ಸಿಂಕ್‌ನಲ್ಲಿ ನೀರು ಜಾಮ್ ಆಗುವ ಸಮಸ್ಯೆಯನ್ನು ಪ್ರತಿಯೊಬ್ಬರೂ ಎದುರಿಸುತ್ತಾರೆ. ಆದಾಗ್ಯೂ, ನೈಸರ್ಗಿಕ ಸಲಹೆಗಳೊಂದಿಗೆ ನೀವು ಸಿಂಕ್ ಬ್ಲಾಕಿಂಗ್ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು. ಅಲ್ಲದೇ, ಸಿಂಕ್‌ನಿಂದ ಬರುವ ದುರ್ವಾಸನೆ ದೂರವಾಗುತ್ತದೆ ಎಂದು ಪರಿಣಿತರು ಹೇಳುತ್ತಾರೆ.
ನಿಂಬೆ, ಈನೋ: ನಿಂಬೆ, ಈನೋ ಮಿಶ್ರಣವು ಸಿಂಕ್ಅನ್ನು ಸ್ವಚ್ಛಗೊಳಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದಂತೆ. ಇದಕ್ಕಾಗಿ ಒಂದು ಬಟ್ಟಲಿನಲ್ಲಿ ಸ್ವಲ್ಪ ಈನೋ ಪುಡಿಯನ್ನು ತೆಗೆದುಕೊಂಡು ಅದಕ್ಕೆ ನಿಂಬೆ ರಸ ಸೇರಿಸಿ ಮಿಶ್ರಣ ಮಾಡಿ. ನಂತರ ಈ ಮಿಶ್ರಣವನ್ನು ಸಿಂಕ್‌ನಲ್ಲಿ ಹಾಕಿ ಮತ್ತು ಸ್ಕ್ರಬ್ಬರ್ ಸಹಾಯದಿಂದ ಸ್ಕ್ರಬ್ ಮಾಡಿ ಅಷ್ಟೇ. ಸಿಂಕ್‌ನಲ್ಲಿರುವ ಧೂಳು, ಜಿಡ್ಡಿನ ಕಲೆಗಳೆಲ್ಲ ನಿವಾರಣೆಯಾಗಿ ಹೊಸದರಂತೆ ಹೊಳೆಯುತ್ತದೆ ಎನ್ನುತ್ತಾರೆ. ಇದು ಕೆಟ್ಟ ವಾಸನೆಯನ್ನು ಸಹ ತೆಗೆದುಹಾಕುತ್ತದೆ ಎನ್ನುತ್ತಾರೆ ಪರಿಣಿತರು.
ಬಿಸಿ ನೀರು: ಸಿಂಕ್ ಪೈಪ್‌ನಲ್ಲಿ ಸಿಲುಕಿರುವ ಎಲ್ಲ ತ್ಯಾಜ್ಯವನ್ನು ಬಿಸಿ ನೀರಿನಿಂದ ಸುಲಭವಾಗಿ ಸ್ವಚ್ಛಗೊಳಿಸಬಹುದು. ಇದಕ್ಕಾಗಿ ದೊಡ್ಡ ಬಟ್ಟಲಿನಲ್ಲಿ ನೀರನ್ನು ಬಿಸಿ ಮಾಡಿ ನಂತರ ಎಚ್ಚರಿಕೆಯಿಂದ ಸ್ವಲ್ಪ ನೀರು ತೆಗೆದುಕೊಂಡು ಸಿಂಕ್ಲ್ಲಿ ಸುರಿಯಿರಿ. ಈ ರೀತಿ ಮೂರ್ನಾಲ್ಕು ಬಾರಿ ಮಾಡಿದರೆ, ಸಿಂಕ್ ಪೈಪ್‌ನಲ್ಲಿ ಸಂಗ್ರಹವಾಗಿರುವ ತ್ಯಾಜ್ಯವೆಲ್ಲ ಹೋಗುತ್ತದೆ. ಅಲ್ಲದೇ, ಈ ಬಿಸಿನೀರನ್ನು ಸುರಿಯುವುದರಿಂದ ಜಿಡ್ಡು ಕೂಡ ನಿವಾರಣೆಯಾಗಿ ಸಿಂಕ್ ಸ್ವಚ್ಛವಾಗಿ ಕಾಣುತ್ತದೆ ಎಂದೇ ಹೇಳಲಾಗುತ್ತದೆ.
ನಿಂಬೆ, ಉಪ್ಪು: ಸಿಂಕ್ ನೀರು ನಿಂತಾಗ ಕೆಟ್ಟ ವಾಸನೆ ಉಂಟಾಗುತ್ತದೆ. ಅಂತಹ ಸಮಯದಲ್ಲಿ ಉಪ್ಪು ಮತ್ತು ನಿಂಬೆ ರಸದ ಮಿಶ್ರಣವು ತುಂಬಾ ಸಹಾಯ ಮಾಡುತ್ತದೆ. ಮೊದಲು ಸಣ್ಣ ಬಟ್ಟಲಿನಲ್ಲಿ ಸ್ವಲ್ಪ ಉಪ್ಪನ್ನು ಹಾಕಿ ಅದರಲ್ಲಿ ನಿಂಬೆ ರಸವನ್ನು ಹಿಂಡಿ. ಬಳಿಕ ಅದನ್ನು ಸಿಂಕ್‌ನಲ್ಲಿ ಸುರಿದು ರಾತ್ರಿಯಿಡೀ ಬಿಡಿ. ಅಗತ್ಯವಿದ್ದರೆ ಸ್ವಲ್ಪ ಅಡಿಗೆ ಸೋಡಾವನ್ನು ಸಹ ಸೇರಿಸಬಹುದು. ಮರುದಿನ ಬೆಳಗ್ಗೆ ನೀರಿನಿಂದ ಅದನ್ನು ಸ್ವಚ್ಛಗೊಳಿಸಿ. ಸಿಂಕ್ ಹೊಸ ರೀತಿಯಲ್ಲಿ ಹೊಳೆಯುತ್ತದೆ. ಇದರಿಂದ ದುರ್ವಾಸನೆಯೂ ಮಾಯವಾಗುತ್ತದೆ ಮತ್ತು ಒಳ್ಳೆಯ ವಾಸನೆ ಬರುತ್ತದೆ ಎಂದು ಪರಿಣಿತರು ಹೇಳುತ್ತಾರೆ.
2019ರಲ್ಲಿ ಜರ್ನಲ್ ಆಫ್ ಫುಡ್ ಸೇಫ್ಟಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ನಿಂಬೆ ರಸವು ಅಡುಗೆಮನೆಯ ಸಿಂಕ್‌ನಲ್ಲಿ ಸಂಗ್ರಹವಾಗುವ ಸಾಲ್ಮೊನೆಲ್ಲಾ ಮತ್ತು ಇ.ಕೋಲಿಯಂತಹ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಮತ್ತು ಅದನ್ನು ಸ್ವಚ್ಛವಾಗಿಡಲು ಪರಿಣಾಮಕಾರಿ ಎಂದು ಕಂಡುಬಂದಿದೆ. ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಅಗ್ರಿಕಲ್ಚರ್ (USDA)ನಲ್ಲಿ ಆಹಾರ ಸೂಕ್ಷ್ಮ ಜೀವಶಾಸ್ತ್ರಜ್ಞರಾದ ಡಾ.ಜಾನ್ ಸ್ಮಿತ್ ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು. ನಿಂಬೆ ರಸದಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಸಿಂಕ್‌ನಲ್ಲಿರುವ ಬ್ಯಾಕ್ಟೀರಿಯಾವನ್ನು ಕೊಲ್ಲಲು ಮತ್ತು ಕೆಟ್ಟ ವಾಸನೆಯನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿ ಎಂದು ಅವರು ತಿಳಿಸಿದ್ದಾರೆ.
ಲೋಹದ ತಂತಿ: ಸಿಂಕ್ ಜಾಮ್ ಆದಾಗ ಗಟ್ಟಿಯಾದ ಲೋಹದ ತಂತಿ ಸುಲಭವಾಗಿ ಸಮಸ್ಯೆಯನ್ನು ಪರಿಹರಿಸಬಹುದು. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ.. ಲೋಹದ ತಂತಿಯನ್ನು ಸಿಂಕ್ ರಂಧ್ರದ ಮೂಲಕ ಪೈಪ್‌ವರೆಗೆ ಸೇರಿ. ನಂತರ ಸಂಗ್ರಹವಾದ ತ್ಯಾಜ್ಯಗಳನ್ನು ತೆಗೆದುಹಾಕಲು ಅದನ್ನು ಮೇಲಕ್ಕೆ ಮತ್ತು ಕೆಳಕ್ಕೆ ಮಾಡಿ. ತ್ಯಾಜ್ಯ ಸಲೀಸಾಗಿ ಹೊರಹೋಗುತ್ತದೆ.
ಅಡುಗೆ ಸೋಡಾ, ವಿನೆಗರ್: ಅಡುಗೆ ಸೋಡಾ, ವಿನೆಗರ್ ಸಹ ಸಿಂಕ್ಅನ್ನು ಸುಲಭವಾಗಿ ಸ್ವಚ್ಛಗೊಳಿಸುತ್ತದೆ. ಮೊದಲು ಒಂದು ಕಪ್ ನೀರಿಗೆ ಅರ್ಧ ಕಪ್ ಅಡುಗೆ ಸೋಡಾ ಮತ್ತು ಅರ್ಧ ಕಪ್ ವಿನೆಗರ್ ಸೇರಿಸಿ ಮಿಶ್ರಣ ಮಾಡಿ. ಈಗ ಅದನ್ನು ಸಿಂಕ್ ಕೆಳಗೆ ಸುರಿಯಿರಿ. ಕಾಲು ಗಂಟೆಯ ನಂತರ ಮತ್ತೆ ಅದರಲ್ಲಿ ಬಿಸಿ ನೀರನ್ನು ಸುರಿಯಿರಿ. ಸಿಂಕ್‌ನಲ್ಲಿ ಎರಡು ಅಥವಾ ಮೂರು ಬಾರಿ ಬಿಸಿ ನೀರನ್ನು ಸುರಿಯಿರಿ. ಸಿಂಕ್ ಪೈಪ್‌ನಲ್ಲಿ ಶೇಖರಣೆಯಾಗಿರುವ ತ್ಯಾಜ್ಯ ಹೋಗುತ್ತದೆ ಎನ್ನುತ್ತಾರೆ ತಜ್ಞರು. ಈ ಸಲಹೆಗಳನ್ನು ಅನುಸರಿಸುವ ಮೂಲಕ ನೀವು ಸುಲಭವಾಗಿ ಸಿಂಕ್ಅನ್ನು ಸ್ವಚ್ಛಗೊಳಿಸಬಹುದು. ನೀವು ಬಯಸಿದರೆ ಈ ಸಲಹೆಗಳನ್ನು ಒಮ್ಮೆ ಪ್ರಯತ್ನಿಸಿ!