Tips to Make Soft Jowar Roti: ಜೋಳದ ರೊಟ್ಟಿಗೆ ಎಷ್ಟು ಬೇಡಿಕೆ ಇದೆಯೋ.!? ಸಂಜೆಯ ವೇಳೆ ಗಲ್ಲಿಗಳಲ್ಲಿ ನಾಯಿ ಕೊಡೆಗಳಂತೆ ಕಂಡು ಬರುವ ಬಂಡಿಗಳೇ ಸಾಕ್ಷಿ. ರೊಟ್ಟಿ ತಿಂದವನ ರಟ್ಟೆಗಳು ಗಟ್ಟಿ ಎಂಬ ಮಾತಿನಂತೆ ಇದು ಭಾರಿ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಅನೇಕರು ಅವುಗಳನ್ನು ಖರೀದಿಸುತ್ತಿದ್ದಾರೆ. ಆದರೆ, ರೊಟ್ಟಿ ಉತ್ತರ ಕರ್ನಾಟಕದಲ್ಲಿ ನಿತ್ಯದ ಆಹಾರ. ರೊಟ್ಟಿ ಇಲ್ಲದೇ ಇಲ್ಲಿ ಊಟ ಮುಕ್ತಾಯಗೊಳ್ಳಲ್ಲ. ಆದಾಗ್ಯೂ, ಮನೆಯಲ್ಲಿ ಇದನ್ನು ಹೇಗೆ ಮಾಡಬೇಕು ಎಂದು ಅನೇಕರಿಗೆ ತಿಳಿದಿಲ್ಲ. ಅಂತಹವರಿಗಾಗಿಯೇ ನಾವು ಇಲ್ಲಿ ಕೆಲ ಟಿಪ್ಸ್ಗಳನ್ನು ನೀಡುತ್ತಿದ್ದೇವೆ. ಜೋಳದ ರೊಟ್ಟಿಯನ್ನು ಮೃದುವಾಗಿ ಮಾಡುವುದು ಹೇಗೆ ಎಂದು ನೋಡೋಣ.
ರೊಟ್ಟಿ ಮಾಡಲು ಬೇಕಾಗುವ ಸಾಮಗ್ರಿಗಳು:
- ಜೋಳದ ಹಿಟ್ಟು - 1 ಕಪ್
- ಕುದಿಯುವ ನೀರು - ಅರ್ಧ ಕಪ್
- ಉಪ್ಪು - ರುಚಿಗೆ
How to Make Soft Jowar Roti ತಯಾರಿಸುವ ವಿಧಾನ:
- ಮೊದಲು, ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಜೋಳದ ಹಿಟ್ಟು, ಉಪ್ಪು ಮತ್ತು ಬಿಸಿ ನೀರನ್ನು ಸುರಿಯಿರಿ.
- ನಂತರ ಹಿಟ್ಟನ್ನು ಪೇಸ್ಟ್ ಆಗಿ ಮಿಶ್ರಣ ಮಾಡಿ. ಹಿಟ್ಟು ಜಿಗುಟಾಗಿದ್ದರೆ ಇನ್ನೂ ಸ್ವಲ್ಪ ಹಿಟ್ಟು ಸೇರಿಸಿ. ಇಲ್ಲದಿದ್ದರೆ, ಹಿಟ್ಟು ಗಟ್ಟಿಯಾಗಿದ್ದರೆ, ನಿಮ್ಮ ಕೈಗಳನ್ನು ಸ್ವಲ್ಪ ಒದ್ದೆ ಮಾಡಿ ಮತ್ತಷ್ಟು ಹಿಟ್ಟನ್ನು ಮಿಶ್ರಣ ಮಾಡಿ.
- ಈಗ ಕಲಸಿದ ಹಿಟ್ಟನ್ನು ಚಪಾತಿ ಪ್ಲೇಟ್ ಅಥವಾ ಚಪಾತಿ ಕಲ್ಲಿನ ಮೇಲೆ ಹಾಕಿ ಚೆನ್ನಾಗಿ ನಾದಿಕೊಳ್ಳಿ.
- ಸ್ವಲ್ಪ ಒಣ ಹಿಟ್ಟನ್ನು ಮಧ್ಯದಲ್ಲಿ ಹಾಕಿ ಚೆನ್ನಾಗಿ ಒತ್ತಿರಿ. ಹೀಗೆ ಮಾಡುವುದರಿಂದ ಹಿಟ್ಟು ಮೃದುವಾಗುತ್ತದೆ. ಈ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಮರೆಯಬೇಡಿ.
- ಈಗ ಹಿಟ್ಟನ್ನು ಸಮಾನ ಭಾಗಗಳಾಗಿ ವಿಂಗಡಿಸಿ. ಅದರಲ್ಲಿ ಒಂದನ್ನು ತೆಗೆದುಕೊಂಡು ಉಳಿದಿದ್ದನ್ನು ಒಂದು ಪಾತ್ರೆಯಲ್ಲಿ ಹಾಕಿ ಮುಚ್ಚಿ ಮತ್ತು ಪಕ್ಕಕ್ಕೆ ಇರಿಸಿ.
- ಈಗ ರೊಟ್ಟಿ ಹಿಟ್ಟನ್ನು ಚಪಾತಿ ಮಾಡಿದಂತೆ ಲತ್ತೂಡಿಯಿಂದ ಉದ್ದಿ. ಉತ್ತರ ಕರ್ನಾಟಕದಲ್ಲಿ ಇದನ್ನು ಕೈಯಿಂದ ತಟ್ಟುತ್ತಾರೆ.
- ಈಗ ಒಲೆಯ ಮೇಲೆ ತವಾ ಇರಿಸಿ ಮತ್ತು ಜ್ವಾಲೆಯನ್ನು ಮಧ್ಯಮಕ್ಕೆ ಹೊಂದಿಸಿ ಬೇಯಿಸಿ. ಈಗ ನಿಮಗೆ ಬೇಕಾದ ಮೃದುವಾದ ಜೋಳದ ರೊಟ್ಟಿ ರೆಡಿ.
ರೊಟ್ಟಿಯಿಂದಾಗುವ ಆರೋಗ್ಯ ಪ್ರಯೋಜನಗಳೇನು?: ಗ್ಲುಟನ್ ಕೊರತೆ ಮತ್ತು ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳ ಉಪಸ್ಥಿತಿಯಿಂದಾಗಿ ಮಧುಮೇಹಿಗಳಿಗೆ ಇದು ಉತ್ತಮ ಆಹಾರವಾಗಿದೆ. 100 ಗ್ರಾಂ ಜೋಳದಲ್ಲಿ 10.4 ಗ್ರಾಂ ಪ್ರೋಟೀನ್ ಇರುತ್ತದೆ. ಇದು ನಮ್ಮ ದೇಹಕ್ಕೆ ನಿತ್ಯ ಅಗತ್ಯವಿರುವ ಶೇಕಡ 40 ರಷ್ಟು ಫೈಬರ್ ಅನ್ನು ಒದಗಿಸುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ (LDL) ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಅದೂ ಅಲ್ಲದೇ.. ಗ್ಲುಟನ್ ಅಲರ್ಜಿ ಇರುವವರಿಗೆ ಹಾಗೂ ಕಿಬ್ಬೊಟ್ಟೆಯ ಕುಹರದ ಕಾಯಿಲೆ ಇರುವವರಿಗೆ ಇದು ಒಳ್ಳೆಯದು. ಇದರಲ್ಲಿ ಕಬ್ಬಿಣಾಂಶ, ಕ್ಯಾಲ್ಸಿಯಂ, ವಿಟಮಿನ್ ಬಿ, ಖನಿಜಾಂಶಗಳು ಮತ್ತು ಆ್ಯಂಟಿಆಕ್ಸಿಡೆಂಟ್ ಗಳಿವೆ. ಇದು ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ. ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ.