂಗ್​ ಆಗಿ ಕಾಣಲು ವೈಟ್ ಟೀ ಕುಡಿಯಿರಿ! - White Tea Health Benefits

White Tea Health Benefits: ಪ್ರಸ್ತುತ ಅನೇಕ ಜನರು ಆರೋಗ್ಯಕರವಾಗಿರಲು ಗ್ರೀನ್ ಟೀ ಮತ್ತು ಲೆಮನ್ ಟೀಯಂತಹ ಹರ್ಬಲ್ ಟೀಗಳತ್ತ ಮುಖ ಮಾಡುತ್ತಿದ್ದಾರೆ. ಇದರ ಜೊತೆಗೆ ಹಲವಾರು ರೀತಿಯ ಆರೋಗ್ಯಕರವಾದ ಚಹಾಗಳಿವೆ. ಅವುಗಳಲ್ಲಿ ಬಿಳಿ ಚಹಾ(white tea) ಕೂಡ ಒಂದು. ಈ ಟೀ ಕುಡಿದರೆ ಅನೇಕ ಲಾಭಗಳು ದೊರೆಯುತ್ತವೆ ಎನ್ನುತ್ತಾರೆ ತಜ್ಞರು. ಯಾವೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಎನ್ನುವುದನ್ನು ಅರಿತುಕೊಳ್ಳೋಣ ಬನ್ನಿ..

WHITE TEA HEALTH BENEFITS  WHITE TEA BENEFITS FOR SKIN  IS WHITE TEA HEALTHY FOR YOU  WHITE TEA BENEFITS FOR WOMEN
ವೈಟ್ ಟೀ (ETV Bharat)
author img

By ETV Bharat Health Team

Published : Sep 3, 2024, 11:50 AM IST

White Tea Health Benefits: ಚಹಾ ಮತ್ತು ಕಾಫಿ ಅತ್ಯಂತ ಜನಪ್ರಿಯ ಪಾನೀಯಗಳಾಗಿವೆ. ಪ್ರಪಂಚದ ಯಾವುದೇ ಪ್ರದೇಶಗಳಲ್ಲಿ ಹೋದರೂ ಚಹಾ ಮತ್ತು ಕಾಫಿ ಲಭಿಸುತ್ತದೆ. ಸ್ನೇಹಿತರು ಮತ್ತು ಸಂಬಂಧಿಕರು ಪರಸ್ಪರ ಕುಳಿತು ಮಾತನಾಡುವಾಗ ಚಹಾ ಅಥವಾ ಕಾಫಿ ಕುಡಿಯಬೇಕು. ಕೆಲವರು ಇದನ್ನು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಕುಡಿಯುತ್ತಾರೆ. ಆದರೆ, ಕೆಲವರು ದಿನಕ್ಕೆ 5-6 ಬಾರಿ ಕುಡಿಯುತ್ತಾರೆ. ಆದಾಗ್ಯೂ, ಹೆಚ್ಚು ಚಹಾ ಮತ್ತು ಕಾಫಿ ಕುಡಿಯುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ಅನೇಕ ಜನರು ಹರ್ಬಲ್ ಟೀಗಳತ್ತ ಮುಖ ಮಾಡುತ್ತಿದ್ದಾರೆ.

ಗಿಡಮೂಲಿಕೆಗಳಿಂದ ಸಿದ್ಧಪಡಿಸುವ ಚಹಾಗಳಲ್ಲಿ, ಪ್ರಮುಖವಾಗಿ ಗ್ರೀನ್ ಮತ್ತು ಲೆಮನ್​ ಚಹಾವನ್ನು ಮಾತ್ರ ಹೆಚ್ಚು ಸೇವಿಸುತ್ತಾರೆ. ಇದಲ್ಲದೇ ವೈಟ್ ಟೀ ಸೇವನೆಯಿಂದಲೂ ಆರೋಗ್ಯಕ್ಕೆ ಹಲವು ಲಾಭಗಳಿವೆ ಎನ್ನುತ್ತಾರೆ ವೈದ್ಯರು. ಈ ಟೀ ಕುಡಿಯುವುದರಿಂದ ಆಗುವ ಆರೋಗ್ಯ ಲಾಭಗಳೇನು ಎಂಬುದನ್ನು ಇಲ್ಲಿ ತಿಳಿಯೋಣ.

ತೂಕ ಇಳಿಕೆ: ವೈಟ್ ಟೀ ಕುಡಿಯುವುದರಿಂದ ಚಯಾಪಚಯ ಕ್ರಿಯೆ ಉತ್ತಮಗೊಳ್ಳುತ್ತದೆ. ಪರಿಣಾಮವಾಗಿ ಕೊಬ್ಬು ಕರಗುತ್ತದೆ ಮತ್ತು ತೂಕ ಕಡಿಮೆಯಾಗುತ್ತದೆ ಎಂದು ಸಂಶೋಧನಾ ವರದಿಯಲ್ಲಿ ವಿವರಿಸಲಾಗಿದೆ. 2018 ರಲ್ಲಿ ಯುರೋಪಿಯನ್ ಜರ್ನಲ್ ಆಫ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಬಿಳಿ ಚಹಾ ಸೇವನೆಯು ತೂಕ ನಷ್ಟವನ್ನು ಉತ್ತೇಜಿಸುತ್ತದೆ. ಅಧಿಕ ತೂಕ ಹೊಂದಿರುವ ಜನರಲ್ಲಿ ಚಯಾಪಚಯ ಅಪಾಯಕಾರಿ ಅಂಶಗಳನ್ನು ಕಡಿಮೆ ಮಾಡಲು ಇದು ಕಂಡುಬಂದಿದೆ. ಪೋರ್ಟೊ ವಿಶ್ವವಿದ್ಯಾನಿಲಯದ ಪೌಷ್ಟಿಕಾಂಶ ಮತ್ತು ಆಹಾರ ವಿಜ್ಞಾನಗಳ ಫ್ಯಾಕಲ್ಟಿಯಾಗಿರುವ ಡಾ. ಅನಾ ಸೌಸಾ ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು.

ಉತ್ಕರ್ಷಣ ನಿರೋಧಕ: ಬಿಳಿ ಚಹಾವು ಹೆಚ್ಚಿನ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇವು ಜೀವಕೋಶಗಳನ್ನು ಹಾನಿ, ಉರಿಯೂತ ಮತ್ತು ದೀರ್ಘಕಾಲದ ಕಾಯಿಲೆಗಳಿಂದ ರಕ್ಷಿಸುತ್ತವೆ ಎಂದು ವೈದ್ಯರು ವಿವರಿಸುತ್ತಾರೆ.

ಹೃದಯದ ಆರೋಗ್ಯವನ್ನು ಸುಧಾರಿಸಿ: ಬಿಳಿ ಚಹಾದ ನಿಯಮಿತ ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ಮತ್ತು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ. ಮತ್ತು ದೇಹದ ಆರೋಗ್ಯದ ಸಮಸ್ಯೆಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ.

ಕ್ಯಾನ್ಸರ್ ಬರದಂತೆ ತಡೆಯುತ್ತೆ: ಇದರಲ್ಲಿ ಕ್ಯಾನ್ಸರ್ ತಡೆಗಟ್ಟುವ ಕೋಶಗಳಿವೆ ಎಂದು ಹೇಳಲಾಗುತ್ತದೆ. ಈ ಚಹಾವನ್ನು ನಿಯಮಿತವಾಗಿ ಕುಡಿಯುವುದರಿಂದ ಕರುಳಿನ, ಹೊಟ್ಟೆ ಮತ್ತು ಸ್ತನ ಕ್ಯಾನ್ಸರ್ ಅನ್ನು ತಡೆಯುತ್ತದೆ ಎನ್ನುತ್ತಾರೆ ವೈದ್ಯರು.

ಚಿಕ್ಕವರಂತೆ ಕಾಣಲು ಸಹಾಯ ಮಾಡುತ್ತೆ: ಬಿಳಿ ಚಹಾವು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಚರ್ಮದ ಸುಕ್ಕುಗಳು ಮತ್ತು ವಯಸ್ಸಿನ ಕಲೆಗಳನ್ನು ಕಡಿಮೆ ಮಾಡುತ್ತದೆ. ಈ ಚಹಾ ಸೇವನೆಯಿಂದ ಸದಾ ಯಂಗ್​ ಆಗಿ ಕಾಣಿಸಿಕೊಳ್ಳುತ್ತೀರಿ ಅನ್ನುತ್ತೆ ಸಂಶೋಧನಾ ವರದಿ.

ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತೆ: ಬಿಳಿ ಚಹಾದ ಆ್ಯಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಇದರಿಂದಾಗಿ ಬ್ಯಾಕ್ಟೀರಿಯಾ ಮತ್ತು ಸೋಂಕುಗಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ.

ಬಾಯಿಯ ದುರ್ವಾಸನೆ ಕಡಿಮೆ ಮಾಡುತ್ತೆ: ಇದರ ಬ್ಯಾಕ್ಟೀರಿಯಾ ವಿರೋಧಿ ಗುಣವು ಹಲ್ಲಿನ ಸಮಸ್ಯೆಗಳನ್ನು ದೂರ ಮಾಡುತ್ತದೆ. ಮತ್ತು ಬಾಯಿಯ ದುರ್ವಾಸನೆ ಮತ್ತು ವಸಡು ನೋವನ್ನು ಕಡಿಮೆ ಮಾಡುತ್ತದೆ ಎಂದು ವಿವರಿಸಲಾಗಿದೆ.

ಒತ್ತಡ ಕಡಿಮೆ ಮಾಡುತ್ತೆ: ವೈಟ್ ಟೀಯಲ್ಲಿ ಕೆಫೀನ್ ಕಡಿಮೆ ಇರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಇದರಲ್ಲಿರುವ ಎಲ್-ಥೈನೈನ್ ಒತ್ತಡವನ್ನು ಕಡಿಮೆ ಮಾಡುತ್ತದೆ.

ಚಹಾ ರೆಡಿ ಮಾಡೋದು ಹೇಗೆ?: ಈ ಚಹಾವನ್ನು ಕ್ಯಾಮೆಲಿಯಾ ಸೈನೆನ್ಸಿಸ್ ಚಹಾ ಸಸ್ಯದ ಎಲೆಗಳು ಮತ್ತು ಮೊಗ್ಗುಗಳಿಂದ ತಯಾರಿಸಲಾಗುತ್ತದೆ. ಈ ಒಣಗಿದ ಎಲೆಗಳನ್ನು ಬಿಸಿನೀರಿನಲ್ಲಿ ಹಾಕಿ ಸ್ವಲ್ಪ ಹೊತ್ತು ಮುಚ್ಚಿಟ್ಟರೆ ಈ ಚಹಾ ತಯಾರಿಸಲಾಗುತ್ತದೆ. ಅದಕ್ಕೆ ಬೇಕಾದಷ್ಟು ಜೇನುತುಪ್ಪ ಸೇರಿಸಿ ಕುಡಿದರೆ ಒಳ್ಳೆಯದು.

ಹೆಚ್ಚಿನ ಮಾಹಿತಿಗಾಗಿ ನೀವು ಈ ವೆಬ್​ಸೈಟ್​ಗೆ ಸಂಪರ್ಕಿಸಬಹುದು: https://onlinelibrary.wiley.com/doi/10.1002/efd2.89

ಓದುಗರಿಗೆ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.