ETV Bharat / health

ಮೆನೋಪಾಸ್​ ಸವಾಲಿನ ಕುರಿತು ಆಗಬೇಕಿದೆ ಆರೋಗ್ಯಕರ ಚರ್ಚೆ: ದಿ ಲ್ಯಾನ್ಸೆಟ್​​

author img

By ETV Bharat Karnataka Team

Published : Mar 9, 2024, 3:03 PM IST

ಮಹಿಳೆಯರಲ್ಲಿ ಉಂಟಾಗುವ ನೈಸರ್ಗಿಕ ರೂಪಾಂತರದ ಅವಧಿ ಮೆನೋಪಾಸ್​ ಆಗಿದ್ದು, ಈ ಬಗ್ಗೆ ಮುಜುಗರ ಬೇಡ ಎಂದು ತಜ್ಞರು ಹೇಳಿದ್ದಾರೆ.

Need healthy debate on Menopause to challenge stigma and gender based ageism-The Lancet

ಹೈದರಾಬಾದ್​: ಮಹಿಳೆಯರ ಋತುಬಂಧದಲ್ಲಿನ ಕಳಂಕ ಮತ್ತು ಲಿಂಗಾಧಾರಿತ ವಯೋಮಾನದ ಸವಾಲಿನ ಕುರಿತು ಆರೋಗ್ಯಕರ ಚರ್ಚೆ ಮಾಡುವ ಅಶ್ಯಕತೆ ಇದೆ ಎಂದು ಲ್ಯಾನ್ಸೆಟ್​​ ವರದಿ ತಿಳಿಸಿದೆ. ಅಂತಾರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆ ಮೆನೋಪಾಸ್​ (ಮಹಿಳೆಯರ ಮುಟ್ಟು ನಿಲ್ಲುವ ಅವಧಿ) ಕುರಿತು ಚರ್ಚೆ ನಡೆಸಲಾಗಿದೆ.

ವಯಸ್ಸಾಗುವಿಕೆಯಿಂದ ಮಹಿಳೆಯರಲ್ಲಿ ಉಂಟಾಗುವ ನೈಸರ್ಗಿಕ ರೂಪಾಂತರವೇ ಈ ಮೆನೋಪಾಸ್​ ಆಗಿದೆ. ಮೆನೋಪಾಸ್​ ಎಂಬುದು ಪ್ರತಿಯೊಬ್ಬ ಮಹಿಳೆಯಲ್ಲಿ ಭಿನ್ನವಾಗಿರುತ್ತದೆ. ಈ ಸಮಯದಲ್ಲಿ ಅನೇಕ ಮಹಿಳೆಯರು ಒಂದೊಂದು ರೀತಿಯ ಸಮಸ್ಯೆ ಅನುಭವಿಸುತ್ತಾರೆ. ಕೆಲವರು ದೀರ್ಘಕಾಲದ ಅಥವಾ ತೀವ್ರತರದ ಸಮಸ್ಯೆ ಅನುಭವಿಸಿದರೆ, ಮತ್ತೆ ಕೆಲವರಿಗೆ ಮಾಹಿತಿ, ಬೆಂಬಲ ಮತ್ತು ವೈದ್ಯಕೀಯ ಚಿಕಿತ್ಸೆಯ ಬೆಂಬಲ ಬೇಕಾಗುತ್ತದೆ.

ಈ ಸರಣಿಯ ಒಂದು ಪತ್ರಿಕೆಯಲ್ಲಿ ತಿಳಿಸಿರುವಂತೆ ಈ ಸಮಸ್ಯೆಯ ತೀವ್ರತೆಗೆ ಕೇವಲ ಒಂದೇ ಅಂಶವೂ ಕಾರಣವಾಗಿರುವುದಿಲ್ಲ. ಇದರ ಜೊತೆಗೆ ಮನೋವೈಜ್ಞಾನಿಕ, ಸಾಮಾಜಿಕ ಮತ್ತು ಸಂದರ್ಭಗಳು ಕಾರಣವಾಗುತ್ತವೆ. ಲ್ಯಾನ್ಸೆಟ್​​ ಪ್ರಕಾರ ಮೆನೋಪಾಸ್​ ಸಮಯದಲ್ಲಿ ಕಾಡುವ ಸಾಮಾನ್ಯ ಲಕ್ಷಣ ಹಾಟ್​ ಫ್ಲಶ್​ ಮತ್ತು ರಾತ್ರಿ ಬೆವರುವಿಕೆ, ವಾಸೋಮೋಟರ್​​ ನಿದ್ದೆಗೆ ಅಡೆತಡೆ, ಯೋನಿ ಒಣಗುವಿಕೆ ಮತ್ತು ಸ್ನಾಯು ಮತ್ತು ಕೀಲು ನೋವು. ಕಳಪೆ ಮಾನಸಿಕ ಆರೋಗ್ಯದ ಜತೆಗೆ ಇದು ಸಂಬಂಧ ಹೊಂದಿದೆ. ಆದರೂ, ಈ ಅವಧಿಯ ಆರಂಭದಲ್ಲಿ ಖಿನ್ನತೆ ಅಪಾಯ ಹೆಚ್ಚಾಗುತ್ತದೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ.

ಈ ಮೆನೋಪಾಸ್​ ಅವಧಿಯು ಮಹಿಳೆಯರ ವ್ಯಕ್ತಿತ್ವವನ್ನು ಮರು ಮೌಲ್ಯಮಾಪನ ಮಾಡಲು ಮತ್ತು ಋತುಚಕ್ರ ಮತ್ತು ಋತುಚಕ್ರದ ನೋವಿನಿಂದ ಸ್ವಾತಂತ್ರ್ಯರಾಗುವ ಸಮಯವಾಗಿದೆ. ಈ ಬಗ್ಗೆಗಿನ ನಕಾರಾತ್ಮಕ ಗ್ರಹಿಕೆ ಬದಲಾಯಿಸಬೇಕಿದೆ. ಈ ರೀತಿಯ ಗ್ರಹಿಕೆ ಇನ್ನು ಸಮಾಜದಲ್ಲಿದೆ ಎಂದು ವರದಿ ತಿಳಿಸಿದೆ.

ಈ ಸಂಬಂಧ ಮಹಿಳೆ ಮತ್ತು ಸಮಾಜಕ್ಕೆ ನೈಜ ಮತ್ತು ಸಮತೋಲಿತ ಸಂದೇಶವನ್ನು ನೀಡಬೇಕಿದೆ. ಮೆನೋಪಾಸ್​ ಎಂಬುದು ಜೀವನದ ಬೆಳವಣಿಗೆ ಹಂತವಾಗಿದೆ, ಈ ಸಂಬಂಧ ಸೂಕ್ತ ಸಾಕ್ಷ್ಯಾಧಾರಿತ ಮಾಹಿತಿ ಮೂಲಕ ಸಾಮಾಜಿಕ ಮತ್ತು ವೈದ್ಯಕೀಯ ಬೆಂಬಲದೊಂದಿಗೆ ಯಶಸ್ವಿಯಾಗಿ ಮಾತುಕತೆ ನಡೆಸಬೇಕಿದೆ.

ನಮ್ಮ ಅಜ್ಜಿ, ತಾಯಿ ಸೇರಿದಂತೆ ಎಲ್ಲ ಮಹಿಳೆಯರು ಈ ಮೆನೋಪಾಸ್​ ಅವಧಿ ಹೊಂದಿದ್ದಾರೆ. ಇದು ಜೀವನದ ರೂಪಾಂತರದ ಸಮಯವಾಗಿದ್ದು, ಮೆನೋಪಾಸ್​​​ ಹಾರ್ಮೋನ್​ ಥೆರಪಿಯನ್ನು ಫ್ಯಾಷನ್​ ಆಗಿಸಲು ಸಾಧ್ಯವಿಲ್ಲ. ಪ್ರತಿ ಮಹಿಳೆಗೆ ಮನೊಪಾಸ್​​ ಅಗತ್ಯವಿಲ್ಲ. ಕೆಲವು ಲಕ್ಷಣಗಳೊಂದಿಗೆ ಆಸ್ಪತ್ರೆಗೆ ಬಂದ ಮಹಿಳೆಯರಿಗೆ ಇದರ ಚಿಕಿತ್ಸೆ ಅಗತ್ಯವಿದೆ. ಪ್ರತಿನಿತ್ಯದ ಜೀವನಕ್ಕೆ ಅಡ್ಡಿಯಾಗುತ್ತಿದ್ದರೆ, ಆಗ ಮಾತ್ರ ವೈದ್ಯಕೀಯ ನಿರ್ವಹಣೆ ಅಗತ್ಯ ಬರುತ್ತದೆ ಎಂದು ಮೆದಾಂತ್​ ಆಸ್ಪತ್ರೆಯ ಯುರೊಗೈನಾಕಾಲಾಜಿಯ ಹಿರಿಯ ಕನ್ಸಲ್ಟಂಟ್​​ ಡಾ ಅಮಿತ್​ ಜೈನ್​ ತಿಳಿಸಿದ್ದಾರೆ.

ಎಂಎಚ್​ಟಿ ರೋಗನಿರೋಧಕವಾಗಿದೆ. ಮೆನೋಪಾಸ್​ ಸಮಸ್ಯೆಗಳನ್ನು ತಡೆಗಟ್ಟುವ ಔಷಧಿಯಾಗಿ ತೆಗೆದುಕೊಳ್ಳಲಾಗುವುದಿಲ್ಲ. ಇದು ದೀರ್ಘವಾದಿ ಮತ್ತು ಅಲ್ಪಾವಧಿಯ ಅಡ್ಡ ಪರಿಣಾಮವನ್ನು ಹೊಂದಿದ್ದು, ವೈದ್ಯರು ಸೂಚಿಸಿದ್ದಲ್ಲಿ ಅಗತ್ಯವಾದಲ್ಲಿ ತೆಗೆದುಕೊಳ್ಳಬಹುದಾಗಿದೆ ಎನ್ನುತ್ತಾರೆ ವೈದ್ಯರು.

ಇದನ್ನೂ ಓದಿ: ಮೆನೋಪಾಸ್​ನಿಂದಾಗಿ ಅವಧಿಗೆ ಮೊದಲೇ ನಿವೃತ್ತಿ ಬಯಸುವ ಮಹಿಳೆಯರು; ಹೀಗಿರಲಿ ಕೆಲಸದ ವಾತಾವರಣ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.