ಮನೆಯಲ್ಲಿ ಸಾಕಷ್ಟು ಜಿರಳೆಗಳಿವೆಯೇ?. ಅವುಗಳನ್ನು ಓಡಿಸಲು ಎಷ್ಟು ವಿವಿಧ ಸ್ಪ್ರೇಗಳನ್ನು ಬಳಸಿದರೂ ಉಪಯೋಗವಾಗಿಲ್ಲ?. ಆದರೆ, ಕೆಲವು ಸರಳ ಮಾರ್ಗಗಳ ಮೂಲಕ ಜಿರಳೆಗಳನ್ನು ಮನೆಯಿಂದ ಓಡಿಸಬಹುದಾಗಿದೆ.
ನೈರ್ಮಲ್ಯವಿಲ್ಲದ ಅಡುಗೆ ಮನೆಯು ಜಿರಳೆಗಳಿಗೆ ಕಾರಣವಾಗಬಹುದು. ಬೆಳಗ್ಗೆ ಎಲ್ಲೋ ಅಡಗಿ ಕುಳಿತು ರಾತ್ರಿ ಇಡೀ ಅಡುಗೆ ಮನೆಯನ್ನು ಜಿರಳೆಗಳು ಆಕ್ರಮಿಸಿಕೊಳ್ಳುತ್ತವೆ. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎನ್ನುತ್ತಾರೆ ತಜ್ಞರು.
ಕೆಲವರು ಮಾರುಕಟ್ಟೆಯಲ್ಲಿ ಸಿಗುವ ವಿವಿಧ ಬಗೆಯ ಸ್ಪ್ರೇಗಳನ್ನು ತಂದು ಸ್ಪ್ರೇ ಮಾಡಿ ಜಿರಳೆಗಳನ್ನು ಹೋಗಲಾಡಿಸುತ್ತಾರೆ. ಇದರಲ್ಲಿರುವ ರಾಸಾಯನಿಕಗಳಿಂದ ಆರೋಗ್ಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹೀಗಾಗಿ ಜಿರಳೆ ಹಾವಳಿ ಕಡಿಮೆ ಮಾಡಲು ಸಲಹೆಗಳು ಇಲ್ಲಿವೆ.
- ಸಾಮಾನ್ಯವಾಗಿ ಬಳಕೆಯಾಗದ, ಒದ್ದೆಯಾದ ಕಪಾಟುಗಳು ಮತ್ತು ಸಿಂಕ್‌ಗಳ ಅಡಿ ಜಿರಳೆಗಳು ಇರುತ್ತವೆ. ಆದ್ದರಿಂದ ಈ ಸ್ಥಳಗಳನ್ನು ಸಾಧ್ಯವಾದಟ್ಟು ಸ್ವಚ್ಛವಾಗಿಡಿ.
- ಜಿರಳೆಗಳು ಇರುವಲ್ಲಿ ಒಣ ಬಿರಿಯಾನಿ ಎಲೆಗಳನ್ನು ಸಿಂಪಡಿಸಿ. ಈ ಬಿರಿಯಾನಿ ಎಲೆಯ ಪುಡಿಯನ್ನು ಮೂಲೆಗಳಲ್ಲಿ ಮತ್ತು ಹೆಚ್ಚು ಶುಚಿಗೊಳಿಸದ ಜಾಗಗಳಲ್ಲಿ ಚಿಮುಕಿಸುವುದರಿಂದ ಪರಿಹಾರ ಸಿಗುತ್ತದೆ ಎಂದು ತಜ್ಞರು ಹೇಳುತ್ತಾರೆ.
- ಜಿರಳೆಗಳು ಇರುವ ಕಡೆ ಪುದೀನಾ ಎಣ್ಣೆ, ಲೆಮನ್ ಗ್ರಾಸ್ ಎಣ್ಣೆ ಎರಚಿದರೆ, ಒಂದೂ ಕೂಡ ಇರುವುದಿಲ್ಲ.
- ಪ್ರತಿ ಅಡುಗೆಮನೆಯಲ್ಲಿ ಅಡಿಗೆ ಸೋಡಾ ಮತ್ತು ಸಕ್ಕರೆ ಇರುತ್ತದೆ. ಆದರೆ, ಜಿರಳೆಗಳು ಇರುವಲ್ಲಿ ಅಡುಗೆ ಸೋಡಾ, ಸಕ್ಕರೆ ಸಿಂಪಡಿಸಿದರೆ ತಿಂದು ಸಾಯುತ್ತವೆ ಎನ್ನುತ್ತಾರೆ ತಜ್ಞರು.
- ನಮ್ಮಲ್ಲಿ ಹೆಚ್ಚಿನವರು ಅನ್ನದಲ್ಲಿ ಕೀಟಗಳು ಬರದಂತೆ ಬೋರಿಕ್ ಪೌಡರ್ ಅನ್ನು ಬಳಸುತ್ತೇವೆ ಮತ್ತು ಕೇರಂ ಆಡಲು ಸಹ ಬಳಸುತ್ತೇವೆ. ಆದರೆ, ಜಿರಳೆಗಳು ಓಡಾಡುವ ಕಡೆ ಈ ಪುಡಿ ಎರಚಿದರೆ ಓಡಿ ಹೋಗುತ್ತವೆ.
- ಸ್ಪ್ರೇ ಬಾಟಲಿಯಲ್ಲಿ ಸಮಾನ ಭಾಗಗಳಲ್ಲಿ ನೀರು ಮತ್ತು ವಿನೆಗರ್ ಮಿಶ್ರಣ ಮಾಡಿ. ನಂತರ ಜಿರಳೆಗಳು ಇರುವ ಸ್ಥಳಗಳಲ್ಲಿ ಈ ಸ್ಪ್ರೇ ಸಿಂಪಡಿಸಿ. ಹೀಗೆ ಮಾಡಿದರೆ ಒಂದು ಜಿರಳೆಯೂ ಉಳಿಯುವುದಿಲ್ಲ ಎನ್ನುತ್ತಾರೆ ತಜ್ಞರು.
- ಜಿರಳೆಗಳು ಓಡಾಡುವ ಜಾಗದಲ್ಲಿ ಲವಂಗವನ್ನು ಇಡಿ. ಜಿರಳೆಗಳು ಅವುಗಳ ವಾಸನೆಯನ್ನು ಇಷ್ಟಪಡುವುದಿಲ್ಲ. ಆದ್ದರಿಂದ ಅವುಗಳು ಓಡಿಹೋಗುತ್ತವೆ.
- ಬೇವುಗಳನ್ನು ಪುಡಿಮಾಡಿ ಮತ್ತು ನೀರನ್ನು ಸ್ಪೇ ಬಾಟಲಿಗೆ ಸುರಿಯಿರಿ. ಈ ಸ್ಪ್ರೇ ಜಿರಳೆಗಳನ್ನು ಅವು ಇರುವಲ್ಲಿಯೇ ಕೊಲ್ಲುತ್ತದೆ.
- ಜಿರಳೆಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ಪ್ರದೇಶಗಳಲ್ಲಿ ಹೇರ್ ಸ್ಪ್ರೇ ಸಿಂಪಡಿಸಿ. ಹೀಗೆ ಮಾಡುವುದರಿಂದ ಅವುಗಳು ಬೇಗನೆ ಸಾಯುತ್ತವೆ.
- ಕರಿಮೆಣಸು, ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಬೆರೆಸಿ ಪೇಸ್ಟ್ ತಯಾರಿಸಿ. ಈ ಮಿಶ್ರಣವನ್ನು ಜಿರಳೆಗಳಿಗೆ ಹಚ್ಚುವುದರಿಂದ ಜಿರಳೆಗಳು ಹೋಗುತ್ತವೆ.
- ಅಲ್ಲದೇ, ಜಿರಳೆಗಳು ವಾಸಿಸುವ ಮೂಲೆಗಳಲ್ಲಿ ಸೀಮೆ ಎಣ್ಣೆಯನ್ನು ಸಿಂಪಡಿಸುವುದರಿಂದ ಅವುಗಳನ್ನು ಓಡಿಹೋಗುತ್ತವೆ ಎಂದು ತಜ್ಞರು ಹೇಳುತ್ತಾರೆ.
ಇದನ್ನೂ ಓದಿ: ಬಾತ್ ರೂಂನಲ್ಲಿ ಎಷ್ಟು ಬಾರಿ ತೊಳೆದರೂ ಕಲೆಗಳು ಹೋಗುತ್ತಿಲ್ಲವೇ? ಈ ಸಲಹೆಗಳನ್ನು ಅನುಸರಿಸಿ!