ETV Bharat / health

ನೈಂಟಿ ಅಥವಾ ಕ್ವಾರ್ಟರ್.. ಎಷ್ಟು ಕುಡಿದರೂ ಅಪಾಯ ಖಚಿತ: ಶಾಕಿಂಗ್​ ಮಾಹಿತಿ ನೀಡಿದ ಹೊಸ ಅಧ್ಯಯನ - Drinking Habit Effects - DRINKING HABIT EFFECTS

ಸುರಕ್ಷಿತ ಮದ್ಯಪಾನ ಮಿತಿ ಎಂಬುದು ಇಲ್ಲ ಹಾಗೂ ಮದ್ಯಪಾನ ಯಾವಾಗಲೂ ಆರೋಗ್ಯಕ್ಕೆ ಹಾನಿಕರ ಎಂದು ಹೊಸ ಅಧ್ಯಯನವೊಂದು ಸ್ಫೋಟಕ ಸತ್ಯ ಬಿಚ್ಚಿಟ್ಟಿದೆ.

nainti-or-quarter-no-matter-how-much-you-drink-youre-at-risk-new-study
ನೈಂಟಿ ಅಥವಾ ಕ್ವಾರ್ಟರ್.. ಎಷ್ಟು ಕುಡಿದರೂ ಅಪಾಯ ಖಚಿತ: ಶಾಕಿಂಗ್​ ಮಾಹಿತಿ ನೀಡಿದ ಹೊಸ ಅಧ್ಯಯನ (IANS)
author img

By IANS

Published : Jul 25, 2024, 5:14 PM IST

ನವದೆಹಲಿ : ಪ್ರತಿದಿನ ಒಂದು ಗ್ಲಾಸ್​ ವೈನ್ ಸೇವಿಸುವುದು ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬ ಸಾಂಪ್ರದಾಯಿಕ ಜ್ಞಾನವು ದೋಷಪೂರಿತ ವೈಜ್ಞಾನಿಕ ಸಂಶೋಧನೆಯನ್ನು ಆಧರಿಸಿದೆ ಎಂದು ಅಧ್ಯಯನವೊಂದು ಗುರುವಾರ ಬಹಿರಂಗಪಡಿಸಿದೆ. "ಮದ್ಯಪಾನದ ಸುರಕ್ಷಿತ ಮಟ್ಟ ಎಂಬುದಕ್ಕೆ ಯಾವುದೇ ಮಾನದಂಡವಿಲ್ಲ" ಎಂದು ಕೆನಡಾದ ವಿಕ್ಟೋರಿಯಾ ವಿಶ್ವವಿದ್ಯಾಲಯದ ಪ್ರಮುಖ ಸಂಶೋಧಕ ಟಿಮ್ ಸ್ಟಾಕ್ವೆಲ್ ಹೇಳಿದ್ದಾರೆ.

ಹಿಂದಿನ ಗ್ರಹಿಕೆಗಳನ್ನೆಲ್ಲ ಸುಳ್ಳು ಮಾಡಿದ ಹೊಸ ಅಧ್ಯಯನ: ಜರ್ನಲ್ ಆಫ್ ಸ್ಟಡೀಸ್ ಆನ್ ಆಲ್ಕೋಹಾಲ್ ಅಂಡ್ ಡ್ರಗ್ಸ್​ನಲ್ಲಿ ಈ ಹೊಸ ಅಧ್ಯಯನ ವರದಿ ಪ್ರಕಟವಾಗಿದೆ. ಯಾವತ್ತೂ ಮದ್ಯಪಾನ ಮಾಡದವರಿಗಿಂತ ಯಾವಾಗಲಾದರೊಮ್ಮೆ ಮಿತವಾಗಿ ಮದ್ಯಪಾನ ಮಾಡುವವರಿಗೆ ಹೃದ್ರೋಗದ ಅಪಾಯ ಕಡಿಮೆಯಾಗಿರುತ್ತದೆ ಮತ್ತು ಅವರು ಹೆಚ್ಚು ಕಾಲ ಬದುಕುತ್ತಾರೆ ಎಂಬ ಹಿಂದಿನ ಅಧ್ಯಯನದ ಗ್ರಹಿಕೆಗಳನ್ನು ಹೊಸ ವರದಿಯು ತಳ್ಳಿಹಾಕಿದೆ.

ಬಹುತೇಕ ವಯಸ್ಸಾದ ವಯಸ್ಕರನ್ನು ಒಳಗೊಂಡಿರುವುದು ಮತ್ತು ಅವರ ಜೀವಿತಾವಧಿಯ ಕುಡಿತದ ಅಭ್ಯಾಸವನ್ನು ಲೆಕ್ಕಿಸದಿರುವುದು ಈ ಅಧ್ಯಯನದ ಮುಖ್ಯ ಸಮಸ್ಯೆಯಾಗಿದೆ. ಜೀವಿತಾವಧಿ ಕುಡಿತದ ಅಭ್ಯಾಸವನ್ನು ಲೆಕ್ಕಿಸದ ಸಂದರ್ಭಗಳಲ್ಲಿ ಮಧ್ಯಮ ಕುಡುಕರನ್ನು ಯಾವತ್ತೂ ಕುಡಿಯದಿರುವವರ ಗುಂಪಿಗೆ ಸೇರಿಸುವ ಸಾಧ್ಯತೆ ಇರುತ್ತದೆ. ಇದರಲ್ಲಿ ಆರೋಗ್ಯ ಸಮಸ್ಯೆಗಳಿಂದಾಗಿ ಮದ್ಯಪಾನ ತ್ಯಜಿಸಿದ ವ್ಯಕ್ತಿಗಳೂ ಸೇರಿರಬಹುದು. ಇದರಿಂದಾಗಿ ಮಧ್ಯಮ ಕುಡುಕರು ಹೋಲಿಕೆಯಲ್ಲಿ ಆರೋಗ್ಯಕರವಾಗಿರುವಂತೆ ಕಾಣಿಸಬಹುದು.

ಸ್ಟಾಕ್ವೆಲ್ ಮತ್ತು ಅವರ ತಂಡವು ಕುಡಿತದ ಅಭ್ಯಾಸ ಮತ್ತು ದೀರ್ಘಾಯುಷ್ಯದ ನಡುವಿನ ಸಂಬಂಧ ಪರಿಶೀಲಿಸುವ 107 ಅಧ್ಯಯನಗಳನ್ನು ಪರಿಶೀಲಿಸಿತು. ಲಘು ಮತ್ತು ಮಧ್ಯಮ ಮದ್ಯಪಾನಿಗಳು ಶೇಕಡಾ 14 ರಷ್ಟು ಕಡಿಮೆ ಸಾಯುವ ಅಪಾಯ ಹೊಂದಿದ್ದಾರೆ ಎಂದು ಅಧ್ಯಯನದ ಆರಂಭದಲ್ಲಿ ಕಂಡು ಬಂದಿತ್ತು.

ದೀರ್ಘಾಯುಷ್ಯಕ್ಕೂ ಯಾವಾಗಲಾದರೊಮ್ಮೆ ಕುಡಿಯುವುದಕ್ಕೂ ಸಂಬಂಧವಿಲ್ಲ: ಆದಾಗ್ಯೂ, ಸೂಕ್ಷ್ಮವಾಗಿ ಪರಿಶೀಲಿಸಿದಾಗ ಈ ಗ್ರಹಿಕೆ ಬದಲಾಯಿತು. 55 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಒಳಗೊಂಡು ಮತ್ತು ಈ ಹಿಂದೆ ಕುಡಿಯುತ್ತಿದ್ದು, ಈಗ ಬಿಟ್ಟವರು ಹಾಗೂ ಯಾವಾಗಲಾದರೊಮ್ಮೆ ಕುಡಿಯುವವರನ್ನು ಎಂದೂ ಕುಡಿಯದವರು ಎಂಬ ಪಟ್ಟಿಯಿಂದ ಹೊರಗಿಟ್ಟ ನಂತರ ಅಧ್ಯಯನದ ಫಲಿತಾಂಶಗಳು ಬೇರೆಯಾಗಿದ್ದವು. ಯಾವಾಗಲಾದರೊಮ್ಮೆ ಕುಡಿಯುವುದು ಮತ್ತು ದೀರ್ಘಾಯುಷ್ಯದ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.

ಮಧ್ಯಮ ಮದ್ಯಪಾನದ ಆರೋಗ್ಯ ಪ್ರಯೋಜನಗಳ ಬಗ್ಗೆ ದೀರ್ಘಕಾಲದ ನಂಬಿಕೆಯನ್ನು ಸ್ಟಾಕ್ವೆಲ್ ಎತ್ತಿ ತೋರಿಸಿದರು. ಇದು 1990 ರ ದಶಕದ ಫ್ರೆಂಚ್ ವಿರೋಧಾಭಾಸ ಸಿದ್ಧಾಂತದ ಉದಾಹರಣೆಯಾಗಿದೆ. ಇದರ ಪ್ರಕಾರ, ಫ್ರಾನ್ಸ್​ನಲ್ಲಿ ಜನ ರೆಡ್ ವೈನ್ ಸೇವಿಸುವುದರಿಂದಲೇ ಹೆಚ್ಚು ಕೊಬ್ಬಿನ ಆಹಾರ ಸೇವನೆಯ ಹೊರತಾಗಿಯೂ ಹೃದ್ರೋಗದ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಲಾಗಿತ್ತು.

ಏನೇ ಆದರೂ ಮಿತವಾದ ಅಲ್ಕೊಹಾಲ್ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎಂಬ ಗ್ರಹಿಕೆ ಜನಪ್ರಿಯವಾಗಿದೆ. ಆದರೆ ಮಿತ ಮದ್ಯಪಾನದಿಂದ ಜೀವಿತಾವಧಿ ಹೆಚ್ಚಾಗುವುದಿಲ್ಲ ಮತ್ತು ಇದು ಕ್ಯಾನ್ಸರ್​ಗೆ ಕಾರಣವಾಗಬಹುದು ಎಂಬುದು ವಾಸ್ತವ. ಯಾವುದೇ ಪ್ರಮುಖ ಆರೋಗ್ಯ ಸಂಸ್ಥೆಯು ಅಪಾಯ - ಮುಕ್ತ ಮಟ್ಟದ ಅಲ್ಕೋಹಾಲ್ ಸೇವನೆಯನ್ನು ಅನುಮೋದಿಸಿಲ್ಲ.

ಇದನ್ನೂ ಓದಿ : ವಿಶ್ವದಲ್ಲಿ ಪ್ರತಿ ಗಂಟೆಗೆ 26 ಜನ ನೀರಲ್ಲಿ ಮುಳುಗಿ ಸಾವು: WHO ಮಾಹಿತಿ - Drowning Worldwide

ETV Bharat Logo

Copyright © 2024 Ushodaya Enterprises Pvt. Ltd., All Rights Reserved.