ಬೆಂಗಳೂರು: ನಮ್ಮ ದೇಹ ಆರೋಗ್ಯಯುತವಾಗಿರಲು ನೀರು ಅತ್ಯಗತ್ಯವಾಗಿದೆ. ಆದರೂ ಕೂಡ ಅನೇಕ ಮಂದಿ ತಮ್ಮ ದೇಹಕ್ಕೆ ಅಗತ್ಯವಾದ ಪ್ರಮಾಣದಷ್ಟು ನೀರನ್ನು ಕುಡಿಯುವುದಿಲ್ಲ. ಬಿಡುವಿಲ್ಲದ ಸಮಯ ಅಥವಾ ಮರೆವಿನಿಂದಾಗಿ ನೀರು ದೇಹ ಸೇರುವುದಿಲ್ಲ. ಇದರಿಂದ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಸುಳ್ಳಲ್ಲ. ವ್ಯಕ್ತಿಯೊಬ್ಬ ದಿನಕ್ಕೆ ಕನಿಷ್ಠ 2 ಲೀಟರ್ ನೀರು ಸೇವಿಸುವುದು ಅಗತ್ಯ. ಇದೇ ಕಾರಣಕ್ಕೆ ಶಾಲೆಗಳಲ್ಲಿ ವಾಟರ್ ಬೆಲ್ ಎಂಬ ನಿಯಮವನ್ನು ಜಾರಿಗೆ ತರಲಾಗಿದೆ. ಅದರಂತೆ ನೀರನ್ನು ನೆನಪಿಸಿ ತಪ್ಪದೆ ಕುಡಿಯುವ ಅಭ್ಯಾಸಕ್ಕೆ ಈ ಐದು ಸಲಹೆಗಳು ಪ್ರಯೋಜನ ನೀಡಲಿವೆ.
ಫೋನ್ನಲ್ಲಿ ರಿಮೈಂಡರ್ ಇಡಿ: ಬಾಯಾರಿಕೆ ಆಗಿಲ್ಲ ಎಂದ ಮಾತ್ರಕ್ಕೆ ನೀರು ಕುಡಿಯದೇ ಇರುವುದು ತಪ್ಪು. ಈ ಹಿನ್ನೆಲೆ ಫೋನ್ನಲ್ಲಿ ರಿಮೈಂಡರ್ ಇಟ್ಟು, ಪದೇ ಪದೆ ನೀರು ಕುಡಿಯುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಗಂಟೆಗೆ ಒಮ್ಮೆ ಅಗತ್ಯ ಪ್ರಮಾಣದ ನೀರು ಸೇವನೆಯು ದೇಹದ ಅಂಗಾಂಶಗಳನ್ನು ನಿರ್ಜಲೀಕರಣದಿಂದ ದೂರವಿಡುತ್ತದೆ.
ಸೇವನೆ ಬಗ್ಗೆ ಇರಲಿ ಗಮನ: ಪ್ರತಿ ದಿನ ಎಷ್ಟು ಪ್ರಮಾಣದ ನೀರು ಸೇವನೆ ಮಾಡುತ್ತೀರಾ ಎಂಬುದರ ಬಗ್ಗೆ ಅರಿವಿರುವುದು ಅಗತ್ಯ. ಇದರಿಂದ ದೇಹಕ್ಕೆ ಬೇಕಾದ ನೀರು ಸೇವಿಸುತ್ತಿದ್ದೀರಾ ಎಂಬುದು ಗೊತ್ತಾಗುತ್ತದೆ. ಇದಕ್ಕಾಗಿ ನಿರ್ದಿಷ್ಟ ಆ್ಯಪ್ಗಳು ಇದ್ದು, ಇವುಗಳ ಪ್ರಯೋಜನವನ್ನು ಪಡೆಯಬಹುದು. ಇದರಿಂದ ದೇಹ ಹೈಡ್ರೇಟ್ ಆಗಿರಲು ಪ್ರೋತ್ಸಾಹ ಸಿಗುತ್ತದೆ.
ನೀರಿನ ರುಚಿ ಹೆಚ್ಚಿಸಿ: ಅನೇಕ ಮಂದಿಗೆ ನೀರು ರುಚಿಸುವುದಿಲ್ಲ. ಅದನ್ನು ಏನು ಪದೇ ಪದೇ ಕುಡಿಯುವುದು ಎಂಬ ತಾತ್ಸಾರ ಇರುತ್ತದೆ. ಈ ಹಿನ್ನೆಲೆ ಅದನ್ನು ಹಣ್ಣು, ತರಕಾರಿ ಅಥವಾ ಗಿಡ ಮೂಲಿಕೆಯೊಂದಿಗೆ ಸೇರಿಸಿ ಕುಡಿಬಹುದು. ಇತ್ತೀಚಿನ ದಿನದಲ್ಲಿ ಡಿಟಾಕ್ಸ್ ನೀರು ಜನಪ್ರಿಯತೆ ಪಡೆಯುತ್ತಿದೆ.
ಊಟಕ್ಕೆ ಮುನ್ನ ನೀರು ಸೇವಿಸಿ: ಊಟ ಅಥವಾ ಸ್ನಾಕ್ ಸೇವನೆಗೆ ಮುನ್ನ ಒಂದು ಲೋಟ ನೀರು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ. ಇದು ಹೈಡ್ರೇಟ್ ಆಗಿರುವ ಜೊತೆಗೆ ಜೀರ್ಣಕ್ರಿಯೆ, ಮತ್ತು ಹೆಚ್ಚಿನ ಆಹಾರ ತಿನ್ನುವ ಅಭ್ಯಾಸಕ್ಕೆ ಕಡಿವಾಣ ಹಾಕಲಿದೆ.
ದೇಹದ ಮಾತು ಕೇಳಿ: ಬಾಯಾರಿಕೆ ಅಥವಾ ನಿರ್ಜಲೀಕರಣ ಸಮಯದಲ್ಲಿ ದೇಹ ಸೂಚನೆ ನೀಡುತ್ತದೆ. ಬಾಯಾರಿಕೆ ಆದಾಗ ಅದನ್ನು ನಿರ್ಲಕ್ಷ್ಯ ಮಾಡಬಾರದು. ಇದರಿಂದ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಇದರ ಜೊತೆಗೆ ವ್ಯಾಯಾಮ, ಹವಾಮಾನ ಮತ್ತು ಒಟ್ಟಾರೆ ಆರೋಗ್ಯ ಕೂಡ ನೀರಿನ ಬಯಕೆಯನ್ನು ಹೆಚ್ಚಿಸುತ್ತದೆ. (ಎಎನ್ಐ)
ಇದನ್ನೂ ಓದಿ: ದಿನವೊಂದಕ್ಕೆ ಎಷ್ಟು ನೀರು ಕುಡಿಯಬೇಕು?; ಎಷ್ಟು ಕುಡಿದರೆ ಸರಿ, ವೈಜ್ಞಾನಿಕ ಸಂಶೋಧನೆಗಳು ಹೇಳುವುದೇನು?