ETV Bharat / health

ಡಯಟ್​ನಿಂದಲೇ ಶೇ.56.4 ರಷ್ಟು ಜನರಿಗೆ ಅನಾರೋಗ್ಯ: ಭಯಾನಕ ಸತ್ಯ ಬಿಚ್ಚಿಟ್ಟ ಐಸಿಎಂಆರ್​ ಅಧ್ಯಯನ - Unhealthy Diets - UNHEALTHY DIETS

ಆರೋಗ್ಯ ಕಾಪಾಡಿಕೊಳ್ಳಲು ಜನರು ಮಾಡುತ್ತಿರುವ ಅನಾರೋಗ್ಯಕರ ಡಯಟ್​ನಿಂದಲೇ ಸಮಸ್ಯೆ ಇನ್ನಷ್ಟು ಉಲ್ಬಣವಾಗುತ್ತಿದೆ ಎಂದು ಐಸಿಎಂಆರ್​ ವರದಿ ಹೇಳಿದೆ.

ಅನಾರೋಗ್ಯಕರ ಡಯಟ್
ಅನಾರೋಗ್ಯಕರ ಡಯಟ್ (Source: File Photo (ETV Bharat))
author img

By ETV Bharat Karnataka Team

Published : May 8, 2024, 10:28 PM IST

ನವದೆಹಲಿ: ಸ್ಥೂಲಕಾಯ ನಿಯಂತ್ರಣ, ಆರೋಗ್ಯ ಸಮಸ್ಯೆಗೆ ಪರಿಹಾರಕ್ಕಾಗಿ ಜನರು ಕಟ್ಟುನಿಟ್ಟಿನ ಡಯಟ್​ ಮಾಡುತ್ತಾರೆ. ಆದರೆ, ಈ ಪದ್ಧತಿಗಳೇ ನಮಗೆ ಕಂಟಕವಾಗುತ್ತಿವೆ ಎಂಬುದು ಹಲವರಿಗೆ ತಿಳಿದಿಲ್ಲದ ಸಂಗತಿ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್​) ಮಹತ್ವದ ಅಧ್ಯಯನ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿನ ಅಂಶಗಳು ಅಚ್ಚರಿ ಮೂಡಿಸುತ್ತವೆ.

ಸಮಸ್ಯೆ ಪರಿಹಾರಕ್ಕಾಗಿ ಜನರು ಮಾಡುವ ಡಯಟ್​ನ ತಪ್ಪಾದ ಅನುಕ್ರಮದಿಂದಾಗಿಯೇ ದೇಶದಲ್ಲಿ ಶೇಕಡಾ 56.4 ರಷ್ಟು ಜನರು ಕಾಯಿಲೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ಐಸಿಎಂಆರ್​ ತಿಳಿಸಿದೆ. ಅನಾರೋಗ್ಯಕರ ಆಹಾರ ಕ್ರಮದಿಂದಾಗಿ ಹೃದಯ ಸಂಬಂಧಿ ಕಾಯಿಲೆ, ರಕ್ತದೊತ್ತಡ ಮತ್ತು ಶೇಕಡಾ 80 ರಷ್ಟು 2ನೇ ಹಂತದ ಸಕ್ಕರೆಕಾಯಿಲೆ ರೋಗಕ್ಕೆ ತುತ್ತಾಗುತ್ತಿದ್ದಾರೆ ಎಂದು ವರದಿ ಹೇಳಿದೆ.

ಅನಾರೋಗ್ಯಕರ ಆಹಾರ ಪದ್ಧತಿಯಿಂದ ಸಮಸ್ಯೆ: ಆರೋಗ್ಯಕ್ಕಾಗಿ ಉತ್ತಮ ಜೀವನಶೈಲಿ ಹೊಂದುವುದು ಅಗತ್ಯ. ಆದರೆ, ಅದರ ಪಾಲನೆಯಲ್ಲಿ ನಾವು ಮಾಡುವ ಎಡವಟ್ಟಿನಿಂದ ಸಮಸ್ಯೆ ಇನ್ನಷ್ಟು ಉಲ್ಬಣವಾಗುತ್ತಿದೆ. ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವ ಮೂಲಕ ಅಕಾಲಿಕ ಮರಣವನ್ನು ಗಮನಾರ್ಹ ಪ್ರಮಾಣದಲ್ಲಿ ತಪ್ಪಿಸಬಹುದು ಎಂದು ಐಸಿಎಂಆರ್​ ಹೇಳಿದೆ. ಇದರ ಜೊತೆಗೆ ಕೆಲ ಆಹಾರ ಮಾರ್ಗಸೂಚಿಗಳನ್ನೂ ಅದು ಬಿಡುಗಡೆ ಮಾಡಿದೆ.

ಸಮಗ್ರ ರಾಷ್ಟ್ರೀಯ ಪೌಷ್ಟಿಕಾಂಶ ಸಮೀಕ್ಷೆ- 2019 (ಸಿಎನ್‌ಎನ್‌ಎಸ್) ರ ಮಾಹಿತಿಯ ಪ್ರಕಾರ, ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ ಗಣನೀಯ ಸಂಖ್ಯೆಯಲ್ಲಿನ ಮಕ್ಕಳು ಸಾಂಕ್ರಾಮಿಕವಲ್ಲದ ಕಾಯಿಲೆಗೆ (ಎನ್‌ಸಿಡಿ) ತುತ್ತಾಗುತ್ತಿದ್ದರೆ, ಮಧುಮೇಹ, ಅಧಿಕ ರಕ್ತದೊತ್ತಡದಂತಹ ಅಪಾಯಕಾರಿ ಸಮಸ್ಯೆಗಳಿಗೂ ಒಳಗಾಗುತ್ತಿದ್ದಾರೆ ಎಂದಿದೆ. ಅಪೌಷ್ಟಿಕತೆ, ಕಡಿಮೆ ತೂಕ, ಹದಿಹರೆಯದವರಲ್ಲಿ ಚಯಾಪಚಯ ಕ್ರಿಯೆಯ ಬದಲಾವಣೆಯು ಆತಂಕ ತರುತ್ತದೆ.

ಸಕ್ಕರೆಯುಕ್ತ ಮತ್ತು ಕೊಬ್ಬಿನಿಂದ ಕೂಡಿದ ಸಂಸ್ಕರಿಸಿದ ಆಹಾರಗಳ ಸೇವನೆ, ಕಡಿಮೆ ದೈಹಿಕ ಚಟುವಟಿಕೆಯಿಂದಾಗಿ ಸೂಕ್ಷ್ಮ ಪೋಷಕಾಂಶಗಳ ಕೊರತೆ, ಅಧಿಕ ತೂಕ ಮತ್ತು ಬೊಜ್ಜಿನ ಸಮಸ್ಯೆ ತುತ್ತಾಗಬೇಕಾಗುತ್ತದೆ. ಆರೋಗ್ಯಕರ ಪದ್ಧತಿಗಿಂತ ಅನಾರೋಗ್ಯಕರ (ಸಂಸ್ಕರಿಸಿದ, ಹೆಚ್ಚಿನ ಕೊಬ್ಬು, ಸಕ್ಕರೆ ಮತ್ತು ಉಪ್ಪು) ಆಹಾರ ಪದ್ಧತಿಯೇ ನಮಗೆ ಮಾರಕವಾಗುತ್ತಿದೆ ಎಂದು ಅಧ್ಯಯನವು ಹೇಳಿದೆ.

ಮಕ್ಕಳಲ್ಲಿ ಕಾಡುತ್ತಿರುವ ವಿವಿಧ ಸಮಸ್ಯೆಗಳು: ಸಿಎನ್​ಎನ್​ಎಸ್​ ಅಧ್ಯಯನವನ್ನು ಉಲ್ಲೇಖಿಸಿ ಐಸಿಎಂಆರ್​, 1 ರಿಂದ 4 ವರ್ಷ ವಯಸ್ಸಿನ ಶೇಕಡಾ 40.6 ರಷ್ಟು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದರೆ, ಶೇಕಡಾ 32.1 ಪ್ರತಿಶತ ಮಕ್ಕಳು ಕಬ್ಬಿಣದ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿದೆ. 10 ರಿಂದ 19 ವರ್ಷ ವಯಸ್ಸಿನ ಶೇಕಡಾ 36.7 ರಷ್ಟು ಮಕ್ಕಳಲ್ಲಿ ಫೋಲೇಟ್ ಕೊರತೆಯಿಂದೆ ಎಂಬುದನ್ನು ಗುರುತಿಸಿದೆ.

ಸಾಂಕ್ರಾಮಿಕವಲ್ಲದ ಕಾಯಿಲೆಗಳನ್ನು ಉಲ್ಲೇಖಿಸಿ, 5 ರಿಂದ 9 ವರ್ಷ ವಯಸ್ಸಿನ ಶೇಕಡಾ 34 ರಷ್ಟು ಮಕ್ಕಳು ಹೆಚ್ಚಿನ ಟ್ರೈಗ್ಲಿಸರೈಡ್‌ಗಳಿಂದ ಬಳಲುತ್ತಿದ್ದರೆ, 10 ರಿಂದ 19 ವರ್ಷ ವಯಸ್ಸಿನ ಶೇಕಡಾ 28.2 ಮಕ್ಕಳು ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ (ಎಲ್​ಡಿಎಲ್​) ನಿಂದ ಬಳಲುತ್ತಿದ್ದಾರೆ ಎಂದಿದೆ.

ಶೇಕಡಾ 24 ರಷ್ಟು ಪುರುಷರು, ಶೇಕಡಾ 21.3 ಪ್ರತಿಶತ ಮಹಿಳೆಯರು ಅಧಿಕ ರಕ್ತದೊತ್ತಡಕ್ಕೆ ತುತ್ತಾಗಿದ್ದಾರೆ. 18 ರಿಂದ 69 ವಯಸ್ಸಿನ ನಡುವಿನ ಶೇಕಡಾ 47.7 ರಷ್ಟು ಪುರುಷರು ಸ್ಥೂಲಕಾಯ ಸಮಸ್ಯೆಗೆ ತುತ್ತಾಗಿದ್ದಾರೆ. ಅಷ್ಟೇ ವಯಸ್ಸಿನ ಶೇಕಡಾ 56.7 ಪ್ರತಿಶತ ಮಹಿಳೆಯರು ಹೊಟ್ಟೆಯ ಬೊಜ್ಜಿನಿಂದ ಬಳಲುತ್ತಿದ್ದಾರೆ. 18-69 ವರ್ಷ ವಯಸ್ಸಿನ 22.9 ಪ್ರತಿಶತ ಪುರುಷರು ಮತ್ತು 24.0 ಪ್ರತಿಶತ ಮಹಿಳೆಯರು ಅಧಿಕ ತೂಕ ಮತ್ತು ಸ್ಥೂಲಕಾಯತೆಯಿಂದ ಬಳಲುತ್ತಿದ್ದಾರೆ.

ಉತ್ತಮ ಆಹಾರ ಪದ್ಧತಿ ಹೀಗಿರಲಿ: ಐಸಿಎಂಆರ್​ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ಉತ್ತಮ ಆಹಾರ ಮಾರ್ಗಸೂಚಿಯನ್ನು ನೀಡಿದೆ. ದಿನದ ಆಹಾರದಲ್ಲಿ ತರಕಾರಿ, ಹಣ್ಣು, ಹಸಿರು ಎಲೆಗಳ ತರಕಾರಿ, ಬೇರುಗಳು ಮತ್ತು ಗೆಡ್ಡೆಗಳನ್ನು ಮೂಲವಾಗಿ ಸೇವಿಸಬೇಕು.

ಇವುಗಳ ಜೊತೆಗೆ ಧಾನ್ಯಗಳು ಕೂಡ ಮಹತ್ವದ್ದಾಗಿದ್ದು, ದ್ವಿದಳ ಧಾನ್ಯಗಳು, ಮಾಂಸದ ಆಹಾರ, ಮೊಟ್ಟೆ, ಬೀಜ, ಎಣ್ಣೆ ಬೀಜ ಮತ್ತು ಹಾಲು/ ಮೊಸರಿನ ಸೇವನೆಯಿಂದ ಒಟ್ಟು ಶಕ್ತಿಯ ಶೇಕಡಾ 45 ರಷ್ಟು ಪ್ರಮಾಣವನ್ನು ಇವುಗಳಿಂದ ಪಡೆಯಬಹುದಾಗಿದೆ. ಬೇಳೆಕಾಳುಗಳು, ಮೊಟ್ಟೆ ಮತ್ತು ಮಾಂಸದ ಆಹಾರ ಒಟ್ಟು ಶಕ್ತಿಯ ಶೇಕಡಾವಾರು 14 ರಿಂದ 15 ರಷ್ಟು ಇರಬೇಕು. ಒಟ್ಟು ಕೊಬ್ಬಿನ ಸೇವನೆಯು 30 ಪ್ರತಿಶತದಷ್ಟು ಇರಬೇಕು. ಬೀಜ, ಎಣ್ಣೆಕಾಳು, ಹಾಲು ಮತ್ತು ಹಾಲಿನ ಉತ್ಪನ್ನಗಳ ಸೇವನೆಯು ಒಟ್ಟು ಶಕ್ತಿಯ 8 ಪ್ರತಿಶತ ಇರಬೇಕು ಎಂದು ಸಲಹೆ ನೀಡಿದೆ.

ನೀಡಲಾದ ಮಾರ್ಗಸೂಚಿಗಳು ಉತ್ತಮ ಆರೋಗ್ಯ ಮತ್ತು ಎಲ್ಲಾ ಗುಂಪಿನ ಆಹಾರ ಸೇವಕರಿಗೆ ಅನುಕೂಲ. ಆಹಾರದ ಶಿಫಾರಸುಗಳ ಜೊತೆಗೆ, ಮಾರ್ಗದರ್ಶಿ ಸೂತ್ರಗಳು ದೈಹಿಕ ಚಟುವಟಿಕೆ, ಆರೋಗ್ಯಕರ ತೂಕ ನಿರ್ವಹಣೆ, ಸುರಕ್ಷತೆ ಮತ್ತು ಆಹಾರ ಲೇಬಲಿಂಗ್ ಕುರಿತು ಮಾಹಿತಿಯನ್ನು ಒದಗಿಸುತ್ತದೆ ಎಂದು ಐಸಿಎಂಆರ್​ನ ಮಹಾನಿರ್ದೇಶಕ ಡಾ.ರಾಜೀವ್ ಬಹ್ಲ್ ಅವರು ಹೇಳುತ್ತಾರೆ.

ಆರೋಗ್ಯಕರ ಆಹಾರ ಪದ್ಧತಿಯನ್ನು ಉತ್ತೇಜಿಸಲು, ಭಾರತದಲ್ಲಿ ಆಹಾರ ಸಂಬಂಧಿತ ಕಾಯಿಲೆಗಳು, ಅಸ್ವಸ್ಥತೆಗಳ ಹೊರೆಯನ್ನು ಕಡಿಮೆ ಮಾಡಲು ಪ್ರಾಯೋಗಿಕ ಸಲಹೆ ಮತ್ತು ಶಿಫಾರಸುಗಳನ್ನು ಒದಗಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕಾಲು ಮೇಲೆ ಕಾಲು ಹಾಕಿಕೊಂಡು ಕುಳಿತುಕೊಳ್ಳುವ ಅಭ್ಯಾಸವಿದೆಯೇ?: ಹಾಗಾದರೆ ಏನೇನು ತೊಂದರೆ ಆಗುತ್ತೆ ಗೊತ್ತಾ? - Legs Crossing side effects

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.