ETV Bharat / health

ಹಾರ್ಮೋನ್​ ಜನನ ನಿಯಂತ್ರಣ ಬಳಕೆ ಒಳ್ಳೆಯದೇ?: ಕಳವಳ ವ್ಯಕ್ತಪಡಿಸಿದ ಎಲೋನ್ ಮಸ್ಕ್‌ - women Hormonal birth control uses

ಮಹಿಳೆಯರ ಆರೋಗ್ಯದ ಕುರಿತು ಅರ್ಥಮಾಡಿಕೊಳ್ಳುವ ಅಗತ್ಯವಿದೆ ಎಂದು ಸ್ಪೇಸ್​​ ಎಕ್ಸ್​​​ ಮಾಲೀಕ ಎಲೋನ್​ ಮಸ್ಕ್​ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.

space x owner elon musk post on women Hormonal birth control uses

author img

By ETV Bharat Karnataka Team

Published : Mar 18, 2024, 10:50 AM IST

ನವದೆಹಲಿ: ಹಾರ್ಮೋನ್​ ಜನನ ನಿಯಂತ್ರಣ ಬಳಕೆಯಿಂದ ಖಿನ್ನತೆ ಮತ್ತು ಆತ್ಮಹತ್ಯೆಯಂತಹ ಅಪಾಯ ಹೆಚ್ಚು ಎಂದು ವಿಶ್ವದ ಬಿಲಿಯನೇರ್​​ ಎಲೋನ್​ ಮಸ್ಕ್​ ಕಳವಳ ವ್ಯಕ್ತಪಡಿಸಿದ್ದು, ಮಹಿಳೆಯರ ಆರೋಗ್ಯ ಕುರಿತು ಹೆಚ್ಚು ಅರಿತುಕೊಳ್ಳುವ ಅಗತ್ಯವಿದೆ ಎಂದು ಹೇಳಿದ್ದಾರೆ.

'ಹಾರ್ಮೋನ್​​ ಜನನ ನಿಯಂತ್ರಣದ ಪರಿಣಾಮಗಳ ಕುರಿತು ಮಹಿಳೆಯರು ಸಾಕಷ್ಟು ಮಾಹಿತಿ ಹೊಂದಿರಬೇಕು. ಇದು ಖಿನ್ನತೆ ಮತ್ತು ಆತ್ಮಹತ್ಯೆಗೆ ಕಾರಣವಾಗುತ್ತದೆ' ಎಂದು ಅವರು ಎಚ್ಚರಿಸಿದ್ದಾರೆ. ಈ ಸಂಬಂಧ 2017ರಲ್ಲಿ ಡೆನ್ಮಾರ್ಕ್​ನಲ್ಲಿ ತಜ್ಞರು ನಡೆಸಿದ ಸಂಶೋಧನಾ ಅಧ್ಯಯನದ ಲಿಂಕ್​ ಅನ್ನು ಮಸ್ಕ್‌ ಹಂಚಿಕೊಂಡಿದ್ದಾರೆ. ಈ ಪೋಸ್ಟ್​ 42 ಮಿಲಿಯನ್​ ವೀಕ್ಷಣೆ ಕಂಡಿದೆ. ಆದರೆ 16 ಸಾವಿರ ಮಂದಿ ಮಸ್ಕ್​​ ಹೇಳಿಕೆಗೆ ಸಮ್ಮತಿಸಿಲ್ಲ. ಜನನ ನಿಯಂತ್ರಣ ಕ್ಲಿಷ್ಟಕರವಾಗಿದೆ ಮತ್ತು ಸಂಶೋಧನೆಯಲ್ಲಿ ಇದರ ಅಡ್ಡ ಪರಿಣಾಮಗಳು ಸಾಬೀತಾಗಿಲ್ಲ ಎಂಬುದು ಅವರ ಅಭಿಪ್ರಾಯವಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಮಸ್ಕ್,​ 'ಇದು ಮೌಲ್ಯಯುತ ಹೇಳಿಕೆಯಲ್ಲ. ಸಾರ್ವಜನಿಕ ಸೇವೆಯ ಪ್ರಕಟಣೆ ಅಷ್ಟೇ. ಹಾರ್ಮೋನ್​ ಹೊರತಾದ ಇತರ ಜನನ ನಿಯಂತ್ರಣಗಳು ಈ ರೀತಿಯ ಪರಿಣಾಮವನ್ನು ಹೊಂದಿಲ್ಲ ಎಂದಿದ್ದಾರೆ.

ಮಸ್ಕ್​​ ಅವರ ಮಹಿಳಾ ಕಾಳಜಿ ಕುರಿತಾದ ಈ ಪೋಸ್ಟ್​​ಗೆ ಅಮೆರಿಕದ ಟೆಲಿವಿಷನ್​ ಕಮೆಂಟರ್​ ಮತ್ತು ಲೇಖಕಿ ಸೇಟ್​ ಕ್ಲೇರ್​ ಕೂಡ ಕಮೆಂಟ್​ ಮಾಡಿದ್ದಾರೆ. 'ನಾನು ಜನನ ನಿಯಂತ್ರಣದ ವಿರೋಧಿಯಲ್ಲ. ಇದು ಕೆಲವರ ಜೀವನವನ್ನು ಬದಲಾಯಿಸುವ ಔಷಧಿಯಾಗಿರಬಹುದು. ಆದಾಗ್ಯೂ ಖಿನ್ನತೆ ಮತ್ತು ಆತ್ಮಹತ್ಯೆ ಅಪಾಯವನ್ನು ಹೆಚ್ಚಿಸುವ ಗಂಭೀರ ಅಡ್ಡ ಪರಿಣಾಮ ಹೊಂದಿದೆ' ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಮಹಿಳೆ ಈ ಸಮಸ್ಯೆಯ ಲಕ್ಷಣಗಳ ಕುರಿತು ವೈದ್ಯರೊಂದಿಗೆ ಮಾತನಾಡಿದಾಗ, ಅವರು ಹಾರ್ಮೋನ್​ ಜನನ ನಿಯಂತ್ರಣದ ಮಾತ್ರೆಗಳಿಂದ ಹೊರಬರಲು ಸೂಚಿಸುವುದಿಲ್ಲ. ಅಥವಾ ಇದಕ್ಕೆ ಪರ್ಯಾಯ ಮಾತ್ರೆಗಳನ್ನೂ ಸೂಚಿಸುವುದಿಲ್ಲ. ಅವರು ಕೇವಲ ಮನೋವೈದ್ಯಕೀಯ ಔಷಧಗಳನ್ನು ಶಿಫಾರಸು ಮಾಡುತ್ತಾರೆ. ಮಹಿಳೆಯನ್ನು ಔಷಧಿಯ ಕಾಕ್ಟೈಲ್​ ಆಗಿ ರೂಪಿಸುತ್ತಾರೆ ಎಂದು ತಿಳಿಸಿದ್ದಾರೆ.

ಹಾರ್ಮೋನ್​ ಜನನ ನಿಯಂತ್ರಣ ಎಂದರೇನು?: ಹಾರ್ಮೋನ್ ಗರ್ಭನಿರೋಧಕ ವಿಧಾನಗಳು ಮುಖ್ಯವಾಗಿ, ಮೌಖಿಕ ಮಾತ್ರೆಗಳು ಅಥವಾ ಇಂಪ್ಲಾಂಟ್‌ಗಳು, ಪ್ಯಾಚ್‌ ಅಥವಾ ವಜಿನಲ್​ ರಿಂಗ್​​ ಹೊಂದಿರುತ್ತದೆ. ಇದರಲ್ಲಿ ಅಂಡಾಣೋತ್ಪತ್ತಿ ತಡೆಯಲು ಒಂದು ಅಥವಾ ಹೆಚ್ಚಿನ ಹಾರ್ಮೋನುಗಳನ್ನು ದೇಹ ಸಣ್ಣ ಪ್ರಮಾಣದಲ್ಲಿ ಬಿಡುಗಡೆ ಮಾಡುತ್ತದೆ. (ಐಎಎನ್​ಎಸ್​)

ಇದನ್ನೂ ಓದಿ: ಇದೇ ಕಾರಣಕ್ಕೆ ಮಹಿಳೆಯರು ನಿಯಮಿತವಾಗಿ ಥೈರಾಯ್ಡ್​​ ತಪಾಸಣೆಗೆ ಒಳಗಾಗಬೇಕು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.