ETV Bharat / health

ಏನಿದು ಮಂಗನ ಕಾಯಿಲೆ? ಎಲ್ಲೆಲ್ಲಿ ಹರಡುತ್ತಿದೆ? ಲಕ್ಷಣ, ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಯಿರಿ - ಮಂಗನಕಾಯಿಲೆ

ಮಂಗನ ಕಾಯಿಲೆ ಎಂಬುದು ಕೆಲವು ರಾಜ್ಯಗಳಲ್ಲಿ ಸ್ಥಳೀಯವಾಗಿ ಕಂಡುಬರುವ ಅಪರೂಪದ ಕಾಯಿಲೆ. ಇದರ ರೋಗ ಲಕ್ಷಣಗಳು ಮತ್ತು ಮುನ್ನೆಚ್ಚರಿಕಾ ಕ್ರಮಗಳ ಕುರಿತ ಮಾಹಿತಿ ಇಲ್ಲಿದೆ.

monkey fever symptoms and precution
monkey fever symptoms and precution
author img

By ETV Bharat Karnataka Team

Published : Feb 8, 2024, 5:11 PM IST

ನವದೆಹಲಿ: ಕರ್ನಾಟಕದ ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆ ಅಥವಾ ಕ್ಯಾಸನೂರು ಫಾರೆಸ್ಟ್​ ಡಿಸೀಸ್​ (ಕೆಎಫ್‌ಡಿ) ಪ್ರಕರಣಗಳು ಹೆಚ್ಚುತ್ತಿವೆ. ಇತ್ತೀಚೆಗೆ ಇಬ್ಬರು ಸಾವನ್ನಪ್ಪಿದ್ದರು. ಕೆಎಫ್​ಡಿ ಎಂಬುದು ಕಡಿತದ ಮೂಲಕ ಹಬ್ಬುವ ಸೋಂಕು. ಫ್ಲಾವಿವಿರಿಡೆ ಕುಟುಂಬದ ತಳಿಯ ವೈರಸ್‌ನಿಂದ ರೋಗ ಹರಡುತ್ತದೆ. ಇದೊಂದು ಅಪರೂಪದ ರೋಗವಾಗಿದ್ದು, ಮಾನವರಿಂದ ಮಾನವರಿಗೆ ಹರಡುವುದಿಲ್ಲ. ಇದು ಮೊದಲ ಬಾರಿಗೆ ಕರ್ನಾಟಕದ ಕ್ಯಾಸನೂರು ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿತ್ತು.

ರೋಗ ಲಕ್ಷಣಗಳು: ಜ್ವರ, ದೃಷ್ಟಿ ದೋಷ, ತಲೆನೋವು, ಮಾನಸಿಕ ಅಸಮತೋಲನ, ಮೈ ಕೈ ನೋವು, ವಾಂತಿ, ಅತಿಸಾರ ಮತ್ತು ಪ್ಲೆಟ್ಲೇಟ್ ಸಂಖ್ಯೆಯಲ್ಲಿ ಇಳಿಕೆ ಮತ್ತು ಒಸಡಿನಲ್ಲಿನ ರಕ್ತಸ್ರಾವ.

ಎಲ್ಲೆಲ್ಲಿ ಹರಡುತ್ತಿದೆ?: ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಸ್ಥಳೀಯವಾಗಿದೆ. ಈ ವೈರಸ್​​ ಮಂಗಗಳಿಗೆ ಅದರಲ್ಲೂ ವಿಶೇಷವಾಗಿ ಲಂಗೂರ್​ಗಳ ಮೇಲೆ ಪರಿಣಾಮ ಬೀರುತ್ತದೆ.

"ಮಂಗ ರೋಗ ವಾಹಕವಾಗಿ ಕಾರ್ಯ ನಿರ್ವಹಿಸುತ್ತದೆ. ಸೋಂಕಿತ ಮಂಗನ ರಕ್ತ ಹೀರುವ ಉಣ್ಣೆಗಳು ಈ ವೈರಸ್​ ಅನ್ನು ಮನುಷ್ಯರಿಗೆ ತಗುಲಿಸುತ್ತದೆ" ಎಂದು ಬೆಂಗಳೂರಿನ ಸಕ್ರ ವರ್ಲ್ಡ್​​ ಆಸ್ಪತ್ರೆಯ ಇಂಟರ್ನಲ್​ ಮೆಡಿಸಿನ್​ನ ಹೆಚ್​ಒಡಿ ಡಾ.ಸುಬ್ರಾತ ದಾಸ್​ ತಿಳಿಸಿದರು.

ಮುನ್ನೆಚ್ಚರಿಕಾ ಕ್ರಮಗಳೇನು?: ಕಾಡು ಅಥವಾ ಇಂತಹ ಉಣ್ಣೆಗಳಿರುವ ಪ್ರದೇಶಕ್ಕೆ ಪ್ರವೇಶಿಸುವಾಗ ರಕ್ಷಣಾತ್ಮಕ ಬಟ್ಟೆಗಳನ್ನು ಅಥವಾ ಇಪಿಎ ಅನುಮೋದಿತ ನಿವಾರಕ ಬಳಕೆ ಸೂಕ್ತ. ಲಸಿಕೆ ಕೂಡ ಲಭ್ಯವಿದೆ. ಬೂಸ್ಟರ್​ ಡೋಸ್​ ಪಡೆಯಬಹುದು. ಸೋಂಕಿಗೆ ತುತ್ತಾದ ಒಂದೆರಡು ವಾರದಲ್ಲಿ ಚೇತರಿಕೆ ಕಾಣಬಹುದು. ಆದಾಗ್ಯೂ ಕೆಲವರಲ್ಲಿ ಮೂರು ವಾರಕ್ಕೂ ಹೆಚ್ಚು ಕಾಲ ಜ್ವರ, ಬ್ರೈನ್​ ಫಾಗಿಂಗ್‌ನಂತಹ ನರ ಸಮಸ್ಯೆ ಲಕ್ಷಣಗಳು ಕಾಣಿಸಿಕೊಳ್ಳಬಹುದು.

ಇದಕ್ಕೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ. ಹೀಗಾಗಿ ವೈದ್ಯರು ಸೋಂಕಿನ ಲಕ್ಷಣ ಆಧರಿಸಿ ಚಿಕಿತ್ಸೆ ನೀಡಬಹುದು. ಹೈಡ್ರೇಟ್​ ಆಗಿರುವ ಜೊತೆಗೆ ಇತರೆ ಅಗತ್ಯ ಮುನ್ನೆಚ್ಚರಿಕೆ ವಹಿಸುವ ಮೂಲಕ ಹೆಮರಾಜಿಕ್ ರಕ್ತಸ್ರಾವವನ್ನು ನಿಯಂತ್ರಿಸಬಹುದು.(ಐಎಎನ್​ಎಸ್​)

ಇದನ್ನೂ ಓದಿ: ಶಿವಮೊಗ್ಗ: ಮಂಗನ ಕಾಯಿಲೆಯಿಂದ 18 ವರ್ಷದ ಯುವತಿ ಸಾವು, ವರ್ಷದ ಮೊದಲ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.