ETV Bharat / health

ಮಧುಮೇಹಿಗಳಾಗಿದ್ದರೆ, ಪಾದದ ಬಗ್ಗೆ ಇರಲಿ ಹೆಚ್ಚಿನ ಕಾಳಜಿ; ಕಾರಣ ಇದು! - proper foot health is essential - PROPER FOOT HEALTH IS ESSENTIAL

ಮಧುಮೇಹಿಗಳಲ್ಲಿ ಕಾಡುವ ಪಾದದ ಸಮಸ್ಯೆ ಹಲವು ತೊಂದರೆಗಳಿಗೆ ಕಾರಣವಾಗುತ್ತದೆ. ಹೀಗಾಗಿ ಹೆಚ್ಚಿನ ಜಾಗ್ರತೆ ವಹಿಸಬೇಕು.

maintaining-proper-foot-health-is-essential-for-people-with-diabetes

author img

By ETV Bharat Karnataka Team

Published : Apr 3, 2024, 12:38 PM IST

ನವದೆಹಲಿ: ಆರೋಗ್ಯದ ವಿಚಾರದಲ್ಲಿ ಮಧುಮೇಹಿಗಳು ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯ. ಅದರಲ್ಲೂ ಪಾದಗಳ ನಿರ್ವಹಣೆ ಮಾಡುವುದು ಕೂಡ ಅವಶ್ಯ. ನರಗಳು ಮತ್ತು ರಕ್ತ ಪೂರೈಕೆಯ ಮೇಲೆ ಪಾದಗಳು ಗಮನಾರ್ಹವಾಗಿ ಪರಿಣಾಮ ಬೀರುತ್ತವೆ. ಇದರ ನಿರ್ವಹಣೆ ಉತ್ತಮವಾಗಿಲ್ಲದಿದ್ದಾಗ ಅದು ಹುಣ್ಣುಗಳಿಗೆ ಕಾರಣವಾಗುತ್ತದೆ ಎಂದು ಪ್ರಮುಖ ಮಧುಮೇಹಿ ತಜ್ಞರು ತಿಳಿಸಿದ್ದಾರೆ.

ಪಾದಗಳಿಗೆ ಕಡಿಮೆ ರಕ್ತ ಪೂರೈಕೆಯಿಂದಾಗಿ ಮಧುಮೇಹಿಗಳಲ್ಲಿ ಅಂಗ ಛೇದನ (limb amputations) ಉಂಟಾಗುತ್ತದೆ. ಈ ಹಿನ್ನೆಲೆ ಪಾದದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಸುವುದು ಅಗತ್ಯ ಎನ್ನುತ್ತಾರೆ ಡಾ ಮೋಹನ್​ ಡಯಾಬಿಟೀಸ್​ ಸ್ಪೆಷಲಿಸ್ಟ್​ ಸೆಂಟರ್​ನ ಮುಖ್ಯಸ್ಥರಾಗಿರುವ ಡಾ ವಿ ಮೋಹನ್​.

ನರಗಳು ಹಾನಿಗಳನ್ನು ಅಂದಾಜಿಸಲು ಸಾಧ್ಯವಿಲ್ಲ. ಪಾದದ ಬೆರಳು, ಕಾಲಿನಲ್ಲಿ ನೋವು, ಉರಿಯೂತ ಸೇರಿದಂತೆ ಇನ್ನಿತರ ಸಮಸ್ಯೆ ಅಥವಾ ಬದಲಾವಣೆಗಳು ಕಾಣಿಸಿಕೊಂಡಾಕ್ಷಣ ವೈದ್ಯರನ್ನು ಭೇಟಿ ಮಾಡುವುದು ಸೂಕ್ತ.

ಮಧುಮೇಹಿಗಳ ಕಾಲಿನ ಸಮಸ್ಯೆಗಳು ಬಾಹ್ಯ ಅಪಧಮನಿ ಕಾಯಿಲೆ ಮತ್ತು ಡಯಾಬಿಟಿಕ್ ನರರೋಗ (ನರ ಹಾನಿ) ಕಾರಣದಿಂದಾಗಿ ಉಂಟಾಗುತ್ತದೆ. ರಕ್ತದಲ್ಲಿನ ಸಕ್ಕರೆಯ ಅಂಶವೂ ಸಾಮಾನ್ಯ ಸಮಸ್ಯೆಗೆ ಕಾರಣವಾಗಿದೆ. ಸುಮಾರು 85 ಪ್ರತಿಶತದಷ್ಟು ಮಧುಮೇಹ ಸಂಬಂಧಿತ ಕಾಲು ಅಥವಾ ಕಾಲಿನ ಅಂಗಚ್ಛೇದನೆಗಳು ಪಾದದ ಹುಣ್ಣಿನಿಂದ ಪ್ರಾರಂಭವಾಗುತ್ತವೆ ಎಂದು ಅಧ್ಯಯನಗಳು ತೋರಿಸಿವೆ.

ಮಧುಮೇಹಿಗಳ ಕಾಲಿನ ಆರೈಕೆ ಸಂಬಂಧ ಡಾ ಮೋಹನ್​ ಕೆಲವು ಸಲಹೆಗಳನ್ನು ಹಂಚಿಕೊಂಡಿದ್ದಾರೆ. ಅದರ ಅನುಸಾರ, ರಕ್ತದಲ್ಲಿನ ಗ್ಲೂಕೋಸ್ ಅನ್ನು ನಿಯಂತ್ರಣ, ಪ್ರತಿದಿನ ಪಾದಗಳನ್ನು ಸ್ವಚ್ಛಗೊಳಿಸಿ, ಒಣಗಿಸುವಂತಹ ಪಾದದ ಆರೈಕೆಗಳು ನಿರ್ಣಾಯಕವಾಗಿವೆ.

ಇದೇ ವೇಳೆ ಕಾಲಿನ ಬೆಳಳಿನ ಮಧ್ಯೆ ಏನಾದರೂ ಫಂಗಸ್​​ ಸೋಂಕು ಉಂಟಾಗಿದ್ಯಾ ಎಂಬ ಬಗ್ಗೆ ಕೂಡ ಆಗಿಂದಾಗ್ಗೆ ಪರೀಕ್ಷಿಸಬೇಕು. ಇನ್ನೂ ಪ್ರಮುಖವಾಗಿರುವ ಕೆಲಸ ಎಂದರೆ, ಕಾಲಿನಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಂಡಾಗ ಯಾವುದೇ ಕಾರಣಕ್ಕೂ ವೈದ್ಯರ ಸಂಪರ್ಕಕ್ಕೆ ಒಳಗಾಗದೇ ಸ್ವಯಂ ಚಿಕಿತ್ಸಾ ವಿಧಾನ ಅನುಸರಿಸಬಾರದು ಎನ್ನುತ್ತಾರೆ.

ಶೇ 15ರಷ್ಟು ರೋಗಿಗಳು ಮಧುಮೇಹಿ ಕಾಲಿನ ಸಮಸ್ಯೆಯನ್ನು ಅನುಭವಿಸುತ್ತಾರೆ. ಅತ್ಯಂತ ಅಪಾಯಕಾರಿ ಸಮಸ್ಯೆಯನ್ನು ಹೊಂದಿರುತ್ತಾರೆ. ಭಾರತದಲ್ಲಿ ಪ್ರತಿ ವರ್ಷ 40 ಸಾವಿರ ಮಂದಿ ಈ ರೀತಿ ಅಂಗಛೇದನ ಸಮಸ್ಯೆಗೆ ಗುರಿಯಾಗುತ್ತಾರೆ.

ಮಧುಮೇಹಿಗಳು ತಮ್ಮ ಪಾದಗಳನ್ನು ತಾಪಮಾನ ರಕ್ಷಣೆ ಮತ್ತು ಬರಿಗಾಲಿನಲ್ಲಿ ನಡೆದಾಡುವುದನ್ನು ತಪ್ಪಿಸಬೇಕು ಎಂದು ಡಾ ಮೋಹನ್​ ಸಲಹೆ ನೀಡುತ್ತಾರೆ. ಶೂ ಜೊತೆ ಸಾಕ್ಸ್​ ಧರಿಸುವುದು ಅಗತ್ಯ. ಕಾರಣ ಚರ್ಮ, ಪ್ಲಾಸ್ಟಿಕ್ ಮತ್ತು ಇನ್ನಿತರ ವಸ್ತುಗಳು ಶೂಗಳು ತ್ವಚೆಯಲ್ಲಿ ಸಮಸ್ಯೆ ಉಂಟಾಗಿಸಿ ಸೋಂಕಿಗೆ ಕಾರಣವಾಗಬಹುದು.

ಇನ್ನು ಕಾಲಿನಲ್ಲಿ ರಕ್ತ ಪರಿಚಲನೆ ಹೆಚ್ಚಿಸಲು, ಪಾದಗಳ ಮೇಲೆ ಹೆಚ್ಚಿನ ಪರಿಣಾಮ ಬೀರದ ಈಜು, ಸೈಕ್ಲಿಂಗ್ ಮತ್ತು ಯೋಗದಂತಹ ಚಟುವಟಿಕೆ ನಡೆಸಬಹುದು ಎಂದು ಕೂಡ ಸಲಹೆಯನ್ನೂ ಕೂಡ ನೀಡಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಮಧುಮೇಹದ ಜೊತೆಗೆ ತೂಕ ನಿರ್ವಹಣೆ ಕೂಡ ಅಗತ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.