ನವದೆಹಲಿ: ಇತ್ತೀಚಿನ ದಿನದಲ್ಲಿ ಸ್ನಾಯುಗಳ ಬೆಳವಣಿಗೆಗೆ ಪ್ರೋಟಿನ್ ಪೂರಕಗಳ ಸೇವನೆ ಯುವ ಜನತೆ ಹೆಚ್ಚು ಮೊರೆ ಹೋಗುತ್ತಿದ್ದಾರೆ. ಆದರೆ, ಈ ಪ್ರೋಟಿನ್ ಪೂರಕಗಳಲ್ಲಿ ಸಕ್ಕರೆ ಮತ್ತು ಸೇರ್ಪಡೆಗಳು ಇದ್ದು, ಇವು ವ್ಯಕ್ತಿಯ ಕಿಡ್ನಿ ಮತ್ತು ಮೂಳೆ ಮೇಲೆ ಹಾನಿ ಮಾಡಲಿದೆ. ಸಾಮಾನ್ಯ ಆರೋಗ್ಯವಾಗಿರುವವರು ಇದರ ಸೇವನೆ ಮಾಡುವ ಅವಶ್ಯಕತೆ ಇಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ. ಇದೇ ಅಂಶವನ್ನು ಐಸಿಎಂಆರ್- ಎನ್ಐಎನ್ ಹೊಸ ಆಹಾರ ಮಾರ್ಗಸೂಚಿಯಲ್ಲಿ ಕೂಡ ಸಲಹೆ ನೀಡಲಾಗಿತ್ತು.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ರಾಷ್ಟ್ರೀಯ ಪೋಷಕಾಂಶ ಸಂಸ್ಥೆ (ಐಸಿಎಂಆರ್-ಎನ್ಐಎನ್) ಕಳೆದ ವಾರ ಪೋಷಕಾಂಶ ಕೊರತೆ ನೀಗಿಸಲು ಜೊತೆಗೆ ಸ್ಥೂಲಕಾಯ, ಮಧುಮೇಹ, ಹೃದಯರಕ್ತನಾಳದ ರೋಗದ ಅಪಾಯ ತಪ್ಪಿಸಲು 17 ಆಹಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹೊಸ ಮಾರ್ಗಸೂಚಿಯಲ್ಲಿ ಪುರಾವೆ ಆಧಾರಿತ ಆಹಾರ ಮತ್ತು ಜೀವನ ಶೈಲಿ ಶಿಫಾರಸು ಮಾಡಲಾಗಿತ್ತು. ಪ್ರೋಟಿನ್ ಪೂರಕ ಸೇವನೆ ಮಾಡದಂತೆ ಸಲಹೆ ನೀಡಿದ್ದವು.
ಆರೋಗ್ಯಯುತ ಮತ್ತು ಸರಿಯಾದ ಆಹಾರಗಳೇ ವ್ಯಕ್ತಿಯ ದೈನಂದಿನ ಪ್ರೋಟಿನ್ ಅವಶ್ಯಕತೆಗಳನ್ನು ಪೂರೈಸುತ್ತದೆ. ಪೂರಕಗಳ ಸೇವನೆ ಅವಶ್ಯಕತೆ ಇಲ್ಲ ಎಂದು ತಿಳಿಸಿತು. ಹೊಸ ಮಾರ್ಗಸೂಚಿ ಆಧಾರದ ಪ್ರಕಾರ, ವ್ಯಕ್ತಿ ದಿನಕ್ಕೆ ಕೆಜಿಗೆ 0.83ಗ್ರಾಂ ಮತ್ತು ಅಂದಾಜಿನ ಸರಾಸರಿ ಸೇವನೆ ಕೆಜಿಗೆ 0.66 ಗ್ರಾಂ ಆಗಿದೆ.
ಮೈಕ್ರೋನ್ಯೂಟ್ರಿಯೆಂಟ್ಸ್ ಕುರಿತು ಹೆಚ್ಚಿನ ಜ್ಞಾನ ಮತ್ತು ಮಾಹಿತಿ ಹಿನ್ನೆಲೆ ಸಮತೋಲಿತ ಡಯಟ್ ಪ್ರಮುಖ್ಯತೆಗೆ ಜನರು ಪ್ರೋಟಿನ್ ಪೌಡರ್, ಪ್ರೊಟಿನ್ ಪೂರಕ ಸೇವನೆಗೆ ಮುಂದಾದರು ಎಂದು ಎಂಜಿಎಂ ಹೆಲ್ತ್ಕೇರ್ನ ಮುಖ್ಯಸ್ಥರಾದ ಡಾ ಎನ್ ವಿಜಯಶ್ರೀ ತಿಳಿಸಿದ್ದರು.
ಈ ಪ್ರೋಟಿನ್ ಪೌಡರ್ಗಳನ್ನು ಸಾಮಾನ್ಯವಾಗಿ ಮೊಟ್ಟೆ, ಹಾಲು ಅಥವಾ ಸಸ್ಯಾಧಾರಿತ ಸೋಯಾ, ಬಟಾಣಿ ಅಥವಾ ಅಕ್ಕಿ, ಕೆಲವೊಮ್ಮೆ ಈ ಎಲ್ಲ ಅಂಶಗಳ ಮಿಶ್ರಣದಿಂದ ಮಾಡಲಾಗಿರುತ್ತದೆ. ಈ ಪೂರಕದಲ್ಲಿ ಸಕ್ಕರೆ ಮತ್ತು ಸೇರ್ಪಡೆಗಳಿದ್ದು, ಇವು ಸಮತೋಲಿತ ಡಯಟ್ ಅನ್ನು ವಿಫಲಗೊಳಿಸುತ್ತದೆ. ಅಥವಾ ಕೆಲವೊಮ್ಮೆ ಕಿಡ್ನಿ ಅಥವಾ ಮೂಳೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ವೈದ್ಯರು ತಿಳಿಸಿದ್ದರು.
ದೈಹಿಕ ಚಟುವಟಿಕೆಯಲ್ಲಿ ತೊಡಗಿರುವವರು ಈ ಪ್ರೊಟೀನ್ ಸೇವನೆ ಮಾಡಬಹುದು, ಇದರಿಂದ ಸ್ನಾಯು ನಷ್ಟ ತಡೆಯಬಹುದು. ಜೊತೆಗೆ ಕಾರ್ಬೋಹೈಡ್ರೇಟ್ ಮತ್ತು ಕೊಬ್ಬಿನ ಪರಿಣಾಮಕಾರಿ ಪ್ರಯೋಜನ ಪಡೆಯಬಹುದು ಎನ್ನುತ್ತಾರೆ ಡಾ ವಿಜಯಶ್ರೀ
ಸಾಮಾನ್ಯ ಮತ್ತು ಆರೋಗ್ಯಯುತ ಜನರಿಗೆ ಪೂರಕಗಳನ್ನು ಶಿಫಾರಸು ಮಾಡಿಲ್ಲ. ಅನಾರೋಗ್ಯ, ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ಈ ಪೂರಕಗಳ ಅವಶ್ಯಕತೆ ಬರಬಹುದು. ಅವುಗಳನ್ನು ವೈದ್ಯಕೀಯ ವೃತ್ತಿಪರ ನಿರ್ವಹಣೆ ಮತ್ತು ಶಿಫಾರಸಿನ ಮೇಲೆ ನೀಡಬೇಕಿದೆ ಎಂದಿದ್ದಾರೆ ತಜ್ಞರು. (ಐಎಎನ್ಎಸ್)
ಇದನ್ನೂ ಓದಿ: ಪ್ರೋಟಿನ್ ಪೂರಕಗಳ ಸೇವನೆಯಿಂದ ಗಂಭೀರ ಆರೋಗ್ಯ ಸಮಸ್ಯೆಗೆ ಗುರಿಯಾದೆ: ಸ್ನಾಪ್ಡೀಲ್ ಸಹ ಸಂಸ್ಥಾಪಕ