ಜುಬಾ: ಮಲೇರಿಯಾ ವಿರುದ್ಧ ಹೋರಾಟ ನಡೆಸುತ್ತಿರುವ ದಕ್ಷಿಣ ಸೂಡಾನ್ಗೆ ಮೊದಲ ಬ್ಯಾಚ್ನ 6,45,000 ಔಷಧಗಳು ಬಂದು ತಲುಪಿದೆ ಎಂದು ಸರ್ಕಾರ ತಿಳಿಸಿದೆ. ಈ ಮಲೇರಿಯಾ ಲಸಿಕೆಯನ್ನು ದೇಹದ ನಿಯಮಿತ ಪ್ರತಿರೋಧಕ ಕಾರ್ಯಕ್ರಮದಲ್ಲಿ ಸೇರಿಸಲಾಗುವುದು ಎಂದಿದ್ದಾರೆ. 28 ದೇಶಗಳಲ್ಲಿ ಆರ್21 ಮಲೇರಿಯಾ ಲಸಿಕೆಗಳನ್ನು ವಿತರಣೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ಯೊಲಂಡಾ ಅವೆಲ್ ಡೆಂಗ್ ತಿಳಿಸಿದ್ದಾರೆ.
ನಮ್ಮ ದೇಶದಲ್ಲಿ ಮಲೇರಿಯಾ ಎಂಬುದು ಪ್ರಮುಖ ಕಾಳಜಿ ವಿಷಯವಾಗಿದೆ. ದೇಶದಲ್ಲಿನ ಮಲೇರಿಯಾ ಪರಿಣಾಮ ಕಡಿಮೆ ಮಾಡಲು ನಾವು ಬದ್ಧರಾಗಿದ್ದೇನೆ. ಈ ಮೂಲಕ ಮಕ್ಕಳ ಆರೋಗ್ಯ ಸುಧಾರಣೆಗೆ ಕ್ರಮಕ್ಕೆ ಮುಂದಾಗಲಾಗುವುದು ಎಂದು ತಿಳಿಸಿದ್ದಾರೆ. ದಕ್ಷಿಣ ಸುಡಾನ್ನಲ್ಲಿನ ಯುನಿಸೆಫ್ ಉಪ ಪ್ರತಿನಿಧಿ ಒಬಿಯಾ ಅಚಿಂಗ್ ಮಾತನಾಡಿ, ದೇಶವೂ ಮಲೇರಿಯಾದ ಅತಿಯಾದ ಹೊರೆ ಹೊಂದಿದೆ. ನಿತ್ಯ ಮಲೇರಿಯಾದ 7,630 ಪ್ರಕರಣ ದಾಖಲಾಗುತ್ತಿದ್ದು, 18 ಸಾವು ಸಂಭವಿಸುತ್ತಿವೆ. 2022ರಲ್ಲಿ ದಕ್ಷಿಣ ಸೂಡಾನ್ನಲ್ಲಿ ಮಲೇರಿಯಾದ ಪ್ರಕರಣಗಳು ಶೇ 76ರಷ್ಟು ಏರಿಕೆ ಕಂಡಿದ್ದು, ಇದರ ನಿವಾರಣೆಗೆ ಪರಿಣಾಮಕಾರಿ ಹಸ್ತಕ್ಷೇಪದ ತುರ್ತು ಅಗತ್ಯ ತೋರಿಸಿತು.
ಮಲೇರಿಯಾ ತಡೆಗೆ ಇದೀಗ ಸುಮಾರು 60 ವರ್ಷಗಳ ಅಭಿವೃದ್ಧಿಯ ನಂತರ ಈ ಹೊಸ ಮಲೇರಿಯಾ ಲಸಿಕೆ ಲಭ್ಯವಾಗಿದ್ದು, ಮಲೇರಿಯಾ ನಿಯಂತ್ರಣದಲ್ಲಿ ಮತ್ತು ಮಕ್ಕಳ ಆರೋಗ್ಯ ಕಾಪಾಡುವಲ್ಲಿ ಇದು ಪ್ರಗತಿಯನ್ನು ತೋರಿಸಿದೆ.
ಆರೋಗ್ಯ ಸಚಿವಾಲಯದ ಪ್ರಾಥಮಿಕ ಆರೋಗ್ಯ ಆರೈಕೆಯ ಮಹಾ ನಿರ್ದೇಶಕ ಜಾನೆಟ್ ಮೈಕೆಲ್ ಮಾತನಾಡಿ, ದೇಶದಲ್ಲಿರುವ ಆರೋಗ್ಯ ಸಮಸ್ಯೆಗಳಲ್ಲಿ ಕಾಲು ಭಾಗದಷ್ಟು ಪ್ರಕರಣಗಳು ಮಲೇರಿಯಾಗೆ ಸಂಬಂಧಿಸಿದೆ. ಅದರಲ್ಲೂ ಇವು ಶಿಶು ಮತ್ತು ತಾಯಿಯ ಮರಣ ಪ್ರಮಾಣಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಮಲೇರಿಯಾದಿಂದ ಮಕ್ಕಳನ್ನು ರಕ್ಷಿಸುವಲ್ಲಿ ಈ ಮಲೇರಿಯಾಗಳು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಸಾಬೀತಾಗಿದೆ. ಲೆಕ್ಕವಿಲ್ಲದಷ್ಟು ಜೀವಗಳನ್ನು ಉಳಿಸುತ್ತದೆ. ಮುಂಬರುವ ವರ್ಷಗಳಲ್ಲಿ ವಿಶ್ವಾದ್ಯಂತ 45 ದಶಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಪ್ರತಿರಕ್ಷಣೆ ನೀಡಲು ಸಾಕಷ್ಟು ಲಸಿಕೆಗಳನ್ನು ಸಂಗ್ರಹಿಸಲು ಯುನಿಸೆಫ್ ಮುಂದಾಗಿದೆ. ಲಸಿಕೆಯ ನಿರಂತರ ಬಳಕೆ, ಕೀಟನಾಶಕ ಚಿಕಿತ್ಸೆಯ ಬೆಡ್‌ನೆಟ್‌ಗಳ ಬಳಕೆ ಮತ್ತು ವೈದ್ಯಕೀಯ ಆರೈಕೆಯಂತಹ ತಡೆಗಟ್ಟುವ ಕ್ರಮಗಳ ಜೊತೆಗೆ, ದಕ್ಷಿಣ ಸುಡಾನ್‌ನಲ್ಲಿ ಮಲೇರಿಯಾ ತೊಡೆದುಹಾಕಲು ನಮ್ಮ ಪ್ರಯತ್ನಗಳಲ್ಲಿ ಪ್ರಮುಖವಾಗಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: ಅನುವಂಶಿಕ ಬದಲಾವಣೆಯೊಂದಿಗೆ ಮಲೇರಿಯಾ ಸಂಬಂಧ; ಅಧ್ಯಯನ