ಬೆಂಗಳೂರು: ಜೀವನ ಶೈಲಿ ಬದಲಾವಣೆ ತಿನ್ನುವ ಅಭ್ಯಾಸ, ದೈಹಿಕ ಚಟುವಟಿಕೆಯ ಕೊರತೆ, ದೀರ್ಘಾವಧಿ ಕಾಲ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದರಿಂದ ಅಧಿಕ ತೂಕದ ಸಮಸ್ಯೆ ಸಾಮಾನ್ಯವಾಗಿ ಕಾಡುತ್ತದೆ. ತೂಕ ಕಳೆದು ಕೊಳ್ಳುವ ವಿಚಾರದಲ್ಲಿ ಅನೇಕ ಪ್ರಯೋಗ ಕಸರತ್ತನ್ನು ಮಾಡಿ ಯಾವುದು ಬೆಸ್ಟ್ ಎಂಬ ತೀರ್ಮಾನಕ್ಕೆ ಬರುತ್ತೇವೆ. ಈ ತೂಕ ಕಳೆದುಕೊಳ್ಳಲು ವಿವಿಧ ವ್ಯಾಯಾಮದ ಮಾರ್ಗವನ್ನು ಅನುಸರಿಸಿ, ಶಿಸ್ತಿನ ಡಯಟ್ ಕೂಡ ಪಾಲಿಸುತ್ತೇವೆ. ಕೆಲವು ವೇಳೆ ತೂಕ ನಿರ್ವಹಣೆಗೆ ವಾಕಿಂಗ್ ಸಹಾಯ ಮಾಡಿದರೆ, ಮೆಟ್ಟಿಲು ಹತ್ತುವುದು ಬೆಸ್ಟ್ ಎಂಬ ವಾದವನ್ನು ಕೆಲವರು ಮಂಡಿಸುತ್ತಾರೆ. ಹಾಗಾದರೆ ಯಾವುದು ಪರಿಣಾಮಕಾರಿ ಎಂಬ ಮಾಹಿತಿ ಇಲ್ಲಿದೆ.
ಮೆಟ್ಟಿಲು ಹತ್ತುವುದರಿಂದ ಪ್ರಯೋಜನ: ತೂಕ ನಿರ್ವಹಣೆ: ತಜ್ಞರ ಪ್ರಕಾರ, ಮೆಟ್ಟಿಲು ಹತ್ತುವುದರಿಂದ ದೇಹದ ಕೊಬ್ಬು ಕರಗುತ್ತದೆ. ಜೊತೆಗೆ ತೊಡೆ ಮತ್ತು ಕಾಲು ಮತ್ತು ಹೊಟ್ಟೆ ಸುತ್ತ ಶೇಖರಣೆಯಾಗಿರುವ ಕೊಬ್ಬಿನ ಇಳಿಕೆ ಮಾಡಬಹುದು ಎನ್ನುತ್ತಾರೆ. ಮೆಟ್ಟಿಲು ಹತ್ತುವ ಪ್ರಕ್ರಿಯೆ ಮೂರು ಪಟ್ಟು ವೇಗದಲ್ಲಿ ಕೊಬ್ಬನ್ನು ಕರಗಿಸುತ್ತದೆ. ಇದರಿಂದ ಶೀಘ್ರ ತೂಕ ಕಳೆದುಕೊಳ್ಳಬಹುದು ಎಂಬ ಮಾಹಿತಿಯನ್ನು 2001ರ ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷಿಯನ್ನಲ್ಲಿ ಪ್ರಕಟಿಸಲಾಗಿದೆ. ಸಂಶೋಧನೆಯಲ್ಲಿ ಅಧಿಕ ತೂಕ ಹೊಂದಿದ ಜನರು ಮೆಟ್ಟಿಲ ವ್ಯಾಯಮದಿಂದ ತೂಕ ಕಳೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಹೃದಯದ ಆರೋಗ್ಯಕ್ಕೆ ಉತ್ತಮ: ಮೆಟ್ಟಿಲು ಹತ್ತುವುದರಿಂದ ಹೃದಯದ ಬಡಿತ ಹೆಚ್ಚುತ್ತದೆ. ಇದರಿಂದ ರಕ್ತದ ಪರಿಚಲನೆ ಹೆಚ್ಚುತ್ತದೆ. ಇದು ಹೃದಯ ರೋಗ, ಪಾರ್ಶ್ವವಾಯ ಮತ್ತು ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ, ಹೃದಯ ಸಮಸ್ಯೆ ಹೊಂದಿರುವವರು ಮೆಟ್ಟಿಲು ಹತ್ತುವುದು ಸೂಕ್ತವಲ್ಲ. ಅಧಿಕ ರಕ್ತದೊತ್ತ ಹೊಂದಿರುವವರು ಕೂಡ ವೈದ್ಯರ ಸಲಹೆ ಮೇರೆಗೆ ಮೆಟ್ಟಿಲು ಹತ್ತುವುದು ಸೂಕ್ತ.
ಮನಸ್ಥಿತಿ ಸುಧಾರಣೆ: ವ್ಯಾಯಮವೂ ಎಂರೋರ್ಫಿನ್ಸ್ ಅನ್ನು ಉತ್ತೇಜಿಸುತ್ತದೆ. ಇದು ಮೂಡ್ ಮತ್ತು ಒತ್ತಡ ಕಡಿಮೆ ಮಾಡುತ್ತದೆ. ಜೊತೆಗೆ ಆತಂಕ ಮತ್ತು ಖಿನ್ನತೆ ಕಡಿಮೆ ಮಾಡಲು ಸಾಧ್ಯವಾಗುತ್ತದೆ.
ನಡಿಗೆಯಿಂದಾಗುವ ಪ್ರಯೋಜನ: ವಾಕಿಂಗ್ ಅತ್ಯಂತ ಸುಲಭದಾಯಕ ಮತ್ತು ಯಾರು ಯಾವಾಗ ಬೇಕಾದರೂ ನಡೆಸುವ ಸರಳ ವ್ಯಾಯಾಮ. ತಜ್ಞರು ಹೇಳುವಂತೆ, ಬೆಳಗಿನ ಹೊತ್ತು ಅರ್ಧ ಗಂಟೆ ವಾಕಿಂಗ್ ಆರೋಗ್ಯಕ್ಕೆ ಉತ್ತಮ.
ಕೊಲೆಸ್ಟ್ರಾಲ್ ಕರಗತ್ತೆ: ದೇಹದಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಕರಗಿಸಲು ವಾಕಿಂಗ್ ಉತ್ತಮ ವ್ಯಾಯಾಮ. ನಿತ್ಯ ಅರ್ಧ ಗಂಟೆ ವಾಕ್ ಮಾಡುವುದರಿಂದ ಸುಲಭವಾಗಿ ಕೊಬ್ಬು ಕರಗುತ್ತದೆ.
ಹೃದಯದ ಆರೋಗ್ಯ: ಇತ್ತೀಚಿನ ದಿನದಲ್ಲಿ ಯುವ ಜನತೆ ಕೂಡ ಹೃದಯ ಸಂಬಂಧಿ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಅವರಲ್ಲಿ ಹೃದಯ ಆರೋಗ್ಯ ಸುಧಾರಣೆ ಮಾಡುವಲ್ಲಿ ನಿಯಮಿತ ನಡಿಗೆ ಸಹಾಯಕವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. 2018ರಲ್ಲಿ ಪೀರ್ ಜರ್ನಲ್ನಲ್ಲಿ ಪ್ರಕಟವಾದ ಲೇಖನ ಅನುಸಾರ, ವಾಕಿಂಗ್ ಹೃದಯದ ಆರೋಗ್ಯ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
ಒತ್ತಡ ಕಡಿಮೆ ಮಾಡುತ್ತದೆ: ಬೆಳಗಿನ ನಡಿಗೆ ಒತ್ತಡ ಮತ್ತು ಖಿನ್ನತೆಯಂತಹ ಸಮಸ್ಯೆ ಕಡಿಮೆ ಮಾಡುತ್ತದೆ. ತಜ್ಞರು ಹೇಳುವಂತೆ ಇದು ಮನಸ್ಸನ್ನು ವಿಶ್ರಾಂತಿಗೊಳಿಸುತ್ತದೆ. ನಡಿಗೆಯಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ.
ಎರಡರಲ್ಲಿ ಯಾವುದು ಉತ್ತಮ: ತಜ್ಞರು ಹೇಳುವಂತೆ ತೂಕ ಕಳೆದುಕೊಳ್ಳಲು ನಡಿಗೆ ಮತ್ತು ಮೆಟ್ಟಿಲು ಹತ್ತುವುದು ಎರಡೂ ಉತ್ತಮ. ಇದರಲ್ಲಿ ಯಾವುದು ಒಳಿತು ಎಂಬುದು ಅವರ ಫಿಟ್ನೆಸ್ ಮಟ್ಟದ ಮೇಲೆ ನಿರ್ಧಾರವಾಗುತ್ತದೆ. ಮೊಣಕಾಲು ಅಥವಾ ಕಾಲು ನೋವಿನಂತಹ ಸಮಸ್ಯೆ ಹೊಂದಿರುವವರಿಗೆ ತೂಕ ಕಳೆದುಕೊಳ್ಳಲು ನಡಿಗೆ ಸಹಾಯ ಮಾಡುತ್ತದೆ. ಕಾರಣ ಇವರು ಮೆಟ್ಟಿಲು ಹತ್ತುವುದರಿಂದ ಅವರಲ್ಲಿ ಈಗಾಗಲೇ ಇರುವ ಆರೋಗ್ಯ ಸಮಸ್ಯೆ ಉಲ್ಬಣವಾಗುತ್ತದೆ.
ಇದನ್ನೂ ಓದಿ: ಅಸ್ತಮಾ ರೋಗಿಗಳೇ ಗಮನಿಸಿ: ಬತ್ತಿನಿ ಕುಟುಂಬದಿಂದ ಮೀನಿನ ಔಷಧ ವಿತರಣೆಗೆ ದಿನಾಂಕ ನಿಗದಿ