ಹೈದರಾಬಾದ್: ಕೋಲ್ಡ್ ಡ್ರಿಕ್ಸ್, ಚಿಪ್ಸ್, ಕುಕ್ಕಿಗಳಂತಹ ಅಲ್ಟ್ರಾ ಪ್ರೊಸೆಸ್ (ಹೆಚ್ಚು ಸಂಸ್ಕರಿತ) ಆಹಾರಗಳು ಬಾಯಿ ರುಚಿ ಹೆಚ್ಚಿಸುವುದು ಸುಳ್ಳಲ್ಲ. ಆದರೆ, ಈ ರೀತಿಯ ಆಹಾರಗಳನ್ನು ಸೇವಿಸುವ ಮುನ್ನ ಇದೀಗ ಮತ್ತೊಮ್ಮೆ ಯೋಚಿಸಬೇಕಿದೆ. ಕಾರಣ, ಇವು ಯೋಚನಾ ಸಾಮರ್ಥ್ಯ ಕುಗ್ಗಿಸಿ, ಅರಿವಿನ ನಷ್ಟಕ್ಕೆ ಜೊತೆಗೆ ಪಾರ್ಶ್ವವಾಯುಗೆ ಕಾರಣವಾಗಬಹುದು ಎಂದು ಅಧ್ಯಯನವೊಂದು ಹೆಚ್ಚಿಸಿದೆ.
ಈ ಸಂಬಂಧ ಮೆಸ್ಸಾಚ್ಯೂಸೆಟ್ ಆಸ್ಪತ್ರೆ ಸಂಶೋಧಕರು ಅಧ್ಯಯನ ನಡೆಸಿದ್ದಾರೆ. ಈ ವೇಳೆ, ಹೆಚ್ಚು ಸಂಸ್ಕರಿತ ಆಹಾರ ಸೇವನೆಯು ಅರಿವಿನ ಕೊರತೆ ಸಮಸ್ಯೆಯೊಂದಿಗೆ ಸಂಬಂಧ ಹೊಂದಿರುವುದು ಕಂಡು ಬಂದಿದೆ. ಅಲ್ಟ್ರಾ ಪ್ರೊಸೆಸ್ಡ್ ಆಹಾರಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ಸಕ್ಕರೆ, ಕೊಬ್ಬು ಮತ್ತು ಉಪ್ಪಿನ ಅಂಶವನ್ನು ಹೊಂದಿದೆ. ಜೊತೆಗೆ ಇಂತಹ ಆಹಾರ ದೀರ್ಘಕಾಲ ಉಳಿಯುವಂತೆ ಮಾಡಲು ಅಡಿಕ್ಟಿವ್ಸ್ ಮತ್ತು ಸಂರಕ್ಷಕ ಪದಾರ್ಥ ಹಾಗೂ ಫ್ಲೆವರ್ಗಳನ್ನು ಸೇರಿಸಲಾಗಿರುತ್ತದೆ.
ಈಗಾಗಲೇ ಅಲ್ಟ್ರಾ ಪ್ರೊಸೆಸ್ಡ್ ಆಹಾರಗಳು ಹೃದಯ ಸಮಸ್ಯೆ, ಸ್ಥೂಲಕಾಯ ಮತ್ತು ಟೈಪ್ 2 ಮಧುಮೇಹದೊಂದಿಗೆ ಸಂಬಂಧ ಹೊಂದಿದೆ ಎಂದು ಸಂಶೋಧನೆಗಳು ತೋರಿಸಿದೆ. ಇದೀಗ ಈ ಆಹಾರಗಳ ಮಿದುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುವ ಕುರಿತು ಅಧ್ಯಯನ ನಡೆಸಲಾಗಿದೆ. ಮಿದುಳಿನ ಆರೋಗ್ಯ ಕಾಪಾಡುವಲ್ಲಿ ಆರೋಗ್ಯಯುತ ಆಹಾರಗಳು ಮುಖ್ಯವಾಗಿದೆ. ಆದರೂ ಮೆದುಳಿಗೆ ಅಗತ್ಯ ಆಹಾರಗಳ ಆಯ್ಕೆ ಇಂದಿಗೂ ಅಸ್ಪಷ್ಟವಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಈ ಅಧ್ಯಯನಕ್ಕಾಗಿ 45 ವರ್ಷ ಮೇಲ್ಪಟ್ಟ 30 ಸಾವಿರ ಜನರನ್ನು ಭಾಗಿಯಾಗಿಸಲಾಗಿದೆ. ಪ್ರಶ್ನಾವಳಿಗಳ ಮೂಲಕ ಅಧ್ಯಯನ ನಡೆಸಿದ್ದು, ವ್ಯಕ್ತಿಯ ಅಲ್ಟ್ರಾ ಪ್ರೊಸೆಸ್ಡ್ ಆಹಾರ ಅಭ್ಯಾಸಗಳನ್ನು ಆರೋಗ್ಯಯುತ ಆಹಾರದೊಂದಿಗೆ ಹೋಲಿಕೆ ಮಾಡಲಾಗಿದೆ. 11 ವರ್ಷಗಳ ಕಾಲ ಭಾಗಿದಾರರನ್ನು ಟ್ರ್ಯಾಕ್ ಮಾಡಲಾಗಿದ್ದು, 14 ಸಾವಿರ ಮಂದಿಯಲ್ಲಿ ಅರಿವಿನ ಕೊರತೆ ಕಂಡು ಬಂದರೆ, 20 ಸಾವಿರಕ್ಕೂ ಹೆಚ್ಚು ಜನ ಪಾರ್ಶ್ವವಾಯುಗೆ ತುತ್ತಾಗಿದ್ದಾರೆ.
ಅಧಿಕ ಸಂಸ್ಕರಿತ ಆಹಾರಗಳ ಸೇವನೆ ಪಾರ್ಶ್ವವಾಯು ಮತ್ತು ಅರಿವಿನ ಕುಂಠಿತಕ್ಕೆ ಒಳಗಾಗುವ ಅಪಾಯದೊಂದಿಗೆ ಸಂಬಂಧ ಹೊಂದಿದೆ ಎಂದು ಅಧ್ಯಯನದಲ್ಲಿ ಕಂಡು ಬಂದಿದೆ ಎಂದು ಲೇಖಕರು ತಿಳಿಸಿದ್ದಾರೆ. ಈ ಅಧ್ಯಯನವನ್ನು ಜರ್ನಲ್ ನ್ಯೂಸ್ನಲ್ಲಿ ಪ್ರಕಟಿಸಲಾಗಿದೆ.
ಇದರ ಜತೆಗೆ ಅಸಂಸ್ಕರಿತ ಅಥವಾ ಕನಿಷ್ಟ ಮಟ್ಟದ ಸಂಸ್ಕರಿತ ಆಹಾರಗಳು ಮಿದುಳಿನ ಸಮಸ್ಯೆಯನ್ನು ಶೇ 12ರಷ್ಟು ಮತ್ತು ಪಾರ್ಶ್ವವಾಯು ಅಪಾಯವನ್ನು ಶೇ 9ರಷ್ಟು ಕಡಿಮೆ ಮಾಡುತ್ತದೆ. ಹೆಚ್ಚು ಸಂಸ್ಕರಿತ ಆಹಾರಗಳಲ್ಲಿ ಸಕ್ಕರೆ, ಉಪ್ಪು, ಕೊಬ್ಬು ಹೆಚ್ಚಿನ ಪ್ರಮಾಣದಲ್ಲಿದ್ದು, ಇದರಲ್ಲಿ ಪ್ರೊಟೀನ್ ಮತ್ತು ಫೈಬರ್ ಹೆಚ್ಚಿದೆ. ಇದು ಹಲವು ರೀತಿಯಲ್ಲಿ ಮಿದುಳಿನ ಮೇಲೆ ಪರಿಣಾಮ ಹೊಂದಿದೆ ಎಂದು ಅಧ್ಯಯನ ತಿಳಿಸಿದೆ.
ಇದನ್ನೂ ಓದಿ: ಪಿಜ್ಜಾ, ಬರ್ಗರ್, ಡಯಟ್ ಕೋಕ್ ಪ್ರಿಯರಿಗೆ ಖಿನ್ನತೆಯ ಅಪಾಯ ಹೆಚ್ಚು!