ETV Bharat / health

ಭಾರತದಲ್ಲಿ ತಂಬಾಕು ಸೇವನೆ ತ್ಯಜಿಸಿದ ಶೇ 46ರಷ್ಟು ಯುವಜನತೆ: ವರದಿ - Quit Tobacco

author img

By ETV Bharat Karnataka Team

Published : May 31, 2024, 10:42 AM IST

ಈ ವರದಿಯು ಭಾರತದ ಯುವ ಜನತೆಯಲ್ಲಿ ತಂಬಾಕು ಪದಾರ್ಥಗಳ ಕುರಿತು ಉಂಟಾಗುತ್ತಿರುವ ಜಾಗೃತಿಯನ್ನು ತೋರಿಸುತ್ತದೆ.

About 46.96 per cent of young adults aged 18 24 have quit tobacco in India
ಸಾಂದರ್ಭಿಕ ಚಿತ್ರ (IANS)

ನವದೆಹಲಿ: ಭಾರತದಲ್ಲಿ 18ರಿಂದ 24 ವರ್ಷದ ಶೇ.46.96ರಷ್ಟು ಯುವ ಜನತೆ ತಂಬಾಕು ಸೇವನೆ ತ್ಯಜಿಸಿದ್ದಾರೆ ಎಂದು ವರದಿಯಾಗಿದೆ. ಸರ್ಕಾರದ ರಾಷ್ಟ್ರೀಯ ತಂಬಾಕು ಕ್ವಿಟ್​ಲೈನ್​ ಸೇವೆಗೆ (ಎನ್​ಟಿಕ್ಯೂಎಲ್​ಎಸ್​) ಬಂದ ಕರೆಗಳ ಆಧಾರದಲ್ಲಿ ವಲ್ಲಭಭಾಯಿ ಪಟೇಲ್​ ಚೆಸ್ಟ್​ ಇನ್ಸುಟಿಟ್ಯೂಟ್​ (ವಿಪಿಸಿಐ) ಈ ಸಮೀಕ್ಷೆ ನಡೆಸಿದೆ.

ವಿಶ್ವ ತಂಬಾಕುರಹಿತ ದಿನವನ್ನು ಪ್ರತೀ ವರ್ಷ ಮೇ 31ರಂದು ಆಚರಿಸಲಾಗುತ್ತದೆ. ಎನ್​ಟಿ ಕ್ಯೂಎಲ್‌ಎಸ್​​ ದತ್ತಾಂಶದ ಮೇಲೆ ವಿಪಿಸಿಐ ನಡೆಸಿದ ಸಮೀಕ್ಷೆಯಲ್ಲಿ ತಂಬಾಕು ಚಟದಿಂದ ದೂರವಾಗುವ ಹೆಲ್ಪ್​ಲೈನ್‌ಗೆ 4,77,585 ನೋಂದಾಯಿತ ಕರೆಗಳು ಬಂದಿದ್ದು, 1,44,938 ಮಂದಿ ತಂಬಾಕು ತ್ಯಜಿಸುವುದಾಗಿ ತಿಳಿಸಿದ್ದಾರೆ. 2016ರ ಮೇ ತಿಂಗಳಿಂದ 2024ರ ನಡುವೆ ಒಟ್ಟು 8.2 ಮಿಲಿಯನ್​ ಕರೆಗಳು ಇಂಟರ್​ಆಕ್ಟೀವ್​ ವಾಯ್ಸ್​​ ರೆಸ್ಪಾನ್ಸ್​​ ಮೂಲಕ ಬಂದಿದೆ.

ಎನ್​ಟಿಕ್ಯೂಎಲ್​ಎಸ್‌ಗೆ​​ ಶೇ.46.96ರಷ್ಟು ಕರೆಗಳು 18ರಿಂದ 24 ವರ್ಷದವರಿಂದ ಬಂದಿದೆ. ಇವರೆಲ್ಲ 12ನೇ ದರ್ಜೆಯ ಶಿಕ್ಷಣ ಹೊಂದಿದ್ದು, ತಂಬಾಕು ಪದಾರ್ಥ ತ್ಯಜಿಸಿದ್ದಾರೆ.

ತಂಬಾಕು ತ್ಯಜಿಸುವಲ್ಲಿ ಯುಪಿ ಮುಂದು: ರಾಜ್ಯವಾರು ಗಮನಿಸಿದಾಗ, ಉತ್ತರ ಪ್ರದೇಶದ ಯುವ ಜನತೆ ತಂಬಾಕು ತ್ಯಜಿಸುವಲ್ಲಿ ಮುಂದಿದ್ದಾರೆ. ಯುಪಿಯಲ್ಲಿ ಶೇ.29.68ರಷ್ಟು ಮಂದಿ ತಂಬಾಕು ತ್ಯಜಿಸಿದ್ದಾರೆ. ಇವರಲ್ಲಿ ಶೇ.77.74ರಷ್ಟು ಮಂದಿ ಆಲ್ಕೋಹಾಲ್​ ಸೇವನೆ ಇತಿಹಾಸ ಹೊಂದಿಲ್ಲ.

ದೇಶದಾದ್ಯಂತ ಜನರು ತಂಬಾಕು ಚಟದಿಂದ ಮುಕ್ತಿ ಹೊಂದಲು ಎನ್​ಟಿಕ್ಯೂಎಲ್​ಎಸ್​ ಉಚಿತ, ಗೌಪ್ಯ ಸಮಾಲೋಚನೆ ಮತ್ತು ಮಾರ್ಗದರ್ಶನ ಒದಗಿಸುತ್ತದೆ. ಈ ಮೂಲಕ ಅವರ ಆರೋಗ್ಯದ ಜವಾಬ್ದಾರಿ ತೆಗೆದುಕೊಳ್ಳುವ ಮೂಲಕ ದೇಶವನ್ನು ಸಬಲಗೊಳಿಸುತ್ತಿದೆ ಎಂದು ವಲ್ಲಭಬಾಯಿ ಚೆಸ್ಟ್​ ಇನ್ಸುಟಿಟ್ಯೂಟ್​ನ ನಿರ್ದೇಶಕ ಡಾ.ರಾಜ್​ ಕುಮಾರ್​ ತಿಳಿಸಿದ್ದಾರೆ.

ತಂಬಾಕು ತ್ಯಜಿಸುವುದು ಕೇವಲ ಇಚ್ಛಾಶಕ್ತಿಯನ್ನು ಮಾತ್ರ ಅವಲಂಬಿಸಿಲ್ಲ. ಇದು ಮಾನಸಿಕ ಮತ್ತು ನಡುವಳಿಕೆ ಅಂಶಗಳನ್ನೂ ತಿಳಿಸುತ್ತದೆ. ಕಳೆದ 23 ವರ್ಷಗಳಲ್ಲಿ ಸಂಸ್ಥೆಯು ಹಲವು ಸಾರ್ವಜನಿಕ ಜಾಗೃತಿ ಕಾರ್ಯಕ್ರಮ, ತಂಬಾಕು ವಿರೋಧಿ ಅಭಿಯಾನ ಮತ್ತು ಸೆಮಿನಾರ್‌ಗಳನ್ನು ಆಯೋಜಿಸಿದೆ ಎಂದು ಅವರು ಹೇಳಿದರು. (ಐಎಎನ್​ಎಸ್​)

ಇದನ್ನೂ ಓದಿ: ಮಾನಸಿಕ ಆರೋಗ್ಯ ಸವಾಲುಗಳಿಗೆ ಸಂಜೀವಿನಿ Tele MANASಗೆ ಪ್ರತಿನಿತ್ಯ 3,500 ಕರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.