ETV Bharat / health

2040ರ ವೇಳೆಗೆ ಪ್ರಾಸ್ಟೇಟ್​ ಕ್ಯಾನ್ಸರ್​ ಹೊರೆ ದುಪ್ಪಟ್ಟು: ಲ್ಯಾನ್ಸೆಟ್​ - Prostate Cancer

ಭಾರತ ಸೇರಿದಂತೆ ಕಡಿಮೆ ಮತ್ತು ಮಧ್ಯಮ ಆದಾಯ ಹೊಂದಿರುವ ದೇಶಗಳಲ್ಲಿ ಪ್ರಾಸ್ಟೇಟ್​ ಕ್ಯಾನ್ಸರ್​ ಪ್ರಕರಣ ಮತ್ತು ಸಾವಿನ ದರಗಳಲ್ಲಿ ಹೆಚ್ಚಳವಾಗಬಹುದು ಎಂದು ಅಧ್ಯಯನ ವರದಿ ಹೇಳುತ್ತದೆ.

author img

By ETV Bharat Karnataka Team

Published : Apr 5, 2024, 3:06 PM IST

prostate cancer are likely to double worldwide by 2040

ನವದೆಹಲಿ: 2020ರಲ್ಲಿನ 1.4 ಮಿಲಿಯನ್​ (14 ಲಕ್ಷ) ಇದ್ದ ಪ್ರಾಸ್ಟೇಟ್​ ಕ್ಯಾನ್ಸರ್ ಪ್ರಕರಣಗಳು ಈ ವರ್ಷ 2.9 (29 ಲಕ್ಷ) ಮಿಲಿಯನ್​​ ದಾಖಲಾಗಿವೆ. 2040ರಲ್ಲಿ ಜಾಗತಿಕವಾಗಿ ಪ್ರಾಸ್ಟೇಟ್​ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಲಿದೆ ಎಂದು ಹೊಸ ಅಧ್ಯಯನ ಎಚ್ಚರಿಸಿದೆ. ಈ ಕುರಿತು ಲ್ಯಾನ್ಸೆಟ್​ ಕಮಿಷನ್​ನಲ್ಲಿ ವರದಿ ಪ್ರಕಟಿಸಲಾಗಿದೆ.

ಇದೇ ಸಮಯದಲ್ಲಿ ಕ್ಯಾನ್ಸರ್​ನಿಂದ ವಾರ್ಷಿಕ ಸಾವಿನ ಸಂಖ್ಯೆ ಕೂಡ ಶೇ.85ರಷ್ಟು ಏರಿಕೆಯಾಗಲಿದೆ. 2020ರಲ್ಲಿ 3,75,000 ಇದ್ದ ಸಾವಿನ ಪ್ರಕರಣಗಳು 2040ರಲ್ಲಿ 7,00,00 ಲಕ್ಷ ತಲುಪಿವೆ. ಮುಂಬರುವ ಯುರೋಪಿಯನ್ ಅಸೋಸಿಯೇಶನ್ ಆಫ್ ಯುರಾಲಜಿ ಕಾಂಗ್ರೆಸ್‌ನಲ್ಲಿ ಈ ವಿಷಯದ ಕುರಿತು ವಿಶ್ಲೇಷಣೆ ನಡೆಯಲಿದೆ. ಇದರಲ್ಲಿ ಭಾರತ ಸೇರಿದಂತೆ ಕಡಿಮೆ ಮತ್ತು ಮಧ್ಯಮ ಆದಾಯ ದೇಶಗಳಲ್ಲಿ ಪ್ರಾಸ್ಟೇಟ್​ ಕ್ಯಾನ್ಸರ್​ ಪ್ರಕರಣ ಮತ್ತು ಸಾವಿನ ದರಗಳಲ್ಲಿ ಹೆಚ್ಚಳವಾಗಲಿದೆ ಎಂದು ತಿಳಿಸಲಾಗಿದೆ.

ಪುರುಷರಲ್ಲಿ ಶೇ.15ರಷ್ಟು ಸಾವು ಮತ್ತು ಅಂಗವೈಕಲ್ಯಕ್ಕೆ ಪ್ರಾಸ್ಟೇಟ್​ ಕ್ಯಾನ್ಸರ್​ ಕಾರಣವಾಗಿದೆ. ಹಿರಿಯ ವಯಸ್ಸಿನ ಜನಸಂಖ್ಯೆ ಹೆಚ್ಚಳ ಮತ್ತು ಅಧಿಕ ಜೀವಿತಾವಧಿಯು ಮುಂಬರುವ ದಿನದಲ್ಲಿ ಪ್ರಾಸ್ಟೇಟ್​ ಕ್ಯಾನ್ಸರ್​ ಹೆಚ್ಚಳಕ್ಕೆ ಕಾರಣವಾಗಿದೆ. ಪ್ರಾಸ್ಟೇಟ್ ಕ್ಯಾನ್ಸರ್‌ಗೆ ಬಹುಮುಖ್ಯ ಅಪಾಯಕಾರಿ ಅಂಶಗಳಲ್ಲಿ ಜೀವನಶೈಲಿಯ ಬದಲಾವಣೆಗಳು ಅಥವಾ ಸಾರ್ವಜನಿಕ ಆರೋಗ್ಯ ಮಧ್ಯಸ್ಥಿಕೆಗಳ ಮೂಲಕ 50 ವರ್ಷ ಮೇಲ್ಪಟ್ಟವರಲ್ಲಿ ರೋಗದ ಇತಿಹಾಸ ಹೊಂದಿರುವವರಲ್ಲಿ ಇದನ್ನು ತಡೆಯಲು ಸಾಧ್ಯವಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ.

ಜಗತ್ತಿನಲ್ಲಿ ಮಧ್ಯ ವಯಸ್ಸಿನ ಮತ್ತು ಹಿರಿಯ ವಯಸ್ಕರಲ್ಲಿ ಇದು ಹೆಚ್ಚಾಗಿ ಕಂಡುಬರುತ್ತಿದ್ದು, ಈ ಪ್ರಾಸ್ಟೇಟ್​ ಕ್ಯಾನ್ಸರ್​​ನಲ್ಲಿ ಏರಿಕೆ ಕೂಡ ಆಗುತ್ತಿದೆ. ಈ ಪ್ರಕರಣಗಳು ಮುಂದಿನ ದಿನದಲ್ಲಿ ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಈಗಿನಿಂದಲೇ ಈ ಕುರಿತು ಕ್ರಮಕ್ಕೆ ಮುಂದಾಗಬೇಕಿದೆ ಎಂದು ಲಂಡನ್​ನ ದಿ ಇನ್ಸಿಟಿಟ್ಯೂಟ್​ ಆಫ್​ ಕ್ಯಾನ್ಸರ್​ನ ಪ್ರೊ.ನಿಕ್​ ಜೇಮ್ಸ್​ ಹೇಳಿದ್ದಾರೆ.

ಸಾಕ್ಷಿ ಆಧಾರಿತ ಮಧ್ಯಸ್ಥಿಕೆಗಳಾದ ಆರಂಭಿಕ ಪತ್ತೆ ಮತ್ತು ಈ ಕುರಿತು ಶಿಕ್ಷಣ ಪ್ರಾಸ್ಟೇಟ್​ ಕ್ಯಾನ್ಸರ್​ ಹೊಂದಿರುವವರ ಜೀವ ಉಳಿಸುವಲ್ಲಿ ಸಹಾಯಕವಾಗಿದೆ. ವಿಶೇಷವಾಗಿ, ಕಡಿಮೆ ಮತ್ತು ಮಧ್ಯಮ ಆದಾಯದ ದೇಶದಲ್ಲಿ ಇದು ಹೊರ ಭವಿಷ್ಯದಲ್ಲಿ ಹೆಚ್ಚಲಿದೆ ಎಂದಿದ್ದಾರೆ.

ಸದ್ಯ ಪಿಎಸ್​ಎ ಪರೀಕ್ಷೆ ಮೂಲಕ ಪ್ರಾಸ್ಟೇಟ್​ ಕ್ಯಾನ್ಸರ್​​ ಪತ್ತೆ ಮಾಡಲಾಗುತ್ತದೆ. ರಕ್ತದಲ್ಲಿನ ಪ್ರೋಟಿನ್​ ಮಟ್ಟ ಪರಿಕ್ಷೆ ಮಾಡುವ ಮೂಲಕ ಇದರ ಪತ್ತೆ ಮಾಡಲಾಗುತ್ತದೆ. ಹೆಚ್ಚಿನ ಆದಾಯದ ದೇಶಗಳಲ್ಲಿ ಇದು ಸಾಮಾನ್ಯವಾಗಿದ್ದರೂ, ವಯಸ್ಸಾದ ಪುರುಷರಲ್ಲಿ ಅತಿಯಾದ ಪರೀಕ್ಷೆ ಮತ್ತು ಅನಗತ್ಯ ಚಿಕಿತ್ಸೆಗೆ ಕಾರಣವಾಗಬಹುದು ಎಂದು ಸಂಶೋಧಕರು ವಿವರಿಸಿದ್ದಾರೆ. ಇದರ ಬದಲಾಗಿ ಹೆಚ್ಚು ಅಪಾಯದಲ್ಲಿರುವವರಲ್ಲಿ ಆರಂಭಿಕ ಪತ್ತೆ ಮತ್ತು ಈ ಕುರಿತು ಜ್ಞಾನ ಮತ್ತು ರೋಗನಿರ್ಣಯ ನಡೆಸುವುದು ಅಗತ್ಯ ಎಂದು ಸಲಹೆ ನೀಡಿದ್ದಾರೆ.(ಐಎಎನ್​ಎಸ್​)

ಇದನ್ನೂ ಓದಿ: ತೂಕ ಹೆಚ್ಚಳವಾದರೆ ಪ್ರಾಸ್ಟೇಟ್​ ಕ್ಯಾನ್ಸರ್​ ಅಪಾಯ: ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.