ETV Bharat / health

ಮನೆಯಲ್ಲಿ ತರಕಾರಿ ಇಲ್ಲ ಎಂಬ ಚಿಂತೆ ಏಕೆ? ಹತ್ತೇ ನಿಮಿಷದಲ್ಲಿ ಮಾಡಿ ಈರುಳ್ಳಿ ಚಟ್ನಿ, ಸವಿದರೆ ದಿಲ್‌ಖುಷ್‌! - Onion Chutney Recipe - ONION CHUTNEY RECIPE

Onion Chutney Recipe: ಕೆಲವೊಮ್ಮೆ ಮನೆಯಲ್ಲಿ ತರಕಾರಿ ಇರುವುದಿಲ್ಲ. ಮಾರುಕಟ್ಟೆಗೆ ಹೋಗಲು ಸಮಯ ಮತ್ತು ತಾಳ್ಮೆಯೂ ಇರದು. ಇಂಥ ಸಂದರ್ಭದಲ್ಲಿ ನೀವು 10 ನಿಮಿಷದಲ್ಲಿ ಈರುಳ್ಳಿ ಚಟ್ನಿ ಮಾಡಬಹುದು. ಈ ಚಟ್ನಿ ಸಿದ್ಧಪಡಿಸುವುದು ಹೇಗೆ?. ಇಲ್ಲಿದೆ ರೆಸಿಪಿ.

NION CHUTNEY RECIPE IN Kannada  ONION CHUTNEY  HOW TO MAKE ONION PICKLE  ONION CHUTNEY RECIPE
ಈರುಳ್ಳಿ ಚಟ್ನಿ (ETV Bharat)
author img

By ETV Bharat Health Team

Published : Sep 19, 2024, 1:07 PM IST

Updated : Sep 19, 2024, 1:21 PM IST

How To Make Onion Chutney: ಮನೆಯಲ್ಲಿ ತರಕಾರಿ ಇಲ್ಲದೇ ಇದ್ದಾಗ ಈರುಳ್ಳಿಯೊಂದಿಗೆ ರುಚಿಕರವಾದ ಚಟ್ನಿ ಮಾಡಬಹುದು. ಹೌದು. ಒಮ್ಮೆ ಸಖತ್​ ಟೇಸ್ಟಿಯಾಗಿರುವ ಈರುಳ್ಳಿಯ ಚಟ್ನಿಯ ರುಚಿ ನೋಡಿದ್ರೆ, ಮತ್ತೆ ಮತ್ತೆ ಮಾಡಬೇಕೆನಿಸುತ್ತದೆ. ಈ ಚಟ್ನಿ ತಯಾರಿಸುವುದು ತುಂಬಾ ಸುಲಭ. ಈರುಳ್ಳಿ ಚಟ್ನಿಯನ್ನು ಬಿಸಿ ಅನ್ನದೊಂದಿಗೆ ಸೇವಿಸಿದರೆ ದಿಲ್ ಖುಷ್​ ಖಂಡಿತ. ಹಾಗಂತ, ಅನ್ನದಲ್ಲಷ್ಟೇ ಅಲ್ಲದೇ ಇಡ್ಲಿ, ದೋಸೆ, ವಡೆ.. ಮುಂತಾದವುಗಳಲ್ಲೂ ಇದು ಸೂಪರ್ ಟೇಸ್ಟ್​ ನೀಡುತ್ತದೆ. ಹಾಗಾದ್ರೆ ಮತ್ತೇಕೆ ತಡ? ಟೇಸ್ಟಿ ಮತ್ತು ಮಸಾಲೆಯುಕ್ತ ಈರುಳ್ಳಿ ಚಟ್ನಿ ಮಾಡುವುದು ಹೇಗೆ? ಇದನ್ನು ತಯಾರಿಸಲು ಬೇಕಾದ ಪದಾರ್ಥಗಳು ಯಾವುವು? ತಿಳಿದುಕೊಳ್ಳೋಣ.

ಈರುಳ್ಳಿ ಚಟ್ನಿಗೆ ಬೇಕಾಗುವ ಸಾಮಾಗ್ರಿ:

  • ಒಣ ಮೆಣಸಿನಕಾಯಿ - 6
  • ದೊಡ್ಡ ಈರುಳ್ಳಿ - 3
  • ಸಾಸಿವೆ- ಒಂದು ಚಮಚ
  • ಜೀರಿಗೆ - ಒಂದು ಚಮಚ
  • ಉದ್ದಿನ ಬೇಳೆ- ಒಂದು ಚಮಚ
  • ಹಸಿ ಮೆಣಸಿನಕಾಯಿ- 3
  • ಹುಣಸೆಹಣ್ಣು ಸ್ವಲ್ಪ
  • ಉಪ್ಪು - ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  • 2 ಚಮಚ ಎಣ್ಣೆ
  • ಅರ್ಧ ಚಮಚ - ಸಾಸಿವೆ
  • ಒಂದು ಚಿಟಿಕೆ ಜೀರಿಗೆ
  • 2 ಕರಿಬೇವಿನ ಎಲೆಗಳು

ತಯಾರಿಸುವ ವಿಧಾನ:

  • ಚಟ್ನಿ ತಯಾರಿಸುವ ಮುನ್ನ- ಮೊದಲು ಈರುಳ್ಳಿ ಮತ್ತು ಹಸಿಮೆಣಸಿನಕಾಯಿಯನ್ನು ಸಣ್ಣಗೆ ಕತ್ತರಿಸಿ ಪಕ್ಕಕ್ಕಿಡಿ.
  • ನಂತರ ಒಲೆ ಮೇಲೆ ಬಾಣಲೆ ಇಟ್ಟು ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ.
  • ಈಗ ಬಾಣಲೆಗೆ ಸಾಸಿವೆ, ಜೀರಿಗೆ, ಉದ್ದಿನ ಬೇಳೆ ಹಾಕಿ ಹುರಿಯಿರಿ. ಜೊತೆಗೆ, ಒಣ ಮೆಣಸಿನಕಾಯಿ ಮತ್ತು ಹಸಿ ಮೆಣಸಿನಕಾಯಿ ಸೇರಿಸಿ ಮತ್ತು ಒಂದು ನಿಮಿಷ ಫ್ರೈ ಮಾಡಿ.
  • ನಂತರ ಈ ಮಿಶ್ರಣವನ್ನು ಒಂದು ತಟ್ಟೆಯಲ್ಲಿ ತೆಗೆದುಕೊಂಡು ತಣ್ಣಗಾಗಲು ಬಿಡಿ. ಈಗ ಅದೇ ಬಾಣಲೆಯಲ್ಲಿ ಈರುಳ್ಳಿ ಚೂರುಗಳನ್ನು ಹಾಕಿ ಸ್ವಲ್ಪ ಎಣ್ಣೆ ಸುರಿದು 2 ನಿಮಿಷ ಫ್ರೈ ಮಾಡಿ. ಈಗ ಹುಣಸೆಹಣ್ಣು ಸೇರಿಸಿ ಮತ್ತು ಇನ್ನೊಂದು ನಿಮಿಷ ಫ್ರೈ ಮಾಡಿ.
  • ಹುರಿದ ಸಾಸಿವೆ, ಜೀರಿಗೆ ಮತ್ತು ಉದ್ದಿನ ಬೇಳೆಯನ್ನು ಮಿಕ್ಸಿ ಜಾರ್​ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
  • ಹಾಗೆಯೇ ಹುರಿದ ಈರುಳ್ಳಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮತ್ತೆ ರುಬ್ಬಿ.
  • ಈಗ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ಸಾಸಿವೆ, ಇಂಗು ಮತ್ತು ಎರಡು ಕರಿಬೇವಿನ ಎಲೆಗಳನ್ನು ಸೇರಿಸಿ ಒಗ್ಗರಣೆ ಕೊಡಿ.
  • ಈಗ ನೀವು ಒಗ್ಗರಣೆಯನ್ನು ರುಬ್ಬಿಕೊಂಡಿರುವ ಈರುಳ್ಳಿಗೆ ಸೇರಿಸಿದರೆ ಅಷ್ಟೇ ಸಾಕು. ಬಾಯಲ್ಲಿ ನೀರೂರಿಸುವ ಈರುಳ್ಳಿ ಚಟ್ನಿ ರೆಡಿ.

ಇದನ್ನೂ ಓದಿ:

Last Updated : Sep 19, 2024, 1:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.