ETV Bharat / health

ವಾಯುಮಾಲಿನ್ಯದಿಂದ ಭಾರತದಲ್ಲಿ ವಾರ್ಷಿಕ 33,000 ಸಾವು: ಲ್ಯಾನ್ಸೆಟ್​​ ವರದಿ - Air Pollution Linked Deaths

author img

By ETV Bharat Karnataka Team

Published : Jul 4, 2024, 6:46 PM IST

ಕೋಲ್ಕತ್ತಾದಲ್ಲಿ 4,700, ಚೆನ್ನೈನಲ್ಲಿ 2,900, ಅಹಮದಾಬಾದ್​ನಲ್ಲಿ 2,500, ಬೆಂಗಳೂರಿನಲ್ಲಿ 2,100, ಹೈದರಾಬಾದ್​ನಲ್ಲಿ 1,600, ಪುಣೆಯಲ್ಲಿ 1,400 ಹಾಗು ವಾರಣಾಸಿಯಲ್ಲಿ ವಾಯುಮಾಲಿನ್ಯದಿಂದಾಗಿ ವಾರ್ಷಿಕ 830 ಸಾವು ಸಂಭವಿಸುತ್ತಿದೆ ಎಂದು ಲ್ಯಾನ್ಸೆಟ್‌ ವರದಿ ತಿಳಿಸಿದೆ.

PM2.5 levels exposures higher linked to daily deaths in indian all city
ಸಾಂದರ್ಭಿಕ ಚಿತ್ರ (IANS)

ನವದೆಹಲಿ: ಗಾಳಿಯಲ್ಲಿರುವ ಸೂಕ್ಷ್ಮ ಕಣಗಳು ಜನರ ಅಕಾಲಿಕ ಸಾವಿಗೆ ಕಾರಣವಾಗುತ್ತಿದೆ. ಅಲ್ಪಕಾಲದ ವಾಯುಮಾಲಿನ್ಯದ ಪರಿಣಾಮ ಭಾರತದ 10 ನಗರಗಳಲ್ಲಿ ವಾರ್ಷಿಕ 33 ಸಾವಿರ ಮಂದಿ ಸಾವನ್ನಪ್ಪುತ್ತಿದ್ದಾರೆ. ಇದರಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದೆ. ಇಲ್ಲಿ ಪ್ರತಿ ವರ್ಷ ವಾಯುಮಾಲಿನ್ಯ ಸಂಬಂಧಿ ಸಮಸ್ಯೆಯಿಂದ 12,000 ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ದಿ ಲ್ಯಾನ್ಸೆಟ್​ ಪ್ಲಾನೆಟರಿ ಹೆಲ್ತ್​ ವರದಿ ಎಚ್ಚರಿಸಿದೆ.

ಈ ಅಧ್ಯಯನದಲ್ಲಿ ಸಾವಿನ ಅಪಾಯ ಮಾಲಿನ್ಯದ ಪಿಎಂ2.5 ಮತ್ತು ಅದಕ್ಕಿಂತ ಹೆಚ್ಚಿನ ಮಟ್ಟವನ್ನು ಒಳಗೊಂಡಿದೆ. ನಗರಗಳಲ್ಲಿ ಪಿಎಂ.2.5 ಸಾಂದ್ರತೆಗೆ ನಿತ್ಯ ಒಡ್ಡಿಕೊಳ್ಳುವಿಕೆ ಸಾವಿನ ಅಪಾಯ ಹೊಂದಿದೆ. ವಾರಣಾಸಿಯ ಬನಾರಸ್ ಯುನಿವರ್ಸಿಟಿ, ದೆಹಲಿ ಮೂಲದ ಸಂಶೋಧನಾ ಸಂಸ್ಥೆ ಎಸ್‌ಎಫ್​ಎಸ್​ ಅಂತಾರಾಷ್ಟ್ರೀಯ ತಂಡ ಈ ಅಧ್ಯಯನ ನಡೆಸಿದೆ.

ದೇಶದ ಎಲ್ಲಾ ನಗರಗಳಿಗೆ ಹೋಲಿಸಿದಾಗ ಈ ಮಾಲಿನ್ಯ ಸಾಂದ್ರತೆ ಮಟ್ಟದಲ್ಲಿ ದೆಹಲಿ ಪ್ರಮುಖ ಸ್ಥಾನದಲ್ಲಿದೆ. ನಂತರದಲ್ಲಿ ಮುಂಬೈ (ವಾರ್ಷಿಕ 5,100 ಸಾವು) ಇದೆ. ಅತಿ ಕಡಿಮೆ ವಾಯು ಮಾಲಿನ್ಯ ಮಟ್ಟ ಶಿಮ್ಲಾದಲ್ಲಿದೆ.

ಭಾರತದ 10 ನಗರದಲ್ಲಿ 2008 ಮತ್ತು 2019ರ ಮಧ್ಯಭಾಗದಲ್ಲಿ ದೈನಂದಿನ ಸಾವಿನ ಆಧಾರದ ಮೇಲೆ ಈ ಅಧ್ಯಯನ ನಡೆದಿದೆ. ಇದಕ್ಕಾಗಿ ಕ್ಯಾಶುಯಲ್​ ಮಾಡಲಿಂಗ್​ ತಂತ್ರಜ್ಞಾನ ಅಳವಡಿಸಲಾಗಿದೆ. ಇದರಲ್ಲಿ ತ್ಯಾಜ್ಯ ಸುಡುವಿಕೆ ಮತ್ತು ವಾಹನದ ಹೊಗೆಯೂ ಸೇರಿದೆ. ಈ ನಗರಗಳಲ್ಲಿ ವಾಯು ಗುಣಮಟ್ಟ ವಿಶ್ವ ಆರೋಗ್ಯ ಸಂಸ್ಥೆ ನಿಗದಿಸಿರುವ ಸುರಕ್ಷಿತಾ ಮಟ್ಟಕ್ಕಿಂತ ಹೆಚ್ಚಿದೆ. (ಪಿಟಿಐ)

ಇದನ್ನೂ ಓದಿ: ವಾಯು ಮಾಲಿನ್ಯ: ಉಸಿರಾಟದ ತೊಂದರೆ ಮಾತ್ರವಲ್ಲ, ಮಾನಸಿಕ ಆರೋಗ್ಯ ಸಮಸ್ಯೆಗಳಿಗೂ ಕಾರಣ - ತಜ್ಞರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.