ETV Bharat / health

ಏನಿದು ಟ್ರೆಡ್​ಮಿಲ್​ ವಾಕಿಂಗ್​.. ಇದರಿಂದ ಆರೋಗ್ಯಕ್ಕೇನು ಲಾಭ: ತಜ್ಞರು ಹೇಳುವುದೇನು? - WHICH WALKING IS BEST

author img

By ETV Bharat Karnataka Team

Published : Jun 14, 2024, 6:56 AM IST

Outdoors Vs Treadmill Walking: ನಿತ್ಯ ವಾಕಿಂಗ್‌ ಮಾಡುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು ಹಾಗೂ ದೇಹವನ್ನು ಸದಾ ಉಲ್ಲಾಸದಿಂದ ಇರಿಸಲು ಇದು ಪ್ರಯೋಜನಕಾರಿ ಎಂದು ಹಲವರು ನಂಬುತ್ತಾರೆ. ದಿನವಿಡಿ ಲವಲವಿಕೆಯಿಂದ ಇರಲು ಅನೇಕ ಜನರು ಬೆಳಗ್ಗೆ ಎದ್ದು ನಡೆದುಕೊಂಡು ಹೋಗಲು ಇಷ್ಟ ಪಡುತ್ತಾರೆ. ವಾಕಿಂಗ್​ ಮಾಡುವುದೇನೋ ಸರಿ, ಹೊರಾಂಗಣದಲ್ಲಿ ನಡೆಯುವುದು ಉತ್ತಮವೇ? ಟ್ರೆಡ್ ಮಿಲ್ ಮೇಲೆ ನಡೆಯುವುದು ಉತ್ತಮವೇ? ಈ ಬಗ್ಗೆ ತಜ್ಞರು ಹೇಳೋದೇನು?

Outdoors Vs Treadmill Walking  Which is Better
ಏನಿದು ಟ್ರೆಡ್​ಮಿಲ್​ ವಾಕಿಂಗ್​.. ಇದರಿಂದ ಆರೋಗ್ಯಕ್ಕೇನು ಲಾಭ: ತಜ್ಞರು ಹೇಳುವುದೇನು? (ETV Bharat)

Outdoors Vs Treadmill Walking Which is Better: ವಾಕಿಂಗ್ ಇದು ನೈಸರ್ಗಿಕ ವ್ಯಾಯಾಮ. ಎಲ್ಲಾ ವ್ಯಾಯಾಮಗಳಿಗಿಂತ ವಾಕಿಂಗ್​ ಮಾಡುವುದು ಸುಲಭ ಮತ್ತು ಎಲ್ಲರಿಗೂ ಸೂಕ್ತವಾಗಿದೆ. ಆದರೆ, ಸಮಯದ ಅಭಾವದಿಂದ ಪಟ್ಟಣ ಮತ್ತು ನಗರಗಳಲ್ಲಿ ವಾಸಿಸುವ ಜನರು ಹೆಚ್ಚಾಗಿ ಟ್ರೆಡ್ ಮಿಲ್ ಮೇಲೆ ನಡೆಯುತ್ತಾರೆ. ಇನ್ನು ಕೆಲವರು ಮೈದಾನದಲ್ಲಿ ಓಡುತ್ತಾರೆ. ಹಾಗಾದರೆ, ಎರಡರಲ್ಲಿ ಯಾವುದು ಉತ್ತಮ? ಇವೆರಡೂ ಒಂದೇ ರೀತಿಯ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆಯೇ? ಈಗ ಪ್ರಶ್ನೆಗಳಿಗೆ ತಜ್ಞರ ಉತ್ತರವನ್ನು ಈಗ ನೋಡೋಣ.

ಹೆಚ್ಚಿನ ಕ್ಯಾಲೋರಿ: ನೀವು ಹೊರಾಂಗಣದಲ್ಲಿ ಓಡುವಾಗ ಗಾಳಿಯನ್ನು ಎದುರಿಸಿ ಓಡುತ್ತಿರುತ್ತೀರಿ. ಇದು ನಿಮ್ಮ ವ್ಯಾಯಾಮವನ್ನು ಹೆಚ್ಚು ಸವಾಲಾಗಿಸುತ್ತದೆ ಅಂತಾರೆ ತಜ್ಞರು. ಗಾಳಿಯನ್ನು ತಳ್ಳುತ್ತಾ ನಡೆಯುವುದರಿಂದ ಹೆಚ್ಚಿನ ಕ್ಯಾಲೊರಿಗಳನ್ನು ಈ ವೇಳೆ ಖರ್ಚು ಮಾಡಬೇಕಾಗುತ್ತದೆ. ಹೊರಾಂಗಣದ ನಡಿಗೆಗೆ ಹೋಲಿಸಿದರೆ ಟ್ರೆಡ್‌ಮಿಲ್ ವಾಕಿಂಗ್‌ನಲ್ಲಿ ಗಾಳಿಯ ಪ್ರತಿರೋಧವಿರಲ್ಲ. ಟ್ರೆಡ್‌ಮಿಲ್ ವಾಕಿಂಗ್‌ನಲ್ಲಿ ಕಡಿಮೆ ಕ್ಯಾಲೊರಿಗಳನ್ನು ಖರ್ಚು ಮಾಡಲಾಗುತ್ತದೆ. ಹೊರಾಂಗಣದಲ್ಲಿ ನಡೆಯುವವರು ಟ್ರೆಡ್‌ಮಿಲ್‌ನಲ್ಲಿ ನಡೆಯುವವರಿಗಿಂತ ಶೇ 10ರಷ್ಟು ಹೆಚ್ಚು ಕ್ಯಾಲೊರಿಗಳನ್ನು ನಷ್ಟವನ್ನು ಮಾಡಿಕೊಳ್ಳುತ್ತಾರೆ ಎಂದು ಅನೇಕ ಅಧ್ಯಯನಗಳು ಸಾಬೀತು ಮಾಡಿವೆ.

ಮಾನಸಿಕ ಉತ್ಸಾಹ: ಟ್ರೆಡ್ ಮಿಲ್ ಬಳಸುವುದಕ್ಕಿಂತ ಹೊರಾಂಗಣದಲ್ಲಿ ನಡೆಯುವುದು ಹೆಚ್ಚು ಆನಂದದಾಯಕ ಎನ್ನುವುದು ತಜ್ಞರ ಅಭಿಮತವಾಗಿದೆ. ನಾವು ಹೊರಗೆ ನಡೆಯುವಾಗ, ಪ್ರಕೃತಿ ಸೌಂದರ್ಯವನ್ನು ಆನಂದಿಸುತ್ತೇವೆ, ವಿಭಿನ್ನ ದೃಶ್ಯಗಳನ್ನು ಕಣ್ಮುಂಬಿಕೊಳ್ಳುತ್ತೇವೆ. ಈ ವೇಳೆ ಇತರ ಜನರೊಂದಿಗೆ ಮಾತನಾಡುತ್ತೇವೆ. ಹೊರಾಂಗಣದಲ್ಲಿ ನಡೆಯುವುದು ಹೆಚ್ಚು ನೈಸರ್ಗಿಕ ಚಲನೆಯನ್ನು ಒಳಗೊಂಡಿರುತ್ತದೆ. ಹೆಜ್ಜೆಗಳು, ದೂರ ಮತ್ತು ನಡಿಗೆಯಲ್ಲಿ ವಿವಿಧ ರೀತಿಯ ವ್ಯತ್ಯಾಸಗಳಿರುತ್ತವೆ. ಮೇಲಾಗಿ ಹೊರಗೆ ನಡೆಯುವುದರಿಂದ ಮಾನಸಿಕ ಸಮಸ್ಯೆಗಳು ಕಡಿಮೆಯಾಗುತ್ತವೆ ಎನ್ನುತ್ತಾರೆ ತಜ್ಞರು.

ಟ್ರೆಡ್‌ಮಿಲ್ ವಾಕಿಂಗ್‌ನಲ್ಲಿ ಮೇಲಿನ ಇದ್ಯಾವುವು ನಡೆಯುವುದಿಲ್ಲ. ಟ್ರೆಡ್ ಮಿಲ್ ಮೇಲೆ ನಡೆಯುವುದು ಕೃತಕವಾಗಿರುತ್ತದೆ. 2018 ರಲ್ಲಿ ಜರ್ನಲ್ ಆಫ್ ಫಿಸಿಕಲ್ ಆಕ್ಟಿವಿಟಿ ಮತ್ತು ಹೆಲ್ತ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಪ್ರತಿದಿನ 30 ನಿಮಿಷಗಳ ಕಾಲ ಹೊರಾಂಗಣದಲ್ಲಿ ನಡೆದಾಡುವ ಜನರು ಟ್ರೆಡ್‌ಮಿಲ್‌ನಲ್ಲಿ 30 ನಿಮಿಷಗಳ ಕಾಲ ನಡೆದಾಡುವವರಿಗಿಂತ ಕಡಿಮೆ ಒತ್ತಡ ಮತ್ತು ಆತಂಕವನ್ನು ಹೊಂದಿರುತ್ತಾರೆ. ಸ್ಕಾಟಿಷ್ ಮಾನಸಿಕ ಆರೋಗ್ಯ ಸಂಶೋಧಕ ಮತ್ತು ಎಡಿನ್‌ಬರ್ಗ್ ವಿಶ್ವವಿದ್ಯಾನಿಲಯದ ಸಾರ್ವಜನಿಕ ಆರೋಗ್ಯ ವಿಜ್ಞಾನ ವಿಭಾಗದ ಹಿರಿಯ ಉಪನ್ಯಾಸಕ ಡಾ ಅಲಸ್ಟೈರ್ ಸ್ಟೀವರ್ಟ್ ಈ ಸಂಶೋಧನೆಯಲ್ಲಿ ಭಾಗವಹಿಸಿ, ಇದರ ಅನುಭವ ಪಡೆದುಕೊಂಡಿದ್ದಾರೆ.

ತಾಜಾ ಗಾಳಿ: ತಜ್ಞರು ಹೇಳುವಂತೆ ಹೊರಗಡೆ ನಡೆದಾಡುವಾಗ ಶುದ್ಧ ಗಾಳಿಯನ್ನು ಉಸಿರಾಡುತ್ತೇವೆ. ಟ್ರೆಡ್ ಮಿಲ್ ವಾಕಿಂಗ್ ನಲ್ಲಿ ಇದು ಸಾಧ್ಯವಿಲ್ಲ.

ಚಲನೆ: ಹೊರಗೆ ನಡೆಯುವುದು ನೈಸರ್ಗಿಕವಾಗಿ ದೇಹದ ಚಲನೆಯನ್ನು ಒಳಗೊಂಡಿರುತ್ತದೆ. ಹೀಗಾಗಿ ನಾವು ಹೆಚ್ಚು ಲವಲವಿಕೆಯಿಂದ ಇರಬಹುದಾಗಿದೆ.

ಯಾವುದು ಒಳ್ಳೆಯದು: ವಿಭಿನ್ನ ಟ್ರೆಡ್‌ಮಿಲ್‌ಗಳ ಮೇಲೆ ನಡೆಯುವುದು ಹೊರಾಂಗಣದಲ್ಲಿ ನಡೆಯುವುದಕ್ಕಿಂತ ಖಂಡಿತವಾಗಿಯೂ ಭಿನ್ನವಾಗಿರುತ್ತದೆ ಅಂತಾರೆ ತಜ್ಞರು. ಟ್ರೆಡ್ ಮಿಲ್ ವಾಕಿಂಗ್ ನಿಮಗೆ ಒಳ್ಳೆಯದಾದರೂ, ಇದು ಹೊರಗೆ ನಡೆಯುವುದಕ್ಕಿಂತ ಹೆಚ್ಚಿನ ಪ್ರಯೋಜನವನ್ನು ನೀಡುವುದಿಲ್ಲ ಎಂಬುದು ನುರಿತವರ ಹಾಗೂ ಅರಿತವರ ಅಭಿಮತವಾಗಿದೆ.

ನಿಮ್ಮ ಗಮನಕ್ಕೆ : ಇಲ್ಲಿ ನೀಡಿರುವ ಎಲ್ಲ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಆರೋಗ್ಯ ತಜ್ಞರ ಸಲಹೆ ತೆಗೆದುಕೊಳ್ಳುವುದು ಉತ್ತಮ.

ಇದನ್ನು ಓದಿ: ವಾಕಿಂಗ್​​​ನಿಂದ ಖಂಡಿತಾ ತೂಕ ಕಳೆದುಕೊಳ್ಳಬಹುದು; ಆದರೆ, ದಿನಕ್ಕೆ ಎಷ್ಟು ದೂರ ನಡೆದರೆ ಪ್ರಯೋಜನ ಗೊತ್ತಾ? - calories burn in daily walk

ನಿಮಗೆ ಫ್ರಿಡ್ಜ್‌ ಸರಿಯಾದ ಬಳಕೆ ಗೊತ್ತಾ? ಗೋಡೆ ಮತ್ತು ಫ್ರಿಡ್ಜ್‌ ನಡುವೆ ಎಷ್ಟು ಅಂತರ ಇರಬೇಕು? ಇಲ್ಲಿದೆ ಸೇಫ್ಟಿ ಟಿಪ್ಸ್‌ - Fridge Safety Tips

ETV Bharat Logo

Copyright © 2024 Ushodaya Enterprises Pvt. Ltd., All Rights Reserved.