ETV Bharat / health

ನೀವು ಅಧಿಕ ಯೂರಿಕ್ ಆ್ಯಸಿಡ್​ ತೊಂದರೆಯಿಂದ ಬಳಲುತ್ತಿದ್ದೀರಾ? ಈ ಆಹಾರ ಪದ್ಧತಿ ಅನುಸರಿಸಿದರೆ ಬೇಗನೇ ಪರಿಹಾರ: ವೈದ್ಯರ ಸಲಹೆ - URIC ACID CONTROL FOOD

Uric Acid Control Food: ನೀವು ಅಧಿಕ ಯೂರಿಕ್ ಆ್ಯಸಿಡ್​ ತೊಂದರೆಯಿಂದ ಬಳಲುತ್ತಿದ್ದೀರಾ? ಹಾಗಾದ್ರೆ, ಈ ಆಹಾರ ಪದ್ಧತಿ ಅನುಸರಿಸಿದರೆ ಈ ಸಮಸ್ಯೆಗೆ ಬೇಗನೇ ಪರಿಹಾರ ಲಭಿಸುತ್ತದೆ ಎಂದು ತಜ್ಞ ವೈದ್ಯರು ಸಲಹೆ ನೀಡುತ್ತಾರೆ.

URIC ACID AVOID FOOD  FOODS THAT LOWER URIC ACID LEVEL  URIC ACID CAUSES FOOD  URIC ACID CONTROL FOOD IN KANNADA
ಸಾಂದರ್ಭಿಕ ಚಿತ್ರ (Getty Images)
author img

By ETV Bharat Health Team

Published : 3 hours ago

Uric Acid Control Food in Kannada: ಪ್ರಸ್ತುತ ಹಲವು ಜನರು ಯೂರಿಕ್ ಆ್ಯಸಿಡ್​ ಸಮಸ್ಯೆಯಿಂದ ತೊಂದರೆಗೀಡಾಗಿದ್ದಾರೆ. ಪುರುಷರು, ಮಹಿಳೆಯರು ಎಂಬ ಭೇದವಿಲ್ಲದೇ ಅನೇಕರು ಈ ಸಮಸ್ಯೆಯಿಂದ ತುತ್ತಾಗಿದ್ದಾರೆ. ಈ ತೊಂದರೆಯನ್ನು ಕಡಿಮೆ ಮಾಡಲು ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ಜೊತೆಗೆ ಕೆಲವು ಔಷಧಿಗಳನ್ನು ಬಳಸಲಾಗುತ್ತದೆ. ಇದರೊಂದಿಗೆ ಯೂರಿಕ್ ಆ್ಯಸಿಡ್ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ಆಹಾರ ಪದ್ಧತಿಯಲ್ಲಿ ಹಲವು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ವಿಶೇಷವಾಗಿ ಕೆಲವು ಆಹಾರ ಪದಾರ್ಥಗಳನ್ನು ತ್ಯಜಿಸಬೇಕು ಎನ್ನುತ್ತಾರೆ ತಜ್ಞ ವೈದ್ಯರು.

ನಮ್ಮ ದೇಹವು ನೈಸರ್ಗಿಕವಾಗಿ ಹೊರಹಾಕುವ ತ್ಯಾಜ್ಯ ಉತ್ಪನ್ನಗಳಲ್ಲಿ ಯೂರಿಕ್ ಆ್ಯಸಿಡ್​ ಒಂದಾಗಿದೆ. ನಾವು ಸೇವಿಸುವ ಆಹಾರದಲ್ಲಿರುವ ಪ್ಯೂರಿನ್ ರಾಸಾಯನಿಕ ವಿಭಜನೆಯಾದಾಗ ಯೂರಿಕ್ ಆ್ಯಸಿಡ್ ರೂಪುಗೊಳ್ಳುತ್ತದೆ. ಇದು ಕಾಲಕಾಲಕ್ಕೆ ಮೂತ್ರದ ಮೂಲಕ ಹೊರಹಾಕಲ್ಪಡುತ್ತದೆ. ಕೆಲವೊಮ್ಮೆ ವಿಸರ್ಜನೆಯು ಸರಿಯಾಗಿ ನಡೆಯದಿದ್ದರೆ, ಯೂರಿಕ್ ಆ್ಯಸಿಡ್​ ರಕ್ತದಲ್ಲಿ ಉಳಿಯುತ್ತದೆ. ಕ್ರಮೇಣ ಇವುಗಳು ಸ್ಫಟಿಕಗಳಾಗುತ್ತವೆ ಹಾಗೂ ಕೀಲುಗಳ ಸುತ್ತಲಿನ ಕೀಲುಗಳು, ಅಂಗಾಂಶಗಳಲ್ಲಿ ಸಂಗ್ರಹವಾಗುತ್ತವೆ. ದೇಹದಲ್ಲಿ ಹೆಚ್ಚಿನ ಯೂರಿಕ್ ಆ್ಯಸಿಡ್​ ಸ್ಥಿತಿ ಗೌಟ್ ಎಂದು ಕರೆಯಲಾಗುತ್ತದೆ ಎಂದು ವೈದ್ಯರು ವಿವರಿಸುತ್ತಾರೆ.

ಹೆಚ್ಚಿನ ಯೂರಿಕ್ ಆ್ಯಸಿಡ್​ಗೆ ಕಾರಣಗಳೇನು?:

  • ಹೈಪೋಥೈರಾಯ್ಡಿಸಮ್
  • ಅಧಿಕ ತೂಕ
  • ಮೂತ್ರಪಿಂಡದ ತೊಂದರೆಗಳು
  • ದೈಹಿಕ ಚಟುವಟಿಕೆಯ ಕೊರತೆ
  • ಬೇಗನೇ ವಯಸ್ಸಾದವರಂತೆ ಕಾಣುವುದು
  • ಇಮ್ಯುನೊಸಪ್ರೆಸಿವ್ ಔಷಧಗಳ ಅತಿಯಾದ ಬಳಕೆ
  • ಪ್ಯೂರಿನ್ ಅಧಿಕವಾಗಿರುವ ಆಹಾರ ಸೇವಿಸುವುದು

''ಒಂದು ವೇಳೆ ತೂಕ ಹೆಚ್ಚಾದರೆ ಯೂರಿಕ್ ಆಸಿಡ್ ಸಮಸ್ಯೆಯೂ ಹೆಚ್ಚುತ್ತದೆ, ಇದನ್ನು ನಿಯಂತ್ರಿಸಬೇಕಾಗುತ್ತದೆ. ಎತ್ತರಕ್ಕೆ ತಕ್ಕಂತೆ ನಿಮ್ಮ ಬಾಡಿ ಮಾಸ್ ಇಂಡೆಕ್ಸ್ (BMI) 25ಕ್ಕಿಂತ ಕಡಿಮೆ ಇರುವಂತೆ ನೋಡಿಕೊಳ್ಳಿ. ಅಂತೆಯೇ, ಪ್ರೋಟೀನ್ ಹಾಗೂ ಪ್ಯೂರಿನ್- ಭರಿತ ವಸ್ತುಗಳ ಪ್ರಮಾಣವನ್ನು ಕಡಿಮೆ ಮಾಡಬೇಕು. ಇಂತಹ ಪದಾರ್ಥಗಳನ್ನು ತೆಗೆದುಕೊಳ್ಳುವಾಗ ಸಾಕಷ್ಟು ನೀರು ಹಾಗೂ ಹಣ್ಣಿನ ರಸವನ್ನು ಕುಡಿಯುವುದು ಕಡ್ಡಾಯವಾಗಿದೆ. ಈ ವಿಧಾನಗಳು ಸ್ವಾಭಾವಿಕವಾಗಿ ತೂಕವನ್ನು ನಿಯಂತ್ರಿಸುತ್ತವೆ, ಸಮಸ್ಯೆಯ ತೀವ್ರತೆಯನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ.

-ಲತಾಶಶಿ, ಪೌಷ್ಟಿಕತಜ್ಞೆ

ಯಾವೆಲ್ಲಾ ಆಹಾರಗಳನ್ನು ಸೇವಿಸಬೇಕು?:

  • ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳನ್ನು ಒದಗಿಸುವ ಹೆಚ್ಚಿನ ತರಕಾರಿಗಳು, ಹಣ್ಣುಗಳು ಹಾಗೂ ಧಾನ್ಯಗಳನ್ನು ಸೇವಿಸಬೇಕು.
  • ಹಾಲು, ಮೊಸರು, ಮಜ್ಜಿಗೆ ಹಾಗೂ ಕೊಬ್ಬಿನಾಂಶ ಇರುವ ಹಾಲಿನ ಉತ್ಪನ್ನಗಳನ್ನು ಸೇವಿಸಬೇಕು.
  • ಪಾಲಕ್​, ಹೂಕೋಸು, ಬಟಾಣಿ, ಅಣಬೆಗಳನ್ನು ತೆಗೆದುಕೊಳ್ಳಬಹುದು. ಇವುಗಳಲ್ಲಿ ಪ್ಯೂರಿನ್ ಪ್ರಮಾಣ ಹೆಚ್ಚಿದ್ದರೂ ಇವುಗಳಿಂದ ಉಂಟಾಗುವ ಅಪಾಯ ಕಡಿಮೆ ಇರುತ್ತದೆ.
  • ಹೆಚ್ಚು ನೀರು ಕುಡಿಯಿರಿ. ದಿನಕ್ಕೆ ಕನಿಷ್ಠ 2 ರಿಂದ 3 ಲೀಟರ್ ನೀರು ಕುಡಿಯಿರಿ. ಸಾಧ್ಯವಾದಷ್ಟು ನೀರು ಕುಡಿಯುವುದು, ವಿಶೇಷವಾಗಿ ಹಗಲಿನಲ್ಲಿ, ಯೂರಿಕ್ ಆ್ಯಸಿಡ್​ ಮತ್ತು ಇತರ ತ್ಯಾಜ್ಯ ಉತ್ಪನ್ನಗಳನ್ನು ದೇಹದಿಂದ ಹೊರಹಾಕುತ್ತದೆ.
  • ದೇಹದಲ್ಲಿ ನೀರಿನ ಮಟ್ಟವನ್ನು ಹೆಚ್ಚಿಸಲು ಹೆಚ್ಚು ಕಾಲೋಚಿತ ಹಣ್ಣುಗಳನ್ನು, ವಿಶೇಷವಾಗಿ ಬಾಳೆಹಣ್ಣುಗಳನ್ನು ಸೇವಿಸಿ.
  • ರಾತ್ರಿ ಮಲಗುವ ಮುನ್ನ ಅರಿಶಿನದ ಹಾಲನ್ನು ಕುಡಿಯಿರಿ.
  • ನೀವು ದಿನಕ್ಕೆ ಎರಡು ಮೊಟ್ಟೆಗಳನ್ನು ತಿನ್ನಬಹುದು.

ಈ ಆಹಾರಗಳಿಂದ ದೂರವಿರಿ!

  • ಬಿಳಿ ಬ್ರೆಡ್, ಕೇಕ್, ತಂಪು ಪಾನೀಯಗಳು, ಫ್ರಕ್ಟೋಸ್ ಹೊಂದಿರುವ ಕಾರ್ನ್ ಸಿರಪ್ ತೆಗೆದುಕೊಳ್ಳಬಾರದು.
  • ಕೆಚಪ್‌ಗಳು, ಮಿಠಾಯಿಗಳು, ಟೆಟ್ರಾ ಪ್ಯಾಕ್ ಜ್ಯೂಸ್‌ಗಳನ್ನು ದೂರವಿಡಬೇಕು.
  • ಚಾಕೊಲೇಟ್‌ಗಳು, ಚಿಪ್ಸ್, ಬಿಸ್ಕತ್ತುಗಳು ಮತ್ತು ಪ್ಯಾಕ್ ಮಾಡಿದ ಆಹಾರಗಳನ್ನು ತಪ್ಪಿಸಿ.
  • ಖಾಲಿ ಹೊಟ್ಟೆಯಲ್ಲಿ ಹೆಚ್ಚು ಹೊತ್ತು ಇರಬೇಡಿ. ಹಣ್ಣಿನ ರಸ ಮತ್ತು ತಿಂಡಿಗಳನ್ನು ಮಧ್ಯದಲ್ಲಿ ತೆಗೆದುಕೊಳ್ಳಬೇಕು.
  • ಈ ಆಹಾರ ಪದ್ಧತಿಗಳ ಜೊತೆಗೆ ದೈಹಿಕ ಚಟುವಟಿಕೆಯನ್ನೂ ಮಾಡಬೇಕು. ವಿಶೇಷವಾಗಿ ದೀರ್ಘಕಾಲ ಕುಳಿತುಕೊಳ್ಳಬೇಡಿ. ಪ್ರತಿ ಅರ್ಧಗಂಟೆಗೆ 3 ನಿಮಿಷಗಳ ಕಾಲ ಹಿಂದಕ್ಕೆ ಮತ್ತು ಮುಂದಕ್ಕೆ ನಡೆಯಬೇಕು. ವಾರಕ್ಕೆ ಎರಡು ಬಾರಿಯಾದರೂ ಹೆಚ್ಚು ದೈಹಿಕ ಶ್ರಮದ ವ್ಯಾಯಾಮ ಮತ್ತು ಯೋಗಾಸನಗಳನ್ನು ಮಾಡಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ನ್ನು ಸಂಪರ್ಕಿಸಬಹುದು: https://pmc.ncbi.nlm.nih.gov/articles/PMC9459802/

ಪ್ರಮುಖ ಸೂಚನೆ: ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.

ಇವುಗಳನ್ನು ಓದಿ:

ಅಸ್ತಮಾ ಕಾಯಿಲೆ ಜೊತೆ ಹೋರಾಡುತ್ತಿದ್ದೀರಾ? ಈ ಆಯುರ್ವೇದ ಔಷಧ ತುಂಬಾ ಒಳ್ಳೆಯದು- ವೈದ್ಯರ ಸಲಹೆ

ಚಳಿಗಾಲದಲ್ಲಿ ಅತಿಯಾದ ಚರ್ಮದ ಸಮಸ್ಯೆಯೇ? ತ್ವಚೆಯ ಆರೋಗ್ಯಕ್ಕೆ ಇದು ಸೂಪರ್ ಮನೆ ಮದ್ದು!

ನಿತ್ಯ ಬೆಳಗಿನ ಉಪಹಾರ ತಿನ್ನುತ್ತಿಲ್ಲವೇ? ಹಾಗಾದರೆ ನಿಮ್ಮ ಆರೋಗ್ಯಕ್ಕೆ ಇದೆ ದೊಡ್ಡ ಅಪಾಯ!: ಸಂಶೋಧನೆ

ಚಿಕ್ಕ ವಯಸ್ಸಿನಲ್ಲೇ ತಲೆಕೂದಲು ಬಿಳಿಯಾಯಿತೇ? ಚಿಂತೆ ಬಿಡಿ, ಇಷ್ಟು ಮಾಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.