ETV Bharat / health

ಬೆವರುವಿಕೆ ಆರೋಗ್ಯಕ್ಕೆ ಒಳ್ಳೆಯದು; ಆದರೆ, ಅತಿ ಬೆವರುವಿಕೆ ಡೇಂಜರಸ್.. ಹಾಗೇಕೆ ಅಂತೀರಾ? ​ - Sweating is Good for health

ಬೆವರುವಿಕೆ ತ್ವಚೆಯಲ್ಲಿನ ಅತಿಯಾದ ಕೊಳೆ, ಎಣ್ಣೆ ಮತ್ತು ರಂಧ್ರಗಳಲ್ಲಿ ಸೇರಿರುವ ಅನೈರ್ಮಲ್ಯವನ್ನು ತೆಗೆದು ಹಾಕುತ್ತದೆ. ಜೊತೆಗೆ ಇದು ಸತ್ತ ಚರ್ಮ ಕೋಶ ತೆಗೆದು ಹಾಕಲು ಸಹಕಾರಿಯಾಗಿದೆ.

Is Sweating Good Or Bad For Skin
ಸಂಗ್ರಹ ಚಿತ್ರ (ETV Bharat)
author img

By ETV Bharat Karnataka Team

Published : Jun 1, 2024, 4:00 PM IST

Updated : Jun 1, 2024, 4:26 PM IST

ಹೈದರಾಬಾದ್​: ಪ್ರತಿಯೊಬ್ಬರೂ ಒಂದಿಲ್ಲೊಂದು ಸಮಯದಲ್ಲಿ ಬೆವರುವುದು ಸಹಜ. ಈ ಬೆವರು ಅನೇಕ ಬಾರಿ ಕಿರಿಕಿರಿ ಮೂಡಿಸುತ್ತದೆ. ಈ ವೇಳೆ ಫ್ಯಾನ್​, ಎಸಿ, ಕೂಲರ್​ ಮೊರೆ ಹೋಗುತ್ತೇವೆ. ಬೆವರುವುದರಿಂದ ದೇಹಕ್ಕೆ ಒಳ್ಳೆಯದಾ ಅಥವಾ ಕೆಟ್ಟದ್ದಾ ಎಂಬ ಅನುಮಾನ ಅನೇಕರನ್ನು ಕಾಡುತ್ತದೆ. ಈ ಕುರಿತು ಪ್ರಶ್ನೆಗೆ ಇಲ್ಲಿದೆ ಉತ್ತರ.

ಬೆವರುವಿಕೆಯಿಂದ ಪ್ರಯೋಜನ: ದೆಹಲಿ ಪ್ರಮುಖ ಡರ್ಮಾಟಾಲಾಜಿಸ್ಟ್​ ಆಗಿರುವ ಡಾ ಮಹಾಜನ್​ ಪ್ರಕಾರ, ವ್ಯಕ್ತಿ ಬೆವರುವುದರಿಂದ ಹಲವು ರೀತಿಯಲ್ಲಿ ಪ್ರಯೋಜನವಿದೆ. ಈ ರೀತಿ ಬೆವರುವಿಕೆಯಿಂದ ಬ್ಯಾಕ್ಟೀರಿಯಾಗಳ ಬೆಳವಣಿಗೆ ಕಡಿಮೆಯಾಗುತ್ತದೆ. ಇದು ಮುಖದ ಕಾಂತಿ ಹೆಚ್ಚಿಸುತ್ತದೆ ಎಂದಿದ್ದಾರೆ. ಅಷ್ಟೇ ಅಲ್ಲ, 2016ರಲ್ಲಿ ಪ್ರಕಟವಾದ ಜರ್ನಲ್​ ಆಫ್​ ಇನ್ವೆಸ್ಟಿಗೇಷನ್​ ಡರ್ಮಾಟೊಲಾಜಿ ಪ್ರಕಾರ, ಬೆವರುವಿಕೆ ತ್ವಚೆಯ ಪಿಎಚ್​ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಬ್ಯಾಕ್ಟೀರಿಯಾದ ಬೆಳವಣಿಗೆ ತಡೆಯುತ್ತದೆ.

ಬೆವರುವಿಕೆ ತ್ವಚೆಯಲ್ಲಿನ ಅತಿಯಾದ ಕೊಳೆ, ಎಣ್ಣೆ ಮತ್ತು ರಂಧ್ರಗಳಲ್ಲಿ ಸೇರಿರುವ ಅನೈರ್ಮಲ್ಯವನ್ನು ತೆಗೆದು ಹಾಕುತ್ತದೆ. ಜೊತೆಗೆ ಇದು ಸತ್ತ ಚರ್ಮ ಕೋಶ ತೆಗೆದು ಹಾಕಲು ಸಹಕಾರಿಯಾಗಿದೆ. ತಜ್ಞರು ಹೇಳುವಂತೆ, ತ್ವಚೆಯ ಸಮಸ್ಯೆಗಳಾದ ಮೊಡವೆ ಮತ್ತು ಕಲೆಗಳು ಕೂಡ ತಡೆಯುತ್ತದೆ. ಫಲಿತಾಂಶ ತ್ವಚೆಯ ಆರೋಗ್ಯ ಸುಧಾರಣೆಯಾಗುತ್ತದೆ. ಬೆವರಿನ ಮೂಲಕ ತ್ವಚೆಯಲ್ಲಿನ ಅಧಿಕ ಉಪ್ಪು ಹೊರ ಹೋಗುತ್ತದೆ. ಇದು ಮೂಳೆ ಕೂಡ ಸಾಕಷ್ಟು ಕ್ಯಾಲ್ಸಿಯಂ ಪಡೆಯುತ್ತದೆ. ಮೂತ್ರಪಿಂಡದ ಕಲ್ಲುಗಳು ರೂಪುಗೊಳ್ಳದಂತೆ ಕೂಡ ಎಚ್ಚರಿಕೆವಹಿಸುತ್ತದೆ.

ನಿದ್ರೆಯಲ್ಲಿ ಬೆವರುತ್ತೀರಾ?: ಬೆವರುವುದು ಆರೋಗ್ಯಕ್ಕೆ ಪ್ರಯೋಜಕಾರಿಯಾದರೂ, ಮಲಗಿದಾಗ ಬೆವರುವಿಕೆ ಅಪಾಯಕಾರಿ. ಬೆವರುವಿಕೆ ತ್ವಚೆಯ ರಕ್ತದ ಪರಿಚಲನೆಯನ್ನು ಸುಧಾರಿಸುತ್ತದೆ. ಇದು ತ್ವಚೆಯನ್ನು ಆರೋಗ್ಯಯುತ ಮತ್ತು ಹೊಳಪುಗೊಳಿಸುತ್ತದೆ. ಬೆವರುವಿಕೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜವಿದೆ. ಇದು ದೇಹದ ತಾಪಮಾನವನ್ನು ತಣ್ಣಗೆ ಮಾಡುತ್ತದೆ. ಜೊತೆಗೆ ತ್ವಚೆಗೆ ಹೈಡ್ರೇಷನ್​ ಮತ್ತು ಮಾಶ್ಚರೈಸಸ್​ ನೀಡುತ್ತದೆ. ಆದರೆ, ಅತಿಯಾದ ಬೆವರುವಿಕೆ ಆರೋಗ್ಯಕ್ಕೆ ಅಪಾಯ ಎನ್ನುವುದು ಮರೆಯಬಾರದು ಎನ್ನುತ್ತಾರೆ ಡಾ ಮಹಾಜನ್​.

ಬೆವರುವಿಕೆಯ ಅಡ್ಡ ಪರಿಣಾಮ: ಅಧಿಕ ಬೆವರುವಿಕೆಯಿಮದ ತ್ವಚೆಯ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ಬೆವರಿವಿಕೆಯಿಂದ ದೇಹದಲ್ಲಿನ ಖನಿಜ ಲವಣಗಳು ಮತ್ತು ಲ್ಯಾಕ್ಟಿಕ್ ಆಮ್ಲವು ನೈಸರ್ಗಿಕ ಆರ್ಧ್ರಕ ಅಂಶಗಳಾದ ಸೆರಾಮಿಡ್‌ಗಳು, ಕೊಬ್ಬಿನಾಮ್ಲಗಳು ಮತ್ತು ಹೈಲುರಾನಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡುತ್ತದೆ. ಪರಿಣಾಮವಾಗಿ, ಚರ್ಮದ ಶುಷ್ಕತೆ ಮತ್ತು ಕಿರಿಕಿರಿಯಂತಹ ಸಮಸ್ಯೆ ಎದುರಿಸುತ್ತದೆ.

ವೈದ್ಯರು ಹೇಳುವಂತೆ, ಅಧಿಕ ಬೆವರುವಿಕೆ ಅಥವಾ ಬೆವರದೇ ಇರುವುದು ಕಾಳಜಿದಾಯಕ ವಿಷಯವಾಗಿದೆ. ಅಧಿಕ ಬೆವರುವಿಕೆಯನ್ನು ಹೈಪರ್ಹೈಡ್ರೋಸಿಸ್ ಎಂದು ಕರೆಯಲಾಗುವುದು. ಅತಿಯಾದ ಬೆವರುವಿಕೆ ದೇಹದ ವಾಸನೆ, ಕಾಲು ಅಥವಾ ಬೆವರುವ ಅಂಗೈಗಳಂತಹ ಫಂಗಸ್​​ ಸೋಂಕು ಉಂಟಾಗಬಹುದು. ಈ ಹಿನ್ನಲೆ ಹೆಚ್ಚು ಬೆವರುತ್ತಿದ್ದರೆ ಸೂಕ್ತ ಮುನ್ನೆಚ್ಚರಿಕೆ ವಹಿಸುವುದು ಆರೋಗ್ಯಕ್ಕೆ ಒಳ್ಳೆಯದು.

ಮುಖ್ಯ ಸೂಚನೆ : ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರರ ಸಲಹೆಯನ್ನು ಆಧರಿಸಿ ಈ ಮಾಹಿತಿ ಸಿದ್ಧಪಡಿಸಲಾಗಿದೆ. ಇದನ್ನು ಅನುಸರಿಸುವ ಮೊದಲು ನಿಮ್ಮ ಆಪ್ತ ವೈದ್ಯರ ಸಲಹೆ ಪಡೆಯುವುದು ಉತ್ತಮ.

ಇದನ್ನೂ ಓದಿ: ಕಿಡ್ನಿ ಆರೋಗ್ಯ ಕಾಪಾಡುವ ಆಹಾರಗಳಿವು; ತಪ್ಪದೇ ಡಯಟ್​​ನಲ್ಲಿ ಸೇರಿಸಿ ನೋಡಿ!

Last Updated : Jun 1, 2024, 4:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.