ETV Bharat / health

ಪೀರಿಯಡ್​​ ಸಮಸ್ಯೆಗೆ ಹೇಳಿ ಗುಡ್​ ಬೈ: 2,500 ಪ್ಯಾಡ್​ಗೆ ಸಮವಿದು; ಮುಟ್ಟಿನ ಕಪ್​ ಪ್ರಯೋಜನಗಳಿವು! - menstrual cup gives a solution - MENSTRUAL CUP GIVES A SOLUTION

ಋತುಚಕ್ರದ ವೇಳೆ ಪ್ಯಾಡ್​ಗಳ ಸೋರಿಕೆ ಸಮಸ್ಯೆಗೆ ಮುಟ್ಟಿನ ಕಪ್​ ಪರಿಹಾರ ನೀಡಲಿದೆ.

menstrual cup gives a solution from sanitary pad leakage problem
ಋತುಚಕ್ರದ ಸೋರಿಕೆ ಸಮಸ್ಯೆಗೆ ಪರಿಹಾರ (ಈಟಿವಿ ಭಾರತ್​)
author img

By ETV Bharat Karnataka Team

Published : Jun 15, 2024, 12:32 PM IST

ಹೈದರಾಬಾದ್​: ಋತುಚಕ್ರ ಎಂಬುದು ಮಹಿಳೆಯರಲ್ಲಿ ಸಾಮಾನ್ಯ. ಈ ಸಮಯದಲ್ಲಿ ಪ್ಯಾಡ್​ ಬಳಕೆ ಮಾಡಲಾಗುವುದು. ಆದರೂ ಈ ಸಮಯದಲ್ಲಿ ಸೋರಿಕೆ ಸಮಸ್ಯೆ ಕಾಡುವುದು ಸಹಜ. ಈ ಸಮಯದಲ್ಲಿ ಮಹಿಳೆಯರಲ್ಲಿ ಮನಸ್ಥಿತಿ ಬದಲಾವಣೆ ಮತ್ತು ಆರೋಗ್ಯ ಪರಿಸ್ಥಿತಿಗಳು ಏರು ಪೇರಾಗುತ್ತಿರುತ್ತದೆ. ಇದರ ಜೊತೆಗೆ ಸೋರಿಕೆ ಸಮಸ್ಯೆ ಮತ್ತಷ್ಟು ಕಿರಿಕಿರಿ ಮೂಡಿಸುತ್ತದೆ. ಪ್ಯಾಡ್​ ಬದಲಾಗಿ ಮುಟ್ಟಿನ ಕಪ್​ ಬಳಕೆ ಇದಕ್ಕೆ ಪರಿಹಾರ ನೀಡಲಿದೆ. ಅಲ್ಲದೇ, ಇದರಿಂದ ಯಾವುದೇ ಅಡೆ ತಡೆಯಿಲ್ಲದೇ, ದೈನಂದಿನ ಕೆಲಸದಲ್ಲಿ ಯಾವುದೇ ಸಮಸ್ಯೆ ಎದುರಾಗದು.

menstrual cup gives a solution from sanitary pad leakage problem
ಮುಟ್ಟಿನ ಕಪ್​ ಪ್ರಯೋಜನ (ಈಟಿವಿ ಭಾರತ್​)

ಮುಟ್ಟಿನ ಕಪ್​ ಪ್ರಯೋಜನಗಳೇನು?:

ಬಹುತೇಕ ಮಹಿಳೆಯರು ಮುಟ್ಟಿನ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್​ ಬಳಕೆ ಮಾಡುತ್ತಾರೆ. ಇದು ಅನೇಕ ಬಾರಿ ಅವರ ದೈನಂದಿನ ಚಟುವಟಿಕೆಗೆ ತಡೆಯನ್ನು ಹಾಕುತ್ತದೆ. ಈ ಹಿನ್ನಲೆ ಮುಟ್ಟಿನ ಕಪ್​ ಸಹಕಾರಿಯಾಗಿದೆ ಎನ್ನುತ್ತಾರೆ ತಜ್ಞರು. ಮುಟ್ಟಿನ ಕಪ್​ ಸೋರಿಕೆ ಸಮಸ್ಯೆ ಜೊತೆಗೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಇದರಿಂದ ಅನೇಕ ಆರೋಗ್ಯ ಮತ್ತು ಆರ್ಥಿಕ ಪ್ರಯೋಜನ ಲಭ್ಯ.

  • ಪ್ಯಾಡ್​ಗಳು ಮರು ಬಳಕೆಯಲ್ಲ. ಇವನ್ನು ಒಂದು ಬಾರಿ ಮಾತ್ರ ಬಳಕೆ ಮಾಡಬೇಕು. ಜೊತೆಗೆ ನಾಲ್ಕು ಗಂಟೆಗೆ ಒಂದು ಪ್ಯಾಡ್​ ಬದಲಾಯಿಸಬೇಕು. ಇಲ್ಲದೇ ಹೋದಲ್ಲಿ ಅದು ಪರಿಸರ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
  • ಮುಟ್ಟಿನ ಕಪ್​ ಬಳಕೆ ಮಾಡಿದಲ್ಲಿ, ಇದು 10 ವರ್ಷಗಳ ಕಾಲ ಬಳಸಬಹುದು. ಅಂದರೆ, ಒಂದು ಮುಟ್ಟಿನ ಕಪ್​ 2,500 ಸ್ಯಾನಿಟರಿ ಪ್ಯಾಡ್​ಗೆ ಸಮ.
  • ಮುಟ್ಟಿನ ಕಪ್​ಗಳು, 12 ಗಂಟೆಗಳ ಕಾಲ ಸೋರಿಕೆ ಸಮಸ್ಯೆಗೆ ಮುಕ್ತಿ ನೀಡುತ್ತವೆ. ಜೊತೆಗೆ ಇದನ್ನು ಬಳಕೆ ಮಾಡುತ್ತಿದ್ದರೆ, ನೀವು ಋತುಚಕ್ರವನ್ನು ಅನುಭವಿಸುತ್ತಿದ್ದೀರಾ ಎಂಬ ಭಾವನೆ ಬರದಂತೆ, ಇದು ಆರಾಮದಾಯಕ ಅನುಭವ ನೀಡುತ್ತದೆ.
  • ಮುಟ್ಟಿನ ಕಪ್​ ಬಳಕೆ ಮಾಡಿ, ವ್ಯಾಯಾಮ, ಈಜು, ಜಂಪಿಂಗ್​, ರೋಪ್​ ಸ್ಕಿಪಿಂಗ್​ ಅನ್ನು ನಿಶ್ಚಿಂತೆಯಿಂದ ಮಾಡಬಹುದು.
  • ಸ್ಯಾನಿಟರಿ ಪ್ಯಾಡ್​ ಬಳಕೆ ಮಾಡುತ್ತಿದ್ದರೆ, ಸ್ರಾವಕ್ಕೆ ಅನುಗುಣವಾಗಿ ಪದೇ ಪದೆ ಪ್ಯಾಡ್​ ಬದಲಾಯಿಸಬೇಕಾಗುತ್ತದೆ. ಅಲ್ಲದೇ, ನಾಲ್ಕು ಗಂಟೆಗೆ ಒಮ್ಮೆ ಪ್ಯಾಡ್​ ಬದಲಾಯಿಸುವುದು ಅವಶ್ಯ. ಆದಾಗ್ಯೂ ಇದು ಮುಟ್ಟಿನ ಕಪ್​ ರೀತಿ ಸಂಪೂರ್ಣ ರಕ್ಷಣೆ ನೀಡುವುದಿಲ್ಲ.
  • ಮುಟ್ಟಿನ ಕಪ್​ ಅನ್ನು ಗುಣಮಟ್ಟ ಮತ್ತು ಬಳಕೆಗೆ ಅನುಗುಣವಾಗಿ 6 ರಿಂದ 10 ವರ್ಷಗಳ ಕಾಲ ಬಳಕೆ ಮಾಡಬಹುದು

ಮುಟ್ಟಿನ ಕಪ್​ ಬಳಕೆಯ ಮತ್ತಷ್ಟು ಅನುಕೂಲ:

  • ಇದು ಯೋನಿಯನ್ನು ಒಣಗಲು ಬಿಡುವುದಿಲ್ಲ. ಇದನ್ನು ಹೊರ ತೆಗೆಯುವಾಗ ಉತ್ತಮ ಬ್ಯಾಕ್ಟೀರಿಯಾಗಳನ್ನು ಅಲ್ಲಿಯೇ ಬಿಡುತ್ತದೆ. ಫಲಿತಾಂಶವಾಗಿ ಯೋನಿ ಸೋಂಕು ತಗಲುವ ಸಾಧ್ಯತೆ ಕಡಿಮೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.
  • 2018ರಲ್ಲಿ ಪ್ರಕಟಣೆಯಾದ ಜರ್ನಲ್​ ಪಿಎಲ್​ಒಎಸ್​​ ಒನ್​ ಪ್ರಕಾರ, ಮುಟ್ಟಿನ ಕಪ್​ ಬಳಕೆ ಮಾಡುವ ಮಹಿಳೆಯರಲ್ಲಿ ಯೋನಿ ಸೋಂಕಿಗೆ ಒಳಗಾಗುವ ಸಾಧ್ಯತೆ ಶೇ 40ರಷ್ಟು ಕಡಿಮೆ. ನಾರ್ಥ್​ ಕರೋಲಿನ್​ನ ಡ್ಯೂಕ್​ ಯುನಿವರ್ಸಿಟಿ ಸ್ಕೂಲ್​ ಆಫ್​ ಮೆಡಿಸಿನ್​​ನ ಡಾ ಡಬ್ಲ್ಯೂ ಸೇಥ್​​ ಪ್ರಕಾರ, ಟ್ಯಾಂಪೂನ್​ ಬಳಕೆಗಿಂತ ಮುಟ್ಟಿನ ಕಪ್​ ಬಳಕೆಯಿಂದ ಆಗುವ ಬ್ಯಾಕ್ಟೀರಿಯಾ ವಾಗಿನೊಸಿಸ್​ ಅಭಿವೃದ್ಧಿ ಕಡಿಮೆ ಆಗುವುದು.
  • ಕೆಲವು ಸ್ಯಾನಿಟರಿ ಪ್ಯಾಡ್​ ಮತ್ತು ಟ್ಯಾಂಪೂನ್​ಗಳು ಬ್ಲೀಚ್​ ಮತ್ತು ಡೈಕ್ಸಿನ್​ ರಾಸಾಯನಿಕವನ್ನು ಬಳಕೆ ಮಾಡುತ್ತಾರೆ. ಈ ರಾಸಾಯನಿಕಗಳು ಅನೇಕ ಬಗೆಯ ಕ್ಯಾನ್ಸರ್​ಗೆ ಕಾರಣವಾಗುವ ಅಂಶವನ್ನು ಹೊಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
  • ಆದರೆ, ಮುಟ್ಟಿನ ಕಪ್​ ಸಿದ್ಧತೆಯಲ್ಲಿ ಇವುಗಳನ್ನು ಬಳಕೆ ಮಾಡುವುದಿಲ್ಲ. ಈ ಹಿನ್ನೆಲೆಯಲ್ಲಿ ಭಯ ಎದುರಾಗುವುದಿಲ್ಲ ಎನ್ನುತ್ತಾರೆ ತಜ್ಞರು.
  • ಕೆಲವು ಪ್ಯಾಡ್​ಗಳು ರಕ್ತಸ್ರಾವದಿಂದ ದುರ್ಗಂಧ ಬೀರುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ, ಕಪ್​ ಬಳಕೆಯಲ್ಲಿ ಈ ಸಮಸ್ಯೆ ಕಾಡುವುದಿಲ್ಲ.
  • ಋತುಚಕ್ರದಲ್ಲಿ ಸ್ಯಾನಿಟರಿ ಪ್ಯಾಡ್​ ಬಳಕೆಯಿಂದ ಅನೇಕ ಬಾರಿ ಕುಳಿತು ಕೊಳ್ಳುವುದು, ನಿಲ್ಲುವುದು ಅಥವಾ ಕಠಿಣ ಕೆಲಸ ನಡೆಸುವುದು ಕಷ್ಟವಾಗುತ್ತದೆ. ಆದರೆ, ಈ ರೀತಿಯ ಅನಾನುಕೂಲತೆ ಮುಟ್ಟಿನ ಕಪ್​ನಲ್ಲಿ ಆಗುವುದಿಲ್ಲ. ಮುಟ್ಟಿನ ಕಪ್​ಗಳು ಆರೋಗ್ಯದ ಜೊತೆಗೆ ಹಣ ಉಳಿಸಲು ಕೂಡ ಸಹಾಯಕಾರಿಯಾಗಿದೆ.

ವಿಶೇಷ ಸೂಚನೆ: ಇಲ್ಲಿ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೃತ್ತಿಪರರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: Menstrual cup: ಮುಟ್ಟಿನ ಕಪ್​: ಮಹಿಳೆಯರು ತಿಳಿಯಲೇ ಬೇಕಿರುವ ವಿಚಾರಗಳಿವು..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.