Best natural oils for hair: ನೀವು ಯಾವುದೇ ಹೇರ್ ಸ್ಟೈಲ್ ಮಾಡಿಕೊಳ್ಳಬೇಕು ಎಂಬ ಆಶಯ ಹೊಂದಿದ್ದರೆ ಅದಕ್ಕೆ ನೀವು ಅಗಾದ ಕೇಶ ರಾಶಿ ಹೊಂದಿರಬೇಕಾಗಿರುವುದು ಮುಖ್ಯ. ಇನ್ನು ಕೂದಲು ಆರೋಗ್ಯಕರವಾಗಿರಲು, ಮೇಲ್ಮೈ ಹೊಳಪು ಪಡೆಯಲು ಯಾವುದೇ ಕ್ರೀಮ್ಗಳನ್ನು ಬಳಸಿದರೆ ಮಾತ್ರ ಸಾಲದು, ಕೂದಲು ಬೇರುಗಳಿಂದ ಬಲವಾಗಿರ ಬೇಕಾಗುತ್ತದೆ. ಆಗ ಮಾತ್ರ ಕೂದಲಿನ ಆರೋಗ್ಯ ಚನ್ನಾಗಿರಲು ಸಾಧ್ಯ. ಅದಕ್ಕಾಗಿ ನೀವು ನಿತ್ಯ ಉತ್ತಮ ಗುಣಮಟ್ಟದ ಎಣ್ಣೆಯಿಂದ ಮಸಾಜ್ ಮಾಡಬೇಕಾಗುತ್ತದೆ. ಹಾಗಾದರೆ ದಟ್ಟವಾದ ಕೂದಲಗಳನ್ನು ಹೊಂದಬೇಕು ಎಂದರೆ ಅವುಗಳ ರಕ್ಷಣೆಗೆ ಯಾವ ಎಣ್ಣೆ ಹಚ್ಚಬೇಕು ಎಂಬುದನ್ನು ಈಗ ತಿಳಿದುಕೊಳ್ಳೋಣ.
ರೋಸ್ಮರಿ ಆಯಿಲ್: ನಿಮ್ಮ ಕೂದಲು ದಟ್ಟವಾಗಿ ಕಾಣಬೇಕೆಂದು ನೀವು ಬಯಸಿದ್ದೇ ಆದರೆ, ರೋಸ್ಮರಿ ಎಣ್ಣೆಯು ನಿಮಗೆ ಸರಿಯಾದ ಆಯ್ಕೆಯಾಗಿದೆ. ಜೀವಕೋಶಗಳ ಉತ್ಪಾದನೆಯನ್ನು ಸುಧಾರಿಸಲು ಈ ತೈಲ ತುಂಬಾ ಸಹಕಾರಿಯಾಗಿದೆ.
ಲ್ಯಾವೆಂಡರ್ ಎಣ್ಣೆ: ಲ್ಯಾವೆಂಡರ್ ಎಣ್ಣೆ ಕೂದಲು ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ಇದು ಜೀವಕೋಶಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಆ್ಯಂಟಿಮೈಕ್ರೊಬಿಯಲ್ ಮತ್ತು ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳಿಂದ ಕೂದಲನ್ನು ಆರೋಗ್ಯವಾಗಿ ಇರುವಂತೆ ನೋಡಿಕೊಳ್ಳುತ್ತದೆ.
ಪುದೀನಾ ಎಣ್ಣೆ: ಈ ಎಣ್ಣೆಯು ನಮಗೆ ತಲೆಯಲ್ಲಿ ತಂಪಾದ ಅನುಭವವನ್ನು ನೀಡುತ್ತದೆ. ಇದನ್ನು ನಿತ್ಯವೂ ಹಚ್ಚಿ ಮಸಾಜ್ ಮಾಡುವುದರಿಂದ ರಕ್ತ ಪೂರೈಕೆ ಸುಧಾರಿಸಿ ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಲೆಮನ್‌ಗ್ರಾಸ್ ಆಯಿಲ್: ಲೆಮನ್‌ಗ್ರಾಸ್ ಎಣ್ಣೆಯು ತಲೆಹೊಟ್ಟನ್ನು ಕಡಿಮೆ ಮಾಡುತ್ತದೆ. ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಲೆಮನ್‌ಗ್ರಾಸ್ ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿದೆ. ನೆತ್ತಿಯಲ್ಲಿನ ಜಿಡ್ಡಿನಾಂಶವನ್ನು ಕಡಿಮೆ ಮಾಡಿ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ ಈ ಎಣ್ಣೆ.
ಟ್ರೀ ಆಯಿಲ್; ನೆತ್ತಿಯ ಎಣ್ಣೆಗಳಲ್ಲಿ ಕಂಡುಬರುವ ಸಾಮಾನ್ಯ ಅಂಶವಾದ ಟ್ರೀ ಆಯಿಲ್, ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ಕಿರುಚೀಲಗಳನ್ನು ಸ್ವಚ್ಛಗೊಳಿಸುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಕೂದಲು ಉದುರುವುದನ್ನು ಇದು ಬಹುತೇಕ ತಡೆಯುತ್ತದೆ.
ಸೀಡರ್ ಮರದ ಎಣ್ಣೆ: ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವುದು ಮಾತ್ರವಲ್ಲದೇ ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ರಂಧ್ರಗಳಿಗೆ ತೂರಿಕೊಳ್ಳುತ್ತದೆ ಮತ್ತು ಕೂದಲನ್ನು ಬಲಪಡಿಸುತ್ತದೆ. ಇದು ತಲೆಹೊಟ್ಟು ತಡೆಯುವ ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದೆ.
ಕ್ಲಾರಿ ಸೇಜ್ ಎಣ್ಣೆಯು ಲಿನಾಲಿಲ್ ಅಸಿಟೇಟ್ ಅನ್ನು ಹೊಂದಿರುತ್ತದೆ. ಇದು ಕೂದಲಿನ ಗುಣಮಟ್ಟವನ್ನು ಸುಧಾರಿಸುತ್ತದೆಯಲ್ಲದೇ ಕೂದಲು ಉದ್ದವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಕೂದಲನ್ನು ಬಲಪಡಿಸುತ್ತದೆ ಮತ್ತು ಒಡೆಯುವಿಕೆಯಿಂದ ರಕ್ಷಿಸುತ್ತದೆ.
ಥೈಮ್ ಎಣ್ಣೆಯು ನೆತ್ತಿಯ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದು ಕೂದಲು ಉದುರುವ ಸಮಸ್ಯೆಯಾದ ಅಲೋಪೆಸಿಯಾ ಏರಿಯಾಟಾದಿಂದ ನಮ್ಮನ್ನು ರಕ್ಷಿಸುತ್ತದೆ.
ವಿಶೇಷ ಟಿಪ್ಪಣಿ: ಇಲ್ಲಿ ನಿಮಗೆ ಒದಗಿಸಲಾದ ಎಲ್ಲಾ ಮಾಹಿತಿ, ವೈದ್ಯಕೀಯ ಸಲಹೆಗಳು ನಿಮ್ಮ ಮಾಹಿತಿಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ ಇವುಗಳನ್ನು ಅನುಸರಿಸುವ ಮೊದಲು ಈ ಸಂಬಂಧಿತ ಪರಿಣತರನ್ನ ಸಂಪರ್ಕಿಸಿ, ಸಲಹೆ ತೆಗೆದುಕೊಳ್ಳುವುದು ಉತ್ತಮ.