ETV Bharat / health

ಕ್ಯಾನ್ಸರ್​ ವಿರುದ್ಧ ಸ್ವದೇಶಿ ನಿರ್ಮಿತ ಜೀನ್​ ಥೆರಪಿ ಬಿಡುಗಡೆ: 'ಆತ್ಮನಿರ್ಭರ್​ ಭಾರತಕ್ಕೆ ಉದಾಹರಣೆ' ಎಂದ ರಾಷ್ಟ್ರಪತಿ - Gene Therapy - GENE THERAPY

ಜೀನ್‌ ಥೆರಪಿ ಚಿಕಿತ್ಸೆ ಕ್ಯಾನ್ಸರ್‌ ರೋಗಿಗಳ ಬದುಕಿಗೆ ಭರವಸೆಯ ಆಶಾಕಿರಣವಾಗಲಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಬಣ್ಣಿಸಿದ್ದಾರೆ.

first indigenously made and affordable gene therapy for Cancer unveiled by president

author img

By ETV Bharat Karnataka Team

Published : Apr 4, 2024, 5:09 PM IST

ನವದೆಹಲಿ: ಕ್ಯಾನ್ಸರ್​ ಎಂಬ ಮಾರಣಾಂತಿಕ ರೋಗಕ್ಕೆ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಮತ್ತು ಕೈಗೆಟುಕುವ ದರದ ಜೀನ್​ ಥೆರಪಿಯನ್ನು ರಾಷ್ಟ್ರಪತಿ ದ್ರೌಪತಿ ಮುರ್ಮು ಬಿಡುಗಡೆ ಮಾಡಿದ್ದಾರೆ. ಈ ಚಿಕಿತ್ಸೆ ಕ್ಯಾನ್ಸರ್​ನಿಂದ ಬಳಲುತ್ತಿರುವ ಲಕ್ಷಾಂತರ ಜನರಿಗೆ ಭರವಸೆಯ ಬೆಳಕಾಗಲಿದೆ ಎಂದು ಅವರು ಈ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸಿಎಆರ್​-ಟಿ ಸೆಲ್​ ಥೆರಪಿ (CAR-T) ಎಂಬ ಜೀನ್​ ಥೆರಪಿ ಚಿಕಿತ್ಸೆಯನ್ನು ಇಂದು ರಾಷ್ಟ್ರಪತಿ ಐಐಟಿ ಬಾಂಬೆಯಲ್ಲಿ ಉದ್ಘಾಟಿಸಿದ್ದಾರೆ. ಈ ವೇಳೆ ಮಾತನಾಡುತ್ತಾ, "ಅಸಂಖ್ಯಾತ ಜನರಿಗೆ ಹೊಸ ಜೀವನ ನೀಡುವಲ್ಲಿ ಜೀನ್‌ ಥೆರಪಿ ಚಿಕಿತ್ಸೆ ಯಶಸ್ವಿಯಾಗಲಿದೆ. ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ಈ ಸೆಲ್​ ಥೆರಪಿ (ಕೋಶ ಚಿಕಿತ್ಸೆ) ಲಭ್ಯವಿದೆ. ಆದರೆ ಇದು ಬಲು ದುಬಾರಿ. ಜಾಗತಿಕವಾಗಿ ಬಹುತೇಕ ರೋಗಿಗಳ ಕೈಗೆಟುಕುವುದಿಲ್ಲ. ಭಾರತವೂ ಇದರಿಂದ ಹೊರತಾಗಿಲ್ಲ. ಆದರೆ, ಇದೀಗ ಮೇಕ್​ ಇನ್​ ಇಂಡಿಯಾ ಉಪಕ್ರಮದ ಮೂಲಕ ಜೀನ್‌ ಥೆರಪಿಯನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಆತ್ಮನಿರ್ಭರ್​ ಭಾರತಕ್ಕೆ ಉದಾಹರಣೆ" ಎಂದು ಅವರು ತಿಳಿಸಿದರು.

ಐಐಟಿ ಬಾಂಬೆ ಮತ್ತು ಟಾಟಾ ಮೆಮೋರಿಯಲ್​ ಆಸ್ಪತ್ರೆಯ ಸಹಯೋಗದೊಂದಿಗೆ ಕೈಗಾರಿಕಾ ಭಾಗಿದಾರರಾಗಿರುವ ಇಮ್ಮ್ಯೂನೊಆಕ್ಟ್​​ ಜತೆಯಾಗಿ ಸಿಎಆರ್​-ಟಿ ಸೆಲ್​ ಥೆರಪಿಯನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಶೈಕ್ಷಣಿಕ-ಕೈಗಾರಿಕಾ ಸಹಭಾಗಿತ್ವಕ್ಕೆ ಅತ್ಯುತ್ತಮ ಉದಾಹರಣೆ. ಅತ್ಯಾಧುನಿಕ, ಪರಿಣಾಕಾರಿ, ಕೈಗೆಟುಕುವ ಚಿಕಿತ್ಸೆಯೂ ಹೌದು ಎಂದು ಅವರು ತಿಳಿಸಿದರು.

ಸಿಎಆರ್​ಟಿ ಸೆಲ್​ ಥೆರಪಿ ಇಮ್ಯೂನೋಥೆರಪಿ ಮತ್ತು ಜೀನ್​ ಥೆರಪಿಯ ರೂಪವಾಗಿದೆ. ಕ್ಯಾನ್ಸರ್​ ವಿರುದ್ಧ ಹೋರಾಡಲು ರೋಗಿಗಳ ಪ್ರತಿರೋಧಕ ಕೋಶಗಳು ವಿಶೇಷವಾಗಿ ಟಿ ಸೆಲ್​​ಗಳನ್ನು ರೂಪಾಂತರಿಸಲು ಸಂಕೀರ್ಣ ಜಿನೆಟಿಂಗ್​ ಇಂಜಿನಿಯರಿಂಗ್​ ಬೇಕಾಗುತ್ತದೆ. ಭಾರತದಲ್ಲಿ ಕಳೆದೊಂದು ದಶಕದಿಂದ ಈ ರೀತಿಯ ಥೆರಪಿಯ ಅಭಿವೃದ್ಧಿ ನಡೆಯುತ್ತಿದೆ. ಇದನ್ನು 2023ರಲ್ಲಿ ಅನುಮೋದನೆ ನೀಡಲಾಗಿದೆ. ಇದು ಭಾರತದ ವಿಜ್ಞಾನಿಗಳು ಮತ್ತು ಫಿಜಿಷಿಯನ್‌ಗಳ​ (ಸಾಮಾನ್ಯ ವೈದ್ಯರು) ಕೌಶಲ್ಯ ಹೊಂದಿದೆ ಎಂದು ರಾಷ್ಟ್ರಪತಿ ಹೇಳಿದರು.

ಜಾಗತಿಕವಾಗಿ ಅನೇಕ ಜನರ ಸಾವಿಗೆ ಈ ಕ್ಯಾನ್ಸರ್​ ಕಾರಣವಾಗುತ್ತಿದೆ. ಭಾರತದಲ್ಲಿ 2022ರಲ್ಲಿ ಕ್ಯಾನ್ಸರ್‌ನಿಂದ 14.6 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. ಈ ಸಂಖ್ಯೆ 2025ರ ಹೊತ್ತಿಗೆ 15.7 ಲಕ್ಷ ತಲುಪಲಿದೆ. ಇದೀಗ ಬಿಡುಗಡೆ ಮಾಡಿರುವ ಈ ಥೆರಪಿಯು ಕ್ಯಾನ್ಸರ್​ ವಿರುದ್ಧದ ಹೋರಾಟದಲ್ಲಿ ಮಹತ್ವದ ಹೆಜ್ಜೆ ಎಂದು ರಾಷ್ಟ್ರಪತಿ ಮುರ್ಮು ಮೆಚ್ಚುಗೆ ವ್ಯಕ್ತಪಡಿಸಿದರು.(ಐಎಎನ್​ಎಸ್​)

ಇದನ್ನೂ ಓದಿ: ಮಹಿಳೆಯರನ್ನ ಕಾಡುವ ಅಂಡಾಶಯ ಕ್ಯಾನ್ಸರ್​​ ಆರಂಭಿಕ ಹಂತದಲ್ಲೇ ಪತ್ತೆ ಹಚ್ಚುವುದು ಅವಶ್ಯಕ; ತಜ್ಞರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.