ನವದೆಹಲಿ: ಸಾಮಾನ್ಯವಾಗಿ ನೋವು ಕಾಣಿಸಿಕೊಂಡಾಗ ಮಸಾಜ್ ಮಾಡಿದರೆ, ಅದರಿಂದ ಪರಿಹಾರ ಪಡೆಯಬಹುದು ಎಂದು ಭಾಗಿಸುತ್ತೇವೆ. ಆದರೆ, ಈ ಮಸಾಜ್ಗಳು ನೋವಿನ ಶಮನದಲ್ಲಿ ಹೆಚ್ಚು ಪರಿಣಾಮಕಾರಿಯಾಗಿಲ್ಲ ಎಂಬುದನ್ನೂ ನೂರಾರು ಕ್ಲಿನಿಕಲ್ ಪ್ರಯೋಗ ಮತ್ತು ವೈಜ್ಞಾನಿಕ ವಿಮರ್ಶೆಯಲ್ಲಿ ತಿಳಿದು ಬಂದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಈ ಸಂಬಂಧ ಜರ್ನಲ್ ಆಫ್ ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ (ಜಾಮಾ) ನೆಟ್ವರ್ಕ್ ಓಪನ್ನಲ್ಲಿ ಪ್ರಕಟಿಸಲಾಗಿದೆ.
ಒಪಿಯಡ್ಸ್ (ನೋವು ನಿವಾರಕ) ಅಥವಾ ಇತರೆ ನೋವು ನಿವರಾಕ ಚಿಕಿತ್ಸೆಗಿಂತ ಮಸಾಜ್ ಉತ್ತಮವಾಗಿದೆ ಎಂದು ಹೇಳುವ ಪುರಾವೆ ತೊರೆದಿರುವುದು ಅಪರೂಪ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.
ಪ್ರಮಾಣೀಕೃತ ಪರಿಣಿತರು ಮಸಾಜ್ ಚಿಕಿತ್ಸೆಯಲ್ಲಿ ನೋವು ಹೊಂದಿರುವ ಸ್ಥಳದ ತ್ವಚೆ, ಸ್ನಾಯು ಮತ್ತು ಮೃದು ಅಂಗಾಂಶಗಳ ಮೇಲೆ ಕೈಗಳನ್ನು ಕುಶಲವಾಗಿ ಕಾರ್ಯ ನಿರ್ವಹಿಸುವ ಮೂಲಕ ನೋವಿನ ಪ್ರಮಾಣವನ್ನು ಕಡಿಮೆ ಮಾಡಬಹುದಾಗಿದೆ.
ಸಾಕಷ್ಟು ಜನಪ್ರಿಯತೆ ಪಡೆದಿರುವ ಈ ಮಸಾಜ್ ಥೆರಪಿಯ ಪರಿಣಾಮಗಳ ಕುರಿತು ಸೀಮಿತ ಪುರಾವೆಗಳಿವೆ ಎಂದು ಅಮೆರಿಕದ ಕ್ಯಾಲಿಫೋರ್ನಿಯಾ ಯುನಿವರ್ಸಿಟಿ ಸಂಶೋಧಕರು ತಿಳಿಸಿದ್ದಾರೆ.
41 ಲೇಖಕರಲ್ಲಿ 17 ಮಂದಿ 12 ವಿವಿಧ ಆರೋಗ್ಯ ಪರಿಸ್ಥಿತಿ ಅಂದರೆ ಬೆನ್ನು ನೋವು ಸೇರಿದಂತೆ ಕ್ಯಾನ್ಸರ್ ಸಂಬಂಧಿತ ನೋವಿನವರೆಗೆ ಮಸಾಜ್ ಪರಿಣಾಮಕಾರಿತ್ವದ ಬಗ್ಗೆ ಅಧ್ಯಯನ ಮಾಡಿದ್ದಾರೆ. ಎಲ್ಲಾ ವಿಮರ್ಶೆಗಳಲ್ಲೂ ಕೂಡ ಮಸಾಜ್ ಹೆಚ್ಚಿನ ರೇಟೆಡ್ ಚಿಕಿತ್ಸೆ ಎಂದು ವರದಿಯಾಗಿಲ್ಲ ಎಂದು ಲೇಖಕರು ಅಧ್ಯಯನದಲ್ಲಿ ವಿವರಿಸಿದ್ದಾರೆ.
17ರಲ್ಲಿ 7 ಮಂದಿ ಇದು ಸಾಧಾರಣದ ಪ್ರಯೋಜನವನ್ನು ಹೊಂದಿದೆ ಎಂದರೆ, ಮತ್ತೆ ಕೆಲವರು ಇದಕ್ಕೆ ಇದು ಕಡಿಮೆ ಪ್ರಯೋಜನಕಾರಿಯಾಗಿದೆ ಎಂದು ರೇಟಿಂಗ್ ಮಾಡಿದ್ದಾರೆ.
ಮಸಾಜ್ ಸಾಧಾರಣ ಅಥವಾ ಮಧ್ಯಮ ಪರಿಹಾರದ ಪುರಾವೆ ನೀಡುತ್ತದೆ ಎಂಬುದು ನೋವಿನೊಂದಿಗೆ ಪ್ರಯೋಜನಕಾರಿ ಸಂಬಂಧಗಳನ್ನು ಹೊಂದಿದೆ ಎಂದು ತೋರಿಸುವ ವಿಮರ್ಶೆಗಳಿಂದ ಬಂದಿದೆ.
ನೋವಿನ ಉಪಶಮನದಲ್ಲಿ ಮಸಾಜ್ ಥೆರಪಿ ಪ್ರಾಥಮಿಕ ಚಿಕಿತ್ಸೆಯಾಗಿ ಅನೇಕ ಮಂದಿ ಬಳಕೆ ಮಾಡುತ್ತಾರೆ. ಆದರೂ ನೋವನ್ನು ಕಡಿಮೆ ಮಾಡುವಲ್ಲಿ ವೈದ್ಯಕೀಯ ತಜ್ಞರು ಮತ್ತಷ್ಟು ಪರಿಣಾಮಕಾರಿ ತಂತ್ರವನ್ನು ಅಳವಡಿಸಬೇಕಿದೆ. ಅಲ್ಲದೇ ಮಸಾಜ್ ಥೆರಪಿಯು ನೋವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿ ಎಂಬುದನ್ನು ನಿರ್ಣಯಿಸಲು ಮತ್ತಷ್ಟು ಗುಣಮಟ್ಟದ ಯಾದೃಚ್ಛಿಕ ಕ್ಲಿನಿಕಲ್ ಪ್ರಯೋಗದ ಅಗತ್ಯವಿದೆ ಎಂದು ತಜ್ಞರು ಹೇಳಿದ್ದಾರೆ. (ಪಿಟಿಐ)
ಇದನ್ನೂ ಓದಿ: ಕರಾವಳಿ ಪ್ರದೇಶದ ಜನರೇ ಎಚ್ಚರ: ಮಳೆಗಾಲದಲ್ಲಿ ಮಿದುಳು ಸೋಂಕಿನ ಅಪಾಯ ಹೆಚ್ಚು