ETV Bharat / bharat

ಅಬ್ದುಲ್ಲಾಪುರಮೆಟ್​​ನಲ್ಲಿ 300 ಕೆಜಿ ಗಾಂಜಾ ವಶ: ಆರೋಪಿ ಪೊಲೀಸ್​ ಕಸ್ಟಡಿಗೆ - 300 KG OF GANJA SEIZED

ವಶಪಡಿಸಿಕೊಂಡಿರುವ ಗಾಂಜಾ ಸುಮಾರು 1 ಕೋಟಿ ರೂ. ಮೌಲ್ಯದ್ದಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

GANJA SEIZED
ಗಾಂಜಾ ವಶ (ETV Bharat)
author img

By ETV Bharat Karnataka Team

Published : Feb 20, 2025, 12:32 PM IST

ಹೈದರಾಬಾದ್​ : ರಂಗಾರೆಡ್ಡಿ ಜಿಲ್ಲೆಯ ಅಬ್ದುಲ್ಲಾಪುರಮೆಟ್​ ವ್ಯಾಪ್ತಿಯಲ್ಲಿ ಗುರುವಾರ ಮಹೇಶ್ವರಂ ಎಸ್​ಒಟಿ ಹಾಗೂ ಅಬ್ದುಲ್ಲಾಪುರಮೆಟ್​ ಪೊಲೀಸರ ಜಂಟಿ ಕಾರ್ಯಾಚರಣೆ ವೇಳೆ 300 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಗಾಂಜಾ ಕಳ್ಳಸಾಗಣೆ ಮಾರ್ಗದ ಬಗ್ಗೆ ಪೂರ್ವ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಎಸ್​ಒಟಿ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದರು. ವಿಶಾಖಪಟ್ಟಣದಿಂದ ಹೈದರಾಬಾದ್​ಗೆ ಗಾಂಜಾ ಸಾಗಿಸಲಾಗುತ್ತಿದ್ದ ಕಂಟೇನರ್​ ಅನ್ನು ತಡೆಹಿಡಿದು ಪೊಲೀಸರು ತಪಾಸಣೆ ನಡೆಸಿದರು. ಅಧಿಕಾರಿಗಳು ಕಂಟೇನರ್​ ಅನ್ನು ವಶಪಡಿಸಿಕೊಂಡಿದ್ದು, ಸಾಗಾಟ ಮಾಡುತ್ತಿದ್ದವನನ್ನು ಕಸ್ಟಡಿಗೆ ಪಡೆದಿದ್ದಾರೆ. ವಶಪಡಿಸಿಕೊಂಡ ಗಾಂಜಾ ಸುಮಾರು 1 ಕೋಟಿ ರೂ. ಮೌಲ್ಯದ್ದಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಇಂದು ಮಧ್ಯಾಹ್ನ 3 ಗಂಟೆಗೆ ಮಾಧ್ಯಮಗೋಷ್ಟಿ ಕರೆದಿರುವ ಪೊಲೀಸರು, ಕಳ್ಳಸಾಗಣೆ ಜಾಲ ಮತ್ತು ನಡೆಯುತ್ತಿರುವ ತನಿಖೆಗಳ ಕುರಿತು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಿದ್ದಾರೆ.

ಇದನ್ನೂ ಓದಿ: ಮಂಗಳೂರು ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ : 119 ಕೆ.ಜಿ ಗಾಂಜಾ ವಶ, ನಾಲ್ವರು ಆರೋಪಿಗಳು ಅರೆಸ್ಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.