ETV Bharat / health

ರಾತ್ರಿ ಹೊತ್ತಲ್ಲೂ ಬೆವರುತ್ತಿದ್ದೀರಾ? ಹಾಗಾದ್ರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಬೇಡ ಎಚ್ಚರ.. ಎಚ್ಚರ! - WHY SWEATING IN COLD WEATHER - WHY SWEATING IN COLD WEATHER

ತಂಪು ಹೊತ್ತಲ್ಲೂ ಬೆವರುತ್ತಿದ್ದರೆ ಈ ಕಾಯಿಲೆಗಳ ಲಕ್ಷಣ ಎಂದು ವೈದ್ಯರು ಹೇಳುತ್ತಾರೆ. ಯಾವುದಾ ಕಾಯಿಲೆ ಇಲ್ಲಿದೆ ಅದೆಲ್ಲದರ ಡಿಟೇಲ್ಸ್​.

ರಾತ್ರಿ ಹೊತ್ತಲ್ಲೂ ಬೆವರುತ್ತಿದ್ದೀರಾ? ಹಾಗಾದ್ರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಬೇಡ ಎಚ್ಚರ!
ರಾತ್ರಿ ಹೊತ್ತಲ್ಲೂ ಬೆವರುತ್ತಿದ್ದೀರಾ? ಹಾಗಾದ್ರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಬೇಡ ಎಚ್ಚರ! ((ETV Bharat))
author img

By ETV Bharat Karnataka Team

Published : May 4, 2024, 11:59 AM IST

Night Sweats Causes: ರಾತ್ರಿ ತಂಪು ವಾತಾವರಣದಲ್ಲೂ ಕೆಲವರು ಬೆವರುತ್ತಾರೆ. ನೀವು ಸಹ ರಾತ್ರಿ ಬೆವರುವಿಕೆಯನ್ನು ಹೊಂದಿದ್ದೀರಾ? ಹಾಗಾದ್ರೆ ಕೂಡಲೇ ಜಾಗ್ರತೆ ವಹಿಸಿ. ಏಕೆಂದರೆ ರಾತ್ರಿ ಬೆವರಿಕೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳ ಸಂಕೇತವಾಗಿದೆ. ಆರೋಗ್ಯ ತಜ್ಞರು ಕೂಡ ಇದನ್ನು ನಿರ್ಲಕ್ಷಿಸುವುದು ಬೇಡ ಎಂದೇ ಸೂಚಿಸುತ್ತಾರೆ.

ವೈದ್ಯರ ಸೂಚನೆ: ಬೇಸಿಗೆಯಲ್ಲಿ ಬಿಸಿಲಿನ ವಾತಾವರಣ ಮತ್ತು ಗಾಳಿಯ ಕೊರತೆಯಿಂದಾಗಿ ದೇಹದಲ್ಲಿ ಶಾಖ ಹೆಚ್ಚಾಗಿ ಬೆವರು ಉಂಟಾಗುವುದು ಸಾಮಾನ್ಯ. ಆದರೆ, ಕೆಲವರು ತಂಪು ವಾತಾವರಣದಲ್ಲಿ ಮಲಗಿದ್ದರೂ, ಫ್ಯಾನ್ ಮತ್ತು ಎಸಿ ಇದ್ದರೂ ವಿಪರೀತ ಬೆವರುತ್ತಾರೆ. ಆದಾಗ್ಯೂ, ಹೆಚ್ಚಿನ ಜನರು ಇದೊಂದು ಸಣ್ಣ ಸಮಸ್ಯೆ ಎಂದು ಹಗುರುವಾಗಿ ತೆಗೆದುಕೊಳ್ಳುತ್ತಾರೆ. ಆದರೆ, ಇದು ವಿವಿಧ ಆರೋಗ್ಯ ಸಮಸ್ಯೆಗಳ ಸಂಕೇತವಾಗಿರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಸಮಸ್ಯೆ ದೊಡ್ಡದಾಗುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಹಾಗಾದ್ರೆ ರಾತ್ರಿ ಬೆವರುವುದು ಯಾವೆಲ್ಲ ಆರೋಗ್ಯ ಸಮಸ್ಯೆಗಳ ಸಂಕೇತ? ಎಂಬುದನ್ನು ಈಗ ತಿಳಿಯಿರಿ.

ಹೈಪರ್ ಥೈರಾಯ್ಡಿಸಮ್: ರಾತ್ರಿ ತಣ್ಣನೆಯ ವಾತಾವರಣದಲ್ಲಿ ಬೆವರುವುದು ಹೈಪರ್ ಥೈರಾಯ್ಡಿಸಮ್​ನ ಲಕ್ಷಣ ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಥೈರಾಯ್ಡ್ ಗ್ರಂಥಿಯು ನಮ್ಮ ದೇಹದಲ್ಲಿ ಚಯಾಪಚಯ ಮತ್ತು ಇತರ ದೈಹಿಕ ಕಾರ್ಯಗಳನ್ನು ನಿರ್ವಹಿಸುವಲ್ಲಿ ಬಹಳ ಪರಿಣಾಮಕಾರಿಯಾಗಿದೆ. ಆದಾಗ್ಯೂ, ಹೈಪರ್ ಥೈರಾಯ್ಡಿಸಮ್ ಅತಿಯಾದಾಗ ಸಮಸ್ಯೆಗಳು ಉದ್ಭವಿಸುತ್ತವೆ. ಹಾಗಾಗಿ ದೇಹದ ಶಾಖ ಹೆಚ್ಚಾಗಿ ಬೆವರುವಿಕೆ ಆಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ಮಾನಸಿಕ ಸಮಸ್ಯೆಗಳು: ಆಧುನಿಕ ಯುಗದಲ್ಲಿ ಅನೇಕ ಜನರು ವಿವಿಧ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ, ಕೆಲವು ರೀತಿಯ ಮಾನಸಿಕ ಸಮಸ್ಯೆಗಳು ಬಂದಾಗ ಮನಸ್ಸಿನಲ್ಲಿ ಒಂದು ರೀತಿಯ ಆತಂಕ, ಚಿಂತೆ ಶುರುವಾಗುತ್ತದೆ. ಇದರಿಂದಲೂ ತಂಪು ಹೊತ್ತಲ್ಲಿ ಬೆವರು ಬರುತ್ತದೆ ಎನ್ನುತ್ತಾರೆ ತಜ್ಞರು.

ಒತ್ತಡ/ಆತಂಕ: ನಾವೆಲ್ಲರೂ ಒಂದಿಲ್ಲೊಂದು ವಿಷಯಗಳಲ್ಲಿ ಒತ್ತಡ ಮತ್ತು ಆತಂಕ ಹೊಂದಿರುತ್ತೇವೆ. ಇದರ ಪರಿಣಾಮ ಮೆದುಳು ಮತ್ತು ದೇಹದ ಮೇಲೆ ಇರುತ್ತದೆ. ಇದರಿಂದ ಬೆವರು ಬರುತ್ತದೆ ಎನ್ನುತ್ತಾರೆ ತಜ್ಞರು. ಹಾಗಾಗಿ ತಂಪಿನಲ್ಲಿ ಬೆವರಲು ಇದೂ ಒಂದು ಕಾರಣ ಎಂದು ಹೇಳಲಾಗುತ್ತದೆ.

ಮೆನೋಪಾಸ್: ರಾತ್ರಿ ಮಲಗುವಾಗ ಮಹಿಳೆಯರು ಬೆವರಿದರೆ ಅದು ಋತುಬಂಧದಿಂದಲೂ ಆಗಿರಬಹುದು ಎನ್ನುತ್ತಾರೆ ತಜ್ಞರು. ಅದರಲ್ಲೂ 40 ವರ್ಷ ದಾಟಿದ ಮಹಿಳೆಯರಲ್ಲಿ ಈ ಸಮಸ್ಯೆ ಇದ್ದರೆ ಅವರು ಋತುಬಂಧ ಸಮೀಪಿಸುತ್ತಿದ್ದಾರೆ ಎಂದು ಹೇಳಬಹುದು. ಏಕೆಂದರೆ ಮೆನೋಪಾಸ್ ಸಮಯದಲ್ಲಿ ಹಾರ್ಮೋನ್ ಬದಲಾವಣೆಗಳಾಗುತ್ತವೆ. ಇದು ಅತಿಯಾದ ಬೆವರುವಿಕೆಗೆ ಕಾರಣವಾಗುತ್ತದೆ.

ಟಿಬಿ/ಎಚ್​ಐವಿ, ಲ್ಯುಕೇಮಿಯಾ ಮುಂತಾದ ಸಮಸ್ಯೆಗಳೂ ರಾತ್ರಿ ಬೆವರುವಿಕೆಗೆ ಕಾರಣವಾಗಬಹುದು ಎನ್ನುತ್ತಾರೆ ತಜ್ಞರು. ಈ ಕಾಯಿಲೆಗಳು ಇದ್ದಾಗ ದೇಹದ ಉಷ್ಣತೆಯು ಹೆಚ್ಚಾಗುತ್ತದೆ, ಇದು ರಾತ್ರಿ ಬೆವರುವಿಕೆಗೆ ಕಾರಣವಾಗುತ್ತದೆ.

ಕೆಫೀನ್ ಭರಿತ ಆಹಾರಗಳಿಂದಲೂ ಸಮಸ್ಯೆ: ಕೆಫೀನ್ ಭರಿತ ಆಹಾರಗಳ ಅತಿಯಾದ ಸೇವನೆಯು ರಾತ್ರಿ ಬೆವರುವಿಕೆಗೆ ಕಾರಣವಾಗಬಹುದು ಎಂದು ತಜ್ಞರು ಸೂಚಿಸುತ್ತಾರೆ. 2018 ರಲ್ಲಿ 'PLOS One' ಜರ್ನಲ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಕೆಫೀನ್ ಅಧಿಕವಾಗಿರುವ ಆಹಾರಗಳ ಸೇವನೆಯು ನಿದ್ರೆಯ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ರಾತ್ರಿಯಲ್ಲಿ ಬೆವರುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಕಂಡು ಬಂದಿದೆ. ಈ ಸಂಶೋಧನೆಯಲ್ಲಿ, ಆಸ್ಟಿನ್‌ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡುವ ನ್ಯೂರೋಬಯಾಲಜಿ ಪ್ರಾಧ್ಯಾಪಕ ಡಾ. ಡೇವಿಡ್ ಜೆ. ಲೀ ಭಾಗವಹಿಸಿದ್ದರು. ಕೆಫೀನ್ ಅಧಿಕವಾಗಿರುವ ಪಾನೀಯಗಳು ಮತ್ತು ಆಹಾರಗಳ ಸೇವನೆಯಿಂದ ರಾತ್ರಿಯಲ್ಲಿ ಬೆವರುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ.

ಕೆಲವು ಔಷಧಗಳ ಬಳಕೆ: ಆ್ಯಂಟಿ ಡಿಪ್ರೆಸೆಂಟ್ಸ್, ಆ್ಯಂಟಿ ರೆಟ್ರೊವೈರಲ್ಸ್, ಹೈಪರ್ ಟೆನ್ಷನ್ ಡ್ರಗ್ಸ್ ಕೂಡ ರಾತ್ರಿಯ ಶೀತ ವಾತಾವರಣದಲ್ಲಿ ಬೆವರುವಿಕೆಗೆ ಕಾರಣವಾಗಬಹುದು. ಈ ಔಷಧಿಗಳ ಬಳಕೆಯು ಬೆವರು ಗ್ರಂಥಿಗಳನ್ನು ನಿಯಂತ್ರಿಸುವ ಮೆದುಳಿನ ಭಾಗಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ನಿದ್ರೆಯ ಸಮಯದಲ್ಲಿ ಬೆವರು ಹೆಚ್ಚಾಗುತ್ತದೆ.

ವಿಶೇಷ ಸೂಚನೆ: ಇಲ್ಲಿ ನಿಮಗೆ ತಿಳಿಸಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ಕೇವಲ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ಕುಟುಂಬದ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ನಿಮ್ಮನ್ನು ಮಲಬದ್ಧತೆ ಕಾಡುತ್ತಿದೆಯಾ?: ಔಷಧಿಗಳ ಬದಲಿಗೆ ಈ ಯೋಗಾಸನಗಳನ್ನೊಮ್ಮೆ ಮಾಡಿ ನೋಡಿ - Yoga For Constipation

ETV Bharat Logo

Copyright © 2024 Ushodaya Enterprises Pvt. Ltd., All Rights Reserved.