ಹೈದರಾಬಾದ್: ದಕ್ಷಿಣ ಏಷ್ಯಾದಲ್ಲಿ ಪ್ರತಿ ವರ್ಷ ಮಗುವಿನ ಜನನ ಸಮಯದಲ್ಲಿ ಹದಿಹರೆಯದ 6,500 ತಾಯಂದಿರು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆ ಏಜೆನ್ಸಿ ತಿಳಿಸಿದೆ. ಇದು ದಕ್ಷಿಣ ಏಷ್ಯಾದಲ್ಲಿನ ಹದಿಹರೆಯದವರ ಮತ್ತು ಯುವತಿಯರ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಕುರಿತು ಒತ್ತಿ ಹೇಳಿದೆ.
ಸಾರ್ಕ್ ಮತ್ತು ಯುನಿಸೆಫ್ ರೊಸಾ, ಯುಎನ್ಎಫ್ಪಿಒಎ ಮತ್ತು ವಿಶ್ವ ಆರೋಗ್ಯ ಸಂಸ್ಥೆಗಳು ನೇಪಾಳದ ಕಠ್ಮಂಡುವಿನಲ್ಲಿ ಜಂಟಿಯಾಗಿ ಸಂಘಟಿಸಿದ್ದ ಎರಡು ದಿನಗ ಕಾಲ ನಡೆದ ಹದಿಹರೆಯದ ಗರ್ಭಾವಸ್ಥೆಯಲ್ಲಿನ ಕಾರ್ಯಕ್ರಮದಲ್ಲಿ ಈ ಕುರಿತು ಪ್ರಸ್ತಾಪಿಸಲಾಗಿದೆ.
ಕಾರ್ಯಕ್ರಮದಲ್ಲಿ ಭಾರತ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತನ್, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀ ಲಂಕಾದ ಪ್ರತಿನಿಧಿಗಳು ಭಾಗಿಯಾಗಿದ್ದರು. ದಕ್ಷಿಣ ಏಷ್ಯಾದಲ್ಲಿ ಪ್ರತಿ ವರ್ಷ 2.2 ಮಿಲಿಯನ್ ಹದಿಹರೆಯದ ಯುವತಿಯರು ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ. ಅವರ ಆರೋಗ್ಯಕ್ಕೆ ಆದ್ಯತೆ ನೀಡಬೇಕು ಎಂಬ ಬದ್ಧತೆಯನ್ನು ಒತ್ತಿ ಹೇಳಲಾಯಿತು. ಜೊತೆಗೆ ಅವರಿಗೆ ಕಲಿಕೆಗೆ ಉತ್ತಮ ಅವಕಾಶ ಮತ್ತು ಉದ್ಯಮ ಸ್ಥಾಪನೆ ಮತ್ತು ಜೀವನ ನಿರ್ವಹಣೆಗೆ ಸಂಪಾದನೆ ಮಾರ್ಗ ಕಲ್ಪಿಸುವ ಕುರಿತು ಕೂಡ ತಿಳಿಸಲಾಯಿತು.
ಈ ಎಲ್ಲ ಯುವತಿಯರು ಬಾಲವಧುವಾಗಿದ್ದು, ಅವರಲ್ಲಿ ಸಂತಾನೋತ್ಪತಿ ಆರೋಗ್ಯ ಅಥವಾ ಉಳಿಯುವಿಕೆ ಶಕ್ತಿ ಸೀಮಿತವಾಗಿರುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ದಕ್ಷಿಣ ಏಷ್ಯಾ ಪ್ರದೇಶಗಳು ಈ ನಿಟ್ಟಿನಲ್ಲಿ ಬಹು ದೂರ ಸಾಗಬೇಕಿದೆ. ಆಳದ ಕಾರಣಗಳಾದ ಬಾಲ್ಯ ವಿವಾಹ, ಹದಿಹರೆಯದವರ ಆರೋಗ್ಯ ಶಿಕ್ಷಣದ ಲಭ್ಯತೆ ಮತ್ತು ಸಾಮಾಜಿಕ ಕಳಂಕದ ತೊಡೆದು ಹಾಕುವಿಕೆ ಕುರಿತು ಅವರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಸಾರ್ಕ್ನ ಪ್ರಧಾನ ಕಾರ್ಯದರ್ಶಿ ಗೊಲಮ್ ಸರ್ವರ್ ತಿಳಿಸಿದ್ದಾರೆ.
ದಕ್ಷಿಣ ಏಷ್ಯಾದಲ್ಲಿ 290 ಮಿಲಿಯನ್ ಬಾಲ ವಧುವಿದ್ದಾರೆ. ಈ ಬಾಲಕಿಯರು ಬಲವಂತವಾಗಿ ಶಾಲೆಗಳನ್ನು ತೊರೆದಿದ್ದು, ಸಾಮಾಜಿಕ ಕಳಂಕ, ತಿರಸ್ಕರ, ಹಿಂಸೆ, ನಿರುದ್ಯೋಗಗಳು ದೀರ್ಘಕಾಲದ ಸಾಮಾಜಿಕ ಸವಾಲಾಗಿದೆ.
ಜಗತ್ತಿನಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ದಕ್ಷಿಣ ಏಷ್ಯಾದಲ್ಲಿನ ಶೇ 49ರಷ್ಟು ಬಾಲಕಿಯರು ಶಿಕ್ಷಣ, ಉದ್ಯೋಗ ಅಥವಾ ತರಬೇತಿ ಪಡೆಯುತ್ತಿಲ್ಲ. ಜೊತೆಗೆ ಹದಿಹರೆಯದ ಯುವತಿಯರ ಕಳಪೆ ಆರೋಗ್ಯ ಸೌಲಭ್ಯಗಳು ಕೂಡ ತಾಯಂದಿರ ಮತ್ತು ಮಗುವಿನ ಅಕಾಲಿಕ ಸಾವಿನ ಅಪಾಯವನ್ನು ಹೆಚ್ಚಿಸಿದೆ.
ಹದಿಹರೆಯದವರರಲ್ಲಿ ದೈಹಿಕ, ಅರಿವಿನ, ಸಾಮಾಜಿಕ ಮತ್ತು ಭಾವನಾತ್ಮಕ ಮತ್ತು ಲೈಂಗಿಕ ಅಭಿವೃದ್ಧಿ ವಿಶಿಷ್ಟವಾಗಿದ್ದು, ಇದಕ್ಕೆ ವಿಶೇಷ ಕಾಳಜಿಯನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ನೀತಿಯಲ್ಲಿ ನೀಡಬೇಕಿದೆ.
ಕ್ರಾಸ್ ಸೆಕ್ಟೋರಲ್ ಸಹಯೋಗ ಮತ್ತು ವಿವಿಧ ಸೇವೆಗಳಿಗೆ ಸಮಾನ ಪ್ರವೇಶದ ಜೊತೆಗೆ ಹದಿಹರೆಯದ ಗರ್ಭಧಾರಣೆಯನ್ನು ನಿಭಾಯಿಸಲು ಮತ್ತು ಅವರ ಆರೋಗ್ಯಕರ ಸಾಮಾಜಿಕ ಆರ್ಥಿಕ ಅಭಿವೃದ್ಧಿಯನ್ನು ಹೂಡಿಕೆಗಳನ್ನು ಉತ್ತೇಜಿಸಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾದ ಪ್ರಾದೇಶಿಕ ನಿರ್ದೇಶಕ ಸೈಮಾ ವಾಜಿದ್ ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಭಾರತದಲ್ಲಿ ಬಾಲ್ಯ ವಿವಾಹ ಇಳಿಕೆಯಾದ್ರೂ, ಸಂಪೂರ್ಣವಾಗಿ ನಿಂತಿಲ್ಲ ಅಪ್ರಾಪ್ತರ ಮದುವೆ; ಲ್ಯಾನ್ಸೆಟ್ ವರದಿ