ETV Bharat / health

ನೈಜೀರಿಯಾದಲ್ಲಿ ಉಲ್ಬಣಗೊಂಡ ಲಸ್ಸಾ ಜ್ವರ: 72 ಸಾವು, ಏನಿದರ ಲಕ್ಷಣಗಳು?

ಲಸ್ಸಾ ಆಫ್ರಿಕಾದಲ್ಲಿ ಕಂಡು ಬಂದಿರುವ ಮಾರಾಣಾಂತಿಕ ವೈರಸ್​ ಜ್ವರವಾಗಿದೆ. ವೈರಲ್​​ ಹೆಮಾರೊಜಿಕ್​ ಜ್ವರ ಇದಾಗಿದೆ

Lassa fever have been reported in Nigeria

author img

By ETV Bharat Karnataka Team

Published : Feb 23, 2024, 2:07 PM IST

ಅಬುಬಾ(ನೈಜೀರಿಯಾ)​​: ಆಫ್ರಿಕಾದ ಎರಡನೇ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ನೈಜೀರಿಯಾದಲ್ಲಿ ಮಾರಾಣಾಂತಿಕ ಲಸ್ಸಾ ಜ್ವರ ಉಲ್ಬಣಗೊಂಡಿದ್ದು, ಇದರಿಂದ 72 ಸಾವುಗಳು ಸಂಭವಿಸಿವೆ ಎಂದು ವರದಿ ತಿಳಿಸಿದೆ. ಈ ವರ್ಷ ಆರಂಭವಾದಾಗಿನಿಂದ 441 ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ 72 ಸಾವು ಸಂಭವಿಸಿವೆ ಎಂದು ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಲಸ್ಸಾ ಜ್ವರ?: ಆಫ್ರಿಕಾದಲ್ಲಿ ಕಂಡು ಬಂದಿರುವ ಮಾರಾಣಾಂತಿಕ ಲಸ್ಸಾವು ವೈರಸ್​ನಿಂದ ಹರಡುವ​ ಜ್ವರವಾಗಿದೆ. ಇದು ವೈರಲ್​​ ಹೆಮಾರೊಜಿಕ್​ ಜ್ವರ ಆಗಿದ್ದು, ಲಸ್ಸಾ ಜ್ವರವೂ ಮೂತ್ರ ಅಥವಾ ಮಲದಿಂದ ಕಲುಷಿತಗೊಂಡ ಆಹಾರ ಅಥವಾ ಮನೆಯ ವಸ್ತುಗಳ ಮೂಲಕ ವ್ಯಕ್ತಿಗಳಿಗೆ ಅಂಟಿಕೊಳ್ಳಲಿದೆ. ಅಲ್ಲದೇ ಇಲಿಗಳ ಲಾಲಾರಸ, ಮೂತ್ರ ಮತ್ತು ಮಲದ ಸಂಪರ್ಕಕ್ಕೆ ಮನುಷ್ಯ ಬಂದಾಗ ಕೂಡ ಈ ಜ್ವರ ಹರಡಲಿದೆ ಎಂದು ವರದಿ ತಿಳಿಸಿದೆ.

ಜನವರಿಯಿಂದ 21 ರಾಜ್ಯಗಳಲ್ಲಿ ಈ ಜ್ವರ ಉಲ್ಬಣಗೊಂಡಿದೆ ಎಂದು ನೈಜೀರಿಯಾ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ತಿಳಿಸಿದೆ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಒಂಡೊ, ಇಡೊ ಮತ್ತು ಬಚ್ಚಿಯ ಮೂರು ರಾಜ್ಯದಲ್ಲಿ ಒಟ್ಟಾರೆಯಾಗಿ ಶೇ 65ರಷ್ಟು ಪ್ರಕರಣಗಳು ದೃಢಪಟ್ಟಿವೆ. ಇನ್ನುಳಿದ ಶೇ 35ರಷ್ಟು ಪ್ರಕರಣಗಳು ಉಳಿದ 18 ಇತರ ರಾಜ್ಯಗಳಿಂದ ವರದಿಯಾಗಿದೆ ಎಂದು ಎನ್​ಸಿಡಿಸಿ ತಿಳಿಸಿದೆ.

ಒಟ್ಟಾರೆಯಾಗಿ ಇಲ್ಲಿಯವರೆಗೆ 2,122 ಪ್ರಕರಣಗಳು ದಾಖಲಾಗಿದ್ದು, 2023ರಲ್ಲಿ ಇದೇ ಅವಧಿಯಲ್ಲಿ 8,280 ಶಂಕಾಸ್ಪದ ಪ್ರಕರಣಗಳು ಪತ್ತೆಯಾಗಿತ್ತು. ಇನ್ನು ಈ ಜ್ವರಕ್ಕೆ ಇಬ್ಬರು ಆರೋಗ್ಯ ಕಾರ್ಯಕರ್ತರು ಬಲಿಯಾಗಿದ್ದಾರೆ. ಲಸ್ಸಾ ಜ್ವರಕ್ಕೆ ಒಳಗಾಗುತ್ತಿರುವವರು 21ರಿಂದ 30 ವರ್ಷದ ವಯೋಮಿತಿ ಒಳಗಿನವರಾಗಿದ್ದಾರೆ ಎಂದು ವರದಿ ತಿಳಿಸಿದೆ.

2023ರಲ್ಲಿ ಲಸ್ಸಾ ಜ್ವರವೂ 1,227 ಮಂದಿಯಲ್ಲಿ ದೃಢಪಟ್ಟಿದ್ದು, ಇದರಲ್ಲಿ 219 ಮಂದಿ ಸಾವನ್ನಪ್ಪಿದ್ದರು ಎಂದು ವರದಿ ತಿಳಿಸಿದೆ. ಲಸ್ಸಾ ಜ್ವರದ ವಿರುದ್ಧ ಕಾರ್ಯಾಚರಣೆಗೆ ಮುಂದಾಗಿರುವ ಎನ್​ಸಿಡಿಸಿ, ಎಲ್ಲ ಹಂತದಲ್ಲಿ ತುರ್ತು ಕಾರ್ಯಾಚರಣೆ ಕೇಂದ್ರದ ಗುರಿಯನ್ನು ಹೊಂದಿದೆ. ಸಮುದಾಯದಲ್ಲಿ ಸೋಂಕಿತ ಪ್ರಕರಣಗಳ ಆರಂಭಿಕ ವೇಗದ ಪತ್ತೆ ಮತ್ತು ಶೀಘ್ರದಲ್ಲಿ ನೀಡುವ ಚಿಕಿತ್ಸೆಯು ರೋಗಿಯ ಉಳಿಕೆಯ ದರವನ್ನು ಹೆಚ್ಚಿಸುತ್ತದೆ.

ಲಸ್ಸಾ ರೋಗವೂ ಪ್ರಾಣಿಗಳಿಂದ ಹರಡುವ ರೋಗವಾಗಿದ್ದು, ಇದರ ಹರಡುವಿಕೆ ಕೂಡ ವೇಗವಾಗಿದೆ. ಇದನ್ನು 1969ರಲ್ಲಿ ಮೊದಲ ಬಾರಿಗೆ ಕಂಡು ಹಿಡಿಯಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ, ಈ ಸೋಂಕಿತ ವ್ಯಕ್ತಿಯಲ್ಲಿ ಜ್ವರ, ಸಾಮಾನ್ಯ ಅಸ್ವಸ್ಥತೆ ಸೇರಿದಂತೆ ಸೌಮ್ಯ ಸ್ವಭಾವದ ಲಕ್ಷಣವನ್ನು ಇದು ಹೊಂದಿರುತ್ತದೆ.

ಇದನ್ನೂ ಓದಿ: ಲಸ್ಸಾ ಜ್ವರ ನಿಜಕ್ಕೂ ಗಂಭೀರವೇ?.. ಇದರ ಲಕ್ಷಣಗಳೇನು ಗೊತ್ತೇ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.