ETV Bharat / health

ಪ್ರೋಟಿನ್‌ ಪೂರಕ​ಗಳ ಸೇವನೆಯಿಂದ ಗಂಭೀರ ಆರೋಗ್ಯ ಸಮಸ್ಯೆಗೆ ಗುರಿಯಾದೆ: ಸ್ನಾಪ್​ಡೀಲ್​ ಸಹ ಸಂಸ್ಥಾಪಕ - Protein Supplements - PROTEIN SUPPLEMENTS

ಮಾರುಕಟ್ಟೆಯಲ್ಲಿ ಲಭ್ಯವಾಗುವ ಪ್ರೋಟಿನ್​ ಪೌಡರ್​ಗಳು ಯಾವ ರೀತಿ ತಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಿತು ಎಂಬುದರ ಮಾಹಿತಿಯನ್ನು ಕುನಾಲ್​ ಬಹಲ್​ ಹಂಚಿಕೊಂಡಿದ್ದಾರೆ.

Snapdeals Kunal Bahl says protein supplements created serious health problems to him

author img

By ETV Bharat Karnataka Team

Published : Apr 12, 2024, 4:38 PM IST

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಪ್ರೋಟಿನ್​ ಪೌಡರ್​​ಗಳು ಬಹಳಷ್ಟು ಪ್ರಖ್ಯಾತಿ ಪಡೆದಿವೆ. ದೈಹಿಕ ಚಟುವಟಿಕೆ ನಡೆಸುವ ಜನರು ದೇಹದ ಪ್ರೋಟಿನ್​ ಮಟ್ಟ ಕಾಯ್ದುಕೊಳ್ಳುವ ಉದ್ದೇಶದಿಂದ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿರುವ ಪ್ರೋಟಿನ್​ ಪೌಡರ್​ ಸೇವನೆಗೆ ಮುಂದಾಗುತ್ತಿದ್ದಾರೆ. ಈ ರೀತಿಯ ಪ್ರೋಟಿನ್​ ಸೇವನೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಈ ರೀತಿಯ ಪ್ರೋಟಿನ್​ ಪೂರಕ ಸೇವನೆಯು ತಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿತು ಎಂಬ ಮಾಹಿತಿಯನ್ನು ಸ್ನಾಪ್​ಡೀಲ್​ ಸಹ ಸಂಸ್ಥಾಪಕರಾದ ಕುನಾಲ್​ ಬಹಲ್​ ತಿಳಿಸಿದ್ದಾರೆ. ತಮ್ಮ ಮೈಕ್ರೋಬ್ಲಾಗಿಂಗ್​ ತಾಣ ಎಕ್ಸ್​​ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಹಲವು ವರ್ಷಗಳ ಹಿಂದೆ ಒಮ್ಮೆ ನಾನು ಪ್ರೋಟಿನ್​ ಪೂರಕವನ್ನು ತೆಗೆದುಕೊಂಡೆ. ಇದು ಗಂಭೀರ ಆರೋಗ್ಯ ಸಮಸ್ಯೆ ಉಂಟು ಮಾಡಿತು ಎಂದಿದ್ದಾರೆ.

ಪ್ರೋಟಿನ್​ ಪೂರಕ ಉತ್ತಮವಾಗಿರುತ್ತದೆ ಎಂದು ಭಾವಿಸಿ, ನಾನು ಪ್ರಖ್ಯಾತ ದೇಶಿಯ ಬ್ರಾಂಡ್​ನ ಪ್ರೋಟಿನ್​ ಸೇವನನೆಗೆ ಮುಂದಾದೆ. ಎಂಟು ವಾರದಲ್ಲಿ ಇದು ನನ್ನ ಆರೋಗ್ಯವನ್ನು ಏರುಪೇರಾಗಿಸಿತು. ಇದರಿಂದ ಗಂಭೀರ ಸಮಸ್ಯೆ ಎದುರಿಸಿದೆ ಎಂದು ತಿಳಿಸಿದ್ದಾರೆ. ಈ ಸಮಸ್ಯೆ ಅರಿವಿಗೆ ಬಂದಾಕ್ಷಣ ನಾನು ಅದರ ಸೇವನೆಯನ್ನು ನಿಲ್ಲಿಸಿದೆ. ಪ್ರೋಟಿನ್​ ಪೂರಕಗಳನ್ನು ಆಯ್ಕೆ ಮಾಡುವಾಗ ಎಚ್ಚರದಿಂದಿರಿ ಎಂದು ಅವರು ಮನವಿ ಮಾಡಿದ್ದಾರೆ.

ಇತ್ತೀಚಿಗೆ ಜರ್ನಲ್​ ಮಡಿಸಿನ್​ನಲ್ಲಿ ಪ್ರಕಟವಾದ ಅಧ್ಯಯನದ ಅನುಸಾರ, ಪ್ರೋಟಿನ್​ ಪೌಡರ್​​ಗಳಲ್ಲಿ ಹರ್ಬಲ್​ ಮತ್ತು ಡಯಟರಿ ಪೂರಕಗಳಾದ ವಿಟಮಿನ್​, ಮಿನರಲ್ಸ್​ ಮತ್ತು ಇತರೆ ನೈಸರ್ಗಿಕ ಅಥವಾ ಸಿಂಥೆಟಿಕ್​ ವಸ್ತುಗಳನ್ನು ಬಳಕೆ ಮಾಡಲಾಗಿರುತ್ತದೆ. ಹೈಪಾಟೊಟೊಕ್ಸಿಕ್ಸಿಟಿ ಕೂಡ ಸಂಬಂಧ ಹೊಂದಿರುತ್ತದೆ. ಪೂರಕಗಳು ಕೆಲವು ಬಾರಿ ತಪ್ಪು ಲೇಬಲ್​ ಹೊಂದಿದ್ದು, ಅದರಲ್ಲಿ ಗ್ರಾಹಕರನ್ನು ತಪ್ಪು ದಾರಿಗೆಳೆಯುವ ವಂಚನೆ ಮಾಹಿತಿ ಹೊಂದಿರುತ್ತದೆ.

ಅಧ್ಯಯನದ ಫಲಿತಾಂಶದಲ್ಲಿ ಪ್ರೋಟಿನ್​ಗಳಲ್ಲಿ ಸೀಸ, ಅರ್ಸನಿಕ್​ನಂತಹ ಹಾನಿಕಾರಕ ಮಟ್ಟದ ಖನಿಜಾಂಶ ಹೊಂದಿರುವುದು ಕಂಡುಬಂದಿದೆ. ಪ್ರೋಟಿನ್​ ಪೂರಕಗಳು ಹೊಂದಿರುವ ಅಪಾಯಗಳ ಕುರಿತು ಜಾಗೃತಿ ಮೂಡಿಸುವುದು ಅಧ್ಯಯನದ ಮುಖ್ಯ ಉದ್ದೇಶವಾಗಿತ್ತು.(ಐಎಎನ್​ಎಸ್​)

ಇದನ್ನೂ ಓದಿ: ಪ್ರೋಟೀನ್ ಪೌಡರ್ ಬಗೆಗಿನ 6 ಅಪನಂಬಿಕೆಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.