ETV Bharat / health

ನೀವು ಅಧಿಕ ಯೂರಿಕ್ ಆ್ಯಸಿಡ್ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಈ ಆಹಾರಗಳನ್ನು ತ್ಯಜಿಸಿದರೆ ತೊಂದರೆ ದೂರವಾಗುತ್ತೆ! - Uric Acid Avoid Food List - URIC ACID AVOID FOOD LIST

Uric Acid Avoid Food List in Kannada: ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿಶ್ವಾದ್ಯಂತ 45 ದಶಲಕ್ಷಕ್ಕೂ ಹೆಚ್ಚು ಜನರು ಅಧಿಕ ಯೂರಿಕ್ ಆ್ಯಸಿಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ, ಈ ಸಮಸ್ಯೆಯಿಂದ ಪಾರಾಗಲು ಈ ಆಹಾರಗಳನ್ನು ಸೇವಿಸದೇ ಇರುವುದು ಉತ್ತಮ ಎನ್ನುತ್ತಾರೆ ವೈದ್ಯರು ಹಾಗೂ ಆಹಾರ ತಜ್ಞರು. ಅಧಿಕ ಯೂರಿಕ್ ಆ್ಯಸಿಡ್ ಸಮಸ್ಯೆಯಿಂದ ಪರಿಹಾರವಾಗಬೇಕಾದರೆ ಯಾವೆಲ್ಲಾ ಆಹಾರಗಳನ್ನು ಸೇವಿಸಬೇಕು ಎಂಬುದನ್ನು ಈ ಸ್ಟೋರಿಯಲ್ಲಿ ತಿಳಿದುಕೊಳ್ಳೋಣ.

URIC ACID INCREASE CAUSE  HOW TO DECREASE URIC ACID  URIC ACID FOODS TO AVOID  URIC ACID AVOID FOOD LIST
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Health Team

Published : Aug 27, 2024, 10:49 AM IST

Avoid These Foods to Reduce High Uric Acid: ಇತ್ತೀಚೆಗೆ ಅನೇಕ ಜನರು ಅಧಿಕ ಯೂರಿಕ್ ಆ್ಯಸಿಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಹಿಳೆಯರು ಅಥವಾ ಪುರುಷರು ಎಂಬ ಭೇದವಿಲ್ಲದೇ ಅನೇಕ ಜನರು ಈ ಸಮಸ್ಯೆಗೆ ತುತ್ತಾಗಿದ್ದಾರೆ. ಇದನ್ನು ಕಡಿಮೆ ಮಾಡಲು, ವೈದ್ಯರನ್ನು ಸಂಪರ್ಕಿಸಿ ಮತ್ತು ಕೆಲವು ಔಷಧಗಳನ್ನು ತೆಗೆದುಕೊಂಡರೂ ಕೂಡ ಫಲಿತಾಂಶ ಮಾತ್ರ ಸೀಮಿತವಾಗಿದೆ. ಆದಾಗ್ಯೂ, ಅಧಿಕ ಯೂರಿಕ್ ಆ್ಯಸಿಡ್ ಸಮಸ್ಯೆಯಿಂದ ಬಳಲುತ್ತಿರುವ ಜನರು ತಮ್ಮ ಆಹಾರ ಪದ್ಧತಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ವೈದ್ಯರು ತಿಳಿಸುವ ಪ್ರಕಾರ, ಯಾವೆಲ್ಲಾ ಆಹಾರಗಳನ್ನು ತ್ಯಜಿಸಬೇಕು ಎಂಬುದನ್ನು ಅರಿತುಕೊಳ್ಳೋಣ.

ಯೂರಿಕ್ ಆ್ಯಸಿಡ್ ಹೇಗೆ ರೂಪಗೊಳ್ಳುತ್ತೆ?: ನಾವು ಸೇವಿಸುವ ಆಹಾರದಲ್ಲಿರುವ ಪ್ಯೂರಿನ್ ಎಂಬ ರಾಸಾಯನಿಕ ವಿಭಜನೆಗೊಂಡು ಯೂರಿಕ್ ಆ್ಯಸಿಡ್ ರೂಪುಗೊಳ್ಳುತ್ತದೆ ಎನ್ನುತ್ತಾರೆ ಖ್ಯಾತ ಆಹಾರ ತಜ್ಞೆ ಡಾ.ಶ್ರೀಲತಾ. ಹೀಗೆ ರೂಪುಗೊಂಡ ಯೂರಿಕ್ ಆ್ಯಸಿಡ್ ಯಾವಾಗಲೂ ಮೂತ್ರದ ಮೂಲಕ ಹೊರ ಹೋಗುತ್ತದೆ. ಆದರೆ, ಕೆಲವೊಮ್ಮೆ ಯೂರಿಕ್ ಆಸಿಡ್ ಅಧಿಕವಾಗಿ ಬಿಡುಗಡೆಯಾಗಿ ಮೂತ್ರ ಸರಿಯಾಗಿ ಹೋಗದೇ ಈ ಸಮಸ್ಯೆ ಉಂಟಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಯೂರಿಕ್ ಆ್ಯಸಿಡ್ ಸರಿಯಾಗಿ ವಿಸರ್ಜಿಸುವುದಿಲ್ಲ ಮತ್ತು ಅದು ರಕ್ತದಲ್ಲಿ ಉಳಿಯುತ್ತದೆ ಎಂದು ಹೇಳಲಾಗುತ್ತದೆ. ಹಾಗೆ ಉಳಿದಿರುವ ಯೂರಿಕ್ ಆ್ಯಸಿಡ್ ಹರಳುಗಳಾಗುತ್ತವೆ ಮತ್ತು ಕೀಲುಗಳ ಸುತ್ತ ಮತ್ತು ಅಂಗಾಂಶಗಳಲ್ಲಿ ಸಂಗ್ರಹವಾಗುತ್ತದೆ. ಮತ್ತು ಹೈಪರ್​ಯುರಿಸೆಮಿಯಾಕ್ಕೆ ಕಾರಣವಾಗುತ್ತದೆ ಎಂದು ವಿವರಿಸಲಾಗಿದೆ. ಅಧಿಕ ತೂಕ ಹೊಂದಿರುವವರಿಗೆ ಈ ಯೂರಿಕ್ ಆಸಿಡ್ ಸಮಸ್ಯೆ ಬರುವ ಸಾಧ್ಯತೆ ಹೆಚ್ಚು.

ಯೂರಿಕ್ ಆ್ಯಸಿಡ್ ಹೆಚ್ಚಾದರೆ ಏನಾಗುತ್ತೆ?: ನಮ್ಮ ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟ ಹೆಚ್ಚಾಗುವುದು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಯೂರಿಕ್ ಆ್ಯಸಿಡ್ ಹೆಚ್ಚಳವು ಮೂತ್ರಪಿಂಡಗಳ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಇದರ ಹೆಚ್ಚಳದಿಂದ ಮೂತ್ರ ವಿಸರ್ಜನೆಯಲ್ಲಿ ತೊಂದರೆ, ಅಧಿಕ ರಕ್ತದೊತ್ತಡ, ಕೀಲು ನೋವು, ಊತ ಹಾಗೂ ನಡೆಯಲು ತೊಂದರೆಯಾಗುವ ಸಂಭವವಿದೆ. ರಕ್ತದಲ್ಲಿನ ಯೂರಿಕ್ ಆ್ಯಸಿಡ್ ಮಟ್ಟವು ಹೆಚ್ಚಾಗುವುದರಿಂದ ಜೀವಿತಾವಧಿಯು ಸುಮಾರು 11 ವರ್ಷಗಳವರೆಗೆ ಕಡಿಮೆ ಮಾಡಬಹುದು ಎಂದು ಅನೇಕ ಅಧ್ಯಯನಗಳಿಂದ ತಿಳಿದಿದೆ. ಆದ್ದರಿಂದ ಹೆಚ್ಚಿನ ಯೂರಿಕ್ ಆ್ಯಸಿಡ್ ಹೊಂದಿರುವವರು ಕೆಲವು ಆಹಾರ ಪದಾರ್ಥಗಳನ್ನು ತ್ಯಜಿಸಬೇಕು.

ಆಹಾರ ತಜ್ಞರ ಮಾತು: "ನಾವು ಸೇವಿಸುವ ಆಹಾರದಲ್ಲಿನ ಪ್ರೋಟೀನ್‌ಗಳಿಂದ ಪ್ಯೂರಿನ್ ಎಂಬ ಅಮೈನೋ ಆಮ್ಲಗಳನ್ನು ಚಯಾಪಚಯಗೊಳಿಸಿ ಯೂರಿಕ್ ಆ್ಯಸಿಡ್ ಅನ್ನು ಉತ್ಪಾದಿಸಲಾಗುತ್ತದೆ. ಆದರೆ, ನಮ್ಮ ದೇಹವು ಹೆಚ್ಚು ಯೂರಿಕ್ ಆ್ಯಸಿಡ್​ ಉತ್ಪಾದಿಸಿದಾಗ ಅಥವಾ ಯೂರಿಕ್ ಆ್ಯಸಿಡ್ ಸರಿಯಾಗಿ ವಿಸರ್ಜಿಸದಿದ್ದರೆ, ಅದು ಹೈಪರ್​ಯುರಿಸೆಮಿಯಾ ಆಗುತ್ತದೆ. ಪರಿಣಾಮವಾಗಿ, ಯೂರಿಕ್ ಆ್ಯಸಿಡ್​ ಸಂಗ್ರಹಗೊಳ್ಳುತ್ತದೆ. ನಮ್ಮ ಕಾಲಿನ ಹೆಬ್ಬೆರಳು ಊದಿಕೊಂಡರೆ ಅದನ್ನು ಗೌಟ್ ಎಂದು ಕರೆಯಲಾಗುತ್ತದೆ ಎಂದು ಆಹಾರ ತಜ್ಞೆ ಡಾ.ಶ್ರೀಲತಾ ತಿಳಿಸಿದ್ದಾರೆ.

ಯೂರಿಕ್ ಆ್ಯಸಿಡ್ ಹೆಚ್ಚಿರುವವರು ತ್ಯಜಿಸಬೇಕಾದ ಆಹಾರಗಳು:

  • ತಂಪಾದ ಪಾನೀಯಗಳು
  • ಮದ್ಯ
  • ಕೆಂಪು ಮಾಂಸ
  • ಸಮುದ್ರದ ಆಹಾರ
  • ಸಂಸ್ಕರಿಸಿದ ಆಹಾರಗಳು
  • ಅವರೆಕಾಳು
  • ಪಾಲಕ
  • ಕಡಲೆಕಾಯಿ
  • ಒಣದ್ರಾಕ್ಷಿ

ಯೂರಿಕ್ ಆ್ಯಸಿಡ್ ಇರುವವರು ತೆಗೆದುಕೊಳ್ಳಬೇಕಾದ ಆಹಾರಗಳು:

  • ವಿಟಮಿನ್-ಸಿ ಆಹಾರ
  • ಆಯಾ ಕಾಲಕ್ಕೆ ಲಭಿಸುವ ಹಣ್ಣುಗಳು
  • ಕಾಫಿ, ಕಪ್ಪು ಕಾಫಿ
  • ಲೆಟಿಸ್
  • ಹಾಲು ಮತ್ತು ಹಾಲಿನ ಉತ್ಪನ್ನಗಳು
  • ಸಾಕಷ್ಟು ನೀರು ಕುಡಿಯುವುದು ಅಗತ್ಯ
  • ಬಾರ್ಲಿ ನೀರು
  • ಹಸಿರು ಚಹಾ
  • ಸ್ಟ್ರಾಬೆರಿ ಸೇರಿದಂತೆ ವಿವಿಧ ಹಣ್ಣುಗಳು
  • ಪ್ಲಮ್ಸ್
  • ಏಪ್ರಿಕಾಟ್​ಗಳು
  • ಚೆರ್ರಿಗಳು
  • ಒಮೆಗಾ ಕೊಬ್ಬಿನಾಮ್ಲರುವ ಆಹಾರಗಳು
  • ಸೋಯಾಬಿನ್ ಮತ್ತು ಹಾಲು ಸೇರಿದಂತೆ ಸೋಯಾ ಉತ್ಪನ್ನಗಳು

ಓದುಗರಿಗೆ ವಿಶೇಷ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.