ETV Bharat / health

ಹದಿಹರೆಯದ ಶೇ 18ರಷ್ಟು ಮಂದಿ ಕೆಫೀನ್​​ ಸೇವಿಸಲು ಕಾರಣ ಬಿಚ್ಚಿಟ್ಟ ಅಧ್ಯಯನ - teens drink caffeine to stay awake - TEENS DRINK CAFFEINE TO STAY AWAKE

ಹದಿವಯಸ್ಸಿನ ಶೇ 18ರಷ್ಟು ಮಂದಿ ಕೆಫೀನ್​​ ಸೇವನೆಗೆ ಮುಂದಾಗಲು ಕಾರಣ ಎಚ್ಚರವಾಗಿರುವ ಉದ್ದೇಶದಿಂದ ಎಂಬುದು ಇದೀಗ ಗೊತ್ತಾಗಿದೆ.

teen drinks caffeine most or all the day of the week for stay awake
teen drinks caffeine most or all the day of the week for stay awake (File Photo)
author img

By IANS

Published : May 20, 2024, 4:23 PM IST

ನವದೆಹಲಿ: ಕೆಫೀನ್​ ಹೆಚ್ಚಾಗಿ ಲಭ್ಯವಾಗುವ ಉತ್ಪನ್ನಗಳ ಸೇವನೆ ಹದಿ ವಯಸ್ಸಿನವರಲ್ಲಿ ಹೆಚ್ಚುತ್ತಿದ್ದು, ನಮ್ಮ ಮಕ್ಕಳು ವಾರದ ಎಲ್ಲ ದಿನ ಕಾಫಿ ಸೇವನೆಗೆ ಮುಂದಾಗುತ್ತಿದ್ದಾರೆ ಎಂದು ಪೋಷಕರು ತಿಳಿಸಿದ್ದಾರೆ. ಅಧ್ಯಯನದ ಪ್ರಕಾರ, ಹದಿವಯಸ್ಸಿನ ಶೇ 18ರಷ್ಟು ಮಂದಿ ಕೆಫೀನ್​ ಸೇವನೆಗೆ ಮುಂದಾಗಲು ಕಾರಣ ಎಚ್ಚರವಾಗಿರುವ ಉದ್ದೇಶದಿಂದ.

ಅಮೆರಿಕ ಮೂಲದ ಮಿಚಿಗನ್​ ಯುನಿವರ್ಸಿಟಿ ನಡೆಸಿದ ಅಧ್ಯಯನದಲ್ಲಿ, ಶೇ 25ರಷ್ಟು ಪೋಷಕರು ತಮ್ಮ ಮಕ್ಕಳು ಪ್ರತಿನಿತ್ಯ ಕೆಫೀನ್​​ ಸೇವನೆಗೆ ಮುಂದಾಗುತ್ತಿರುವುದಾಗಿ ತಿಳಿಸಿದ್ದಾರೆ. ಇದೇ ವೇಳೆ, ಹದಿಹರೆಯದವರಿಗೆ ಕೆಫೀನ್ ಸೇವನೆಯನ್ನು ಎಷ್ಟು ಮಿತಿಗೊಳಿಸಬೇಕೆಂದು ಪೋಷಕರು ಯಾವಾಗಲೂ ತಿಳಿದಿರುವುದಿಲ್ಲ ಎಂದು ಅಧ್ಯಯನದ ಸಹ ನಿರ್ದೇಶಕರಾಗಿರುವ ಸೂಸನ್​ ಬೂಲ್ಫೋರ್ಡ್​​ ತಿಳಿಸಿದ್ದಾರೆ.

ಈ ಸಂಬಂಧ ಫೆಬ್ರವರಿಯಲ್ಲಿ 1095 ಹದಿವಯಸ್ಸಿನ ಮಕ್ಕಳನ್ನು ಹೊಂದಿರುವ ಪೋಷಕರನ್ನು ಅಧ್ಯಯನದ ಭಾಗಿಯಾಗಿಸಲಾಗಿದೆ. ತಮ್ಮ ಮಕ್ಕಳು ಈ ಕೆಫೀನ್​ ಅನ್ನು ಹಲವು ಉತ್ಪನ್ನಗಳಿಂದ ಸೇವಿಸುತ್ತಾರೆ. ಅದರಲ್ಲಿ ಶೇ 73ರಷ್ಟು ಸೋಡಾದಿಂದ, ಶೇ 32ರಷ್ಟು ಟೀ, ಶೇ 31ರಷ್ಟು ಕಾಫಿ, ಶೇ 22ರಷ್ಟು ಎನರ್ಜಿ ಡ್ರಿಂಕ್​ ಸೇವನೆಯಿಂದ ಪಡೆಯುವುದಾಗಿ ತಿಳಿಸಿದ್ದಾರೆ. ಇನ್ನು ಈ ಕೆಫೀನ್​ ಸೇವನೆಯನ್ನು ಶೇ 81ರಷ್ಟು ಮನೆಯಲ್ಲಿ ಮಾಡಿದರೆ, ಶೇ 43ರಷ್ಟನ್ನು ಹೊರಗೆ ಹೋದಾಗ, ಶೇ 3ರಷ್ಟು ಮಂದಿ ಸ್ನೇಹಿತರ ಜೊತೆಗೆ ಮತ್ತು ಶೇ 25ರಷ್ಟು ಮಂದಿ ಶಾಲೆಗಳಲ್ಲಿ ಮಾಡುವುದಾಗಿ ತಿಳಿಸಿದ್ದಾರೆ.

ಕೆಫೀನ್​ ಎಂಬುದು ಮಿದುಳು ಮತ್ತು ನರ ವ್ಯವಸ್ಥೆ ಉತ್ತೇಜಿಸುತ್ತದೆ. ಆದರೆ, ಇದರ ಅತಿ ಹೆಚ್ಚಿನ ಸೇವನೆ ಯುವ ಜನತೆಯಲ್ಲಿ ವಿವಿಧ ರೀತಿಯ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಹದಿ ಹರೆಯದ ವಯಸ್ಸಿನ ಮಕ್ಕಳು ದಿನಕ್ಕೆ 100 ಮಿಲಿ ಗ್ರಾಂನಷ್ಟು ಕೆಫೀನ್​ ಸೇವನೆಗೆ ಮಿತಿಯನ್ನು ಹೊಂದಿರಬೇಕು ಎಂಬ ತಜ್ಞರ ಸಲಹೆಯನ್ನು ಅಮೆರಿಕನ್​ ಅಕಾಡೆಮಿ ಆಫ್​ ಪಿಡಿಯಾಟ್ರಿಕ್ಸ್​​ ತಳ್ಳಿ ಹಾಕುತ್ತದೆ.

ಇನ್ನು ಶೇ 60ರಷ್ಟು ಪೋಷಕರು ಹೆಚ್ಚಿನ ಕೆಫೀನ್​ ಉತ್ಪನ್ನಗಳ ಸೇವನೆಯಿಂದ ಆಗುವ ಅಪಾಯದ ಕುರಿತು ಅರಿವಿರುವುದಾಗಿ ತಿಳಿಸಿದ್ದಾರೆ. ಜೊತೆಗೆ ಮಕ್ಕಳಿಗೆ ಪಾನೀಯಗಳನ್ನು ಕೊಳ್ಳುವಾಗ ಕೆಫೀನ್​ ಮೌಲ್ಯದ ಕುರಿತು ಅಪರೂಪಕ್ಕೆ ಗಮನಿಸುವುದಾಗಿ ತಿಳಿಸಿದ್ದಾರೆ.

ಅತಿ ಹೆಚ್ಚಿನ ಕೆಫೀನ್​ ಸೇವನೆಯಿಂದ ಆಗುವ ನಕಾರಾತ್ಮಕ ಅಂಶಗಳ ಬಗ್ಗೆ ಪೋಷಕರು ತಮ್ಮ ಮಕ್ಕಳೊಂದಿಗೆ ಮಾತನಾಡಬೇಕು. ಜೊತೆಗೆ ಕೆಫೀನ್​ ಹೊರತಾದ ಆಯ್ಕೆ ಬಗ್ಗೆ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದ್ದಾರೆ. (ಐಸಿಎಂಆರ್​)

ಇದನ್ನೂ ಓದಿ: ಕೆಫೀನ್​ ನಿಮ್ಮನ್ನು ಎಚ್ಚರಿಸಿದರೆ, ಕಾಫಿ ಕ್ರಿಯಾಶೀಲಗೊಳಿಸುತ್ತದೆ: ಅಧ್ಯಯನ ವರದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.