ETV Bharat / health

ಪಾಕಿಸ್ತಾನದ ಯುವತಿಯ ಎದೆಯಲ್ಲಿ ಭಾರತೀಯನ ಹೃದಯ ಮಿಡಿತ: ಚೆನ್ನೈನಲ್ಲಿ ಯಶಸ್ವಿ ಕಸಿ ಚಿಕಿತ್ಸೆ - INDIAN HEART BEATS Pakistan Girl - INDIAN HEART BEATS PAKISTAN GIRL

ದೆಹಲಿ ಮೂಲದ 69 ವರ್ಷದ ವ್ಯಕ್ತಿಯ ಹೃದಯವನ್ನು ಪಾಕಿಸ್ತಾನದ 19 ವರ್ಷದ ಯುವತಿಗೆ ಕಸಿ ಮಾಡಲಾಗಿದೆ.

pakistan-19-year-girl-gets-indians-heart-in-chennai-hospital

author img

By ETV Bharat Karnataka Team

Published : Apr 25, 2024, 12:58 PM IST

ಚೆನ್ನೈ, ತಮಿಳುನಾಡು: ತೀವ್ರ ಆರೋಗ್ಯ ಸಮಸ್ಯೆಗೆ ಒಳಗಾಗಿ ಚಿಕಿತ್ಸೆಗೆ ಭಾರತಕ್ಕೆ ಆಗಮಿಸಿದ ಪಾಕಿಸ್ತಾನದ 19 ವರ್ಷದ ಆಯೇಷಾ ರಾಷಾನಾ ಹೃದಯದಲ್ಲೀಗ ಭಾರತೀಯನ ಹೃದಯ ಮಿಡಿಯುತ್ತಿದೆ. ದೆಹಲಿಯಲ್ಲಿ ಮಿದುಳು ನಿಷ್ಕ್ರಿಯಗೊಂಡಿದ್ದ 69 ವರ್ಷದ ವ್ಯಕ್ತಿಯ ಹೃದಯದಿಂದ ಅಯೇಷಾಗೆ ಮರು ಹುಟ್ಟು ನೀಡಿದ್ದಾರೆ ಚೆನ್ನೈ ಆಸ್ಪತ್ರೆ ವೈದ್ಯರು.

ಏನಿದು ಘಟನೆ: 2019ರಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದ 14 ವರ್ಷದ ಆಯೇಷಾ ರಾಷಾನ್ ತೀವ್ರ ಹೃದಯ ಸಮಸ್ಯೆಗೆ ಒಳಗಾಗಿದ್ದಳು. ಆಕೆಯ ಹೃದಯದ ಕವಾಟಗಳು ವೈಫಲ್ಯವಾಗಿತ್ತು. ಈ ವೇಳೆ, ಮಗಳ ಜೀವ ಉಳಿಸುವಂತೆ ಆಕೆಯ ಪೋಷಕರು ಚೆನ್ನೈನ ಎಂಜಿಎಂ ಹೃದ್ರೋಗತಜ್ಞ ಡಾ ಕೆ. ಆರ್​ ಬಾಲಕೃಷ್ಣನ್​ ಮೊರೆ ಹೋದರು.

ಹೃದಯದ ಕವಾಟದಲ್ಲಿ ಸಮಸ್ಯೆ ಹೊಂದಿದ್ದ ಆಯೇಷಾಳನ್ನು ಪರೀಕ್ಷಿಸಿದ ವೈದ್ಯರು, ಯಾಂತ್ರಿಕವಾಗಿ ರಕ್ತ ಪಂಪ್ ಮಾಡಲು​ ಸಹಾಯವಾಗುವ ಮಷಿನ್​​​ ಅಳವಡಿಸಿ, ಆಕೆಯ ಹೃದಯ ಕಾರ್ಯಾಚರಣೆ ಮಾಡುವಂತೆ ಮಾಡಿದರು. ಈ ಶಸ್ತ್ರಚಿಕಿತ್ಸೆ ಬಳಿಕ ತವರಿಗೆ ತೆರಳಿದ್ದ ಆಯೇಷಾ 2023ರಲ್ಲಿ ಬಲ ಹೃದಯ ಕೂಡ ವಿಫಲವಾಗುವ ಜೊತೆಗೆ ಸೋಂಕಿಗೆ ತುತ್ತಾಗಿತು. ಈ ವೇಳೆ ಕಂಗಲಾದ ಪೋಷಕರು ವೈದ್ಯರ ಬಳಿ ಬಂದರು.

ಈ ಬಾರಿ ಪರೀಕ್ಷಿಸಿದ ಡಾ ಕೆ ಆರ್​ ಬಾಲಕೃಷ್ಣನ್​ ಹೃದಯ ಕಸಿ ಚಿಕಿತ್ಸೆ ಮಾತ್ರವೇ ತಮಗೆ ಆಯ್ಕೆಯಾಗಿ ಉಳಿದಿರುವುದಾಗಿ ತಿಳಿಸಿದರು. ಹೃದಯಕ್ಕಾಗಿ ರಾಜ್ಯ ಅಂಗಾಂಗ ನೋಂದಾಣಿಗೆ ದಾಖಲು ಮಾಡಿದರು. ಅಷ್ಟೇ ಅಲ್ಲದೆ, ಈ ಸಂದರ್ಭದಲ್ಲಿ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ಕುಟುಂಬಕ್ಕೆ ನೆರವು ನೀಡಲು ಐಶ್ವರ್ಯಾ ಟ್ರಸ್ಟ್​ (ಎನ್​ಜಿಒ) ಸಹಾಯವನ್ನು ಕೋರಿದರು.

ಇಂತಹ ಸಂದರ್ಭದಲ್ಲಿ ಆಯೇಷಾಳ ಅದೃಷ್ಟ ಎಂಬಂತೆ 69 ವರ್ಷದ ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿ ಹೃದಯ ಸಿಕ್ಕಿತು. (ದೇಶದಲ್ಲಿ ಹೃದಯ ಸ್ವೀಕರಿಸುವವರು ಅಥವಾ ಹೊಂದಿಕೆಯಾಗದ ಹೃದಯ ಸಿಗದಾಗ ವಿದೇಶಿಗರ ಚಿಕಿತ್ಸೆಗೆ ಬಳಕೆ ಮಾಡಬಹುದು) ಐಶ್ವರ್ಯಾ ಟ್ರಸ್ಟ್​ ಮತ್ತು ಎಂಜಿಎಂ ಹೆಲ್ತ್​ಕೇರ್​​ ನೆರವಿನಿಂದಾಗಿ ಇದೀಗ ಯುವತಿ ಉಚಿತವಾಗಿ ಚಿಕಿತ್ಸೆ ನೀಡಲಾಗಿದೆ.

ಶಸ್ತ್ರ ಚಿಕಿತ್ಸೆ ಬಳಿಕ ಆಕೆಯ ಆರೋಗ್ಯ ತಪಾಸಣೆಗಾಗಿ ರೋಗಿಯ ಕುಟುಂಬ ಕಳೆದ 18 ತಿಂಗಳಿನಿಂದ ಭಾರತದಲ್ಲಿ ನೆಲೆಸಿದೆ. ಆರು ತಿಂಗಳ ಹಿಂದೆ ದೆಹಲಿ ವ್ಯಕ್ತಿ ಹೃದಯದಿಂದ ಇದೀಗ ಆಯೇಷಾ ಬದುಕು ಹಸನಾಗಿದೆ.

ಇದನ್ನೂ ಓದಿ: 71 ವರ್ಷದ ವೃದ್ಧಗೆ ಮೂರನೇ ಬಾರಿಗೆ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ ನಡೆಸಿದ ಆಸ್ಟರ್​​ ಆರ್​​ವಿ ಆಸ್ಪತ್ರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.