ನವದೆಹಲಿ: ಥೈರಾಯ್ಡ್ ಅಸಮಾತೋಲನವೂ ಮಹಿಳೆಯರಲ್ಲಿ ಋತುಚಕ್ರ ಮತ್ತು ಸಂತಾನೋತ್ಪತ್ತಿ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. ಜನವರಿಯನ್ನು ಥೈರಾಯ್ಡ್ ಜಾಗೃತಿ ಮಾಸವಾಗಿ ಆಚರಿಸಲಾಗುತ್ತಿದ್ದು, ಈ ಕುರಿತು ಅರಿವು ಮೂಡಿಸುವ ಪ್ರಯತ್ನವನ್ನು ನಡೆಸಲಾಗುತ್ತಿದೆ. ಥೈರಾಯ್ದ್ ಗ್ರಂಥಿಯು ಕುತ್ತಿಗೆಯಲ್ಲಿ ಇರುತ್ತದೆ. ಇದು ಟ್ರೈಯೋಡೋಥೈರೋನೈನ್ (ಟಿ3) ಮತ್ತು ಥೈರಾಕ್ಸಿನ್ (ಟಿ4) ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಇದು ದೇಹದ ಚಯಾಪಚಯ, ಶಕ್ತಿ ಉತ್ಪಾದನೆ ಮತ್ತು ಒಟ್ಟಾರೆ ಬೆಳವಣಿಗೆ ಮತ್ತು ಅಭಿವೃದ್ಧಿ ನಿಯಂತ್ರಣದಲ್ಲಿ ನಿರ್ಣಾಯಕ ಪಾತ್ರ ಹೊಂದಿದೆ.
ಥೈರಾಯ್ಡ್ ರೋಗವೂ ಥೈರಾಯ್ಡ್ ಗ್ರಂಥಿಯ ಕಾರ್ಯಚಟುವಟಿಕೆಗೆ ಪರಿಣಾಮ ಬೀರುತ್ತದೆ. ಇದರಲ್ಲಿ ಹೈಪೋಥೈರಾಯ್ಡಿಸಮ್ ಮತ್ತು ಹೈಪರ್ ಥೈರಾಯ್ಡಿಸಮ್ ಎಂಬ ಎರಡು ಲಕ್ಷಣಗಳನ್ನು ಕಾಣಬಹುದಾಗಿದೆ. ಥೈರಾಯ್ಡ್ ಅಸ್ವಸ್ಥತೆಯಲ್ಲಿ ಒಂದಾಗಿರುವ ಹೈಪೋಥೈರಾಯ್ಡಿಸಮ್ ಅಂದಾಜು 30.62ರಷ್ಟಿದ್ದಾಗ ಅನಿಮಿಯತ ಋತುಚಕ್ರ ಉಂಟಾಗುತ್ತದೆ. ಥೈರಾಯ್ಡ್ ಗ್ರಂಥಿಯು ಸಾಕಷ್ಟು ಥೈರಾಯ್ಡ್ ಹಾರ್ಮೋನುಗಳನ್ನು ಉತ್ಪಾದಿಸದಿದ್ದಾಗ ಮತ್ತು 7.5 ರಷ್ಟು ಹೈಪರ್ ಥೈರಾಯ್ಡಿಸಮ್ನಲ್ಲಿ ಈ ಸಮಸ್ಯೆ ಕಂಡು ಬರುತ್ತದೆ.
ಥೈರಾಯ್ಡ್ ರೋಗವೂ ಹಾರ್ಮೋನ್ ಮಟ್ಟದ ಮೇಲೆ ಹೆಚ್ಚಿನ ಪರಿಣಾಮವನ್ನು ಹೊಂದಿದೆ. ಇದು ಋತುಚಕ್ರದ ಸಮಸ್ಯೆಗಳೊಂದಿಗೆ ಸಂಬಂಧ ಹೊಂದಿದೆ. ಹೈಪೊಥೈರಯ್ಢಿಸಮ್ನಲ್ಲಿ ಅಧಿಕ ರಕ್ತಸ್ರಾವವಾದರೆ, ಹೈಪರ್ ಥೈರಾಯ್ಡಿಸಮ್ನಲ್ಲಿ ಹಗರು ಅಥವಾ ಪದೇ ಪದೆ ಮುಟ್ಟಿಗೆ ಒಳಗಾಗಬಹುದು ಎಂದು ಮುಂಬೈನ ಜ್ಯಾನೊವಾ ಶಲ್ಬೆ ಆಸ್ಪತ್ರೆಯ ಸ್ತ್ರೀರೋಗ ತಜ್ಞರಾಗಿರುವ ಡಾ ಶ್ವೇತಾ ಲಲ್ಗುಡಿ ತಿಳಿಸಿದ್ದಾರೆ.
ಅಷ್ಟೇ ಅಲ್ಲದೇ ಈ ಥೈರಾಯ್ಡ್ ಅಮೆನೋರಿಯಾಗೂ ಕಾರಣವಾಗಬಹುದು. ಈ ವೇಳೆ, ಸಂಪೂರ್ಣ ಋತುಚಕ್ರದ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ. ಜೊತೆಗೆ ಇದು ಮಹಿಳೆಯರಲ್ಲಿ ಸಂತಾನೋತ್ಪತ್ತಿ ಸಮಸ್ಯೆಗೂ ಕಾರಣವಾಗಬಹುದು. ಇದು ಅಂಡಾಣು ಬಿಡುಗಡೆ ಮಾಡು ಕ್ರಮದ ಮೇಲೆ ಭಾರೀ ಪರಿಣಾಮ ಬೀರಿ, ಗರ್ಭಧಾರಣೆಗೆ ತೊಡಕನ್ನು ಉಂಟು ಮಾಡುತ್ತದೆ.
ಥೈರಾಯ್ಡ್ ಅಸಮತೋಲವೂ ಪಿಸಿಒಎಸ್ನೊಂದಿಗೂ ನೇರ ಸಂಬಂಧ ಹೊಂದಿದೆ. ಇದು ಋತುಚಕ್ರವನ್ನು ಮತ್ತಷ್ಟು ಕೆಟ್ಟದಾಗಿಸುತ್ತದೆ. ಥೈರಾಯ್ಡ್ ಸಮಸ್ಯೆಗಳು ಗರ್ಭಾವಸ್ಥೆಯ ಸಂದರ್ಭದಲ್ಲಿ ಮತ್ತಷ್ಟು ಹೆಚ್ಚಬಹುದು. ಇದರಿಂದ ಅವಧಿಪೂರ್ವ ಜನನ ಮತ್ತು ಮಗುವಿನ ಬೆಳವಣಿಗೆಯಲ್ಲಿ ತೊಡಗು ಉಂಟಾಗುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.
ಥೈರಾಯ್ಡ್ ಸಮಸ್ಯೆ ಪತ್ತೆಗೆ ಮಹಿಳೆಯರು ಟಿ3, ಟಿ3ಆರ್ಯು ಮತ್ತು ಟಿಎಸ್ಎಚ್ ಪರೀಕ್ಷೆಗೆ ಒಳಗಾಗಬೇಕು. ಇದರಿಂದ ಸೂಕ್ತ ಚಿಕಿತ್ಸೆ, ವ್ಯಾಯಾಮ ಮತ್ತು ಆಹಾರ ಪದ್ದತಿ ಬದಲಾವಣೆ ಮಾಡುವ ಮೂಲಕ ಆರೋಗ್ಯ ನಿರ್ವಹಣೆ ಮಾಡಬಹುದು. (ಐಎಎನ್ಎಸ್)
ಇದನ್ನೂ ಓದಿ: ಸಂತಾನ ಸಮಸ್ಯೆಯೇ? ಈ ರಸವನ್ನೊಮ್ಮೆ ಸೇವಿಸಿ!