ನವದೆಹಲಿ: ಕಳಪೆ ಆರೋಗ್ಯದ ಕಾರಣವು ಜೀವನದ ಗುಣಮಟ್ಟದ ಮೇಲೆ ಪರಿಣಾಮವನ್ನು ಹೊಂದಿದೆ. ಈ ಕಳಪೆ ಆರೋಗ್ಯಕ್ಕೆ ಪ್ರಮುಖ ಕಾರಣ ಎಂದರೆ ಬೆನ್ನು ನೋವು, ಖಿನ್ನತೆ ಸಮಸ್ಯೆ ಮತ್ತು ತಲೆನೋವು ಆಗಿದೆ ಎಂದು ಲ್ಯಾನ್ಸೆಟ್ ಜರ್ನಲ್ ವರದಿ ಮಾಡಿದೆ.
ಅಧ್ಯಯನವು ಕೋವಿಡ್ ಮೊದಲ ಎರಡು ವರ್ಷಗಳಲ್ಲಿನ ಆರೋಗ್ಯಯುತ ಜೀವಿತಾವಧಿಯ ಕುರಿತು ವಿಶ್ಲೇಷಣೆ ಮಾಡಿದೆ. ಜಗತ್ತಿನಲ್ಲಿ ಜನರು ಅತಿ ಹೆಚ್ಚು ಕಾಲ ಜೀವಿಸುತ್ತಿದ್ದರು. ಅವರು ಆರೋಗ್ಯಯುತವಾಗಿ ಜೀವನ ನಡೆಸುತ್ತಿಲ್ಲ ಎಂಬುದು ಅಧ್ಯಯನದಲ್ಲಿ ಕಂಡು ಬಂದಿದೆ.
ಜಾಗತಿಕವಾಗಿ ಕಳಪೆ ಆರೋಗ್ಯಕ್ಕೆ ಕಾರಣ ಬೆನ್ನು ನೋವಾಗಿದೆ. ಪ್ರಸ್ತುತ ಈ ನೋವಿಗೆ ಅಸ್ತಿತ್ವದಲ್ಲಿರುವ ಚಿಕಿತ್ಸೆಗಳು ಕೆಲಸ ಮಾಡುತ್ತಿಲ್ಲ ಎಂಬುದನ್ನು ನೋಡುತ್ತಿದ್ದೇವೆ ಎಂದು ಅಧ್ಯಯನದ ಸಹ ಲೇಖಕ ಮತ್ತು ಅಮೆರಿಕದ ವಾಷಿಂಗ್ಟನ್ ಯುನಿವರ್ಸಿಟಿಯ ಸಹ ಪ್ರಾಧ್ಯಾಪಕರಾದ ಡಾಮಿಯನ್ ಸ್ಯಾಂಟೊಮೌರೊ ತಿಳಿಸಿದ್ದಾರೆ. ಇದೇ ವೇಳೆ ಅವರು ಈ ಪರಿಸ್ಥಿತಿಯ ನಿರ್ವಹಣೆಗೆ ಉತ್ತಮ ಸಾಧನ ಬೇಕಿದೆ ಎಂದಿದ್ದಾರೆ.
ತದ್ವಿರುದ್ಧವಾಗಿ, ಖಿನ್ನತೆಯ ಅಸ್ವಸ್ಥತೆಗಳು, ಥೆರಪಿ ಅಥವಾ ಚಿಕಿತ್ಸೆ ಅಥವಾ ಎರಡು ಸಂಯೋಜನೆಯು ಕೆಲಸ ಮಾಡಲು ಕೆಲವು ಸಮಯ ಬೇಕಾಗುತ್ತದೆ. ಆದರೆ, ಜಗತ್ತಿಲ್ಲಿರುವ ಬಹುತೇಕ ಜನರು ಇದರ ಸ್ವಲ್ಪ ಅಥವಾ ಚಿಕಿತ್ಸೆಯನ್ನೇ ಪಡೆಯದಿರುವುದು ದುರಾದೃಷ್ಟವಾಗಿದೆ ಎಂದಿದ್ದಾರೆ.
ಕೋವಿಡ್ 19 ಸಾಂಕ್ರಾಮಿಕತೆ ವೇಳೆ ಹೇಗೆ ಖಿನ್ನತೆ ಗಮನಾರ್ಹ ಪ್ರಮಾಣದಲ್ಲಿ ಜನರಲ್ಲಿ ಹೆಚ್ಚಿತು ಎಂಬುದನ್ನು ಗಣನೆಗೆ ತೆಗೆದುಕೊಂಡು, ಈ ಸಮಸ್ಯೆ ಹೊಂದಿರುವವರಿಗೆ ತಕ್ಷಣಕ್ಕೆ ಸೂಕ್ತ ಚಿಕಿತ್ಸೆ ಪಡೆಯುವ ಭರವಸೆ ನೀಡಬೇಕಿದೆ ಎಂದು ತಿಳಿಸಿದ್ದಾರೆ.
ಹೇಗೆ ಪುರುಷ ಮತ್ತು ಮಹಿಳೆಯರು ಕೋವಿಡ್ 19 ಸಮಯದಲ್ಲಿ ಪ್ರತಿಕ್ರಿಯಿಸಿದರು ಎಂದು ಪರಿಶೀಲಿಸಿದಾಗ, ಸಂಶೋಧನೆಯಲ್ಲಿ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ಹೆಚ್ಚು ಬಳಲಿದ್ದಾರೆ ಎಂದಿದ್ದಾರೆ. ಪುರುಷರಿಗಿಂತ ಮಹಿಳೆಯರು ದೀರ್ಘ ಕೋವಿಡ್ ಅನುಭವ ಪಡೆದಿದ್ದಾರೆ. ಇದರಿಂದಾಗಿ ಅವರಲ್ಲಿ ಖಿನ್ನತೆ ಪ್ರಮಾಣವನ್ನು ಕಾಣಬಹುದಾಗಿದೆ ಎಂದಿದ್ದಾರೆ.
ಜಾಗತಿಕ ರೋಗದ ಹೊರೆ 2021ರ ಅಭಿವೃದ್ಧಿ ಹೊಂದಿದ ಅಂದಾಜಿನಲ್ಲಿ 204 ದೇಶ ಮತ್ತು ಭೂ ಪ್ರದೇಶ ದತ್ತಾಂಶವನ್ನು ವಿಶ್ಲೇಷಣೆ ಮಾಡಲಾಗಿದೆ. ಜಿಬಿಡಿ ಅಧ್ಯಯನವು ಸ್ಥಳ ಮತ್ತು ಕಾಲಾನಂತರದಲ್ಲಿ ಆರೋಗ್ಯದ ನಷ್ಟವನ್ನು ಪ್ರಮಾಣೀಕರಿಸಲು ಅತಿದೊಡ್ಡ ಮತ್ತು ಸಮಗ್ರ ಪ್ರಯತ್ನ ಇದಾಗಿದೆ ಎಂದು ಅಧ್ಯಯನ ತಿಳಿಸಿದೆ.
ಇದನ್ನೂ ಓದಿ: ಮೆದುಳಿನ ಆರೋಗ್ಯ ರಕ್ಷಣೆಗೆ ಕೇಂದ್ರದಿಂದ ಕಾರ್ಯಪಡೆ ರಚನೆ